Category: ಕಾವ್ಯಯಾನ

ಕಾವ್ಯಯಾನ

ಪೂರ್ವಿಕರ ಸಾಧನೆ

ಕವಿತೆ ಪೂರ್ವಿಕರ ಸಾಧನೆ ಮಾಲಾ ಕಮಲಾಪುರ್ ಮಾನ ಮುಚ್ಚಲೆಂದು ಗೇಣು ಬಟ್ಟೆಜ್ಞಾನಕ್ಕೇನೂ ಕಮ್ಮಿ ಇಲ್ಲ ಎನ್ನುವ ಸಾಧನೆಮುಷ್ಠಿ ಅನ್ನದಲ್ಲಿಯೂ ನಾಲ್ಕು ಜನರಿಗೆಕೈ ತುತ್ತು ಹಾಕುವ ಪೂರ್ವಿಕರಿಗೊಂದು ನನ್ನ ಸಲಾಂ ಕೇಳುವ ಹತ್ತಾರು ಕಿವಿಗಳಿಗೆ ಪುರಾಣ ಪುಣ್ಣ್ಯ ಕಥೆಗಳನು ನಾಲ್ಕು ಚಪ್ಪರದಲಿ ಕಂದೀಲು ಬೆಳಕಿನಲಿ ಜ್ಞಾನಾಮೃತ ಉಣಿಬಡಿಸಿದ ಪೂರ್ವಿಕರಿಗೊಂದು ನನ್ನ ಸಲಾಂ ಚೌಕಾಬಾರ ಗೋಟ ಗೋಣಿ ಗೋಲಿ ಆಟದಲಿ ಮಕ್ಕಳಿಗೆ ಅಂಕೆ ಸಂಖ್ಯೆ ಗಳ ಪರಿಚಯಸಿ ಮೋಜು ಮಾಡುತ ಮನ ತುಂಬಿ ಹಾರೈಸುವ ಪೂರ್ವಿಕರಿಗೊಂದು ನನ್ನ ಸಲಾಂ ಭಯ […]

ನಮ್ಮ ಮನೆ

ಕವಿತೆ ನಮ್ಮ ಮನೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅರಮನೆಯಂತಿಲ್ಲ ಈ ನನ್ನ ಮನೆಮಧ್ಯಮವರ್ಗದಅತೀ ಸಾಮಾನ್ಯ ಅನುಕೂಲದಸಣ್ಣದೊಂದು ಸೂರು ಅಷ್ಟೆ!ಹಜಾರವಿದೆಅದೂ ಮಧ್ಯಮಒಂದೆರಡು ರೂಮುತಲೆಯಿಂದ ಕಾಲ ಉದ್ದುದ್ದಧಾರಾಳ ನೀಡುವಷ್ಟು!ಊಟಕ್ಕೆ ನೆಲಮತ್ತು ಅಡುಗೆಗೊಂದು ದೊಡ್ಡ ಬಿಲ! ಬನ್ನೀ ಸ್ವಾಮಿಯಾರು ಬೇಕಾದರೂ ಬನ್ನಿಎಷ್ಟು ಜನರಾದರೂ ಬನ್ನಿಒಳಗೆ ಹಿಡಿಸುವಷ್ಟು…ಅಥಿತಿಗಳಾಗಿಅಥವಾ ಹಿತೈಷಿಗಳಾಗಿಸ್ನೇಹದಿಂದ…ಬಂದು ಇದ್ದು ಹೋಗಿನಿಮಗಿಷ್ಟವಾದಷ್ಟು ದಿನನೆಮ್ಮದಿಯಿಂದ… ದಿನದಿನವೂ ಸುತ್ತಿ ಬನ್ನಿನಮ್ಮೂರ ಸುತ್ತಮುತ್ತಅನತಿ ದೂರದಲ್ಲೇ ಇವೆಅನೇಕ ಪ್ರವಾಸಿ ಸ್ಥಳಕಣ್ಣು ತುಂಬಿಸಿಕೊಂಡು ಬನ್ನಿ ಎಲ್ಲಊರೊಳಗೆ ಬೀಡು ಬಿಟ್ಟಿರುವ ಅನೇಕಾನೇಕ ಥರದ ಮೇಳ…ಕಾಯ್ದಿರುವೆವು ದಿನವೂ ನಿಮಗಾಗಿನಮ್ಮದೇ ಮನೆಯ ನಮ್ಮ […]

ವಿಪ್ಲವ

ಕವಿತೆ ವಿಪ್ಲವ ಚಂದ್ರಪ್ರಭ ಬಿ. ಇಂದೇಕೊ ಅವ್ವ ನೆನಪಾಗುತ್ತಿದ್ದಾಳೆ…ಅಪ್ಪನ ಬನಿಯನ್ನುತಮ್ಮನ ಚಡ್ಡಿತನ್ನ ಲಂಗವನ್ನುಢಾಳಾಗಿ ಬಿಸಿಲಿಗೆಎಲ್ಲೆಂದರಲ್ಲಿ ಒಣಗಲು ಹಾಕುತ್ತಿದ್ದ ಅವ್ವನನ್ನ ಕಂಚುಕವನ್ನು ಒಣ ಹಾಕಲುಹುಡುಕುತ್ತಿದ್ದಳುಮರೆಯಾದ ಒಂದು ಜಾಗವನು… ಈಗ ತಾನೆ ಮನೆಗೆ ಮರಳಿದವಲುಂಗಿಯುಟ್ಟುಬನಿಯನ್ನೆಂಬ ಮಾಯಕವನುಹಗ್ಗಕ್ಕೆ ಇಳಿಬಿಟ್ಟು ಗಾಳಿಗೆ ಮೈಯೊಡ್ಡಿಹಾಯಾಗಿ ನಿಂತುಕೊಂಡುದ ಕಂಡುಮತ್ಸರಗೊಳ್ಳುತ್ತೇನೆ ಒಳಗೊಳಗೇ… ತೆರೆದುಕೊಳ್ಳುತ್ತ ಸಂಜೆಯ ಕೆಲಸಗಳಿಗೆಗಡಿಬಿಡಿಯಲಿರುವ ನನ್ನ ನೋಡಿಗದರುತ್ತಾರೆ ಅತ್ತೆ :ಅದೆಂತದು ಚೂಡೀ ದಾರ..?ಉಡಬಾರದೆ ಒಪ್ಪವಾಗಿ ಸೀರೆ…ನೆಂಟರಿಷ್ಟರು ಬಂದು ಹೋಗುವ ಮನೆ! ಈ ಚೂಡೀದಾರ ಎನುವ ಮಾಯೆಕೆಲಸ ಕಾರ್ಯದಲಿ ನನಗೆಷ್ಟು ಹಿತಎನ್ನುವುದನುಅರಿಯಲಾರರೇಕೆನೆಂಟರು…ಇಷ್ಟರು…ಅತ್ತೆ…? ತನ್ನವ್ವನ ಗದರುವಿಕೆಇನಿಯಳ ಗೊಣಗಾಟ ಯಾವುದೂಕೇಳಿಸುವುದೇ […]

ನಾ..ದಶಮುಖ

ಕವಿತೆ ನಾ..ದಶಮುಖ ಅಬ್ಳಿ,ಹೆಗಡೆ   ನನ್ನ ಮುಖ ನಾನೇ             ಇನ್ನೂ ಓದದ             ಓದಬೇಕೆಂದರೂ             ಓದಲಾಗದ,ಹಳೆಯ             ಪುಟ್ಟ ಪುಸ್ತಕ             ತೆರೆಯದೇ..             ಎಷ್ಟೋ ಕಾಲದ             ಮೇಲೆ             ಹೊತ್ತು ಗೊತ್ತಿಲ್ಲದೇ             ಯಾರ್ಯಾರೋ             ಬಂದು,ಮಡಚಿದ             ನೆರಿಗೆಗಳ             ನೇರಮಾಡಿ             ಧೂಳ ಝಾಢಿಸಿ             ಅವಸರದಲ್ಲಿ ಓದಿ             ತಮ್ಮಿಷ್ಟದಂತೇ             ತಮಗನಿಸಿದಂತೇ             ವ್ಯಾಖ್ಯಾನಿಸಿ             ನನ್ನೆದುರು ಕನ್ನಡಿ             ಆಗುತ್ತಾರೆ ನನಗೆ.             ನನ್ನ ಒಂದು ಮುಖ             ಹತ್ತಾಗಿ,ಒಂದೊಂದೂ             ಒಂದೊಂದು ತರಹ             ನನಗೇ ದಿಗ್ಭ್ರಮೆ             ನನಗೇ ಅರಿವಿಲ್ಲದ             ನನ್ನ ದಶಮುಖ             ಕಾಣಿಸಿದ ಕನ್ನಡಿಗೆ                     ನಾನೆಂದೂ ಕ್ರತಜ಼. **********************************

ಗಝಲ್

ಗಝಲ್ ರತ್ನರಾಯ ಮಲ್ಲ ದೇವರ ಮಂದಿರಗಳಿಗಿಂತ ಮಸಣವೇ ಲೇಸುಆಡಂಬರದ ಪ್ರದರ್ಶನಕ್ಕಿಂತ ಮೌನವೇ ಲೇಸು ಬಜಾರ ಎಂದರೆ ಎಲ್ಲರೂ ಬೆನ್ನು ಹತ್ತುವವರೆಯಾರೂ ಬರದ ಸ್ಮಶಾನದ ಪ್ರಯಾಣವೇ ಲೇಸು ಬಂಧಗಳು ನರಳುತಿವೆ ಬಾಡಿದ ಬಾಂಧವ್ಯದಲ್ಲಿತಬ್ಬಲಿಯಲ್ಲಿ ಅರಳಿದ ಈ ಒಂಟಿತನವೇ ಲೇಸು ಶ್ರೀಮಂತಿಕೆಯು ಆಟವಾಡುತಿದೆ ಜಗದೊಳಗೆಜೊತೆ ಜೊತೆಗೆ ಹೆಜ್ಜೆ ಹಾಕುವ ಬಡತನವೇ ಲೇಸು ಅನುದಿನವೂ ಸಾಯಿಸುತಿವೆ ಮೌಲ್ಯಗಳು ನನ್ನ‘ಮಲ್ಲಿ’ಯ ಹೃದಯದಲ್ಲಿರುವ ಮರಣವೇ ಲೇಸು **********************

ಸಾವಿನಂಗಡಿಯಲ್ಲಿ

ಕವಿತೆ ಸಾವಿನಂಗಡಿಯಲ್ಲಿ ಅಬ್ಳಿ,ಹೆಗಡೆ ಈಗ..ಇದೊಂದು ಭ್ರಹತ್ ಅಂಗಡಿ   ಜಗದ ಮೂಲೆ,ಮೂಲೆಗೂ   ಕೋಟಿ,ಕೋಟಿ ಶಾಖೆಗಳ ತೆರೆದು   ಕುಳಿತಿದ್ದಾನೆ ಯಜಮಾನ ನಗುತ್ತಾ   ಎಲ್ಲ ಶಾಖೆಗಳಲ್ಲೂ ಭರ್ಜರಿ ವ್ಯಾಪಾರ   ಒಂದು ಕೊಂಡರೆ ಒಂದು ಫ್ರೀ,   ಗಿರಾಕಿಗಳಿಗೆ ಆಮಿಷ,ನೂಕು ನುಗ್ಗಲು   ಮೇಲಾಟ,ತಳ್ಳಾಟ ಕೊಂಡುಕೊಳ್ಳಲು   ಅಂತರಕಾಯ್ದುಕೊಳ್ಳುವವರ,ಇಲ್ಲದವರ   ಮುಖವಿದ್ದೂ ಮುಖವಾಡ ದರಿಸಿದವರ   ದರಿಸಿಲ್ಲದವರ,ಸಂದೋಹ ಎಲ್ಲೆಡೆಗೂ   ಹೊಸ,ಹೊಸ ಆವಿಷ್ಕಾರ   ಶೋ ಕೇಸುಗಳಲ್ಲಿ ಗ್ಯಾರಂಟಿ ಕಾರ್ಡುಗಳ   ಸಹಿತ.ಹಳೇ ಸಾಮಾನುಗಳೂ ಇವೆ   ಎಲ್ಲೋ ಅಪರೂಪಕ್ಕೊಮ್ಮೆ ಬೇಡಿಕೆ   ಅದಕ್ಕೆಂದೇ ಇಟ್ಟ ಕಪಾಟುಗಳಲ್ಲಿ   ಅಂಗಡಿಯ ಹಿಂದೆ,ಹಿಂದೆ ಕಾಣುವಂತೆ   ಅಪರೂಪಕ್ಕೆ ಕೊಳ್ಳಲು ಬಂದಾಗಲೂ   ಚೌಕಾಸಿ […]

ಮತ್ಲಾ ಗಜಲ್

ಮತ್ಲಾ ಗಜಲ್ ತೇಜಾವತಿ ಹೆಚ್.ಡಿ. ನೀನಿರದ ವಿರಾಮವು ಬೇಡವಾಗಿವೆ ಈಗಮಾಯಾ ಮನಸ್ಸು ಖಿನ್ನತೆಗೆ ಜಾರುತಿವೆ ಈಗ ನೀ ನೋಡದ ಅಲಂಕಾರವು ಮಂಕಾಗಿವೆ ಈಗತೊಟ್ಟ ಆಭರಣಗಳೇ ಭಾರವಾಗಿವೆ ಈಗ ನಿನ್ನಗಲಿದ ಇರುಳೆಲ್ಲವೂ ಘೋರವಾಗಿವೆ ಈಗದೇವಾ ಕಂಡ ಕನಸೆಲ್ಲವೂ ದುಃಸ್ವಪ್ನವಾಗಿವೆ ಈಗ ನೀನಾಡದ ಮಾತುಗಳು ಕರಗಿ ಹೋಗಿವೆ ಈಗಅಳಿದುಳಿದ ಭಾವನೆಗಳು ಹೆಪ್ಪುಗಟ್ಟಿವೆ ಈಗ ನೀನಿಲ್ಲದ ನಂದನವನ ಬರಡಾಗಿವೆ ಈಗಬೀಸುವ ತಂಗಾಳಿಯೂ ಬತ್ತಿಹೋಗಿವೆ ಈಗ ‘ತೇಜ’ ನೀ ಬಾರದ ದಿನಗಳು ಸ್ತಬ್ಧವಾಗಿವೆ ಈಗಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಾಗಿವೆ ಈಗ *

ಗಝಲ್

ಗಝಲ್ ಸುಜಾತಾ ರವೀಶ್ ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ  ಬರುವೆಯಾ ಸಂಗಾತಿ ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ  ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ?  ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ?  ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ    ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ  ಕುಸುರಿ ಕೆಲಸ ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ  ಹಾರುವೆಯಾ ಸಂಗಾತಿ  ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ  *****************************

ಕನ್ನಡಮ್ಮನ ಬೆಡಗು

ಕವಿತೆ ಕನ್ನಡಮ್ಮನ ಬೆಡಗು ವೀಣಾ ರಮೇಶ್ ಕರುನಾಡು ನನ್ನದುಕನ್ನಡವದೇ ಸಾಕುನನಗೆ ಬಿರುದುಸಂಸ್ಕೃತಿಯ ತವರಿದುಹಸಿರು ಸಿರಿಯಶೃಂಗಾರದಲಿ ಬಿರಿದು ಧೀರ ಶರಧಿಯ ಬಗೆದುಕವಿಶ್ರೇಷ್ಠ ರ ಆಗೆದುಸಾಹಿತ್ಯ ಶಿಖರದನೆತ್ತಿಯಲಿ ಇಳಿದುಹರಿಸಿದಳು ಅಕ್ಷರಧಾರೆಮೊಗೆ ಮೊಗೆದು ಮಲೆನಾಡ ಕಾಡಲ್ಲಿಕಂಗೊಳಿಸಿದ ಸುಂದರಿರಸಋಷಿಗೆ ಜ್ಞಾನಪೀಠದಹೆಮ್ಮೆಯ ಗರಿನಾಲ್ಕು ತಂತಿಗಳಲಿಮೀಟಿದ ನಾದಲಹರಿನಮ್ಮ ವರಕವಿ ಶಿಲ್ಪಕಲೆ,ಬೇಲೂರು ಹಳೇಬೀಡಿನ ಬೆಡಗುರಾಜ ವೈಭೋಗದಮೈಸೂರಿನ ಸೊಬಗುಹಂಪಿಯ ಸುವರ್ಣ ಯುಗ ಕನ್ನಡಾಂಬೆಯಮೆರುಗು. ಯಕ್ಷ ಪ್ರೇಮಿಗಳ ಹೃದಯದಲಿಯಕ್ಷಗಾನದ ಹೆಜ್ಜೆಗಳಲಿಮದ್ದಳೆಯ ಸದ್ದಲ್ಲಿಕುಣಿಯಿತು ಯಕ್ಷಗಾನಕಾರಂತರ ಹೆಜ್ಜೆಗಳಲಿ ಎಲ್ಲೆಲ್ಲೂಮೊಳಗಲಿ ನಿನ್ನ ಕಹಳೆಸಮರಸದ ಸಹಬಾಳ್ವೆಬೆಳಗಲಿ ,ಹರಡಲಿಕನ್ನಡ ದೇವಿಯಪ್ರಭಾವಳಿ **********

ವಿವೇಕ ವಾಣಿ

ಕವಿತೆ ವಿವೇಕ ವಾಣಿ ಬಾಗೇಪಲ್ಲಿ ಕೃಷ್ಣಮೂರ್ತಿ ಬೆಳಕು ಮೂಡುವಮುನ್ನ ನಡಿಗೆಗೆ ಹೊರಟೆಬಿಳುಪಿಗೆ ಪರಿಕಲಿತ ಸೌಂದರ್ಯದ ಆಕಾಶ ಮಲ್ಲಿಗೆ ಹೂ ಕಂಡೆ ಮರದ ಎತ್ತರದಿಆನಂದಿಸಲು ಬಿಡದ ಮನ ಹೇಳಿತುಆಕೆ ಇಷ್ಟೇ ಅಲ್ಲವೆ ನಿನಗೆ? ಮುನ್ನಡೆದು ಹಾದಿಬದಿಯ ಗಿಡದ ಹೂ ಮೇಲೆ ಕುಂತ ಬಣ್ಣದಚಿಟ್ಟೆ ಕಂಡೆಪ್ರಯಾಸದಿ ಹಿಡಿದೆ ಪಾಪವೆನಿಸೆ ಬದುಕಲ ಬಿಟ್ಟೆಹಿಡಿದ ಬೆರಳಿಗೆ ಹತ್ತಿತ್ತು ರೆಕ್ಕೆಯ ಬಣ್ಣಸಂತೋಷಿಪ ಮೊದಲೇ ಮನ ಹೇಳಿತು ಪುನಃಆಕೆ ಇಷ್ಟೇ ಅಲ್ಲವೆ ನಿನಗೆ! ಯೋಚನೆ ಹರಿವನು ಬದಲಿಸ ಲೆತ್ನಿಸಿಮುಂದಿನ ಮರದ ರೆಂಬೆಯಲಿ ಕುಂತ ಹಕ್ಕಿಕಂಡೆರಾತ್ರಿ ಓದಿದ […]

Back To Top