ಕವಿತೆ
ಪೂರ್ವಿಕರ ಸಾಧನೆ
ಮಾಲಾ ಕಮಲಾಪುರ್
ಮಾನ ಮುಚ್ಚಲೆಂದು ಗೇಣು ಬಟ್ಟೆ
ಜ್ಞಾನಕ್ಕೇನೂ ಕಮ್ಮಿ ಇಲ್ಲ ಎನ್ನುವ ಸಾಧನೆ
ಮುಷ್ಠಿ ಅನ್ನದಲ್ಲಿಯೂ ನಾಲ್ಕು ಜನರಿಗೆ
ಕೈ ತುತ್ತು ಹಾಕುವ ಪೂರ್ವಿಕರಿಗೊಂದು ನನ್ನ ಸಲಾಂ
ಕೇಳುವ ಹತ್ತಾರು ಕಿವಿಗಳಿಗೆ ಪುರಾಣ ಪುಣ್ಣ್ಯ ಕಥೆಗಳನು ನಾಲ್ಕು ಚಪ್ಪರದಲಿ ಕಂದೀಲು ಬೆಳಕಿನಲಿ ಜ್ಞಾನಾಮೃತ ಉಣಿಬಡಿಸಿದ ಪೂರ್ವಿಕರಿಗೊಂದು ನನ್ನ ಸಲಾಂ
ಚೌಕಾಬಾರ ಗೋಟ ಗೋಣಿ ಗೋಲಿ ಆಟದಲಿ ಮಕ್ಕಳಿಗೆ ಅಂಕೆ ಸಂಖ್ಯೆ ಗಳ ಪರಿಚಯಸಿ ಮೋಜು ಮಾಡುತ ಮನ ತುಂಬಿ ಹಾರೈಸುವ ಪೂರ್ವಿಕರಿಗೊಂದು ನನ್ನ ಸಲಾಂ
ಭಯ ಭೀತಿ ಅಳಿಸಲೋಮ್ಮೆ ಮಕ್ಕಳಿಗೆ ದೃಷ್ಟಿ ತೆಗೆದು ಹಾರೈಸುವ ಅಜ್ಜಿಯರಿಗೊಂದು ನನ್ನ ಸಲಾಂ
ರೋಗಗಳು ಭಾದೆ ತಾಗದಿರಲೆಂದು ವೈರಾಣುಗಳನು ಹೊರ ಹಾಕಲು ಮನೆ ಮನೆಯಲಿ ಊದು ಹಾಕಿ ಅಕ್ಷರಸ್ಥರಾಗದೆ ವೈದ್ದ್ಯಕೀಯ ಅರಿವು ಹೊಂದಿದ ಪೂರ್ವಿಕರಿಗೊಂದು ನನ್ನ ಸಲಾಂ
ನಮ್ಮ ಜಲ ನಮ್ಮ ನೆಲ ನಾವೆಲ್ಲ ಒಂದು ಹೇಳುತಾ ನಿಸ್ವಾರ್ಥ ಬದುಕಿನಲಿ ಬಂಗಾರದ ಬದುಕು ಕಂಡ ಪೂರ್ವಿಕರಿಗೊಂದು ನನ್ನ ಸಲಾಂ.
************************************************
ತುಂಬಾಅರ್ಥಗರ್ಭಿತ