ಕವಿತೆ
ಎತ್ತ ಈ ಪಯಣ…?
ಕೆ.ಲಕ್ಷ್ಮೀ ಮಾನಸ
ದಿಕ್ಕಿಗೊಂದು ಹಾದಿಯಿರಲು,
ಎತ್ತಲೂ ಹಾಯದಾಗಿ,
ಕಂಡದ್ದು ಕಾಣದಾಗಿ,
ಅರಿತದ್ದು ಆರಿಯದಾಗಿ,
ಗೊಂದಲದ ಗೂಡಾಗಿ,
ದುಗುಡವು ಮಾಯದಾಗಿ,
ಸಾಗುತಿದೆ ಪಯಣವೊಂದು,
ತೋಚಿದ ಗತಿಯಲ್ಲಿ……
ಕತ್ತಲೆಯ ನರ್ತನದಲ್ಲಿ,
ಭ್ರಮೆಗಳು ಮುಕ್ಕಿದರೂ,
ಮನದ ದನಿಯೊಂದು,
ಮಾಸಿದ ಹಾದಿಗೆ,
ಕಿರುಬೆಳಕ ಸೂಸಿ,
ಹಾಸಿದ ಹಾದಿಯಲ್ಲಿ,
ಹಾಕುವ ಹೆಜ್ಜೆಗಳಿಗೆ,
ನಿಶೆಯ ದರ್ಶನವೋ?
ತಾರೆಗಳ ಭಾಗ್ಯವೋ…..?
*************************