Category: ಕಾವ್ಯಯಾನ

ಕಾವ್ಯಯಾನ

ಅನುವಾದಿತ ಅಬಾಬಿಗಳು (೬ನೇ ಕಂತು)

ಕಾವ್ಯ ಸಂಗಾತಿ ಅನುವಾದಿತ ಅಬಾಬಿಗಳು (೬ನೇ ಕಂತು) ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ)ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮೊನ್ನೆ ರಥ ಇಂದು ವಿಗ್ರಹದಿನಕ್ಕೊಂದು ಹೊಸ ಯೋಜನೆದೇಶದಲ್ಲಿ ರಾಜಕೀಯ ಆಧ್ಯಾತ್ಮಿಕಹಕೀಮುಪ್ರಮಾಣಗಳಿಂದ ಪ್ರಸಿದ್ಧರಾಗುವ ಯೋಚನೆ. ೧೪)ದೇವಾಲಯವೋ? ವಿದ್ಯಾಲಯವೋ?ಎಲ್ಲಾದರೂ ಆಣೆಗಳನ್ನು ಮಾಡುವರುಅಸಲು ಆಣೆ ಅಂದರೇನು ಗೊತ್ತಾ?ಹಕೀಮುದೈವವೆಂದರೆ ಇವರಿಗೆ ಆಟದ ವಸ್ತುವೇನು? ೧೫)ಎಲ್ಲರಿಗೂ ತಿಳಿದ ರಹಸ್ಯವೇಪಕ್ಷಗಳ ದೌರ್ಭಾಗ್ಯದ ವಾಗ್ದಾನಗಳುಇಂದಿನ ರೌಡಿಗಳು ನಾಳೆಯ ನಾಯಕರೆ?ಹಕೀಮುದೇಶವೇ ಕಬ್ಜಾ ಆಗುತ್ತಿದೆಯೇನೋ!

ಒಂಥರಾ ಭಯ

ಕಾವ್ಯ ಸಂಗಾತಿ ಒಂಥರಾ ಭಯ ಸಂತೆಬೆನ್ನೂರು ಫೈಜ್ನಟ್ರಾಜ್ ಬೆಳೆದಷ್ಟೂ ಭಯಬಿದಿರಿಗೆಬೆತ್ತ, ಬುಟ್ಟಿ, ಕೊಳಲಾಗುವ ಹುನ್ನಾರಕೆ* ಹರಿದಷ್ಟೂ ನದಿಗೆ ಭಯಸಾಗರದಿಕಳೆದೇ ಹೋಗುವ ದುಗುಡಕೆ* ಮಣ್ಣಲಿ ಮಲಗಿದಷ್ಟೂ ಬೀಜಕ್ಕೆ ಭಯಟಿಸಿಲೊಡೆದುಮಣ್ಣ ಬಂಧ ದೂರಾದೀತೆಂದು* ನಡೆದಷ್ಟು ಆತಂಕಗುರಿ ಮುಟ್ಟಿ ಮುಂದೆಮೈಲಿಗಲ್ಲಾಗಿ ತಟಸ್ಥನಾಗೋ ತುಮುಲ* ಒಲವೂ ಅಷ್ಟೇ ಪ್ರೀತಿಸಿದಷ್ಟು ಭಯಕಳೆದುಕೊಂಡುಒಳಗೇ ಸತ್ತು ಹೋಗಬಹುದೆಂದು!

ದೀಪಾವಳಿ

ಕಾವ್ಯ ಸಂಗಾತಿ ದೀಪಾವಳಿ ಬಾಪು ಗ. ಖಾಡೆ ತಳಿರು-ತೋರಣದ ಚಿತ್ತಾರ ಬಾಗಿಲುರಂಗವಲ್ಲಿಯ ಸಿಂಗಾರ ಬಯಲುಸಡಗರ ಸಂಭ್ರಮ ಸುಳಿಸುಳಿದಾಡಲುಮನೆ-ಮನೆಯಲ್ಲಿ ದೀಪೋತ್ಸವ ಹೂ ಬಾಣ ಪಟಾಕಿ ಸುರು-ಸುರು ಬತ್ತಿಆಕಾಶ ಬುಟ್ಟಿಯ ಮಿನುಗುವ ಜ್ಯೋತಿಸಾಲು ದೀಪಗಳ ಹೊಣ್ಣಿನ ಕಾಂತಿಮನೆ-ಮನೆಯಲ್ಲಿ ದೀಪೋತ್ಸವ ನಗುಮೊಗದಿಂದಲಿ ನಾರಿಯರೆಲ್ಲರೂಬಂಧು-ಬಳಗಕೆ ಆರತಿ ಬೆಳಗಿಸವಿ ಸವಿ ಮಾತಲಿ ಸಿಹಿಯನು ಹಂಚಲುಮನೆ-ಮನೆಯಲ್ಲಿ ದೀಪೋತ್ಸವ ಮಹಾಲಕುಮಿಗೆ ಮಂಗಳದಾರುತಿಅಂಗಡಿಯಲ್ಲಿ ಹೊಸ ಲೆಕ್ಕದ ಪುಸ್ತಕಶುಭ ಕಾರ್ಯಕ್ಕೆ ಬಲಿಪಾಡ್ಯಮಿಮನೆ ಮನೆಯಲ್ಲಿ ದೀಪೋತ್ಸವ ಕಾರ್ತಿಕ ಮಾಸದ ಮಾಗಿಯ ಚಳಿಗೆಸಗ್ಗವೇ ಇಳಿದಿದೆ ನಮ್ಮೀ ಧರೆಗೆಚಿಣ್ಣರ ಕಣ್ಣಲ್ಲಿ ಬೆಳ್ಳಿಯ ಮಿಂಚುಮನೆ-ಮನೆಯಲ್ಲಿ ದೀಪೋತ್ಸವ

ನೇಗಿಲು ಹೆಗಲು ಬದಲಾಗಿ

ಕಾವ್ಯ ಸಂಗಾತಿ ನೇಗಿಲು ಹೆಗಲು ಬದಲಾಗಿ ಮೋಹನ.ವಿ.ಹೊಸೂರ ಯಾರ ಬೀಜವೊಇನ್ನಾರದೋ ಗರ್ಭದಲಿಬಿತ್ತಿದ ಪರಿಯಲಿ ಸೇರಿಎಲ್ಲೋ ಇದ್ದವರು ನಾವುಮೊಳೆತು ಹೂ ಮಗುವಾಗರಳಿ ಹುಟ್ಟಿಸಿದ ಕಾರಣಕೆತಂದೆ ತಾಯಿ ಎನಿಸಿದವರಮಗುವಾಗಿ ಬೆಳೆದು ಆರೈಕೆಯಲಿಅರ್ಥ ಪೂರ್ಣ ಬದುಕು ಎಲ್ಲ ಸೇರಿನಮ್ಮದು ಒಂದೇ ಸಂಸಾರವಾಗಿ ಎಲ್ಲವೂ ನಾನುನನ್ನದೆಂಬ ಅಪ್ಯಾಯಮಾನದಲಿಬೆಳೆದು ನಲಿ ನಲಿದುಬಲಿತು ಮತ್ತೆ ಬೀಜವಾಗಿಇನ್ನಾರದೋ ಗರ್ಭದಲಿ ಮೊಳೆತುಇನ್ನೊಂದು ಜೀವಕೆ ಜೀವ ತುಂಬಿಧಾರೆಯೆರೆದು ಹೆಗಲ ನೊಗನೇಗಿಲು ಹೆಗಲು ಬದಲಾಗಿ ಬ್ಯಾಟನ್ ಒಪ್ಪಿಸಿ ರಿಲೇ ಆಟದ ರೀತಿನಾನು ನನ್ನದೆಂಬೆಲ್ಲವನೂ ಕೊಟ್ಟು ಬಿಟ್ಟುಕೋ ಕೋ ಆಟದಲಿ ಮುಟ್ಟಿ ಓಡುವ […]

ಜೇನು ನುಡಿ

ಕಾವ್ಯ ಸಂಗಾತಿ ಜೇನು ನುಡಿ ಶ್ರೀನಿವಾಸ ಜಾಲವಾದಿ ಜೇನು ನುಡಿಯಾ ಒಡತಿ ನಮ್ಮತಾಯಿ ನಾಡದೇವಿ ಕನ್ನಡಾಂಬೆ ! ಜಗದ ಸುಂದರ ನುಡಿಯು ಕನ್ನಡಚಂದ್ರನ ಬೆಳದಿಂಗಳ ಕಾಂತಿಯಿದಕೆನಗುವ ಸಿರಿಮೊಗವೀ ಚೆನ್ನುಡಿಯುತಾಯಿ ಮೊಗವ ಸಿರಿ ಈ ಹೊನ್ನುಡಿ! ಕಾವ್ಯ ಗದ್ಯ ಕಥೆ ನೀಳ್ಗತೆ ಜಡೆಯುಹಣೆ ಬೊಟ್ಟೇ ಇವಳ ಹನಿಗವನವುಬೆಳ್ಳನೆ ದಂತಪಂಕ್ತಿಯೇ ನಾಟ್ಯಶಾಸ್ತ್ರಅವಳ ಸುಂದರ ನಗೆ ಮಹಾಕಾವ್ಯ ! ಸರ್ವ ಜನಾಂಗದ ಶಾಂತಿ ಮಂತ್ರದಸಾಮರಸ್ಯದ ನಡೆಯ ಭುವನೇಶ್ವರಿಜೀವಜಲ ರಾಶಿಗಳ ಕಾಯ್ವ ದೇವಿನೀನೇ ನಮ್ಮ ನಿಜ ತಾಯಿ ಎಂದಿಗೂ ಕನ್ನಡವೇ ಹೊನ್ನುಡಿ ಕನ್ನಡವೇ […]

ಬಿತ್ತಿ ಬಿಡು ನಕಾಶೆಯೊಳು

ದಾಸ್ಯದ ನೊಗದ ಹೆಗಲೇ
ಸುರಿಯದಿರು ನೆತ್ತರು ಕಡು ಕರಂಡಿಕೆಯೊಳು
ಬಿತ್ತಿ ಬಿಡು ನಕಾಶೆಯೊಳು ಕೊಪ್ಪಡರಿಹ ಕರುಳು

ಗಝಲ್

ಜ್ಞಾನಪೀಠಗಳ ಮಣಿಗಳನು ಧರಿಸಿದೆ ಕನ್ನಡಾಂಬೆಯ ಮುಕುಟ  
ಧ್ಯಾನವೆತ್ತಣದೋ ಮಕ್ಕಳದು ಎನ್ನುತಲಿ  ಬಾಡಿದೆ ಕರುನಾಡು

ಸತ್ಯ ಒಸರಿದ ಕಣ್ಣೀರು

ಇರಲು ಹಾಗೆ…. ಸಾಗಲು ಹೀಗೆ…
ಎಲ್ಲ ಒಪ್ಪಿಕೊಂಡ ಪೀಳಿಗೆ
ಎಂದಿಗೂ ಇರುವುದು ಇರುವ ಹಾಗೆ

Back To Top