ಕಾವ್ಯಯಾನ
ದೇವರ ದೇವ ಅಂಜನಾ ಹೆಗಡೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂದವ ಕಾಲಕ್ಕೆ ಕಿವುಡಾಗಿ ಕಣ್ಣುಮುಚ್ಚಿ ಉಟ್ಟಬಟ್ಟೆಯಲ್ಲೇ ಧ್ಯಾನಕ್ಕೆ ಕುಳಿತಿದ್ದಾನೆ ತಂಬೂರಿ ಹಿಡಿದು ತಂತಿಗಳ ಮೇಲೆ ಬೆರಳಾಡಿಸುತ್ತ ಶ್ರುತಿ ಹಿಡಿಯುತ್ತಾನೆ ಬೆರಳಲ್ಲಿ ಹುಟ್ಟಿದ ಬೆಳಕಿನ ಕಿರಣವೊಂದು ನರಗಳಗುಂಟ ಹರಿದು ಬೆಂಕಿಯಾಗಿ ಮೈಗೇರಿದೆ ಉಸಿರೆಳೆದುಕೊಳ್ಳುತ್ತಾನೆ ದೇವರ ಗೆಟಪ್ಪಿನಲ್ಲಿ ಕಾಲಮೇಲೆ ಕೈಯೂರಿದ್ದಾನೆ ಕಪ್ಪು ಫ್ರೆಮಿನ ದಪ್ಪಗಾಜಿನ ಕನ್ನಡಕ ರೂಪಕವಾಗಿ ಮುಚ್ಚಿದ ಕಿವಿಯ ಮೇಲೆ ಬೆಚ್ಚಗೆ ಕೂತಿದೆ ಕೈಗೆ ಸಿಗದ ಕಣ್ಣಿಗೆ ಕಾಣಿಸದ ಶಬ್ದ ಹಿಡಿಯಲು ಕುಳಿತವನ ಮೈಯೆಲ್ಲ ಕಣ್ಣು…. ಮುಚ್ಚಿದ ಕಣ್ಣೊಳಗೊಂದು […]
ಕಾವ್ಯಯಾನ
ಷರಾ ಬರೆಯದ ಕವಿತೆ ಡಾ.ಗೋವಿಂದ ಹೆಗಡೆ ಇಂದು ಅವ ತೀರಿದನಂತೆ ತುಂಬ ದಿನಗಳಿಂದ ಅವ ಬದುಕಿದ್ದೇ ಗೊತ್ತಿರಲಿಲ್ಲ ಒಂದು ಕಾಲದಲ್ಲಿ ನೆಲ ನಡುಗಿಸುವ ಹೆಜ್ಜೆಯ ಭಾರಿ ಮೀಸೆಯ ಹುಲಿ ಕಣ್ಣುಗಳ ಅವ ನಡೆಯುತ್ತಿದ್ದರೆ ನನಗೆ ಮಂಚದ ಕೆಳಗೆ ಅವಿತು ಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಆಗ ಕವಿತೆ ಕನಸಲ್ಲೂ ಸುಳಿಯುತ್ತಿರಲಿಲ್ಲ ಮತ್ತೆ ಯಾವಾಗಲೋ “ಅವನಾ? ತುಂಬಾ ಕುಡೀತಾನೆ ರೈಲಿನ ಎಂಜಿನ್ ಹಾಗೆ ಸದಾ ಹೊಗೆ ಬಿಡ್ತಾನೆ” ಹೊಟ್ಟೆ ಊದಿ ಕಣ್ಣು ಹಳದಿಗೆ ತಿರುಗಿ ಲಿವರ್ ಫೇಲ್ಯೂರ್ ನ […]
ಕಾವ್ಯಯಾನ
ಹೀಗೊಂದುಕವಿತೆ ವಿಜಯಶ್ರೀ ಹಾಲಾಡಿ ನರಳುತ್ತಿರುವ ಬೀದಿನಾಯಿಯಮುಗ್ಧ ಆತ್ಮಕ್ಕೂಅದ ಕಂಡೂ ಕಾಣದಂತಿರುವನನ್ನ ದರಿದ್ರ ಆತ್ಮಕ್ಕೂಅಗಾಧ ವ್ಯತ್ಯಾಸವಿದೆ ! ಮಗುವಿಗೆ ಉಣಿಸು ಕೊಡುವನನ್ನ ಕೈಗಳೇಬೀದಿ ನಾಯಿಮರಿನಿಮ್ಮ ಮಗುವಲ್ಲವೇ? ? ತಿನಿಸು ಉಡುಪು ದುಡ್ಡುಖುಷಿ ನಗು ಗಿಗುಎಲ್ಲ ನಿನಗೇ ಎಂದುಭಾವಿಸುವ ಮೂರ್ಖ ವಿಜೀಅನ್ನವಿಲ್ಲದ ನೆಲೆಯಿಲ್ಲದಆ ಮೂಕಪ್ರಾಣಿಗಳಿಗೇನುಉತ್ತರಿಸುವೆ? ಯಾರೋ ಹೊಡೆದರುಮರಿನಾಯಿ ಅತ್ತಿತುತಾಯಿ ಜೀವಅದೆಷ್ಟನೆ ಸಲವೋಸತ್ತಿತು! !*****************************************
ಕಾವ್ಯಯಾನ
ಗಝಲ್ ಶಶಿಕಾಂತೆ ನೀನು ಮುಗ್ದೆ,ಅಮಾಯಕಿ,ಮೋಸ ಮಾಡಲಾರೆ ನಿನಗೆ ಎಂದನವಳಿಗವನು ಸಾಕಿ.. ಮೋಸ ಮಾಡಿದರೆ ದೇವರೊಳಿತು ಮಾಡೋಲ್ಲ ಎಂದು ನಂಬಿಸಿದನು ಸಾಕಿ.. ನನ್ನ ಸ್ವಂತ ನೀನು,ನಿನ್ನ ಸ್ವಂತ ನಾನು ಎಂದು ಪ್ರೀತಿಮಳೆಗರೆದಾಗ ಸೋತಳು. ಪ್ರೀತಿಯನ್ನೇ ಕಾಣದ ಹೆಣ್ಣೊಂದು ನಂಬದಿರಲು ಸಾಧ್ಯವೇ ಅಂತಹವನನು ಸಾಕಿ.. ದೇವತೆ ಅವಳು ಕೇಳಿದ ವರ ಕೊಡುವಳು ತನ್ನನ್ನು ಪ್ರೀತಿಸುವವರಿಗೆ. ಉಪಯೋಗ ಪಡೆದು ಮರೆಯಾದ ಕಣ್ಣಿಂದ ಬಹಳದೂರ ಮನೆಹಾಳನವನು ಸಾಕಿ. ಫಕೀರ,ಸಂತನೆಂದರೆ ತಾನೇ ಎಂಬ ಮಾತಿಗೆ ಜನ ಮರುಳಾದರು ತಿಳುವಳಿಕೆಯಿಲ್ಲದವರು ಅವಳಂತೆ.. ಅವನ ಆಟ ನೋಡುತಾ,ಅವನಿಗೇ […]
ಕಾವ್ಯಯಾನ
ಶವದಮಾತು ಪ್ಯಾರಿಸುತ ಶವದ ಮನೆಮುಂದೆ ನಿರರ್ಥಕಭಾವದ ಬೆಂಕಿಮಡಿಕೆಯೊಂದು ಹೊಗೆಯ ಉಗುಳುತಾ ಕುಳಿತಿದೆ…! ಕಾಯುತ್ತಿದ್ದದ್ದು ಯಾರಿಗೆಂದು ಬಲ್ಲಿರಾ…? ಚಟ್ಟವೊಂದು ಕಾಯುತ್ತಿದ್ದದ್ದು ನನಗೆ ಮಾತ್ರ ಅಲ್ಲವೇ..? ಅಂತ್ಯಯಾತ್ರೆಗೆ ಬಿಳ್ಕೊಡಲು ನಮ್ಮವರು ಬರುವುದು ಯಾರಾದರೂ ಕಂಡಿರಾ..? ಬರುವವರೆಲ್ಲರೂ ಮನೆವರೆಗೆ ಮಾತ್ರ ಬಂದವರೆಲ್ಲ ಮಸಣದ ಮಧ್ಯನಿಂತು ಮರಳಿ ಹೋಗುವವರು ಎತ್ತೋವರೆಗೂ ಅವರು ಬರ್ತಾರೆ ಇವರು ಬರ್ತಾರೆ, ಎತ್ತಿದ ಮೇಲೆ ಅವರು ಬಂದಿದ್ದಾರೆಯೇ…?ಇವರು ಬಂದಿದ್ದಾರೆಯೇ…? ಸ್ಮಶಾನದ ಹಾದಿ ಮಧ್ಯ ಅವರು ಬರುವವರಿದ್ದರು ಇವರು ಬರುವವರಿದ್ದರು ಚಿತೆಮೇಲೆ ಇಟ್ಟಾಗ ಅವರು ಬರಬೇಕಿತ್ತು ಇವರು ಬರಬೇಕಿತ್ತು ಸುಡಲು […]
ಕಾವ್ಯಯಾನ
ಧಿಕ್ಕಾರವಿರಲಿ ಗೌರಿ.ಚಂದ್ರಕೇಸರಿ ನೇಣಿನ ಕುಣಿಕೆಯ ನೆನೆದು ಝಲ್ಲನೆ ಬೆವರುವ ನೀವು ಎರಡು ಕ್ಷಣದ ನೋವಿಗೆ ಕೊರಳೊಡ್ಡಲಾರದ ರಣ ಹೇಡಿಗಳು ಅರಳಿ ನಿಂತು ನಸು ನಗುವ ಹೂವನ್ನು ಹೊಸಕಿ ಹಾಕುವಾಗಿನ ಭಂಡತನ ಯಾರದೋ ಮನೆಯ ನಂದಾ ದೀಪವ ನಂದಿಸಿ ಗಹ ಗಹಿಸಿ ನಕ್ಕು ನಲಿದ ನಿಮ್ಮ ಗುಂಡಿಗೆಯ ಕುದಿ ರಕ್ತ ಗಲ್ಲು ನೆನೆದು ಗಡ್ಡೆ ಕಟ್ಟಿತೆ? ಹೆಣ್ಣಿನಲ್ಲಿ ತಾಯ ತಂಗಿಯರ ಕಾಣದ ನೀವು ಹುಣ್ಣೊಳಗಿನ ಹುಳುಗಳು ಯಾರದೋ ತೋಟದ ಸುಮಗಳನು ಹೊಸಕಿ ಹಾಕಿ ಅಟ್ಟಹಾಸದ ಮೀಸೆಯ ಹುರಿಗೊಳಿಸುವ […]
ಕಾವ್ಯಯಾನ
ಚಂದ ಕಣೆ ನೀನು ಅವ್ಯಕ್ತ ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ ಆಡುವ ಮಾತುಗಳ ಸವಿ ಚೆಂದ.. ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ ರಸಗವಳದ ಕೆನ್ನೀರ ಪರಿ ಚೆಂದ.. ಕೇಳಿಯೂ ಕೇಳದಂತೆ ಆಡುವ ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,. ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಸೊಂಟದ ಬಳುಕಿನಲ್ಲಿ ಲೋಕವನ್ನೇ ಆಡಿಸುತ ತಾನೇ ಆಡುವ ಪರಿ ಚೆಂದ.. ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ.. ಪ್ರೀತಿಯ ತುಂತುರು ಮಳೆಯಲಿ ನೀರಾಗಿ ಸಮುದ್ರದಾಳದ ಮುತ್ತಾಗ ಬಯಕೆಯೇ […]
ಕಾವ್ಯಯಾನ
ಕವಿತೆ ರಾಮಸ್ನಾಮಿ ಡಿ.ಎಸ್ ಸಂಗೀತಕಛೇರಿಯತಂಬೂರಿಶೃತಿಹೆಣ್ಣು. ಬಿಗಿತ ಹೆಚ್ಚಾದರೆತುಂಡಾಗುವ ತಂತಿಸಡಿಲಾದರೆ ಹೊಮ್ಮದು ನಾದ ತನ್ನ ಕಂಠಸಿರಿಗೆತಕ್ಕಂತೆ ಶೃತಿಹೊಂದಿಸಿಕೊಳ್ಳುವುದುಗಾಯಕನ ಜವಾಬ್ದಾರಿ. ವೀಣೆ ಸಿತಾರು ಸರೋದುಗಳನ್ನುಬೆರಳಿನಿಂದಲೇ ನುಡಿಸಬಹುದಾದರೂರಕ್ಷಣೆಗೆ ಕವಚ ಇರುವಂತೆಯೇಪಿಟೀಲು ನುಡಿಯುವುದು ಕಮಾನಿಗೆ ಶೃತಿ ತಪ್ಪದೇ ಇದ್ದರೆಕಛೇರಿ ಕಳೆಗಟ್ಟುವುದಕ್ಕೆಇದ್ದೇ ಇವೆ ಪಕ್ಕ ವಾದ್ಯದಸಹಕಾರ, ತನಿ ಆವರ್ತನ. ಸಂಸಾರದ ಕಛೇರಿಯೂಥೇಟು ಸಂಗೀತದ ಹಾಗೇ ಶೃತಿ ತಪ್ಪದ ಹಾಗೆತಾಳ ಮರೆಯದ ಹಾಗೆಪರಸ್ಪರರ ಗೌರವಕ್ಕೆ ಹಾನಿ ಮಾಡದ ಹಾಗೆ ಬದುಕ ಹಾಡು ಹಾಡಬೇಕುಇಹದ ಇರವ ಮರೆಯಬೇಕು. *******
ಕಾವ್ಯಯಾನ
ಗಝಲ್ ಶಶಿಕಾಂತೆ ಇಂದು ನಿನ್ನೆಯದಲ್ಲ ನನ್ನ ನಿನ್ನ ಪ್ರೇಮ ಯಾವ ಜನ್ಮದ ಮೈತ್ರಿಯೋ ನಾಕಾಣೆ.. ಇನ್ನೆಂದಿಗೂ ನನ್ನನು ಬಿಟ್ಟು ದೂರ ಹೋಗಬೇಡಾ,ನಮ್ಮ ಪ್ರೀತಿ ಮೇಲಾಣೆ.. ತಿಳಿನೀರ ಕೊಳದಂತಿದ್ದ ಮನಸಲಿ ಒಲವೆಂಬ ಕಲ್ಲೆಸೆದು ಹೋದೆಯಲ್ಲಾ.. ಕೂತರೂ ನಿಂತರೂ ,ಮಲಗಿದರೂ ನಿನ್ನದೇ ಧ್ಯಾನ ,ತಾಳಲಾರೆ ಈ ಭವಣೆ.. ಕುಡಿನೋಟ ನೀ ಬೀರಿದಾಗಿ ನಾಚಿನಾಚಿ ಕೆಂಪುಕೆಂಪು ಸೇಬಾಯ್ತು ನನ್ನ ಕೆನ್ನೆ.. ಯಾರನ್ನೂ ಒಪ್ಪದ ಮನಸು ನಿನಗೊಲಿ ಯಲು ಕಾರಣ ನಿನ್ನ ಸ್ನೇಹ ಸಂಭಾಷಣೆ.. ಕಣ್ಣಿಗೆ ಕಾಣ್ಣದ್ದು ಹೃದಯಕ್ಕೆ ತಿಳಿಯಲು ತಡವಿಲ್ಲ. ನಿನ್ನ […]
ಮಹಿಳಾದಿನದ ವಿಶೇಷ
ದ್ವೇಷ.. ಶ್ವೇತಾ. ಎಂ.ಯು. ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನೂ ಉಳಿದಿಲ್ಲ; ಆಸೆಗಣ್ಣುಗಳಲಿ ನೀವು ತುಂಬಿಕೊಂಡರೆ ನನ್ನ ನಗಬೇಕು ಎನಿಸುತ್ತದೆ, ಸುಮ್ಮನಾಗುತ್ತೇನೆ ರಂಜಕ ಹಾಕಿ ಸುಡುವ ಮನಸಾದರು ಕಣ್ಣುಗಳು ನೋಡಿಕೊಳ್ಳಲಿ ಒಮ್ಮೆ ನಿಮ್ಮನ್ನೇ ಎಂಬ ಆಸೆಯಿಂದ.. ಬಾಯಾರಿದರೆ ಕುಡಿಯ ಬೇಕು ನೀರು; ಕೊಳದಲ್ಲಿ ಈಜುವುದು ಕೊಳಕಾದವರು ಮಾತ್ರವೇ ? ಇಲ್ಲದಿರಬಹುದು ನಾಲಗೆಗೆ ಎಲುಬು ಹೃದಯಕ್ಕೆ ದಾರಿಗಳಿವೆ ಸಂಯಮವೇ ಸಂಬಂಧ ಗುಣಗಳೇ ಬೆಳಕು ನಗುವಿಗೆ ಹಲವು ಮುಖ ಬದಲಿ […]