ಶವದಮಾತು
ಪ್ಯಾರಿಸುತ
ಶವದ ಮನೆಮುಂದೆ ನಿರರ್ಥಕಭಾವದ
ಬೆಂಕಿಮಡಿಕೆಯೊಂದು ಹೊಗೆಯ
ಉಗುಳುತಾ ಕುಳಿತಿದೆ…!
ಕಾಯುತ್ತಿದ್ದದ್ದು ಯಾರಿಗೆಂದು ಬಲ್ಲಿರಾ…?
ಚಟ್ಟವೊಂದು ಕಾಯುತ್ತಿದ್ದದ್ದು ನನಗೆ ಮಾತ್ರ ಅಲ್ಲವೇ..?
ಅಂತ್ಯಯಾತ್ರೆಗೆ ಬಿಳ್ಕೊಡಲು
ನಮ್ಮವರು ಬರುವುದು ಯಾರಾದರೂ ಕಂಡಿರಾ..?
ಬರುವವರೆಲ್ಲರೂ ಮನೆವರೆಗೆ ಮಾತ್ರ
ಬಂದವರೆಲ್ಲ ಮಸಣದ ಮಧ್ಯನಿಂತು ಮರಳಿ ಹೋಗುವವರು
ಎತ್ತೋವರೆಗೂ ಅವರು ಬರ್ತಾರೆ
ಇವರು ಬರ್ತಾರೆ,
ಎತ್ತಿದ ಮೇಲೆ ಅವರು ಬಂದಿದ್ದಾರೆಯೇ…?ಇವರು ಬಂದಿದ್ದಾರೆಯೇ…?
ಸ್ಮಶಾನದ ಹಾದಿ ಮಧ್ಯ ಅವರು ಬರುವವರಿದ್ದರು ಇವರು ಬರುವವರಿದ್ದರು
ಚಿತೆಮೇಲೆ ಇಟ್ಟಾಗ ಅವರು ಬರಬೇಕಿತ್ತು ಇವರು ಬರಬೇಕಿತ್ತು
ಸುಡಲು ಆರಂಭಿಸುತ್ತಿದಂತೆ ಅವರು ಬರಲೇ ಇಲ್ಲ ಇವರು ಬರಲೇ ಇಲ್ಲ…
ಅವರೆಲ್ಲ ಯಾರು ಕಷ್ಟದಲ್ಲಿ ನೆಂಟರಾದವರಾ..?
ಬಂಧುಬಳಗ ಎನಿಸಿದವರಾ..?
ಅಣ್ಣತಮ್ಮಂದಿರಂತೆ ಇದ್ದವರಾ…?
ಜೀವ ಕೊಟ್ಟು ಜೀವ ಉಳಿಸಲು ಹೆಣಗಿದವರಾ…?
ಅಲ್ಲವೇ ಅಲ್ಲ ..!
ನಮ್ಮವರು ಯಾರು ಕಾಣಲೇ ಇಲ್ಲ
ಕಂಡವರೆಲ್ಲರು ನಮ್ಮಂತೆ ಇದ್ದವರು…
*******