Category: ಕಾವ್ಯಯಾನ

ಕಾವ್ಯಯಾನ

ಎತ್ತ ಈ ಪಯಣ…?

ಕವಿತೆ ಎತ್ತ ಈ ಪಯಣ…? ಕೆ.ಲಕ್ಷ್ಮೀ ಮಾನಸ ದಿಕ್ಕಿಗೊಂದು ಹಾದಿಯಿರಲು,ಎತ್ತಲೂ ಹಾಯದಾಗಿ,ಕಂಡದ್ದು ಕಾಣದಾಗಿ,ಅರಿತದ್ದು ಆರಿಯದಾಗಿ,ಗೊಂದಲದ ಗೂಡಾಗಿ,ದುಗುಡವು ಮಾಯದಾಗಿ,ಸಾಗುತಿದೆ ಪಯಣವೊಂದು,ತೋಚಿದ ಗತಿಯಲ್ಲಿ…… ಕತ್ತಲೆಯ ನರ್ತನದಲ್ಲಿ,ಭ್ರಮೆಗಳು ಮುಕ್ಕಿದರೂ,ಮನದ ದನಿಯೊಂದು,ಮಾಸಿದ ಹಾದಿಗೆ,ಕಿರುಬೆಳಕ ಸೂಸಿ,ಹಾಸಿದ ಹಾದಿಯಲ್ಲಿ,ಹಾಕುವ ಹೆಜ್ಜೆಗಳಿಗೆ,ನಿಶೆಯ ದರ್ಶನವೋ?ತಾರೆಗಳ ಭಾಗ್ಯವೋ…..? *************************

ವಿಪ್ರಲಂಭೆಯ ಸ್ವಗತ

ಬಿ.ಶ್ರೀನಿವಾಸ್ ಕವಿತೆಯಲ್ಲಿ
ಚರಿತ್ರೆಯಲೂ ಇರದ
ವರ್ತಮಾನಕೂ ಸೇರದ
ಇಂದು…
ಮತ್ತು
ನಾಳೆಗಳ…
ನಡುವೆ ಸಿಕ್ಕ ಜೀವಗಳು ನಾವು.

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು 1)ತುಟಿಗೆ ತುಟಿಅದೆಂಥಾ ಕಾತುರವೋಮಿಲನ ಸುಖ 2)ನಿನ್ನ ಹುಡುಕಿನಾನು ಕಳೆದುಹೋದೆಜೀವನ ಧನ್ಯ 3)ಇಲ್ಲೇ ಇದ್ದೇವೆನಾನು ನೀನು ಇಬ್ಬರೂಮತ್ಯಾಕೆ ಚಿಂತೆ 4)ಆಸೆಯ ಬೆಂಕಿಆರಗೊಡದಿರು ನೀಸುರಿಯೇ ಮಳೆ 5)ಹನಿ ಉದುರಿನೆಲ ನಸು ನಕ್ಕಾಗಜೀವ ಸಂಚಯ 6)ಹೂವು ಅರಳಿಜಗವೆಲ್ಲಾ ಶ್ರೀಗಂಧತಾಯ ನೆನಪ ು7)ಹೇಗಿರಲಿ ನಾದೂರವಾದರೆ ನೀನುಬಾಡಿದ ಮೊಗ 8)ನಿನ್ನ ಹುಡುಕಿಅಂಡಲೆವ ಮನಸುಸುಳಿವ ಗಾಳಿ 9)ಮನದ ಮೀನುವಿಹರಿಸೆ ಪ್ರಶಾಂತಹರಿವ ನದಿ **********************************************************************

ಒಬ್ಬಂಟಿ…!

ಕವಿತೆ ಒಬ್ಬಂಟಿ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಅನಾಥಎಲ್ಲ ಒಬ್ಬೊಬ್ಬರೂ ಅಪ್ರತಿಮಅನಾಥತೆಯ ಒಬ್ಬಂಟಿ! ಇರುವವರೆಲ್ಲ ಒಂದಿನಿತು ಇದ್ದುಎದ್ದು ಎತ್ತೆತ್ತಲೋ ಸಾಗುವವರುಬರುವವರೆಲ್ಲ ಸಹ ಕ್ಷಣಕಾಲಬಂದು ಹಾಗೇ ಹೋಗುವವರು ಕೊನೆಗೆಮತ್ತೆ ಒಬ್ಬಂಟಿಮತ್ತೆ ಮತ್ತೆ ಅಂಥದೇ ಒಬ್ಬಂಟಿತನಆಜೀವಪರ್ಯಂತ…ಇದು ಬದುಕುಯಾರಿದ್ದರೇನುಎಲ್ಲರೂ ಕೂಡಿದಂತೆ ಇದ್ದರೇನುಎಲ್ಲರ ನಡುವೆಯೇತಾನಿದ್ದೂ ಇಲ್ಲದಂಥತುಂಬು ಒಬ್ಬಂಟಿತನಬಾಧಿಸುವ ಒಬ್ಬಂಟಿಯಾಗಿ…!ಅತೀ ದೊಡ್ಡ ಮನೆಯಕಂಬಗಳ ಸುತ್ತ ಬಳಸಿಬದುಕಿದ ಹಾಗೆ… ಬದುಕು ಕ್ರೂರ ಹಲವರಿಗೆಧನ್ಯವಾದ ಓ ಬದುಕೆಮತ್ತೆ ಮತ್ತೆ ನಿನಗೆನಿನ್ನ ಥಳಕು ನಾಟಕಕೆಧನ್ಯವಾದ ಓ ಬದುಕೇ…! ಎಲೆ ಯಾತನಾಮಯ ಬದುಕೆಇಷ್ಟೊಂದು ಯಾತನೆ ಏತಕೆಯಾತನೆ ಇಲ್ಲದ ಬದುಕಬದುಕಲೊಲ್ಲೆಯಾ ನೀ […]

ಹೇ ದೇವಾ

ಹೇ ದೇವಾ ಗಂಗಾಧರ ಬಿ ಎಲ್ ನಿಟ್ಟೂರ್ ನಾನಾ ವಿಧದ ಶೃಂಗಾರವೈಭವದ ಅಲಂಕಾರಮನಬಂದಂತೆ ಜೈಕಾರಅಡ್ಡಬಂದವರಿಗೆ ಹೂಂಕಾರಅವ್ಯಾಹತ ಶವದ ಮೆರವಣಿಗೆಯುಗಯುಗಾಂತರ ದೈವ ಧರ್ಮದ ಸುಳಿಯಲಿಗಿರಕಿ ಮನುಷ್ಯತ್ವದ ನೆಲೆನಾಕ ನರಕಕೆ ನೈವೇದ್ಯ ಹಿಡಿದ ಗುತ್ತಿಗೆದಾರರ ಕಪಿಮುಷ್ಟಿಯಲಿನಿಜ ಬದುಕಿನ ಕಗ್ಗೊಲೆ ತನ್ನ ಬೇಲಿಯೊಳಗೆಎನಿತು ಮುಳ್ಳುಗಳು ಮಾನವಚುಚ್ಚಿದರೂ ರಕುತ ಹೀರಿದರೂಬೇಲಿಯೊಳಗೇ ಅರಳುವ ಭಾವ ಇದೇನು ಕುರಿಗಳ ಬಲಿಯೋಗಾವಿಲರ ಭಂಡತನವೋಸಾತ್ವಿಕರ ಮೌಢ್ಯದ ಕನ್ನಡಿಯೋಅಂತೂ ಲೋಕಕಿನ್ನೂನಿನ್ನಾಗಮನದ ನಿರೀಕ್ಷೆ ಹೇ ದೇವ ***************************

ಗಜಲ್

ತುಂಟ ಕಂಗಳು ನಿನ್ನ ಹುಡುಕೋದನ್ನು ಮಾತ್ರ ಕಲಿತಿದೆ
ಜೇನ ತುಟಿಗಳು ನಿನಗಾಗಿ ನಗೋದನ್ನು ಮಾತ್ರ ಕಲಿತಿದೆ

ಗಜಲ್

ಗಜಲ್ ಯಾಕೊಳ್ಳಿ.ಯ.ಮಾ ನನ್ನೊಳಗಿನ ‌ನಿನ್ನನ್ನು ನಾನು ಹುಡುಕುತ್ತಿದ್ದೇನೆ‌ ಗೆಳತಿನಿನ್ನ ಅಖಂಡ ಪ್ರೀತಿಗೆ ಶರಣಾದವನು‌ ನಾನು ಗೆಳತಿ ಇದು ಪ್ರಾಮಾಣಿಕರಿಗೆ ಬೆಲೆ ಕೊಡುವ ಲೋಕವಲ್ಲ ಗೆಳತಿಇಲ್ಲಿ ಗಿಲೀಟು ನಾಣ್ಯಗಳೇ ಬಹಳ ಹೊಳೆಯುತ್ತವೆ ಗೆಳತಿ ಬೆಳಕು ನೀಡುವ ಸೂರ್ಯ ಚಂದ್ರರನ್ನೆ ಸಂಶಯಿ ಸುವಾಗಜೀವನಾಡಿಯಾದ ಹರಿವ ನೀರನ್ನೇ ರಾಡಿಗೊಳಿಸಿದಾಗ ನಾವೆಷ್ಟರವರು ಗೆಳತಿ ಸಂಶಯದ ಬೇಲಿಯ‌ ಮೇಲೆಯೆ ನಮ್ಮ‌ಪ್ರೇಮದ ಬಳ್ಳಿ ಹೂ ಬಿಡಬೇಕುಅರಳಿ ಘಮ‌ಪಸರಿಸುವ ಪಕಳೆಗಳ ಅವರು ಮೂಸಲಿ ಗೆಳತಿ ಎನಿತೊ ದಿನಗಳಿಂದ ನಡೆದು ಬಂದ ಇತಿಹಾಸವೇ ಹೀಗೆ ಗೆಳತಿನಿಜ ಪ್ರೇಮವೆಂಬುದು ಬೆಂಕಿಯಲ್ಲಿ […]

ಗಜಲ್

ಒಲವೆನ್ನುವುದು ಅಗಲಿಕೆಯಲ್ಲೇ ಮುಗಿವ ಮಾತೇನು?
ಅರೆಗಳಿಗೆಯಾದರೂ ಜೊತೆಯಾಗುವ ಕನಸುಗಳ ಹಿಡಿಯಬೇಕು.

ಇಳಿ ವಯಸಿನ ಒಡನಾಡಿ

ಇಷ್ಟಾದರೂ
ಒಬ್ಬಂಟಿ ಬದುಕು ನನ್ನ
ನನ್ನೊಳಗಿನ ನರನಾಡಿಗಳನ್ನ
ಕೊಂಚ ಕೂಡ ನುಚ್ಚುಗುಟ್ಟಲಿಲ್ಲ
ಒಂದೇ ಒಂದು ಘಳಿಗೆ…

ಗಜಲ್

ಪೂರ್ಣ ಚಂದ್ರನ ಕಾಂತಿಯ ಚಿರ ಶಾಂತಿಯರಮನೆಯ ಹೊಳಪಲ್ಲ ಒಲವು।
ಬೆಳಕ ನುಂಗಿದ ಕಾಳರಾತ್ರಿಗಳ ದಿಗಿಲುಗೊಂಡ ಸ್ಮಶಾನ ಮೌನಕು ಮಿಗಿಲು।।

Back To Top