ಬಾಲ್ಯದ ಮುಂಗಾರು ಮಳೆ ನನ್ನ ಬಾಲ್ಯದ ಮಳೆಗಾಲ ಈಗ ಮೊದಲಿನಂತಿಲ್ಲ ಬಹುಶಃ ಕಾಲದೊಂದಿಗೆ ಬೆಳೆದು ಮೊದಲಿನ ಮಾತಿಲ್ಲ ಮುಂಗಾರು ಆಗಲೇ ಬಾಗಿಲು ಬಡಿದು ನಿಂತಿದೆ ವರ್ಷ ಋತುವಿನ ಮೊದಲ ಮಳೆಯ ತಂದಂತಿದೆ ಮನೆಯ ಕಿಡಕಿಯಿಂದ ನೋಡಿದರೆ ಆಕಾಶದಲಿ ಕಪ್ಪು ಮೋಡಗಳ ಗರ್ಜನೆಗೆ ನರ್ತಿಸುವ ಮಳೆಹನಿ ಗಾಜಿನ ಮಣಿಗಳು ಗೋಡೆಗೆ ಟಳಾಯಿಸುತಲಿವೆ ಅಬ್ಬರಿಸುವ ಮಳೆಯ ಸಂಗೀತ ಆಲಾಪಿಸುತಲಿದೆ ಕೆಲವೊಮ್ಮೆ ನಾ ಆಡುತಲಿದ್ದೆ ಅವುಗಳೊಂದಿಗೆ ಅದಕಾಗಿ ಅವು ಈಗ ನನ್ನನು ಕರೆಯುತಲಿವೆ ನಾನಾಗ ಕಿರಿಯಳು ಈ ಮಾತು ಹಿರಿದಾಗಿತ್ತು ಆವಾಗ […]
ಮಳೆಯಾಗುತಿದೆ, ಭಾರವಾದ ಮೋಡದ ಮನಸು ಹಗುರಾಗುವುದು ಹೀಗೆ ತಾನೇ, ಒಡಲು ತುಂಬಿದ ರಾಶಿ ಹನಿಗಳನೆಲ್ಲ ಹೊರ ಚೆಲ್ಲಿ ಹಗುರಾಗುವ ಮೊದಲು ಭಾರವಾಗಲೇ ಬೇಕು, ಮನ ಕಟ್ಟಬೇಕು ದಟ್ಟೈಸಬೇಕು ತೀವ್ರತೆಯ ದಾಟಿ ಒಮ್ಮೆಗೆ ಸ್ಪೋಟಗೊಳ್ಳಬೇಕು, ಹನಿಯೊಸರಿದರೆ ತಾನೇ ಚಿಗುರ ಕನಸು, ಹನಿಯಬೇಕು ಹನಿದು ಹಗುರಾಗುವ ಮುನ್ನ ಮೋಡ ಕಟ್ಟಬೇಕು ಭಾರವಾಗಬೇಕು, ಮಳೆಯಾಗಿ ಇಳೆಗಿಳಿದು ಹಗುರಾಗುತಲೆ ಹಸಿರ ಕನಸಿಗೆ ಜೀವ ತುಂಬಬೇಕು, ಭುವಿಗಿಳಿದ ಗುರುತಿಗೆ ಸಹಿಯ ಒತ್ತಬೇಕು… ************ ಅರ್ಪಣಾ ಮೂರ್ತಿ
ಹಬ್ಬ ಈ ಮುಂಗಾರು ಇರುವುದೇ ಹೀಗೆ ಪಯಣಿಸಿ ಬಂದ ಮೋಡ ಭುವಿಯನ್ನು ಅಪ್ಪಿ ಆನಂದ ಭಾಷ್ಪವ ಸುರಿಸಿದಂತೆ ಯಾರೋ ಮೇಲೆ ನೀರಿಗೆ ಜರಡಿ ಹಿಡಿದಂತೆ ಗಿಡಮರಗಳು ಹಸಿರು ಎಲೆ ಪುಷ್ಪಗಳ ಗುಚ್ಛ ಕಟ್ಟಿದಂತೆ ಹೊಂಡಗಳು ತೊಳೆದು ನೀರು ತುಂಬಿದಂತೆ ನಡು ನಡುವೆ ಇಣುಕಿ ಮರೆಯಾಗುವ ಸೂರ್ಯ ತೂಕಡಿಸಿದಂತೆ ಮಲಿನವ ಹೊರನೂಕಿ ಮನಮನಗಳು ಒಂದಾದಂತೆ ಟೊಂಗೆಗಳ ನಡುವಿಂದ ನೆಲಕೆ ಉದುರುವ ಚಿಟಪಟ ಶಬ್ದದಂತೆ ನೆನೆದ ಹಕ್ಕಿಗಳು ಮೈಯ ಜಾಡಿಸಿ ಫಟಫಟನೆ ಹಾರಿದಂತೆ ಅಗೋ ಬಂದಿತೋ ಜಿಟಿಜಿಟಿ ರಾಜನ ಕಾರ್ಮೋಡ […]
ಮಳೆ.. ಬಿರು ಬಿಸಿಲ ರಭಸಕ್ಕೆ ಬಾಡಿ ಬಸವಳಿದಇಳೆಗೆ ಸಂತೈಸಲು ಬಂದಿತು ಮಳೆ..ಬೆವರ ಪಸೆಗೆ ಕಳೆಗುಂದಿದ ಮೊಗಗಳಿಗೆಮತ್ತೆ ರಂಗೇರಿಸಲು ಚಿಮ್ಮಿತು ಮಳೆ.. ಭೂದೇವಿಯ ಒಣಗಿದ ಒಡಲಿಗೆ ಭರದಿಂದಸುರಿಯಲು ಕಾತರಿಸಿದೆ ಮಳೆ..ಚಿಗುರುತ್ತಿರುವ ಹುಲ್ಲಿನ ಮೇಲೆಚಿನ್ನಾಟವಾಡಲು ಜಿನುಗಿದೆ ಮಳೆ.. ಬರಿದಾದ ಕೆರೆ ಕಟ್ಟೆಗಳಿಗೆ ಹಬ್ಬದೂಟಉಣಿಸಲು ಅಣಿಯಾಯ್ತು ಮಳೆ..ದನ ಕರುಗಳು ಸಸ್ಯ ಸಂಕುಲಗಳುಹಿಗ್ಗಿ ಹೀರಲು ಒಂದೇಸಮ ಸುರಿಯಿತು ಮಳೆ.. ದೂರಾದ ಬಾನು ಭೂಮಿಯ ನಂಟುಮತ್ತೆ ಹುರಿಗೋಳಿಸಲು ಹೊಯ್ದಿತು ಮಳೆ..ಬರಗೆಟ್ಟನಾಡಿಗೆ ಕಾಮನಬಿಲ್ಲಿನ ಒನಪುಸಾರಲು ಮತ್ತೆಮತ್ತೆ ಕಾತರಿಸಿತು ಮಳೆ.. ಜೀವಸಂಕುಲಗಳ ಮುಂದಿನ ಪಯಣಸುಖವಾಗಿರಿಸಲು ಮರೆಯದೆ ಬರುವದು […]
ಮಳೆ_ಪ್ರೀತಿ ಮತ್ತೆ ಸುರಿದಿದೆ ಮಳೆತುಂತುರು ಹನಿಗಳಾಗಿನಮ್ಮೊಲವು ಶುರುವಾದಗಳಿಗೆಯಂತೆ ಒಮ್ಮೆಲೇ ಧೋ ಎಂದುರಭಸವಾಗಿನಮ್ಮ ಪ್ರಣಯೋತ್ಕರ್ಷದಆ ರಸಕ್ಷಣಗಳಂತೆ ಕೆಲವು ಕಾಲ ಶಾಂತ ಪ್ರಶಾಂತಸದ್ದಿಲ್ಲದೇ ನಿರಂತರ ಸೋನೆನಿನ್ನೆದೆಗೆ ಒರಗಿನಾ ಪಡೆದ ನೆಮ್ಮದಿಯಂತೆ ಇಂದೀಗ ಎಲ್ಲ ಸ್ತಬ್ಧಎಲ್ಲೋ ತೊಟ ತೊಟ ಸದ್ದುಸಂಪೂರ್ಣ ನೀರವತೆಮುಗಿದು ಹೋದನಮ್ಮ ಪ್ರೀತಿ ಕಥೆಯಂತೆ ********* ಸುಜಾತಾ ರವೀಶ್
ಮುದ್ದು ಮಳೆ ಮೋಡಗಳು ಒಂದನ್ನೊಂದು ಮುದ್ದಿಸಲುಹಣೆಗೆ ಹಣೆಯ ತಾಕಿಸಲುತಂಗಾಳಿಯು ಮೋಡಕೆ ತಂಪೆರೆದಾಗಲೇನೀ ಬರುವೆ ಭೂಮಿಗೆ ಮಗುವಾಗಿ ಮಳೆಯಾಗಿ ನಾಳೆಯುದುರುವ ಹಣ್ಣೆಲೆಯು ನಿನ್ನ ಸ್ಪರ್ಶ ಮಾತ್ರಕೆ ಪಾವನವುಒಣಭೂಮಿ ಕುಣಿಯುತಿದೆ ನಿನ್ನಮಿಲನದ ಮಣ್ಣಗಂಧವ ಹೊತ್ತು ಗಾಳಿಗೆ ತೂರಿ ಹೋಗುವ ಬೀಜಗಳುನಿನ್ನ ಬರುವಿಕೆಗೆ ಜಾಗ ಹಿಡಿದು ಕುಳಿತಿವೆನಿನ್ನೊಡನೆಯ ಪಿಸುಮಾತುಗಳ ಕೇಳುತ್ತಲೇಭೂಮಿ ಹಸಿರ ತುಂಬಿಕೊಂಡು ಮೈ ನೆರೆದಿದೆ ಸೀರಂಗಿಯೊಡನೆಯೊಂದು ಸೂಕ್ಷ್ಮ ಸಂವೇದನೆಯುಸಿಂಗರಿಸಿಕೊಂಡು ಕಾಯುತ್ತಿದೆ ಒಳಬರಲುಕೋಣೆಯೊಳಗಿರುವ ತಬ್ಬಿರುವ ದೇಹಗಳಿಗೆಮೈ ಬಿಸಿ ಏರಿಸಿ ಕಿಟಕಿಯಿಂದಲೇ ಸೋಕಿ ತಂಪೆರೆದು ರೇಗಿಸಲು ಮಿಲನಾತುರಕ್ಕೆ ಕಪ್ಪೆಗಳು ಕಾತರಿಸಿಇರುಳನ್ನೇ ಬೆಚ್ಚಿ ಬೀಳಿಸಿವೆ […]
ಮಳೆ ಹಾಡು ಆಕಾಶ ಬಯಲಲ್ಲಿ ಸಾಲುಗಟ್ಟಿದಮೋಡ ಗರಿಕೆಯೊಂದನೂಚಿಗುರಿಸದು ನೋಡು ಇಳೆಯ ಸಾಂಗತ್ಯಕೆ ಇಳಿದುಬಂದೊಡನೆಯೇ ನೆಲವೆಲ್ಲಾಹಚ್ಚ ಹಸಿರು ಪಚ್ಚೆ ಕಾಡು ಬಾನ ನಂಟಿದ್ದೂ ಅಂಟಿಕೊಳದೆಭುವಿಯ ಸಾಮಿಪ್ಯಕೆ ಕಾತರಿಸಿ ಓಡಿಬರುವುದು ಅಮೋಘ ಮೇಘದ ಪಾಡು ಹೀಗೆ ಇರುವ ಪರಿ ಯಾವುದೆಲ್ಲಾಸರಿ ಏನಚ್ಚರಿಯಿದೇನಚ್ಚರಿ ಎಂದುಯೋಚಿಸಲದು ಗೊಂದಲದ ಗೂಡು ಮೋಡಗಟ್ಟಿ ಮಳೆ ಹೊಯ್ಯದುಇಳೆಯ ಬಯಸಿ ಬಳಸಿ ಅಪ್ಪುವುದುಋತುಮಾನ ಚಕ್ರಗತಿಯ ನಡೆಯು ನೋಡು ಆವಿಯಾಗದ ಕಡಲು ಮಳೆಯಾಗದಮೋಡ ನೆಲಕಾಗಿ ಹರಿಯದ ನದಿಎನಿತಿರಲೆಂತು ಲೇಸಹುದು ಬಿಡು ನಶೆಯೊಳಗಾಗಿ ಕಳೆದುಹೋಗದೆನಿನಗಾಗಿ ನಾನು ನನಗಾಗಿ ನೀನುಎಂದಂದು ಬದುಕುವುದು ಒಲವ […]
ಮುಂಗಾರು ಮಳೆಗೆ ಬಿದ್ದ ಮುಂಗಾರು ಮಳೆಗೆನಿನ್ನದೇ ನೆನಪುಮಣ್ಣ ಕಣ ಕಣದ ಘಮನಿನ್ನದೇ ಸೊಡರು ಕಾದ ಕಬ್ಬಿಣದ ದೋಸೆ ಹಂಚಿಗೆಬಿದ್ದ ಮೊದಲ ನೀರುಚುರ್ ಎನ್ನುತ್ತಾ ಮೇಲೇರುವ ಘಮನಿನ್ನದೇ ಹಳೆಯ ನೆನಪು ಜೂನ್ ಮುಗಿಯುವ ಹೊತ್ತಿಗೆ ಕಾಣೆಯಾಗುವ ದುಂಡು ಮಲ್ಲಿಗೆ ಹೂಮುಡಿದು,ಮುದಿಡಿ ಲಂಗ ಎತ್ತಿ ಮಳೆನೀರ ಗುಂಡಿ ಹಾರಿಸಿ ಗೆಜ್ಜೆ ಹೆಜ್ಜೆಯ ಹೂಡುಗಿ …ಆಗ ನಿನ್ನದೇ ನೆನಪು! ಮುಖಪುಟದ ನೂರಾರು ಫ್ರೊಫೆಲ್ ತಿರುವಿತಿರುವಿನಲಿ ನಿನ್ನ,ನೀನೆ ಎಂಬ ಚಿತ್ರ ಪಟ ಹುಡುಕಿ,ತಿರುಗಿಸಿ,ಮುರುಗಿಸಿ ನೋಡುವಾಗಇವಳ ಕೈಯಲ್ಲಿ ಸಿಕ್ಕಿ,ಕಿವಿ ತಿರುಗಿಸಿಕೊಳ್ಳುವಾಗನಿನ್ನದೇ ಹಳೆಯ ನೆನಪು ರಾತ್ರಿ […]
ಕಾವ್ಯಯಾನ
ಅವನಾಗದಿರಲಿ. ಪ್ರಮೀಳಾ. ಎಸ್.ಪಿ.ಜಯಾನಂದ. ಸದ್ದು ನಿಲ್ಲಿಸಿದ್ದ ನಾಯಿಮತ್ತೇಕೆ ಸದ್ದು ಮಾಡುತ್ತಿದೆ…?ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..?? ಅದೊ..ಅವನು ಬಂದಿರುವನೆ..ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ ಹೂಹುಂ…ಇಲ್ಲ,ಇಲ್ಲ.. ಆ ಹೊತ್ತುಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು ಆದರವಳ ಮಗ…ಏನೆಂದು ದುಃಖಿಸಿದನೋ ಇವನುಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..?? ಗಟ್ಟಿಯಾಗದಿದ್ದರೂ ಮನಸ್ಸುಕಲ್ಲಾದ ದೇಹದುಡಿಯಿತುಮಗಳ ಸಾಕುವುದು ಸುಲಭದ ಮಾತೇನು.. ಅದು ಬರೆಯಲಾಗದ ಕವಿತೆ,ಹಾಡಲು ಬರದ ಹಾಡು.. ಅಳುವ ಕೂಸಿಗೆ ಹಾಲುಣಿಸಿಕಂಬನಿ […]
ಕಾವ್ಯಯಾನ
ಅಮ್ಮನಿಗೀಗ ೬೬ ನಾಗರಾಜ ಮಸೂತಿ ದುಡಿಯುವ ದೇಹಕ್ಕೆ ವಾಕಿಂಗ್ ಅನಗತ್ಯ ಎಂದವಳುಮೆಲ್ಲ ಹೆಜ್ಜೆ ಇರಿಸುತ್ತಿದ್ದಾಳೆ ಆರು ಹೆರಿಗೆಗೆ ನಲುಗದವಳುಮಂಡೆ ನೋವಿಗೆ ಕುಸಿದಿದ್ದಾಳೆ ಬಿಸಿ ರೊಟ್ಟಿ ಉಣಬಡಿಸಿದವಳುಊಟಕ್ಕೆ ಮೆತ್ತನೆ ರೊಟ್ಟಿಯನ್ನು ಕೇಳಲು ಮುಜುಗರಕ್ಕೊಳಗಾಗುತ್ತಾಳೆ ಮೈಲು ದಾರಿ ಸವೆಸಿ ಬಿಸಿಯೂಟ ಬಡಿಸಿದಅವಳ ಪ್ರತಿ ಹೆಜ್ಜೆನನ್ನೆದೆಗೆ ಭಾರ ಅನಿಸುತ್ತಿವೆ ತಿಂಡಿ ತಿನಿಸು, ಧಿರಿಸು ತಂದಿಡುವಎನಗೆ ಆರೋಗ್ಯ ಮರುಕಳಿಸಲಾಗುತ್ತಿಲ್ಲಅವಳಿಗೀಗ ಅರವತ್ತಾರರ ಹರೆಯ ಅಮ್ಮನಿಗೆ ವಯಸ್ಸಾಗ್ತಿದೆಅದೇ ಬೇಸರವಾಗ್ತಿದೆ… **************