ಗೋವಿಂದನ ದಯೆ
ಕೆಲವೊಮ್ಮೆ ಅವರ ಅಮೇರಿಕಾ ಮಾತು ಪುನರಾವರ್ತನೆಯಾಗುತ್ತಿತ್ತು ಮತ್ತು ವಿಪರೀತವಾಗುತ್ತಿತ್ತು. ಸುತ್ತಲೂ ಇದ್ದವರಿಗೆ ಬೇಸರ ತಂದಿದ್ದರೂ ಆಶ್ಚರ್ಯವಿಲ್ಲ.
ನಮ್ಮದಾರಿ ಬರಿ ಚಂದ್ರನ ವರೆಗೆ
ಮನೆ ಎದುರಿನ ಚಚ್ಚೌಕದ ಜಾಗದಲಿ ಕೆಂಪು ಬಣ್ಣ ಮೆತ್ತಿದ ಸಿಮೆಂಟಿನ ಕಟ್ಟೆಯ ಮೇಲೆ ಕುಳಿತು, ದೊಡ್ಡದಾದ ಕಂಬಕ್ಕೆ ವಾಲಿಕೊಂಡು, ಕತ್ತನ್ನು ಎತ್ತೆತ್ತಿ,ಅತ್ತಿತ್ತ ನೋಡುತ್ತ,ಬಿಟ್ಟ ಹೂಗಳ ಲೆಕ್ಕ ಹಾಕುತ್ತಿದ್ದಳು
ತಟ್ಟಿದ ತಾಳ
ಕಥೆ ತಟ್ಟಿದ ತಾಳ ಎಂ. ಆರ್. ಅನಸೂಯ ಮಂಜು, ಟೀ ಮಾಡ್ತೀಯಾ” ಎಂದು ಸುರೇಶ್ ಕೂಗಿ ಹೇಳಿದಾಗ ಅಡುಗೆಮನೆಯಲ್ಲಿ ಮಗುವಿಗೆ ಕುಡಿಸಲು ಹಾಲು ಬಿಸಿ ಮಾಡುತ್ತಿದ್ದ ಮಂಜುಳ ಅವನಿಗೆ ಉತ್ತರ ಕೊಡದೆ ಟೀಗಿಡುತ್ತಲೇ ಇದಕ್ಕೆಲ್ಲಾ ಏನು. ಕಡಿಮೆಯಿಲ್ಲ ಎಂದು ಮನದಲ್ಲಿಯೆ ಗೊಣಗಿದಳು. ಟೀ ಕೊಡಲು ಬಂದಾಗ ಬಂದವರು ” ನಮಸ್ಕಾರ” ಎಂದರು. ಇವಳು ಪ್ರತಿ ನಮಸ್ಕರಿಸಿದಳು. ಆ ಅತಿಥಿ ಸುಮಾರು ಇಪ್ಪತ್ತೈದು ವರ್ಷದ ಯುವಕ. ಒಳಬಂದವಳು ಮಗುವಿಗೆ ಹಾಲು ಕುಡಿಸಿ ಮಲಗಿಸುತ್ತಿರುವಾಗ ಸುರೇಶ ಅ ಯುವಕನಿಗೆ ಹೇಳುತ್ತಿದ್ದ […]
ಎಲ್ಲಿದ್ದೇನೆ?
ಕಥೆ ಎಲ್ಲಿದ್ದೇನೆ? ಬಿ ಎನ್ ಭರತ್ ಮಲಗಿಕೊಂಡು ಇರುವಾಗ ಮನೆಯಿಂದ ತಂದು ಕೊಟ್ಟಿದ್ದ ಮೆಚೂರ್ ಆದ ಎನ್ ಎಸ್ ಸಿ ನೆನಪಾಯಿತು.ಎದ್ದು ಕುಳಿತು ಪೆನ್ನಿಗಾಗಿ ತಡಕಾಗಿ ಸಹಿ ಮಾಡಿ ಎತ್ತಿಟ್ಟೆ. ಆಸ್ಪತ್ರೆಯ ಬಿಲ್ಲು ಕಟ್ಲಿಕ್ಕೆ ಎಷ್ಟು ದುಡ್ದಿದ್ರೂ ಸಾಕಾಗ್ಲಿಕ್ಕಿಲ್ಲ. ಮಂಪರು ಬಂದ ಹಾಗೆ ಆಯಿತು. ” ಪೋಸ್ಟ್ ಮಾಷ್ಟ್ರು ಇಲ್ಲವಾ ” ವಿಟ್ಲ ಬಸ್ ಸ್ಟಾಂಡ್ ನ ಎದುರಿನ ಕಟ್ಟಡದ ಮಾಳಿಗೆಯಲ್ಲಿ ಹೋಗಿ ಕೇಳಿದೆ. ಅಲ್ಲಿದ್ದವನು ಒಂಥರಾದಲ್ಲಿ ನನ್ನನ್ನೇ ನೋಡಿದ ” . ಕಾರಂತರು ರಜೆಯಲ್ಲಿದ್ದಾರಾ […]
ಪಾಲು
“ಅರೆ, ನಾನಿಲ್ಲವೆ. ಕೂಜಳ್ಳಿಯಲ್ಲಿ ನಾನು ನಿಲ್ಲುತ್ತೇನೆ. ಗಣೇಶ ನನ್ನ ಜೊತೆಯಲ್ಲಿಯೇ ಇಲ್ಲಿ ಇರುತ್ತಾನೆ. ಇಲ್ಲಿಯ ಆಸ್ತಿಯನ್ನು ಅವನ ಹೆಸರಿಗೇ ಬರೆದರಾಯಿತು ಆಮೇಲೆ. ಅವನು ಹಿರಿಯವನಲ್ಲವೇ?” ತಮ್ಮ ಇಲ್ಲಿಯ ತನಕದ ಅಸ್ಪಷ್ಟ ಅಭಿಪ್ರಾಯಕ್ಕೆ ಮೂರ್ತ ರೂಪ ಕೊಟ್ಟರು ಹೆಗಡೆಯವರು.
ಜೊತೆ ಜೊತೆಯಲಿ
ಅಪ್ಪ ಅಮ್ಮ. ಕೋವಿಡ ಬಗ್ಗೆ ಅವರಿಗೆ ಹೇಳಿ ಅಪ್ಪನನ್ನು ಚಿತಾಗಾರಕ್ಕೆ ಬರದಂತೆ ತಡೆದಿದ್ದೆ. ನನಗೆ, ನಾನು ಮತ್ತು ನನ್ನ ಗಂಡ ಅಷ್ಟೆ ಪ್ರಪಂಚ, ಬೇರೇ ಯಾರೂ ಬೇಕಾಗಿಲ್ಲ ಎಂದು ನಾನು ಮೂರು ವರ್ಷಕ್ಕೆ ಮುಂಚೆ ಅವರ ಎದುರಿಗೆ ಹೇಳಿದ್ದ ವಾಕ್ಯಗಳು ಈಗ ನನ್ನ ಮನಸ್ಸಿಗೆ ಈಟಿ ತೆಗೆದುಕೊಂಡು ಚುಚ್ಚುತ್ತಿರುವಂತಿತ್ತು.
ಮುಸ್ಸಂಜೆ
ಇಬ್ಬರ ನೋಟದಲ್ಲಿ ಅಂದಿನ ಆಕರ್ಷಣೆ ಇರಲಿಲ್ಲ.ಬದಲಿಗೆ ಅಂದಿನಿಂದ ಇಂದಿನವರೆಗೆ ಅಚ್ಚಳಿಯದೆ ಉಳಿದ ಗೆಳೆತನವಿತ್ತು. ಮಾಧವ ಚಾಚಿದ ಕೈಯಲ್ಲಿ ನನ್ನ ಕೈಗಳನ್ನಿಟ್ಟು ಮುಗುಳ್ನಕ್ಕೆ.
ಎರಡು ಕಿರು ಕಥೆಗಳು
ಧೂಳೆಬ್ಬಿಸಿ ಹೋದ ಕಾರಿನ ಚಕ್ರದಡಿ ಸಿಕ್ಕಿ ನೆಲಕ್ಕಂಟಿದ ಗರುಕೆಗೆ ಅವನ ಕಣ್ಣ ಹನಿಯೇ ಜೀವದಾಯಿನಿ ಮಳೆಯಾಯ್ತು
ಅಕ್ಕನೆಂಬ ಹುರುಪು
ಹೊರ ಜಗಲಿಯ ಮೇಲೆ ಕೂತು ಹತ್ತಿ ಹೊಸೆದು ಬತ್ತಿ ಮಾಡುತಿದ್ದ ಗೋದಕ್ಕ ಬಾಯಿ ತುಂಬಾ ನಕ್ಕರು. ಒಂದೇ ಅಳತೆ, ಒಂದೇ ಬಿಗುವಾಗಿ ಹೊಸೆದ ಬತ್ತಿಯಲ್ಲೂ ಎಷ್ಟು ಶಿಸ್ತು. ಅಬ್ಬಾ ಈ ಹೆಂಗಸಿನ ಬತ್ತದ ಉತ್ಸಾಹಕ್ಕೆ ಆಶ್ಚರ್ಯವಾಯಿತು ನನಗೆ.
ಕಳ್ಳ ಬಂದೂಕು
ಹಳ್ಳಿಗಳಲ್ಲಿ ದೊಡ್ಡಮನುಷ್ಯರ ಹತ್ತಿರ ಕಾಡುತೋಸು ಅಥವಾ ಡಬಲ್ ಬ್ಯಾರಲ್ ಬಂದೂಕು ಇರುವದು ಸಾಮಾನ್ಯವಾಗಿತ್ತು. ಅದನ್ನು ಇಟ್ಟುಕೊಳ್ಳಲು ಪರವಾನಗಿ ಪತ್ರದ ಅವಶ್ಯಕತೆ ಇದ್ದರೂ ‘ದೊಡ್ಡ ಮನುಷ್ಯರಿಗೆ’ ಪರವಾನಗಿ ಪತ್ರ ಪಡೆಯುವದು ಕಷ್ಟವಾಗಿರಲಿಲ್ಲ.