ಹೇ ದೇವಾ
ಗಂಗಾಧರ ಬಿ ಎಲ್ ನಿಟ್ಟೂರ್
ನಾನಾ ವಿಧದ ಶೃಂಗಾರ
ವೈಭವದ ಅಲಂಕಾರ
ಮನಬಂದಂತೆ ಜೈಕಾರ
ಅಡ್ಡಬಂದವರಿಗೆ ಹೂಂಕಾರ
ಅವ್ಯಾಹತ ಶವದ ಮೆರವಣಿಗೆ
ಯುಗಯುಗಾಂತರ
ದೈವ ಧರ್ಮದ ಸುಳಿಯಲಿ
ಗಿರಕಿ ಮನುಷ್ಯತ್ವದ ನೆಲೆ
ನಾಕ ನರಕಕೆ ನೈವೇದ್ಯ ಹಿಡಿದ ಗುತ್ತಿಗೆದಾರರ ಕಪಿಮುಷ್ಟಿಯಲಿ
ನಿಜ ಬದುಕಿನ ಕಗ್ಗೊಲೆ
ತನ್ನ ಬೇಲಿಯೊಳಗೆ
ಎನಿತು ಮುಳ್ಳುಗಳು ಮಾನವ
ಚುಚ್ಚಿದರೂ ರಕುತ ಹೀರಿದರೂ
ಬೇಲಿಯೊಳಗೇ ಅರಳುವ ಭಾವ
ಇದೇನು ಕುರಿಗಳ ಬಲಿಯೋ
ಗಾವಿಲರ ಭಂಡತನವೋ
ಸಾತ್ವಿಕರ ಮೌಢ್ಯದ ಕನ್ನಡಿಯೋ
ಅಂತೂ ಲೋಕಕಿನ್ನೂ
ನಿನ್ನಾಗಮನದ ನಿರೀಕ್ಷೆ ಹೇ ದೇವ
***************************
ಹೇ ದೇವಾ https://sangaati.com/?p=17408
ಸಂಗಾತಿಯ ಕಾವ್ಯಯಾನದಲ್ಲಿ
ನನ್ನದೊಂದು ಕವನ
ಸಂಗಾತಿಗೂ, ಓದುಗರಿಗೂ
ನಮಿಸಿದೆ ಹೃನ್ಮನ
– ಗಂಗಾಧರ ಬಿ ಎಲ್ ನಿಟ್ಟೂರ್
ತುಂಬ ಚೆನ್ನಾಗಿದೆ ಕವನ .ಅರಿತು ಆಚರಿಸುವ ಭಾವ ನಮ್ಮಲ್ಲಿ ಮೂಡುವವರೆಗೂ ಆ ದೇವನ ನಿರೀಕ್ಷೆ ಇದ್ದೇ ಇದೆ. ಶವದ ಮೆರಣಿಗೆ ಯುಗ- ಯುಗಾಂತರ …ಸಾಲುಗಳು ಇದಕ್ಕೆ ಸಾಕ್ಷಿಯಾಗಿವೆ.
ತುಂಬಾ ಅರ್ಥಗರ್ಭಿತ ಕಾವ್ಯ ಸರ್
“ಚುಚ್ಚಿದರೂ ರಕುತಹೀರಿದರೂ
ಬೇಲಿಯೋಳಗೇ ಅರಳುವಭಾವ.”.
ಅದ್ಭುತ ಸಾಲುಗಳಿವು.ಈ ಭಾವವಿದ್ದಾಗಲೇಪುಟಿದೆದ್ದು ಮೇಲೆ ಬರಲುಸಾಧ್ಯವಾಗುವುದು.