ಗಝಲ್
ರತ್ನರಾಯ ಮಲ್ಲ ನಿನ್ನ ಆಶೀರ್ವಾದದಿಂದಲೇ ಸಂಪತ್ತನ್ನು ಗಳಿಸಿದೆ ಮಾ ಆ ದುಡ್ಡು ನನ್ನೆಲ್ಲ ಮನದ ಶಾಂತಿಯನ್ನು ಕಳೆದಿದೆ ಮಾ ಹಣದ ಮುಂದೆ ಪ್ರೀತಿ-ಪ್ರೇಮಗಳು ಗೌಣವಾಗಿದ್ದವು ಅಂದು ಜೇಬು ಭಾರವಾಗಿದ್ದರೂ ಇಂದು ನೆಮ್ಮದಿ ಗತಿಸಿ ಹೋಗಿದೆ ಮಾ ಸಾವಿನ ಸುದ್ದಿಯು ನನ್ನನ್ನು ಮತಿಭ್ರಮಣೆಗೆ ನೂಕುತ್ತಿದೆ ಕಣ್ಮುಂದಿನ ಅಂತರದಿಂದ ಹೃದಯಬಡಿತ ನಿಂತಿದೆ ಮಾ ಕರೆಗಳ ಕರತಾಡನ ನನ್ನ ಕರುಳನ್ನು ಕಿತ್ತು ತಿನ್ನುತಿದೆ ದೃಶ್ಯ ಕರೆಯಲ್ಲಿ ದರುಶನವ ಪಡೆದ ಪಾಪಿ ನಾನು ಹುಚ್ಚಾದೆ ಮಾ ವಾಹನಗಳ ಸಂಖ್ಯೆಗೆ ಮಿತಿಯಿಲ್ಲ ಮನೆಯ ಆವರಣದಲ್ಲಿ […]
ಗಝಲ್
ಎ.ಹೇಮಗಂಗಾ ಸ್ವಾರ್ಥದ ಭದ್ರಕೋಟೆಯಿಂದ ಎಂದೂ ಹೊರಗೆ ಬರಲಿಲ್ಲ ನೀನು ಅನರ್ಥಕೆ ಎಡೆ ಮಾಡಿದ ನಡೆಗೆ ಎಂದೂ ಪರಿತಪಿಸಲಿಲ್ಲ ನೀನು ಒಂಟಿ ಪಥಿಕಳ ಪಯಣಕೆ ಕೊನೆತನಕ ಜೊತೆ ನೀನೆಂದೆಣಿಸಿದ್ದೆ ಜನ್ಮ ಕೊಟ್ಟ ಜೀವಕೆ ಬೊಗಸೆಯಷ್ಟೂ ಪ್ರೀತಿ ನೀಡಲಿಲ್ಲ ನೀನು ಹಮ್ಮು ಬಿಮ್ಮಿನ ನಿನ್ನ ಅಧೀನದಿ ನೋವ ಸಹಿಸಿದ್ದು ಅದೆಷ್ಟು ಬಾರಿ ಕಟುವರ್ತನೆಗೆ ಕರುಳು ಕೊರಗಿದುದನು ಅರಿಯಲಿಲ್ಲ ನೀನು ತಾಯ್ತನದ ಬಳ್ಳಿಯಲಿ ಹೂವಿಗಿಂತ ಮುಳ್ಳುಗಳೇ ಹೆಚ್ಚಾದವೇಕೆ ಸಾಂಗತ್ಯ ಬೇಡಿ ಹರಿಸಿದ ಕಂಬನಿಧಾರೆಗೂ ಕರಗಲಿಲ್ಲ ನೀನು ಮಾತಿನ ಕೂರಂಬುಗಳ ಕ್ರೂರ ಇರಿತಕೆ […]
ಕಾವ್ಯಯಾನ
ಮುಂಗಾರು ಆಲಿಂಗನ… ಬಾಲಕೃಷ್ಣ ದೇವನಮನೆ ಮುಂಗಾರು ಸುರಿದಂತೆ ಸಣ್ಣಗೆಕೊರೆಯುತಿದೆ ಚಳಿ ಹೊರಗೂ ಒಳಗೂ…ಬಾಚಿ ತಬ್ಬಿದ ಮಳೆಯ ತೋಳುಇಳೆಯ ತೆಕ್ಕೆಯಲಿಕವಿದ ಮೋಡದ ನಡುವೆ ಚಂದ್ರ ತಾರೆಯ ಬೆಳಕಅರಸುತಿವೆ ಇರುಳ ಆಲಿಂಗನದಲ್ಲಿ… ಕಪ್ಪಾನೆಕಪ್ಪು ಮೋಡಗಳು ಸುರಿಯುತಿವೆಗವ್ವನೆಯ ಇರುಳ ಮೌನ ಸೀಳಿಮಾತಿಗಿಳಿದಿವೆ ಹನಿಯ ಜೊತೆ ಜೀರುಂಡೆ ಕ್ರಿಮಿ ಕೀಟಇಳೆಯ ಬಿಸಿ ಉಸಿರ ಸದ್ದನು ಮೀರಿ… ನಾಚಿ ಪುಳಕಿತಗೊಂಡ ನವ ವಧುವಿನಂತ ಇಳೆಮೊರೆಯುತಿದೆ ಹುಣ್ಣಿಮೆ ಕಡಲಂತೆಹನಿಯ ಬೆರಳು ಇಟ್ಟಂತೆ ಕಚಗುಳಿಇಳೆಯ ಮೈಯ ತುಂಬಾಮೊಳೆಯುತಿದೆ ಗರ್ಭದೊಡಲಲಿ ಹಸಿರು ಸಂತೆ… ರಮಿಸುತಿದೆ ಮಳೆಯ ತೋಳು ಇಳೆಯ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಹೊರಟು ನಿಂತವಳು ತಿರುಗೊಮ್ಮೆ ನೋಡಿಬಿಡು ಕಟ್ಟಿದ ಗಂಟಲಲ್ಲಿ ಒಮ್ಮೆ ದನಿಯೆತ್ತಿ ಹಾಡಿಬಿಡು ಸಂಜೆ ಕವಿಯುತ್ತಿದೆ ಉಳಿದಿಲ್ಲ ಬಹಳ ವೇಳೆ ವಿದಾಯದ ಈ ಹೊತ್ತು ಅಲೆಯೊಂದ ಹಾಯಬಿಡು ಬೆನ್ನಿಗೇಕೆ ಬೇಕು ಹೇಳು ಈ ಬೇಗುದಿ ಭಾರ ಮಂಕಾದ ಮುಖದಲ್ಲು ಒಮ್ಮೆ ನಕ್ಕು ನಡೆದುಬಿಡು ಮಾಯುತ್ತಿರುವ ಎದೆಗಾಯ ಮತ್ತೆ ಕೆಂಪಾಗಿದೆ ಸಾಧ್ಯವಾದರೆ ಒಮ್ಮೆ ಬೆರಳಿಂದ ಸವರಿಬಿಡು ನನ್ನ ಕನಸೊಂದು ಬಿಡದೆ ನಿನ್ನ ಹಿಂಬಾಲಿಸಿದೆ ಈಸು ಬೀಳುವ ಮುನ್ನ ಒಮ್ಮೆ ಮುದ್ದಿಸಿಬಿಡು ಮರುಳಿನಲಿ ಅಲೆವ ‘ಜಂಗಮ’ಗೆ ಏನು […]
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಲೋಕದ ಏಕಾಂತದಲಿ ನಿನ್ನ ಹುಡುಕಾಡಿದ್ದೇನೆ ನಾನು ಬಯಸಿ ನೋವನುಂಡರು ಕಾಣಲು ತಿರುಗಿದ್ದೇನೆ ನಾನು ನೋವಿನ ಹಾಸಿಗೆಯಲಿ ಮಲಗಿ ದಿನ ಕಳೆದಿದ್ದೇನೆ ಮೌನವ ಅಪ್ಪಿಕೊಂಡು ಕಾಲು ಹಾದಿ ನಡೆದಿದ್ದೇನೆ ನಾನು ಬದುಕು ಹತಾಶೆಯಲಿ ಮಿಂದಿರುವುದು ನೋಡು ಇರುವ ತನಕ ಜೀವಗಳೆರಡು ಹೊಂದಿ ನಡೆಯಲೆಂದಿದ್ದೇನೆ ನಾನು ಬಯಸಿದ ಗಳಿಗೆಯಿಂದ ಬರಿ ಚಿಂತೆ ಮೌನಗಳೆ ಆವರಿಸಿವೆ ಹೊರಗಿನ ಚಂದಕಿಂತ ಒಳಗಿರುವ ಅಂದವ ಬಯಸಿದ್ದೇನೆ ನಾನು ನಗುವ ಚೆಲ್ಲಿ ಬಾ ಖಾಲಿಯಾದ ನನ್ನೆದೆಯ ತುಂಬಿಸು ಈ ಮರುಳ ಚೆಂದಾಗಿ […]
ಕಾವ್ಯಯಾನ
ಸಮ್ಮಾನದ ಬೀಡಿಗೆ ಶಾಲಿನಿ ಆರ್. ಪ್ರಕೃತಿಯ ಭಾವೊತ್ಕರ್ಷ ದಿನದಿಂದ ದಿನಕೆ ಎಲ್ಲೆಲ್ಲೂ ನಗೆಯ ರಂಗವಲ್ಲಿ ನದಿ ಕಾನನಗಳ ಅಂಗಳದ ತುಂಬ, ಹೂ ಹಾಸಿದೆ ಡಾಂಬರಿನ ಹಾದಿಯುದ್ದಕೂ ಮರುಳಾಗಿ ಒಂದೇ ಹಠ ತುಸು ಹೆಚ್ಚೆ ಹೊತ್ತು ನಿಲುವೆ ವಾಹನಗಳ ಸುಳಿವಿರದ ಹಾದಿ ತುಂಬ, ಕಂಡು ಕಾಣದ ಹಕ್ಕಿ ಪಕ್ಕಿ ಮರಳಿ ಕಲರವ ಮೂಲೆ ಮೂಲೆಯ ಕಾಂಕ್ರೀಟಿನ ಕಾಡಿನಲ್ಲೆಲ್ಲಾ, ಜಂಗಮವಾಣಿಯಲಿ ಸೆರೆ ಹಿಡಿದರು ದಣಿವಾರದ ಪ್ರಕೃತಿಯ ಹಾವಾಭಾವ ಮತ್ತದರ ಕಾಪಿಡುವ ಧಾವ, ಮನುಜನ ಸಹಜ ಭಾವ! ನಿಧಾನಿಸಿದೆ ಪ್ರಕೃತಿ ಹೂ […]
ಕಾವ್ಯಯಾನ
ಗಝಲ್ ಉಮೇಶ ಮುನವಳ್ಳಿ ಬೇಡಿದಾಗ ನೀ ಕೊಡದೇ ಹೋದರೆ, ಹುಡುಕುವಾಗ ನಿನಗೆ ಸಿಗದೇ ಇರಬಹುದು. ನೀಡಿದಾಗ ನೀ ಸ್ವೀಕರಿಸದೇ ಹೋದರೆ, ಬೇಡುವಾಗ ನಿನಗೆ ಸಿಗದೇ ಇರಬಹುದು. ಹಲುಬಿದಾಗ ನೀ ಹೊರಳಿ ನೋಡದಿರೆ, ಮರಳಿ ಬಂದಾಗ ನಿನಗೆ ಸಿಗದೇ ಇರಬಹುದು. ಕೊಡಲು ಬಂದಾಗ ನೀ ಕೊಸರಿಕೊಂಡರೆ, ಕನವರಿಸಿದಾಗ ನಿನಗೆ ಸಿಗದೇ ಇರಬಹುದು. ಬಯಸಿದಾಗ ನೀ ಬಿಗುಮಾನ ಬಿಡದಿರೆ, ಬೇಕೆಂದಾಗ ನಿನಗೆ ಸಿಗದೇ ಇರಬಹುದು. ಸನಿಹ ಬಂದಾಗ ನೀ ಮುನಿಸಿಕೊಂಡರೆ, ಸಹಿಸಿ ಬಂದಾಗ ನಿನಗೆ ಸಿಗದೇ ಇರಬಹುದು. ರೀತಿ ಬಿಟ್ಟಾಗ […]
ಕಾವ್ಯಯಾನ
ಅಸ್ತ್ರಗಳಿವೆ ಲಕ್ಷ್ಮೀ ದೊಡಮನಿ ಕಾಳಕೂಟ ಮೀರಿಸಬಲ್ಲ ವಿಷಗಳಿವೆ ನಮ್ಮೊಳಗೆ ಅಮೃತವ ಹಾಳುಮಾಡಬಲ್ಲ ಕುತಂತ್ರಿಗಳಿವೆ ನಮ್ಮೊಳಗೆ ಕಟುವಾಣಿ,ಅಶ್ಲೀಲ ವಿಚಾರ,ಸಂಶಯಗಳ ಮುಖೇನ ಅಂದದ ತನುವ ನಶಿಸಬಲ್ಲ ರಸಾಯನಗಳಿವೆ ನಮ್ಮೊಳಗೆ ಸಂಬಂಧದ ಲೆಕ್ಕವಿಲ್ಲ, ಸಮಯ-ಜಾಗದ ಪರಿವೆಯಿಲ್ಲ ಸ್ತ್ರೀಯರ ಆಸಿಸಬಲ್ಲ ಕ್ರಿಮಿಗಳಿವೆ ನಮ್ಮೊಳಗೆ ಪ್ರಗತಿಯ ರಸ್ತೆಯಿಂದ. ಧುಮ್ಮಿಕ್ಕುವವರ ಎಳೆಯುವ ಧ್ಯೇಯದಿಂದ ದೂರಾಗಿಸಬಲ್ಲ ಭಾವನೆಗಳಿವೆ ನಮ್ಮೊಳಗೆ ಅವನನ್ನುಹೊರುವ, ಅರ್ಧಾಂಗಿಯಾಗಬಲ್ಲ ಅವಳ ಅಸಮತೆಯಿಂದ ಕಾಣಬಲ್ಲ ನೋಟಗಳಿವೆ ನಮ್ಮೊಳಗೆ ಬೆರಳಿಂದ ಬ್ರಹ್ಮಾಂಡವರಿವ ಶಕ್ತಿ ಹುಟ್ಟಿದೆ ‘ಚೆಲುವೆ’ ಪುಸ್ತಕ ಸಂಸ್ಕೃತಿ ಅಳಿಸಬಲ್ಲ ಅಸ್ತ್ರಗಳಿವೆ ನಮ್ಮೊಳಗೆ *******
ಕಾವ್ಯಯಾನ
ನಾನೀಗಲೂ ನಿನಗೆ ಆಭಾರಿ. ಶೀಲಾ ಭಂಡಾರ್ಕರ್ ಕನಸೊಂದನ್ನು ಕನಸಾಗಿಯೇ ಉಳಿಸಿದಕ್ಕಾಗಿ, ಮತ್ತೆ ಮತ್ತೆ ಅದೇ ಕನಸಿನ ಗುಂಗಿನಲ್ಲಿ ಇರಿಸಿದಕ್ಕಾಗಿ, ನಿನಗೆ ನಾ ಸದಾ ಆಭಾರಿ. ಕನಸೊಂದಿತ್ತು ನನಗೆ ಸಮುದ್ರ ಕಿನಾರೆಯಲ್ಲಿ, ಮುಸ್ಸಂಜೆಯ ಹೊತ್ತಲ್ಲಿ, ಸೂರ್ಯನೂ ನಾಚಿ ಕೆಂಪಾಗಿ ನಮ್ಮನ್ನೋಡುತ್ತಾ ಮುಳುಗುತ್ತಿರುವಾಗಲೇ ಕೈಯೊಳಗೆ ಕೈ ಹಿಡಿದು ನಮ್ಮೊಳಗೆ ನಾವು ಕಳೆದು ಹೋಗುತ್ತಲೇ ಇರಬೇಕು ದೂರ ಬಲು ದೂರ ನಡೆದು. ಆ ದಿನವಿನ್ನೂ ಬರಲೇ ಇಲ್ಲ. ಸೂರ್ಯನು ನಾಚಿ ನಮ್ಮನ್ನು ನೋಡಲೇ ಇಲ್ಲ. ನಮ್ಮೊಳಗೆ ನಾವು ಕಳೆದು ಹೋಗಲೇ ಇಲ್ಲ. […]
ಕಾವ್ಯಯಾನ
ಕೀಲಿ ಕೈ ತರಲು ಧರಣೇಂದ್ರ ದಡ್ಡಿ ಯಾವ ದೇವರು ಕಣ್ಣು ತೆರೆಯಲೇ ಇಲ್ಲ ಯಾವ ದೇವರು ತಾನೇ ಕಣ್ಣು ತೆರೆದಾನು? ಕಲ್ಲಿನಲಿ ಯಾವುದೋ ಶಿಲ್ಪಿ ಕೆತ್ತಿದ ಮೂರ್ತಿ ಇಲ್ಲಿ ಮನಸ್ಸುಗಳೆಲ್ಲ ಕೋಟೆ ಬಾಗಿಲಿನ ಹಾಗೇಯೆ ಮುಚ್ಚಿಕೊಂಡಿವೆ ಮುಚ್ಚಿದ ಬಾಗಿಲಿಗೆ ಚಿಲಕ ಹಾಕಿದೆ ಜೊತೆಗೆ ದೊಡ್ಡದೊಂದು ಬೀಗವು ಕೂಡ ಹಾಕಿದ ಬೀಗದ ಕೀಲಿ ಕೈ ಸಮುದ್ರಕ್ಕೆ ಎಸೆದಿರುವಾಗ ನಾನೇ ಮೂರ್ಖ! ಈ ಕಲ್ಲು ದೇವರುಗಳೆಲ್ಲ ಕಣ್ಣು ತೆರೆಯುವುವು ಎಂದು ಕಾಯುತ್ತಿದ್ದೇನೆ ಇರಲಿ, ಆದರೂ ಒಂದು ಮಾತು ನೆನಪಿರಲಿ ದೇವರು […]