ಹಾಯ್ಕುಗಳು

ಹಾಯ್ಕುಗಳು

ವಿ.ಹರಿನಾಥ ಬಾಬು

white gold fish

1)
ತುಟಿಗೆ ತುಟಿ
ಅದೆಂಥಾ ಕಾತುರವೋ
ಮಿಲನ ಸುಖ


2)
ನಿನ್ನ ಹುಡುಕಿ
ನಾನು ಕಳೆದುಹೋದೆ
ಜೀವನ ಧನ್ಯ


3)
ಇಲ್ಲೇ ಇದ್ದೇವೆ
ನಾನು ನೀನು ಇಬ್ಬರೂ
ಮತ್ಯಾಕೆ ಚಿಂತೆ


4)
ಆಸೆಯ ಬೆಂಕಿ
ಆರಗೊಡದಿರು ನೀ
ಸುರಿಯೇ ಮಳೆ


5)
ಹನಿ ಉದುರಿ
ನೆಲ ನಸು ನಕ್ಕಾಗ
ಜೀವ ಸಂಚಯ


6)
ಹೂವು ಅರಳಿ
ಜಗವೆಲ್ಲಾ ಶ್ರೀಗಂಧ
ತಾಯ ನೆನಪ


7)
ಹೇಗಿರಲಿ ನಾ
ದೂರವಾದರೆ ನೀನು
ಬಾಡಿದ ಮೊಗ


8)
ನಿನ್ನ ಹುಡುಕಿ
ಅಂಡಲೆವ ಮನಸು
ಸುಳಿವ ಗಾಳಿ


9)
ಮನದ ಮೀನು
ವಿಹರಿಸೆ ಪ್ರಶಾಂತ
ಹರಿವ ನದಿ

**********************************************************************

5 thoughts on “ಹಾಯ್ಕುಗಳು

  1. ಬಾಬಣ್ಣ
    ಹೂ ಅರಳಿ ಶ್ರೀಗಂಧದ ಘಮಘಮ ತಾಯಿಯ ನೆನಪು
    ತುಂಬಾ ತಂಬಾ ಇಷ್ಟ ಆಯ್ತಣ್ಣ

  2. 3)
    ಇಲ್ಲೇ ಇದ್ದೇವೆ
    ನಾನು ನೀನು ಇಬ್ಬರೂ
    ಮತ್ಯಾಕೆ ಚಿಂತೆ
    ಉತ್ತಮವಾಗಿಯ ಮಿತ್ರ.

Leave a Reply

Back To Top