ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?

ಲೇಖನ

ಯಾವ ಕಾಲಕ್ಕೆ

ಯಾವ ತರಕಾರಿ ಸೂಕ್ತ ?

ಆಶಾ ಸಿದ್ದಲಿಂಗಯ್ಯ

assorted fruits at the market

ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು.

ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು.

ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು.

ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು.

ನಮ್ಮ ದೇಹವನ್ನು ಸಮಸ್ತ ರೋಗರುಜಿನಗಳಿ೦ದ ದೂರವಿರಿಸಲು ನಾವು ಸೇವಿಸುವ ಆಹಾರವು ನಮ್ಮ ಹಸಿವನ್ನು ಹಿಂಗಿಸುವುದರ ಜೊತೆಗೆ ಅದು ಔಷಧದಂತೆ ಕಾರ್ಯನಿರ್ವಹಿಸುವಂತಿರಬೇಕು. ಆರೋಗ್ಯದಾಯಕ ಜೀವನಕ್ಕಾಗಿ ಆಹಾರಪದ್ಧತಿಯಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ತುಂಬಾ ಮುಖ್ಯ.

ಸೊಪ್ಪು,ತರಕಾರಿಗಳ ಪ್ರಯೋಜನಗಳು

ನಾರಿನಾಂಶದಿಂದ ಸಮೃದ್ಧವಾಗಿವೆ

sliced vegetables

ಈ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ನಾರಿನ೦ಶವು ಯಥೇಚ್ಚವಾಗಿರುವುದರಿಂದ,  ಜೀರ್ಣಾಂಗವ್ಯೂಹ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಚಮತ್ಕಾರವನ್ನೇ ಮಾಡಬಲ್ಲವು. ಮಲಬದ್ಧತೆಯ ಉಪಟಳವನ್ನು ದೂರವಿರಿಸಲು ನಾವು ಸೇವಿಸುವ ಆಹಾರದಲ್ಲಿ ನಾರಿನಂಶವು ಸಾಕಷ್ಟಿರುವುದು ಅತ್ಯಗತ್ಯ. ಮಲವಿಸರ್ಜನೆಯು ಸರಾಗವಾಗಿ ಆಗುವಂತಾಗಲು, ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇವಿಸಿರಿ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತವೆ

ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ  ನಾರಿನಂಶವು  ಶರೀರದ ರಕ್ತದೊತ್ತಡ ಹಾಗೂ ಕೊಲೆಸ್ಟೆರಾಲ್ ನ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ.

ತೂಕ ಕಡಿಮೆ ಆಗಲೂ ಸಹಕಾರಿ

macro photography of green plants

ತೂಕನಷ್ಟವನ್ನು ಹೊಂದುವುದಕ್ಕೆ ಪೂರಕವಾಗಿರುವ ಆಹಾರಕ್ರಮಗಳ ರೂಪದಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆಂದರೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಮಟ್ಟದಲ್ಲಿ ಕ್ಯಾಲರಿಗಳನ್ನು ಹೊಂದಿವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಸೊಪ್ಪುಯುಕ್ತ ಹಸಿರು ತರಕಾರಿಗಳು ನಾನಾ ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿವೆ. ಇವುಗಳ ಜೊತೆಗೆ,ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ರೋಗಗಳ ವಿರುದ್ಧ ಸೆಣೆಸಾಡುವ ಕೆಲವು ಮಾಧ್ಯಮಗಳಿದ್ದು, ಅವು ಶರೀರವನ್ನು ನಾನಾ ಬಗೆಯ ರೋಗರುಜಿನಗಳಿ೦ದ ರಕ್ಷಿಸುತ್ತವೆ.

ಮಧುಮೇಹ

ಸೊಪ್ಪುಯುಕ್ತ ಹಸಿರು ತರಕಾರಿಗಳು ಮಧುಮೇಹದ ಅಪಾಯವನ್ನು ತಡೆಗಟ್ಟುತ್ತವೆ ಹಾಗೂ ಜೊತೆಗೆ ನಿಮ್ಮ ಶರೀರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೂಡ ನೆರವಾಗುತ್ತವೆ.

ತ್ವಚೆಯ ಆರೋಗ್ಯಕ್ಕಾಗಿ

macro shot of vegetable lot

ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮ ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರತಿದಿನವೂ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿಂದ ನೀವು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಬಳಸಿಕೊಂಡು ತಯಾರಿಸಿದ ಸಲಾಡ್ ಗಳ ಸೇವನೆಯಿಂದಾಗುವ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒಂದು.

ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ

ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಕ್ಯಾಲ್ಸಿಯಂನಿಂದಲೂ ಸಂಪನ್ನವಾಗಿವೆ. ನಮಗೆಲ್ಲಾ ತಿಳಿದಿರುವಂತೆ ಮೂಳೆಗಳು ಹಾಗೂ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಕ್ಯಾಲ್ಷಿಯಂ ಆತ್ಯಂತ ಅವಶ್ಯಕ ಮೂಲವಸ್ತುವಾಗಿದೆ.

ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ

ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಕೆಲಬಗೆಯ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ಪೊರೆಗಳಂತಹ, ನೇತ್ರ ಸಂಬಂಧೀ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಕೀಲುಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುತ್ತವೆ

ಆರ್ಥ್ರೈಟಿಸ್ನಂತಹಾ ಕೀಲುಗಳಿಗೆ ಸಂಬಂಧಿಸಿದ ಕೆಲವೊಂದು ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹ ತರಕಾರಿಗಳು ಪ್ರಯೋಜನಕಾರಿಯಾಗಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಮತ್ತೊಂದು ಪ್ರಯೋಜನವೇನೆಂದರೆ, ಅವು ಹೃದ್ರೋಗಗಳ ಅಪಾಯವನ್ನೂ ಸಹ ತಡೆಗಟ್ಟಬಲ್ಲವು.

ತರಕಾರಿಗಳು ತಾರುಣ್ಯಭರಿತರನ್ನಾಗಿರಿಸುತ್ತವೆ. ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ಕೆಲವೊಂದು ಬಯೋ ಪ್ರತಿಬಂಧಕ ಕಾರಕಗಳಿದ್ದು ಅವು ಆರೋಗ್ಯಕರವಾದ ತ್ವಚೆ ಹಾಗೂ ಮೂಳೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುತ್ತವೆ.

 ತರಕಾರಿಗಳ ಒಂದು ಅತ್ಯುತ್ತಮವಾದ ಗುಣವಿಶೇಷವೇನೆಂದರೆ, ಅವು ಟನ್ನುಗಟ್ಟಲೆ ಕ್ಯಾಲರಿಗಳನ್ನು ಒಳಗೊಂಡಿರಲಾರವು. ಹೀಗಾಗಿ,  ಸೊಪ್ಪು, ತರಕಾರಿಗಳ ಪ್ರಮಾಣದ ಕುರಿತಾಗಿ ಚಿಂತಿಸುವ ಅವಶ್ಯಕತೆ ಇಲ್ಲದೇ ಅವುಗಳನ್ನು ಧಾರಾಳವಾಗಿ ಸೇವಿಸಬಹುದು.

bunch of vegetables

Leave a Reply

Back To Top