ಕಾವ್ಯಯಾನ
ಜೀವರಾಮ ಅಶ್ವಥ್ ವಾರಕ್ಕೆ ಮೂರುದಿನ ಮಡಿಯಾಗಿ , ಮಂಡಿನೋವು ತೀರಲೆಂದು ಕೋರಿಕೊಂಡಳು ಮಂಡಿಯೂರಿ ಪರಿಪರಿ ಬೇಡಿಕೊಂಡಳು ಕಡೆಗೆ ಅಮ್ಮ ತೀರಿಕೊಂಡಳು! ಬೇಡುವ ಆರ್ತನಾದ ಕೇಳಿ ನಿಂತ ಹುಡುಗ, ಬಿಕ್ಕಳಿಸೆ ಅಮ್ಮನ ತಪಸ್ಸಿಗೆ ಭಂಗವೆಂದು ಬಿಸಿಯುಸಿರು ಬಾಯೊಳಗೇ ಬಿಗಿಹಿಡಿದಿದ್ದು ದೂರದೂರಲಿ ಬಿಕ್ಕಳಿಸಿದ, ಅವಳಿಲ್ಲವೆಂದು. ಫಲಿಸಿಬಿಟ್ಟಿತೇ ಅಮ್ಮನ ಸುದೀರ್ಘ ಪ್ರಾರ್ಥನೆ? ಅಮ್ಮನೂ ಇಲ್ಲದ ಮೇಲೆ ಮಂಡಿನೋವೂ ಇಲ್ಲ. ಹಾಗೆಂದುಕೊಂಡು ಹುಡುಗ ಸುಮ್ಮನಾಗಲಿಲ್ಲ ನೋವು ತೀರಿಸುವ ಯೋಚನೆಯ ಬಿಡಲಿಲ್ಲ ಹುಡುಗನ ಇನ್ನಿಲ್ಲದೆ ಬಾಧಿಸಿ ಅಮ್ಮನ ನೋವು, ಅವಳ ಪ್ರಾರ್ಥನೆಯ ನೆನಪೆಲ್ಲವ ಬಿಗಿಹಿಡಿದ […]
Read More
ಮೂಖವೇದನೆ ಪ್ಯಾರಿಸುತ ಮತ್ತದೇ ಮಾತು ನನ್ನನ್ನು ಮೂಗನೆಂದೇನಿಸಿದೆ ನಿನ್ನ ಕಾಲಗೆಜ್ಜೆ ಮೌನ ತಾಳಿರುವಾಗ ಪಿಸುಮಾತಿನ ಧ್ವನಿಯು ನನ್ನೆದೆಯ ಇಣುಕದಿರುವಾಗ ಗಾಳಿಯೊಳಗೆ ಪ್ರೀತಿಗಂಧವಿಲ್ಲ ಮಾತಿನ ನಡುವೆ ಪ್ರೇಮ ಸೆಳೆತವಿಲ್ಲ ಕಣ್ಣೋಟದಲ್ಲಿ ಹರಿತಮೋಹವಿಲ್ಲ ಹೂವಿನ ಸುತ್ತ ಮಕರಂಧ ಹೀರುವ ದುಂಬಿಯಂತೆ ಅಲೆಯುತ್ತಿವನನ್ನು ಮತ್ತದೇ ಮಾತು ಮೂಗನಾಗಿಸಿದೆ ಅದೆಲ್ಲವೂ ಇಲ್ಲದ ಮೇಲೆ ಮೂಗನಾಗದೆ ಮಾತಿನಿಂದ ಹೇಗೆ ಸೆಳೆಯಲಿ ನೀ ಉಟ್ಟ ಸೀರೆ ಸೆರಗಿನ ಅಂಚಿನಲ್ಲಿದ್ದ ನನ್ನೆಲ್ಲ ಕನಸುಗಳ ಚಿತ್ತಾರಗಳು ಅವಿತುಕೊಂಡಿವೆ ಮುಸ್ಸಂಜೆಯಲಿ ಮಿಂಚುಹುಳುವಿನಂತೆ ಮಿಂಚುತಿದ್ದ ನಿನ್ನ ಚಲುವೆಲ್ಲ ಸಪ್ಪೆಯಾಗಿದೆ ಈ ಪುಟ್ಟ […]
Read More
ಆದೇ ಅಪ್ಪನಂತೆ ಏಕೆ? ಜಿ.ಲೋಕೇಶ್ ನನ್ನಪ್ಪಂಥನಾಗಲು ನನಗಿಷ್ಟೂ ಇಷ್ಟವಿರಲಿಲ್ಲ ಮೌನವಾಗಿರಲು ಬಯಸುತ್ತಿದ್ದ ನನಗೆ ಹೇಳಿದ್ದೆ ಹೇಳುತ್ತಿದ್ದ ಅವನ ಮಾತುಗಳು ಸದಾ ಅವೇ ಅಕ್ಷತೆಯ ಮಂತ್ರಗಳು ಶಾಲೆಯಲ್ಲಿ ಮಗುವೊಂದು ಮರೆಯದೇ ಹೇಳುತ್ತಿದ್ದ ರಾಷ್ಟ್ರಗೀತೆಯಂತೆ ಗುಡಿಯ ಕಲ್ಲು ವಿಗ್ರಹ ಕಿವಿಯಿದ್ದರೂ ಕೇಳಿಸಿಕೊಳ್ಳದಂತೆ ನಾನು ನಿಲ್ಲುತ್ತಿದ್ದೆ ತಡೆದು ವಾಕರಿಕೆ, ಬೇಸರಿಕೆ. ಯಾವತ್ತೂ ಪ್ರತಿಕ್ರಯಿಸದೇ ನನ್ನೊಳಗೆ ಸತ್ತೇ ಹೋಗುತ್ತಿದ್ದ ಪ್ರತಿ ಹೇಳಿಕೆ ಇದ್ದಕ್ಕಿದ್ದಂತೆ ಒಂದು ದಿನ ನನ್ನಪ್ಪ ಮಾತುಗಳನ್ನು ಅನಾಥವಾಗಿಸಿ ಹೊರಟುಬಿಟ್ಟ! ಎಂಥಾ ಆಶ್ಚರ್ಯ! ನಾನೀಗ ಸಲುಹುತ್ತಿದ್ದೇನೆ ಅವನದೇ ಮಾತುಗಳನ್ನು ಯಥಾ ಪ್ರಕಾರ! […]
Read More
ಯಾರು ಯಾರಿಗೆ ರೇಖಾ.ವಿ.ಕಂಪ್ಲಿ ಹೂಳುವ ಭೂಮಿಯನು ಹಾಳು ಮಾಡಿತಾ ಮನೆ ಮಠ ಮಸೀದಿ ಮಂದಿರ ಮಹಾಲ್ಗಳನು ಕಟ್ಟಿದರು….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಜಾಗತೀಕರಣದ ಜಾಗಟೆ ಮೊಳಗಿಸಿ ಜಾಗೃತಿ ಹೆಸರಲಿ ಜನಜೀನವದ ರಸವೀರಿದರು…….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಬಿರುಸು ಮಾತುಗಳ ಹುರುಪು ಹಚ್ಚುತ್ತಾ ತಮ್ಮ ತಮ್ಮ ಬೆಳೆ ಬೆಯಿಸಿಕೊಂಡರು……. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ರಂಗುರಂಗಿನ ಮಾತಿನಲಿ ಸೆಳೆಯುತ ಚಪಲದ ಉಪಟಳವ ತೀರಿಸಿಕೊಂಡರು…….. […]
Read More
ಗಝಲ್ ಡಾ.ಗೋವಿಂದಹೆಗಡೆ ಪ್ರಾಜ್ಞ ಎಂದುಕೊಂಡವರ ಸೋಗಲಾಡಿತನಕ್ಕೆ ನಗು ಬರುತ್ತದೆ ಬೇಲಿಯ ಮೇಲೆ ಕೂತವರ ದಿವಾಳಿತನಕ್ಕೆ ನಗು ಬರುತ್ತದೆ ಸೂರ್ಯ ಬೆಳಗುವನೆಂದರೆ ಸಾಕ್ಷಿ ಕೇಳುವರು ಇವರು ನೋಡು ತನಗೇ ತಾನು ಹುಸಿಯಾದ ಈ ಅಧಃಪತನಕ್ಕೆ ನಗು ಬರುತ್ತದೆ ರತ್ನದ ಕಾಂತಿಗೆ ಯಾರ ಶಿಫಾರಸಿನ ಹಂಗೇನಿದೆ ಹೇಳು ತಿಳಿದೂ ಬೊಗಳುವವರ ಧಾಡಸೀತನಕ್ಕೆ ನಗು ಬರುತ್ತದೆ ಕಪ್ಪುಕನ್ನಡಕ ಧರಿಸಿದರೆ ಕಣ್ಣನಷ್ಟೇ ಮರೆಸಬಹುದು ಜಗವನ್ನೇ ಯಾಮಾರಿಸುವ ಮಂಕುತನಕ್ಕೆ ನಗು ಬರುತ್ತದೆ “ನಾ ಕಂಡ ಮೊಲಕ್ಕೆ ಮೂರೇ ಕೊಂಬು” ಎಂಥ ವಾದ ‘ಜಂಗಮ’ ಅಡಿಪಾಯವಿಲ್ಲದೇ […]
Read More
ರೆಕ್ಕೆ ಬಿಚ್ಚಲು ಪ್ಯಾರಿಸುತ ಎಲ್ಲಿ ನೀನಿಲ್ಲವೋ… ಎಲ್ಲಿ ನೀನಿಲ್ಲವೋ ಅಲ್ಲಿ ನಾನೂ ಇಲ್ಲ ಅದು ನಿಲಯವಾಗಿದ್ದರು, ಆಲಯದಂತಿದ್ದರೂ, ಇದ್ದರೂ ಅದು ಶರೀರವಷ್ಟೇ..! ಮನಸು ನಿನ್ನ ಬೆನ್ನು ಬಿದ್ದಿದೆ ಆ ಕರಿನೆರಳಿನಂತೆ, ಮಾರುದ್ದ ಜಡೆಗೆ ಮುಡಿದ ಮಲ್ಲಿಗೆಯಂತೆ, ಹಿಂದೆ ಅಲೆಯುವ ಸೀರೆಸೆರಗಿನ ಗಾಳಿಯಂತೆ, ಗಾಳಿಯಲ್ಲಿ ಬರುವ ಹೂಡಿದೂಳಿನಂತೆ ಯಾವಾಗಲೂ ನೀ ನನ್ನಲ್ಲೇ ಇರುವೆ ಸದಾ ನೀರಿನಲಿರುವ ಮೀನಿನಂತೆ ನೀ ಪ್ರೇತವೆಂದರು,ಭೂತವೆಂದರು…! ನಾನಂತೂ ನಿನ್ನ ಬೆನ್ನು ಬಿಡೇನು ನಿನ್ನೊಮ್ಮೆ ತಿರುಗಿ ನೋಡುವಂತಿದ್ದರೆ ನಾ ಯಾವಾಗಲೂ ನಿನ್ನ ಕಣ್ಣ ಮುಂದೆ ಕಾಯ […]
Read More
ಕವಿತೆ ವಿಜಯಶ್ರೀ ಹಾಲಾಡಿ ಚಿತ್ರ ಬಿಡಿಸುವ ಮರಚಳಿಗೆ ನರಳಿ ಇಬ್ಬನಿಅಡರಿ ಹಿಮಗಾಳಿಶೀತ ಹಿಡಿದುಕೊಂಡಿದೆ ಗಳಿತ ಎಲೆಯೊಂದುಹಳದಿ ಉಸಿರಿನ ಕೂಡೆಮಣ್ಣಿಗೆ ಸೋಕಿ ನಿಡಿದುನಿರಾಳ ಅಪ್ಪಿಕೊಂಡಿದೆ ಧೂಳ ಹೆಜ್ಜೆಗಳಲ್ಲಿಪಾದವೂರಿದ ಬೀಜಮುಗಿಲೂರಿನ ಕನಸರಂಗುಗಳ ಕವಿದುಕೊಂಡಿದೆ ಮೈಮುರಿದು ಆಕಳಿಸುವನಿಗೂಢ ಇರುಳು ಮಾತ್ರಬಿಟ್ಟ ಕಣ್ಣು ಬಿಟ್ಟಹಾಗೆಗೂಬೆದನಿಗೆ ಆಲಾಪಿಸಿದೆ. *******
Read More
ಗಾಂಧಿ ನಕ್ಕರು ಅಶ್ವಥ್ ಗಾಂಧಿ ನಕ್ಕರು ಗಾಂಧಿತಾತ ರಾಷ್ಟ್ರಪಿತ ತನ್ನೊಳಗೇ ತಾನು ದೈವಭಕ್ತ ಸಂಪತ್ತಿನುತ್ತುಂಗ ಎಂಜಿ ರಸ್ತೆ ಗಾಂಧಿಗೆಂದು ಮೀಸಲಂತೆ ಬೀದಿ ಬದಿಯ ಬಡವನ ಪಾಲು ಚಿತ್ರಮಂದಿರದ ಕೊನೆಯ ಸಾಲು ಕಣ್ಣರಳಿಸಿ ಕತ್ತನೆತ್ತಿ ತುಣುಕು ತುಣುಕೇ ದೃಶ್ಯವುಂಡು ಬೆರಗಾಗುವ ಬೆಪ್ಪನ ಕಂಡು ಗಾಂಧಿ, ಸುಮ್ಮನೆ ನಕ್ಕುಬಿಟ್ಟರು ಹೊಸ ಕಾಲದ ಅಭ್ಯುದಯಕೆ ಒಂದು ಸಂಜೆ ಕಾರ್ಯಕ್ರಮಕೆ ಸೆಲ್ಫಿ ತೆಗೆದುಕೊಳ್ಳಲೊಂದು ಪೊರಕೆ ತಂದು, ಕ್ಯಾಮರ ಬಂದು ಸಾವಧಾನ ಕೊಂಡುತಂದು ಗಾಂಧಿಯನ್ನು ಬಳಸಿಕೊಂಡು ನೀರು ಸಿಂಪಡಿಸಿಕೊಂಡು ಹುಸಿಬೆವರು ಬರಿಸಿಕೊಂಡು ಸಮಾಧಾನ ಭಂಗಿಯಲ್ಲಿ […]
Read More
ಜಾತ್ರೆ ಅಂಜನಾ ಹೆಗಡೆ ಬಯಲಿಗಿಳಿದ ದೇವರೆದುರು ತಲೆಬಾಗಿ ನಿಂತರೆ ಮೆದುಳಿಂದ ಮೃದುವಾಗಿ ಎದೆಗಿಳಿದ ಜಯಜಯ ಶಂಕರಿ ಜಯ ಜಗದೀಶ್ವರಿ…. ತಂಪಾದ ಹಾಡು ತಲೆಗೆ ಮೆತ್ತಿದ ಬಣ್ಣಕ್ಕೂ ಎದೆಗಿಳಿದ ಮೆದುಳಿಗೂ ಸಂಪರ್ಕವೇ ಇಲ್ಲದಂತೆ ದೇವರೇ ಮೈಮೇಲೆ ಬಂದಂತೆ ಮನಬಂದಂತೆ ಒದರುವ ಮೈಕಿನಲ್ಲಿ ಧೂಮ್ ಮಚಾಲೇ ಧೂಮ್… ತಲೆ ಕುಣಿಸುತ್ತ ನಿಂತ ತೊಟ್ಟಿಲ ಸಾಲು ತಿರುಗಿಸುವವನನ್ನು ಕಂಡವರಿಲ್ಲ ಹತ್ತಾರು ಸುತ್ತು ಸುತ್ತಿ ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ…. ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ ನಿಂತುಹೋದ ತೊಟ್ಟಿಲಿಂದ ಇಳಿದ ಪೋರ ಹುಡುಕಿದ್ದು ಅಪ್ಪನ […]
Read More
ಪದಗಳೇ ಹೀಗೆ ಜಿ.ಲೋಕೇಶ್ ಪದಗಳೇ ಹೀಗೆ ಪದಗಳೇ ಹೀಗೆ ಅಲೆಸುತ್ತವೆ ಇಂದು ಬಾ ನಾಳೆ ಬಾ ಎಂದು ಕವಿತೆಗಳನ್ನು ಕಟ್ಟಲು ಎರವಲು ಪಡೆಯಲು ಹೋಗಬೇಕಾಗಿದೆ ನಮ್ಮೂರ ಶೆಟ್ಟಿ ಬಳಿಗೆ ನನ್ನವ್ವ ಸಾಲ ಪಡೆಯಲು ಹೋಗುವಂತೆ ಬಡ್ಡಿ ಬೇಕಾದಷ್ಟು ನೀಡುತ್ತೇನೆಂದರೂ ಏನೋ ಅನುಮಾನ ಪದಗಳಿಲ್ಲಿ ಸಿಗಲೊಲ್ಲವು ಸರಿ ಕಾಯುತ್ತಿದ್ದೇನೆ ಬಾಗಿಲು ತೆರೆಯುವ ಮುನ್ನವೇ ಸರದಿಯಲ್ಲಿ ನಿಂತು ಇವತ್ತು ನಾನೇ ಮೊದಲು!! ********
Read More| Powered by WordPress | Theme by TheBootstrapThemes