ಮುಂಗಾರು ಮಳೆಗೆ

Shallow Focus Photography of Rain on the Window

ಬಿದ್ದ ಮುಂಗಾರು ಮಳೆಗೆ
ನಿನ್ನದೇ ನೆನಪು
ಮಣ್ಣ ಕಣ ಕಣದ ಘಮ
ನಿನ್ನದೇ ಸೊಡರು

ಕಾದ ಕಬ್ಬಿಣದ ದೋಸೆ ಹಂಚಿಗೆ
ಬಿದ್ದ ಮೊದಲ ನೀರು
ಚುರ್ ಎನ್ನುತ್ತಾ ಮೇಲೇರುವ ಘಮ
ನಿನ್ನದೇ ಹಳೆಯ ನೆನಪು

ಜೂನ್ ಮುಗಿಯುವ ಹೊತ್ತಿಗೆ ಕಾಣೆ
ಯಾಗುವ ದುಂಡು ಮಲ್ಲಿಗೆ ಹೂ
ಮುಡಿದು,ಮುದಿಡಿ ಲಂಗ ಎತ್ತಿ ಮಳೆ
ನೀರ ಗುಂಡಿ ಹಾರಿಸಿ ಗೆಜ್ಜೆ ಹೆಜ್ಜೆಯ ಹೂ
ಡುಗಿ …
ಆಗ ನಿನ್ನದೇ ನೆನಪು!

ಮುಖಪುಟದ ನೂರಾರು ಫ್ರೊಫೆಲ್ ತಿರುವಿ
ತಿರುವಿನಲಿ ನಿನ್ನ,ನೀನೆ ಎಂಬ ಚಿತ್ರ ಪಟ ಹುಡುಕಿ,ತಿರುಗಿಸಿ,ಮುರುಗಿಸಿ ನೋಡುವಾಗ
ಇವಳ ಕೈಯಲ್ಲಿ ಸಿಕ್ಕಿ,ಕಿವಿ ತಿರುಗಿಸಿಕೊಳ್ಳುವಾಗ
ನಿನ್ನದೇ ಹಳೆಯ ನೆನಪು

ರಾತ್ರಿ ಹೇಳದೇ,ಕೇಳದೇ ಬಂದು ಹೋದ
ಮುಂಗಾರು
ಬೇಕು ಬೇಡವೆಂದರೂ ಬೆಳ ಬೆಳಿಗ್ಗೇ ಸುರಿದು
ಮದ್ಯಾಹ್ನ ತುಸು ಮೈ ಕೊಡವಿ,ಕಾಲು ಬಿಗಿ
ಮಾಡಿ ಏಳುವಷ್ಟರಲ್ಲಿ ಬಂದು ಹೋದ ಹನಿ
ಹನಿಯಲ್ಲೂ ನಿನ್ನದೇ ಮಧುರ ನೆನಪು

ಕಾಡಿಸಿ ಕಾಡಿಸಿ ಕೊಲ್ಲುವ ಮುಂಗಾರು
ಜಡಿ ಹಿಡಿದು,ಎಲ್ಲೂ ತಲೆ ಹಾಕದೆ ಗಲ್ಲಿ
ಗಲ್ಲಿ ತಿರುಗುವ ಹೆಣ್ಗಳ ನೋಡುತ್ತಿದ್ದರೂ
ಜಡೆ ತಿರುಗಿಸಿ ನಡೆಯುತ್ತಿದ್ದ ಮೊಲ್ಲೆಯೇ
ನಿನ್ನಧೇ ನೆನಪು!

**********

ಕೊಟ್ರೇಶ್ ಅರಸಿಕೆರೆ

Leave a Reply

Back To Top