ಕಾವ್ಯಯಾನ
ಇನಿಯನೆಂದರೆ… ನಿರ್ಮಲಾ ಆರ್. ಇನಿಯನೆಂದರೆ… ಇರುಳಲಿ ನಗುವ ಚಂದಿರನು ಬೆಳದಿಂಗಳಲಿ ನನ್ನೊಂದಿಗೆ ವಿಹರಿಸುವನು ತಾರೆಗಳ ನಡುವಲಿ ಇರುವನು ತಿಳಿ ಹಾಲಿನಂತಹ ಮನದವನು ಇನಿಯನೆಂದರೆ… ಆಗಸದಲಿ ಸದಾ ಮಿನುಗುವನು ದೂರದಿಂದಲೇ ನನ್ಮನದ ಧನಿಯ ಕೇಳುವನು ನನ್ನಂತರಾಳದ ಮಾತ ಅರಿಯುವನು ಪ್ರತಿ ಇರುಳಲಿ ನನಗಾಗಿ ಬರುವನು ಇನಿಯನೆಂದರೆ… ಕನಸ ಕಾಣುವ ಕಂಗಳಿಗೆ ತಂಪನೆರೆವನು ಕಂಡ ಕನಸಿಗೆ ಬಣ್ಣ ಹಚ್ಚುವನು ಕಣ್ಣ ಕಾಡಿಗೆಯ ಕದಿಯುವನು ಕಚಗುಳಿಯನಿಟ್ಟು ಕೆನ್ನೆಯ ರಂಗೇರಿಸುವನು ಇನಿಯನೆಂದರೆ… ಮನವೆಂಬ ಇಣುಕುವನು ತಿಳಿಯ ನೀರಲಿ ಚಹರೆಯ ಬಿಂಬ ಬಿಟ್ಟವನು ನಾ […]
Read More
ನನ್ನ ಕವಿತೆ ಅಮೃತಾ ಮೆಹಂದಳೆ ನನ್ನ ಕವಿತೆ,ರಾಗ ತಾಳ ಭಾವವಿಲ್ಲದ ಮೂಕ ಗೀತೆವೀಣೆಗೆ ತ೦ತಿ ಮೀಟದಮುರಳಿಗೆ ಕುಹೂ ಹಾಡದ ಶೋಕಗೀತೆಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದುನಗಿಸಿದರೆ ನಕ್ಕು ಅಳಿಸಿದರೆ ಅಳುವುದುಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆನನ್ನ ಭಾವದ೦ತೆ… ನನ್ನ ಕವಿತೆ,ಬರಿದಾದ ಬಿಳಿಯಾದ ಹಾಳೆಯ೦ತೆನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣಬರಿದು ಮನ ಬಿ೦ಬಿಸುವುದು ಬರೀ ಸೊನ್ನೆಹರಿದರೆ ಚೂರು ಮುಚ್ಚಿಟ್ಟರೆ ನೆನಪುಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆನನ್ನ ಚಿತ್ತದ೦ತೆ… ನನ್ನ ಕವಿತೆ,ಆಗಸದಿ ತೇಲುವ ಮೋಡದ೦ತೆಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪುಬಣ್ಣ ಬಣ್ಣ […]
Read More
ಕವಿತೆ ಚೈತ್ರಾ ಶಿವಯೋಗಿಮಠ ಕವಿ ಕೆ.ಎಸ್.ಎನ್ ಕ್ಷಮೆ ಕೋರುತ್ತಾ….. ಬರೆದ ಕವಿತೆಯ ಬಿಚ್ಚಿ, ತುಂಡರಿಸಿ ಕೊಯ್ವರು, ಬರೆದುದರೆಲ್ಲದರಲಿ ಬರಿ ತಪ್ಪ ಕಾಣ್ವರು ಯಾವುದೂ ಸರಿ ಇಲ್ಲ ಎಂದಿವರ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಭಾವ ಚಂದವಿರಲು, ಈ ಪದವು ಯಾಕೆ? ಪದಗಳೆಲ್ಲವುಕೆ ಸಮ್ಮತಿಯು ಇರಲು, ಭಾವ ತೀವ್ರತೆಯು ಸಾಕೆ? ಎಲ್ಲದಕೂ ಬರಿ ಕೊಂಕು ಎಲ್ಲದಕು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಓದೋಕೆ ಲಯವಿರೆ, ಛಂದೋಬದ್ಧ ಇಲ್ಲಂತೆ! ಪ್ರಾಸವಿಲ್ಲದಿರೆ ಓದಲು ತ್ರಾಸಂತೆ.. ಪ್ರಾಸವಿರೆ, […]
Read More
ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. […]
Read More
ದಕ್ಕಿತೆಷ್ಟು ಪ್ರೀತಿ ವಿನುತಾ ಹಂಚಿನಮನಿ (ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು ಅದರ ಉತ್ತರಾರ್ಧ ಹೀಗೂ ಇರಬಹುದೇ …….) ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ ಅಕ್ಷಯವಾದ ವನವಾಸ ಪತಿಯ ದೇಣಿಗೆ ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ ಅಷ್ಟ ಮಹಿಷಿಯರಿಗೆ ವಲ್ಲಭನಾದ ಗೋಕುಲದ ಕೃಷ್ಣ ಗೋಪಿಲೋಲನೀತ ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ ಐವರು ಶೂರ […]
Read More
ರಾತ್ರಿ ಮೆರವಣಿಗೆ ಪ್ಯಾರಿಸುತ ಹಗಲು ಸರಿದು ಇರುಳು ಕವಿದು ಕಣ್ಣು ಕನಸುಬೇಡಿದೆ ಹೃದಯ ಕಥೆ ಕೇಳಲು ತಣಿವರೆಸಿದೆ ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು ರಾತ್ರಿ ಜೊತೆ ಮೆರವಣಿಗೆ…. ಚುಕ್ಕಿ ಚಂದ್ರನನ್ನು ಓಲೈಸುವಂತೆ ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ ನಾನು ನಿನ್ನನ್ನು ಮಾತ್ರ ನಂಬಿದ್ದೇನೆ ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…! ಬಿಕೋ ಅನ್ನುತ್ತಿರುವ ರೋಡಿನಲ್ಲಿ ಬೀದಿದೀಪಗಳ ಅಲಂಕಾರ ದಟ್ಟ ವಾಹನಗಳ ವಾದ್ಯಮೇಳ ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ ದೀಪದೂಳುಗಳ ಗುಯ್ಯಗುಟ್ಟುವ […]
Read More
ಘನಿತ ಡಾ.ಗೋವಿಂದ ಹೆಗಡೆ ಘನಿತ ಇಬ್ಬನಿಯಲ್ಲಿ ತೊಯ್ದ ಪುಲಕದಲ್ಲಿ ಹೂವು ಇನ್ನೇನು ಆರಿಹೋಗುವ ಆತಂಕದಲ್ಲಿ ಇಬ್ಬನಿ ಬಿಂದು ನೋಡುತ್ತ ನಿಂತ ನಾನು-ನೀನು ಇನ್ನೇನು ಇದೇ ಇಬ್ಬನಿ ನಿನ್ನ ಕಂಗಳ ತೋಯಿಸುತ್ತದೆ ನಿನ್ನ ಮಡಿಲಿಗೆ ನನ್ನ ತಲೆಗೆ ಅವಿನಾ ಸಂಬಂಧ ಅದಕ್ಕೆ ಗೊತ್ತೇ ಈಗ ನೀನು ಸೆಳೆಯುವೆ ಮಡಿಲಿಗೆ ತಬ್ಬಿ ಮುದ್ದಿಸುವೆ ಅದುರುವ ತುಟಿಗಳಲ್ಲಿ “ನಾನಿದೀನಿ ಕಣೋ” ಹೇಳುವ ಹೇಳದಿರುವ ಸಂಭವದಲ್ಲಿ ತಾರೆಗಳು ಕಂಪಿಸಿವೆ ಅಲೆಗಳು ಮರ್ಮರ ನಿಲ್ಲಿಸಿವೆ ಎಷ್ಟೊಂದು ದೇಶಕಾಲಗಳು ಈ ಒಂದು ಕ್ಷಣಕ್ಕಾಗಿ ಮಿಡಿದಿವೆ ತುದಿಗಾಲಲ್ಲಿ, […]
Read More
ವಸಂತನಾಗಮನ ವಿಜಯ ನಿರ್ಮಲ ವಸಂತನಾಗಮನ ವನರಾಣಿ ನವಕನ್ಯೆಯಾಗಿಹಳು ಹರೆಯದಿ ಮೈದುಂಬಿ ನಗುತಿಹಳು ಭೂದೇವಿ ಸಂಭ್ರಮದಿ ನಲಿದಿಹಳು ವನಬನಗಳೆಲ್ಲ ಹೊಸ ಚಿಗುರು ತುಂಬಿ ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ ಗುಚ್ಛದಲಿ ತುಂಬಿ ತುಳುಕುತಿವೆ ಮಾವು ಬೇವು ಜೊತೆಯಾಗಿ ತೋರಣ ಕಟ್ಟಿ ವನವನೆಲ್ಲ ಸಿಂಗರಿಸುತಿದೆ ಮಾಮರದಂದಕೆ ಮನಸೋತ ಕೋಗಿಲೆ ಮಧುರವಾಗಿ ಕುಹೂ ಕುಹೂ ಎನುತಿದೆ ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ ಕೂಗಾಡುತ ತಮ್ಮ ಗೂಡುಗಳಲಿ ಸಂತಸದಿ ಮೆರೆಯುತ ಹಬ್ಬಕೆ […]
Read More
ಕಾಮದಹನ ಗೌರಿ. ಚಂದ್ರಕೇಸರಿ ಕಾಮ ದಹನ ಒಡಲು ಬರಿದು ಮಾಡಿಕೊಂಡ ಕಣ್ಣೀರ ಕಡಲು ಬತ್ತಿಸಿಕೊಂಡ ನಿಟ್ಟುಸಿರಲ್ಲೇ ನೋವ ನುಂಗಿಕೊಂಡವಳ ಜೋಳಿಗೆಗೆ ನ್ಯಾಯ ಬಂದು ಬಿದ್ದಿದೆ ಅಂತೂ ಕಾಮ ದಹನವಾಯಿತು. ಏಳು ವರುಷಗಳ ಹೋರಾಟ, ಗೋಳಾಟ ಸುತ್ತಿ, ಸವೆಸಿದ ಮೆಟ್ಟುಗಳೆಷ್ಟೋ ಹತ್ತಿ ಇಳಿದ ಮೆಟ್ಟಿಲುಗಳೆಷ್ಟೋ ಕರುಣೆ ಬದುಕಿದೆ ಇನ್ನೂ ಕಪ್ಪು ಪಟ್ಟಿಯ ಹಿಂದಿರುವ ಕಣ್ಣುಗಳಲಿ ಅಂತೂ ಕಾಮ ದಹನವಾಯಿತು. ಬಾಯ ಪಸೆ ಇಂಗುವವರೆಗೂ ಎದೆಯ ಗೂಡ ಗಾಳಿ ಇರುವವರೆಗೂ ನ್ಯಾಯಕ್ಕಾಗಿ ಅಂಗಲಾಚಬೇಕು ದಶಕಗಳವರೆಗೆ ಕಾಯಬೇಕು ಅಂತೂ ಕಾಮ ದಹನವಾಯಿತು […]
Read More
ಕವಿತೆಯದಿನಕ್ಕೊಂದು ಕವಿತೆ ರೇಖಾ ವಿ.ಕಂಪ್ಲಿ ಕವಿತೆ ನಿನಗೊಂದು ಖಲಾಮು ಇದ್ದರೆ ಸಾಕೆ ಇಲ್ಲ ಕವಿ ಬೇಕೇ? ಬರಿ ಕವಿ ಇದ್ದರೆ ಸಾಕೆ ಇಲ್ಲ ಭಾವನೆ ಬೇಕೇ? ಭಾವನೆಯೊಂದಿದ್ದರೆ ಸಾಕೆ ಇಲ್ಲ ಭಾಷೆ ಬೇಕೇ? ಭಾಷೆ ಒಂದು ಇದ್ದರೆ ಸಾಕೆ ಬರವಣಿಗೆ ಬೇಕೇ? ಬರಿ ಬರವಣಿಗೆ ನಿನಗೆ ಸಾಕೆ ಇಲ್ಲ ಓದುಗನೊಬ್ಬ ಬೇಕೇ? ಓದುಗನೊಬ್ಬ ಇದ್ದರೆ ಸಾಕೆ? ಕವಿತೆ ಕೊನೆಯಲಿ ಹಾಡಿ ಹೇಳಿತು ಮೆಲ್ಲಗೆ ಎಲ್ಲವು ಬೇಕು ಎನಗೆ..
Read More| Powered by WordPress | Theme by TheBootstrapThemes