ಮುದ್ದು ಮಳೆ
ಮೋಡಗಳು ಒಂದನ್ನೊಂದು ಮುದ್ದಿಸಲು
ಹಣೆಗೆ ಹಣೆಯ ತಾಕಿಸಲು
ತಂಗಾಳಿಯು ಮೋಡಕೆ ತಂಪೆರೆದಾಗಲೇ
ನೀ ಬರುವೆ ಭೂಮಿಗೆ ಮಗುವಾಗಿ ಮಳೆಯಾಗಿ
ನಾಳೆಯುದುರುವ ಹಣ್ಣೆಲೆಯು ನಿನ್ನ ಸ್ಪರ್ಶ ಮಾತ್ರಕೆ ಪಾವನವು
ಒಣಭೂಮಿ ಕುಣಿಯುತಿದೆ ನಿನ್ನ
ಮಿಲನದ ಮಣ್ಣಗಂಧವ ಹೊತ್ತು
ಗಾಳಿಗೆ ತೂರಿ ಹೋಗುವ ಬೀಜಗಳು
ನಿನ್ನ ಬರುವಿಕೆಗೆ ಜಾಗ ಹಿಡಿದು ಕುಳಿತಿವೆ
ನಿನ್ನೊಡನೆಯ ಪಿಸುಮಾತುಗಳ ಕೇಳುತ್ತಲೇ
ಭೂಮಿ ಹಸಿರ ತುಂಬಿಕೊಂಡು ಮೈ ನೆರೆದಿದೆ
ಸೀರಂಗಿಯೊಡನೆಯೊಂದು ಸೂಕ್ಷ್ಮ ಸಂವೇದನೆಯು
ಸಿಂಗರಿಸಿಕೊಂಡು ಕಾಯುತ್ತಿದೆ ಒಳಬರಲು
ಕೋಣೆಯೊಳಗಿರುವ ತಬ್ಬಿರುವ ದೇಹಗಳಿಗೆ
ಮೈ ಬಿಸಿ ಏರಿಸಿ ಕಿಟಕಿಯಿಂದಲೇ ಸೋಕಿ ತಂಪೆರೆದು ರೇಗಿಸಲು
ಮಿಲನಾತುರಕ್ಕೆ ಕಪ್ಪೆಗಳು ಕಾತರಿಸಿ
ಇರುಳನ್ನೇ ಬೆಚ್ಚಿ ಬೀಳಿಸಿವೆ ಎಲ್ಲೆಲ್ಲಿನ ಮಿಲನ ಮೈಥುನಗಳ ಬೆಚ್ಚಗಿನ ಭಾವವೊಂದು ಮಳೆಯೊಂದಿಗೆ ಅನವರತ…..
******
ಮೋಹನ್ ಗೌಡ ಹೆಗ್ರೆ
ಸುಂದರ ಕಲ್ಪನೆಗಳು…
ಸೊಗಸಾಗಿದೆ
Super
ಶಬ್ದಗಳ ಜೋಡಣೆ ಗಾಳಿಗಂಧ ತೀಡಿದಂತೆ
ಸುವಾಸನೆಯ ಕಂಪು ಪಸರಿಸಿದೆ.
ಕವಿತೆ ಚಂದವೋ ಚಂದ…
ಮ
ಗುಂಡೂಟಿ ಮಳೆ ಹನಿಗಳಂತೆ ಮುದ್ದಾಗಿಯೇ ಇದೆ ಕವಿತೆ–‘ಮುದ್ದು ಮಳೆ’
ತಂಪಾದ ಮಳೆಗೆ ಹಿತವಾದ ಕಾವು…
ಸುಂದರ ಕವಿತೆ
Sundar