ಕಾವ್ಯಯಾನ
ಪ್ರೀತಿಯೆಂದರೆ.. ವಿಶಾಲಾ ಆರಾಧ್ಯ ಈ ಪ್ರೀತಿಯೆಂದರೆ ಹೀಗೇನೇಒಮ್ಮೆ ಮೂಡಿತೆಂದರೆ ಮನದಿಸರ್ರನೆ ಧಮನಿಯಲಿ ಹರಿದಾಡಿಮನಸ ಕದವ ತೆರೆದುಕನಸ ತೂಗು ಬಲೆಯಲಿಜಮ್ಮನೆ ಜೀಕುವಜೋಕಾಲಿಯಾಗುತ್ತದೆ..!! ಈ ಪ್ರೀತಿಯೆಂದರೆ ಹೀಗೇನೇಹರಿವ ಹೊನಲಂತೆ ಕಲ್ಲೇನುಮುಳ್ಳೇನು ಹಳ್ಳಕೊಳ್ಳವ ದಾಟಿಪರಿಧಿ ಪಹರೆಯ ಕೊತ್ತಲ ದಾಟಿಸೇರಿ ಕುಣಿಯುತ್ತದೆ ಮಾನಸಸರೋವರದ ಅಲೆಗಳ ಮೀಟಿ..!! ಪ್ರೀತಿ ಎಂದರೆ ಹೀಗೇನೇಕಂಗಳ ಬೆಸುಗೆಗೆ ಕಾವಾದ ಹೃದಯದೆಕಾಪಿಟ್ಟು ಹೆಪ್ಪಾದ ಮುಗಿಲಿನಂತೆಕಾದಲಿನ ತುಡಿತಕೆ ಒಮ್ಮೆ ಸ್ಪಂದನಿಸಿಕೂಡಿತುಂಬಿದ ಮುಗಿಲು ಸುರಿವ ವರುಣಧಾರೆಯ ಮುತ್ತ ಹನಿಗಳಂತೆ..!! *****************
ವಿಭಾ ಪುರೋಹಿತ ಕಾವ್ಯಗುಚ್ಛ
ವಿಭಾ ಪುರೋಹಿತ ಕಾವ್ಯಗುಚ್ಛ ವೆಂಟಿಲೇಟರ್ ಮತ್ತು ರಕ್ಷೆ ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿಫ್ಯಾಷನ್ ಗಿಫ್ಟುಗಳ ಮೋಹದನೂಲುಆತ್ಮೀಯತೆ ಗೌಣ ಪ್ರದರ್ಶನಕ್ಕೆಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ ತಾಯಿ ಕರುಳ ಬಣ್ಣ ಅಂಟಿದೆಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ ಇತಿಹಾಸ ಗಡಿರೇಖೆಯೆಳೆದಾಗಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲತನ್ನವರೆಂದು ತೆಕ್ಕೆಬಡಿದುಕೊಂಡಳುಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ? ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳುಸುಮ್ಮನಿರದ ಶಕುನಿಗಳ ಕ್ಯಾತೆಗೆಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರುಉಸಿರಾಡಲು ಬಿಡುತ್ತಿಲ್ಲ ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ ‘ನಾವು ಭಾರತೀಯರು’ […]
ಮಾಲತಿ ಶಶಿಧರ್ ಕಾವ್ಯಗುಚ್ಛ
ಮಾಲತಿ ಶಶಿಧರ್ ಕಾವ್ಯಗುಚ್ಛ ಥೇಟ್ ನೀನು ಥೇಟ್ನನ್ನ ಕವಿತೆಯಂತೆಗೆಳೆಯ.ಒಮ್ಮೊಮ್ಮೆನಾನೆ ಬರೆದಿದ್ದರೂನನಗೇ ಅರ್ಥವಾಗದಹಾಗೆ.. ನೀನು ಥೇಟ್ನನ್ನ ನಗುವಿನಂತೆಗೆಳೆಯಕಿವಿಗಳೊರೆಗೂತುಟಿಯಗಲಿಸಿದರುನಕ್ಕಂತೆ ಕಾಣದಹಾಗೆ.. ನೀನು ಥೇಟ್ನನ್ನ ಮುಂಗುರುಳಂತೆಗೆಳೆಯಕಂಗಳಿಗೆ ಬಿದ್ದಾಗಲೆಲ್ಲಾಕಣ್ಣೀರು ಬರಿಸುವಹಾಗೆ.. ನೀನು ಥೇಟ್ನನ್ನ ಮೂಗು ನತ್ತಿನಂತೆಗೆಳೆಯಮುಂದೆಯೇಎಷ್ಟೇ ಅತ್ತರುಕೈಚಾಚಿ ಕಣ್ಣೀರುಮಾತ್ರ ಒರೆಸದಹಾಗೆ.. ಅಳಲು ಮುಗಿಲ ಹಿಂದೆ ಅವಿತು ಕುಳಿತಿರುವ ಬೆಳಕೇಸೀಳಿಕೊಂಡು ಬಂದು ನನ್ನನ್ನಾವರಿಸಿಬಿಡು.. ಮೋಡದಲ್ಲಿ ಮರೆಯಾಗಿರುವ ಹನಿಯೇಹೊಡೆದು ಜೇನ ಮಳೆ ಸುರಿಸಿಬಿಡು.. ಆಗಸವನೇ ಬಿಗಿದಪ್ಪಿಕೊಂಡಿರುವ ಚುಕ್ಕಿಯೇಕೈಬಿಟ್ಟು ಅಕ್ಷತೆಯಾಗಿ ಮೇಲೆ ಉದುರಿಬಿಡು… ಅಡವಿಯಲಿ ಅಡಗಿರುವ ಕಾಡ್ಗಿಚ್ಛೇಬಂದು ಚಿಂತೆಗಳ ಸುಟ್ಟುಬಿಡು… ನೀರಿನಲ್ಲಿ ಲೀನವಾಗಿರುವ ಸುನಾಮಿಯೇಬಂದು ನನ್ನಳಲ ನುಂಗಿಬಿಡು.. […]
ಡಾ.ಅಜಿತ್ ಹರೀಶಿ ಕಾವ್ಯಗುಚ್ಛ
ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ […]
ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ
ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ […]
ಕಾವ್ಯಯಾನ
ಮಾಲತಿ ಶಶಿದರ್ ಒಂದು ಪ್ರೇಮಕವಿತೆ ಒಲವೆಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟುಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು.. ಬೇಸಿಗೆ ಆಗಸ ವಸಂತವಾಗಿದೇದೂರದ ಕಾಡು ನಿನ್ನೆಸರ ಕೂಗಿದೆ.. ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆಬೆರಳುಗಳ ಹೊಸ ಭಾಷೆಯ […]
ಕಾವ್ಯಯಾನ
ನೂತನ ಅವರ ಹೊಸ ಕವಿತೆ ನೂತನ ದೋಶೆಟ್ಟಿ ಸಾಲುಗಟ್ಟಿದ ವಾಹನಗಳ ಸಂದಿನಲ್ಲಿಚಟಚಟನೆ ಜಿಗಿಯುವ ಪುಟ್ಟ ಕಾಲುಗಳುದೇಹವಿಡೀ ಲೋಹದ ಗೋಲದೊಳಗೆ ತೂರಿಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆಸೆರೆ ಹಿಡಿಯುವ ದಾಹಮಿರಮಿರನೆ ಹೊಳೆವ ಕದಪುಗಳುಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳುಸಂಜೆಗತ್ತಲಲ್ಲಿ ಕರಗುವುದ ತಿಳಿದೂಸುಡುಬಿಸಿಲಲಿ ಮೈ ಮಣಿಸುವ ಕಸುವುಸೊಂಟಕ್ಕೆ ಬಿಗಿದ ದಾವಣಿಯುಸಡಿಲವಾಗುವುದಕ್ಕೆ ಪೂರ್ವಹಾದಿಬದಿಯ ದೊಂಬರಾಟದಲ್ಲಿ ತಯಾರಿ ಬಡಿಯುವವನ ತಮಟೆ ತಾಳಕ್ಕೆಬಾಗಿ ಬಳುಕುವ ನೋಡುಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠಉಣ್ಣುವ ಅನ್ನದಲಿ ಸುಖ […]
ಕಾವ್ಯಯಾನ
ಆಸೆ ಪೂಜಾ ನಾಯಕ್ ಝಗಝಗಿಸುವಾ ಆಸೆನಳನಳಿಸುವಾ ಆಸೆಮೊಮ್ಮೊದಲ ವಸಂತ ಋತು,ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ.ಕವಿಗೆ ಕಾವ್ಯದಾ ರಚನೆಯಮೇಲಾಸೆಕಲಾಕಾರನಿಗೆ ಚಿತ್ರ ಬಿಡಿಸುವ ಆಸೆಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆನಟರಾಜನಿಗೆ ತನ್ನ ನೃತ್ಯದಾಮೇಲಾಸೆಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ ಮಾಗಿಯ ಚಳಿಯು ಇನಿಯನಿಗೆ ಆದರೆ,ಚಂದ್ರನ ಬೆಳದಿಂಗಳು ಗೆಳತಿಗೆಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು,ಏಕಾಂತದಲಿ ಕುಳಿತಾಗ ಕವಿತೆಯ ಬರೆದು, ಎಲ್ಲರೊಡಗೂಡಿ ಹಾಡುವ ಆಸೆ ಎನಗೆ.ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇಅವನಿಗೂ ಕೂಡ ಇತ್ತೊಂದು ಆಸೆ,ಆಸೆಯ ಬಿಡಬೇಕು ಎನ್ನುವ ಮಹದಾಸೆ.ಆಸೆ ಎಂಬುದು ಎಲ್ಲರಾ […]
ಕಾವ್ಯಯಾನ
ತಿರುಗಾಟ ಭಾಗ್ಯ ಸಿ ಏಕೆ ತಿರುಗುವೆ ಅತ್ತಿಂದಿತ್ತಅತ್ತ ಪ್ರಳಯ ಇತ್ತ ಕೋಲಾಹಲತಿನ್ನುವ ಕೂಳಿಗೂ ಪರದಾಟ ಅಲ್ಲಿತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣಹೋದರೆ ಹೋಯಿತು ಬೆಲೆ ಇಲ್ಲಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿಲೆಕ್ಕ ತೀರಿಸಲೇ ಬೇಕು ಮರೆಯಬೇಡಿ ಏಕೆ ತಿರುಗುವೆ ಅತ್ತಿಂದಿತ್ತತಿರುಗಾಟ ಪರಿಹಾರವಲ್ಲಎಣೆ ಬಲೆಯನು ಬಿಗಿಯಾಗಿಬೀಳಲಿ ಮಿಕ ತಲೆಕೆಳಗಾಗಿ *****************************************
ಕಾವ್ಯಯಾನ
ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************