ಹಬ್ಬ
ಈ ಮುಂಗಾರು ಇರುವುದೇ ಹೀಗೆ
ಪಯಣಿಸಿ ಬಂದ ಮೋಡ ಭುವಿಯನ್ನು ಅಪ್ಪಿ
ಆನಂದ ಭಾಷ್ಪವ ಸುರಿಸಿದಂತೆ
ಯಾರೋ ಮೇಲೆ ನೀರಿಗೆ ಜರಡಿ ಹಿಡಿದಂತೆ
ಗಿಡಮರಗಳು ಹಸಿರು ಎಲೆ ಪುಷ್ಪಗಳ ಗುಚ್ಛ ಕಟ್ಟಿದಂತೆ
ಹೊಂಡಗಳು ತೊಳೆದು ನೀರು ತುಂಬಿದಂತೆ
ನಡು ನಡುವೆ ಇಣುಕಿ ಮರೆಯಾಗುವ ಸೂರ್ಯ ತೂಕಡಿಸಿದಂತೆ
ಮಲಿನವ ಹೊರನೂಕಿ ಮನಮನಗಳು ಒಂದಾದಂತೆ
ಟೊಂಗೆಗಳ ನಡುವಿಂದ ನೆಲಕೆ ಉದುರುವ ಚಿಟಪಟ ಶಬ್ದದಂತೆ
ನೆನೆದ ಹಕ್ಕಿಗಳು ಮೈಯ ಜಾಡಿಸಿ ಫಟಫಟನೆ ಹಾರಿದಂತೆ
ಅಗೋ ಬಂದಿತೋ ಜಿಟಿಜಿಟಿ ರಾಜನ ಕಾರ್ಮೋಡ ರಥವು
ಮರಳಿದ ಮುಂಗಾರಿನ ಸಂಭ್ರಮವು ಭುವಿಯ ತುಂಬೆಲ್ಲ ತೋರಣವು
***********
ಸಂಮ್ಮೋದ ವಾಡಪ್ಪಿ