ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ..

Selective Focus Photo of Obalte Green-leafed Plants during Rain

ಬಿರು ಬಿಸಿಲ ರಭಸಕ್ಕೆ ಬಾಡಿ ಬಸವಳಿದ
ಇಳೆಗೆ ಸಂತೈಸಲು ಬಂದಿತು ಮಳೆ..
ಬೆವರ ಪಸೆಗೆ ಕಳೆಗುಂದಿದ ಮೊಗಗಳಿಗೆ
ಮತ್ತೆ ರಂಗೇರಿಸಲು ಚಿಮ್ಮಿತು ಮಳೆ..

ಭೂದೇವಿಯ ಒಣಗಿದ ಒಡಲಿಗೆ ಭರದಿಂದ
ಸುರಿಯಲು ಕಾತರಿಸಿದೆ ಮಳೆ..
ಚಿಗುರುತ್ತಿರುವ ಹುಲ್ಲಿನ ಮೇಲೆ
ಚಿನ್ನಾಟವಾಡಲು ಜಿನುಗಿದೆ ಮಳೆ..

ಬರಿದಾದ ಕೆರೆ ಕಟ್ಟೆಗಳಿಗೆ ಹಬ್ಬದೂಟ
ಉಣಿಸಲು ಅಣಿಯಾಯ್ತು ಮಳೆ..
ದನ ಕರುಗಳು ಸಸ್ಯ ಸಂಕುಲಗಳು
ಹಿಗ್ಗಿ ಹೀರಲು ಒಂದೇಸಮ ಸುರಿಯಿತು ಮಳೆ..

ದೂರಾದ ಬಾನು ಭೂಮಿಯ ನಂಟು
ಮತ್ತೆ ಹುರಿಗೋಳಿಸಲು ಹೊಯ್ದಿತು ಮಳೆ..
ಬರಗೆಟ್ಟನಾಡಿಗೆ ಕಾಮನಬಿಲ್ಲಿನ ಒನಪು
ಸಾರಲು ಮತ್ತೆಮತ್ತೆ ಕಾತರಿಸಿತು ಮಳೆ..

ಜೀವಸಂಕುಲಗಳ ಮುಂದಿನ ಪಯಣ
ಸುಖವಾಗಿರಿಸಲು ಮರೆಯದೆ ಬರುವದು ಮಳೆ..
ತನಗಾಗಿ ಕಾತರಿಸುವ ಕನವರಿಕೆಗಳಿಗೆ
ನಿರಾಶೆಗೋಳಿಸದೆ ಬಂದೆ ಬರುವದು ಮಳೆ…

**********

ಜ್ಯೋತಿ ಡಿ.ಬೊಮ್ಮಾ.

About The Author

Leave a Reply

You cannot copy content of this page

Scroll to Top