Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

ಕಾವ್ಯಯಾನ

ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . […]

ಕಾವ್ಯಯಾನ

ವಾಸ್ತವ ದೀಪಿಕಾ ಬಾಬು ವಾಸ್ತವ ಜೀವ ಇರುವ ಅವನನ್ನು ನಾನು ಪ್ರೀತಿಸಿದೆ, ಪ್ರೀತಿಯ ಮುಖವಾಡ ಧರಿಸಿದ ನನ್ನ ನಂಬಿಕಯೇ ಮೋಸವಾಯಿತು..! ಚಿಕ್ಕ ಪುಟ್ಟ ಹಕ್ಕಿ  ಪಕ್ಷಿಗಳ ತಂದು ನಾನು ಪ್ರೀತಿಸಿದೆ, ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ ಎಂದು ಹಾರಿ ಹೋಯಿತು..! ಬಾಲ್ಯದಲ್ಲೇ ಸಾವಿರಾರು ಕನಸನ್ನು ನಾನು ಪ್ರೀತಿಸಿದೆ, ನನಸಾಗದ ಬದುಕಿನ ನೈಜತೆಯ ಅರಿತು ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!! ಗುರು ಹಿರಿಯರನ್ನು, ಹೆತ್ತವರನ್ನು ನಾನು ಪ್ರೀತಿಸಿದೆ, ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು ಮದುವೆಯ ಬಂಧನದಲ್ಲಿಟ್ಟರು..!! ಗಂಡನನ್ನು, ಮಕ್ಕಳನ್ನು, ಮನೆಯನ್ನು […]

ಕಾವ್ಯಯಾನ

ಬಾಲ್ಯ ವಿವಾಹ. ಜ್ಯೋತಿ ಡಿ.ಬೊಮ್ಮಾ ಬಾಲ್ಯ ವಿವಾಹ . ಮರುಗಲಾಗದೆ ಮತ್ತೆನು ಮಾಡಲಾಗದು ಮಗು ನಿನ್ನ ವಿಧಿ ಬರಹಕ್ಕೆ ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ… ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ. ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ ಎರೆದು ಕೈ ತೊಳೆದುಕೊಳ್ಳುವ ಧಾವಂತ.. ಆಡುತ್ತ ಓದುತ್ತ ನಲಿಯಬೇಕಾದ ಮಗು ಹೊತ್ತುಕೊಂಡಿತು ಸಂಸಾರದ ನೋಗ ಸರೀಕರೆಲ್ಲ ನಕ್ಕು ನಲಿವಾಗ ಆಕೆ ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ.. ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿತು […]

ಕಾವ್ಯಯಾನ

ಸಗ್ಗದ ಬಾಗಿಲು ನಿರ್ಮಲ ಆರ್. ವಸಂತಕೆ ಹೊಸ ಚಿಗುರು,ಹೊಸ ಯೌವ್ವನ ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ ನಭದಲಿ ನಗುತಿಹನು ರವಿ ಹಸಿರಿನಿಂದ ಕಂಗೊಳಿಸುತಿಹುದು ಭುವಿ ಅಲ್ಲಲ್ಲಿ ಹಕ್ಕಿಗಳ ಇಂಚರ ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ ಇರುಳಲಿ ಉಲ್ಲಸಿತನಾದ ಚಂದಿರ ತಾಯ ಕಂಕುಳಲಿರುವ ಕಂದನಿಗವನೇ ಸುಂದರ ಕಪ್ಪು ಮೋಡವ ಹೊತ್ತುತರುವ ಮಳೆರಾಯ ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ ಪ್ರಕೃತಿ ಸೌಂದರ್ಯ ನೋಡುತಿರೆ […]

ಕಾವ್ಯಯಾನ

ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು […]

ಕಾವ್ಯಯಾನ

ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು […]

ಕಾವ್ಯಯಾನ

ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********

ಚಲಿಸುವ ಮುಳ್ಳು

ಚಲಿಸುವ ಮುಳ್ಳು ಚಂದ್ರಪ್ರಭ ಬಿ. ಚಲಿಸುವ ಮುಳ್ಳು ಆಗಲೇ ನಿನಗೆ ಐವತ್ತಾತs ! ಅವ ತಮಾಷೆಗಿಳಿದ.. ಹ್ಞೂಂ.. ನಿನಗ ಅರವತ್ತಾಗುವಾಗ ನನಗಿನ್ನೆಷ್ಟಾಗಬೇಕು? ಹೆಚ್ಚುತ್ತಿದ್ದ ಈರುಳ್ಳಿ ಕಣ್ಣ ತೋಯಿಸಿತು ‘ಹೆರಳಿಗೆ ಹೂ ಮುಡದರೆ ನೀ ಅದೆಷ್ಟ ಚಂದ ಕಾಣತೀ ಈಗಲೂ’ ಅವ ಹೇಳಿದ ಹೆರಳೆಲ್ಲಿದೆ.. ಈಗಿರವುದು ಒಂದು ಮೋಟು ಜಡೆ ಅಷ್ಟೇ.. ಒಗ್ಗರಣೆ ಹೊತ್ತಕೊಂಡೀತೆಂದು ಉರಿ ಸಣ್ಣ ಮಾಡುತ್ತ ಹೇಳಿದೆ ‘ಆ ಲೇಖಕರು ಮುನ್ನುಡಿ ಬರೆದು ಕೊಟ್ಟರೇನು ನಿನಗೆ.. ಮತ್ತ ನಿನ್ನ ಪುಸ್ತಕ ಬಿಡುಗಡೆ ಯಾವಾಗ?’ ಮುತುವರ್ಜಿಯಿಂದ ಅವ […]

ಕಣ್ಣ ಕನ್ನಡಿ

ಕಣ್ಣ ಕನ್ನಡಿ ಶಾಂತಾ ಜೆ ಅಳದಂಗಡಿ ಕಣ್ಣಕನ್ನಡಿ ಹಸಿರ ಉಸಿರು ಅದುಮಿ ಹಿಡಿದು ತಂಪು ತಂಗಾಳಿ ಏಕಿಲ್ಲ ವೆಂದರೆ ಏನಹೇಳಲಿ ಉತ್ತರ? ಗೈದತಪ್ಪಿಗೆ ಬದುಕಾಗಿದೆ ತತ್ತರ ಕೊಳಕ ಕೊಳಗವ ಚೆಲ್ಲಬಿಟ್ಟು ಶುದ್ಧಪರಿಮಳ ಇಲ್ಲವೆಂದರೆ ಯಾರು ಕೊಡುವರು ಉತ್ತರ? ಪಡೆಯಬೇಕಿದೆ ಕೆಟ್ಟ ವಾಸನೆ ನಿರಂತರ ಬದಿಗೆಕರೆದು ಕಳ್ಳತನದಲಿ ಲಂಚನೀಡಿ ಕೆಲಸ ಮಾಡಿಸಿ ದುಡ್ಡಿನಾಸೆಯ ತೋರಿ ಕೆಡಿಸಿ ರಾಜಕಾರ್ಯವ ನಿಂದಿಸಿದರೆ ಯಾರು ಕೊಡುವರು ಉತ್ತರ ಸರದಿಸಾಲಿನ ಮಧ್ಯೆತೂರಿ ಬಾಯಬಡಿದು ಬಣ್ಣಗೆಟ್ಟರೆ ಮಾನ್ಯ ನೆಂಬ ಪದವಿ ಸಿಗುವುದೆ? ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ […]

Back To Top