ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯಸಂಗಾತಿ ಎಮ್ಮಾರ್ಕೆ ಅವರ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-116 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಗಂಭೀರವಾದ ಸುಮತಿಯ ಆರೋಗ್ಯ ಪರಿಸ್ಥಿತಿ ವೈದ್ಯರು ಮಗಳನ್ನು ಉದ್ದೇಶಿಸಿ….”ಮಗು ನೀನು ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡು ಬಾ”….. ಎನ್ನಲು ಮಗಳು ಸರಿ ಎನ್ನುವಂತೆ ತಲೆಯಾಡಿಸಿ, ವೈದ್ಯರ ಕೊಠಡಿಯಿಂದ ನೇರವಾಗಿ ಪ್ರಯೋಗಾಲಯಕ್ಕೆ ಹೋಗಿ ತಾಯಿಯ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡಳು. ಕೊಠಡಿಗೆ ಬಂದಾಗ ವೈದ್ಯರು ಸುಮತಿಯ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು. ಒಮ್ಮೆ ಪರೀಕ್ಷಿಸಿ ಸಂದೇಹ ಬಂದು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದರು. ಮಗಳು ಕೊಠಡಿಯ ಒಳಗೆ ಬಂದು ವೈದ್ಯರ ಮೇಜಿನ ಮೇಲೆ ವರದಿಯನ್ನು ಇಟ್ಟಳು. ಸುಮತಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದ ವೈದ್ಯರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು….”ಕಳೆದ ಬಾರಿ ನೀವು ಬಂದಾಗ ನಿಮಗೆ ರಕ್ತದ ಒತ್ತಡವು ಇತ್ತೇ ಸುಮತಿ ಅವರೇ?…ಎಂದು ಕೇಳಿದಾಗ, ಮಗಳು ಅಮ್ಮನ ಹಳೆಯ ಚೀಟಿಗಳನ್ನು ವೈದ್ಯರ ಮುಂದೆ ಹಿಡಿದಳು. ಅವುಗಳನ್ನು ತೆಗೆದುಕೊಂಡು ವೈದ್ಯರು ಪರೀಕ್ಷಿಸಿದರು. ಆದರೆ ಆಗ ರಕ್ತದೊತ್ತಡವು ಸರಿಯಾಗಿಯೇ ಇತ್ತು. ಮೇಜಿನ ಮೇಲೆ ಇದ್ದ ವರದಿಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರು. ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಎಂದಿಗಿಂತ ಅತಿಯಾಗಿ ಕಂಡಿತು. ವೈದ್ಯರು ಮತ್ತೊಮ್ಮೆ ಸುಮತಿಯ ಹಳೆಯ ಚೀಟಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಕೆಲವು ನಾಲ್ಕು ತಿಂಗಳ ಹಿಂದಿನ ಹಳೆಯ ಚೀಟಿಗಳಾಗಿದ್ದವು. ಹಾಗಾದರೆ ಸುಮತಿ ಇತ್ತೀಚೆಗೆ ಯಾವುದೇ ಪರಿಶೀಲನೆಗೆ ಒಳಪಟ್ಟಿರಲಿಲ್ಲ ಎನ್ನುವುದು ವೈದ್ಯರಿಗೆ ಮನವರಿಕೆಯಾಯಿತು.  ವಿಷಾದದ ನೋಟ ಸುಮತಿಯೆಡೆಗೆ ಬೀರಿ…. “ಸುಮತಿ ಅವರೇ ನಾಲ್ಕು ತಿಂಗಳಿನಿಂದ ನೀವು ಆಸ್ಪತ್ರೆಗೆ ಬಂದು ಎಂದಿನಂತೆ ಪರಿಶೀಲನೆಯನ್ನು ಮಾಡಿಸಿಕೊಂಡಿಲ್ಲವೇಕೆ?” ಎಂದು ವೈದ್ಯರು ಕೇಳಲು, ಸುಮತಿ ಮೇಜಿನ ಮೇಲೆ ಇದ್ದ ಚೀಟಿಯನ್ನು ನೋಡುತ್ತಾ….”ಏಕೋ ಬರಲು ಸಾಧ್ಯವಾಗಲಿಲ್ಲ ಸರ್…. ಶಾಲೆಗೆ ಹೋಗಿ ಬರುವುವಾಗ ಬಹಳ ಆಯಾಸವಾಗಿರುತ್ತಿತ್ತು…. ತರಕಾರಿಯನ್ನು ವಾರಕ್ಕೊಮ್ಮೆ ಮಗಳು ಪೇಟೆಯಿಂದ ತಂದುಕೊಡುತ್ತಿ‌ದ್ದುದರಿಂದ ನಾನು ಪೇಟೆಯ ಕಡೆಗೆ ಬರಲೇ ಇಲ್ಲ”… ಎಂದಳು. ಅವಳ ಅಸಹಾಯಕ ಪರಿಸ್ಥಿತಿಯನ್ನು ಅರಿತಿದ್ದ ವೈದ್ಯರು ಹೆಚ್ಚಾಗಿ ಏನನ್ನೂ ಹೇಳದೇ…. “ಸುಮತಿಯವರೇ ನೀವು ಕೆಲವು ದಿನಗಳ ಕಾಲ ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ….ನಿಮಗೆ ತುರ್ತು ಚಿಕಿತ್ಸೆಯನ್ನು ನೀಡಬೇಕಾದ ಅಗತ್ಯವಿದೆ”…. ಎಂದು ಹೇಳಿ ಮೇಜಿನ ಮೇಲಿದ್ದ ಬೆಲ್ಲನ್ನು ಒತ್ತಿ ಅಟೆಂಡರ್ ಅನ್ನು ಕರೆದು,….”ಈ ಅಮ್ಮನನ್ನು ಕರೆದುಕೊಂಡು ಹೋಗಿ ವಾರ್ಡಿಗೆ ದಾಖಲು ಮಾಡಪ್ಪ”…. ಎಂದು ಒಂದು ಚೀಟಿಯಲ್ಲಿ ಸುಮತಿಯನ್ನು ದಾಖಲು ಮಾಡುವ ಬಗ್ಗೆ ಬರೆದು ಅಟೆಂಡರ್ ಕೈಲಿ ಕೊಟ್ಟರು. ಮಗಳ ಕಡೆಗೆ ನೋಡುತ್ತಾ… “ಮಗೂ….ಅಮ್ಮನನ್ನು ವಾರ್ಡಿನಲ್ಲಿ ದಾಖಲು ಮಾಡಿ ನನ್ನನ್ನು ಬಂದು ಭೇಟಿ ಮಾಡು…. ಕೆಲವು ಔಷಧಿ ಮಾತ್ರೆಗಳನ್ನು ಬರೆದುಕೊಡುತ್ತೇನೆ…. ಹೊರಗಿನಿಂದ ತರಬೇಕಾಗುತ್ತದೆ”… ಎಂದರು. ಸರಿ ಎನ್ನುವಂತೆ ತಲೆಯಾಡಿಸಿ ಸುಮತಿಯ ಕೈಹಿಡಿದು ಕರೆದುಕೊಂಡು ಅಟೆಂಡರ್ ಹಿಂದೆ ಮಗಳು ನಡೆದಳು.  ಇಬ್ಬರನ್ನೂ ವಾರ್ಡಿಗೆ ಕರೆದುಕೊಂಡು ಹೋದ ಅಟೆಂಡರ್ ವಾರ್ಡನಲ್ಲಿ ಕುಳಿತಿದ್ದ ಡ್ಯೂಟಿ ನರ್ಸ್ಗೆ ವೈದ್ಯರ ಚೀಟಿಯನ್ನು ತೋರಿಸಿ….” ಈ ಯಮ್ಮನನ್ನು ಡಾಕ್ಟರ್ ಇಲ್ಲಿ ಅಡ್ಮಿಟ್ ಮಾಡಲು ಹೇಳಿದ್ದಾರೆ”…. ಎಂದನು.‌ ಚೀಟಿಯನ್ನು ಪರಿಶೀಲಿಸಿದ ನರ್ಸ್, ಅಲ್ಲಿನ ಆಯಮ್ಮನನ್ನು ಕರೆದು…. “ನೋಡು ಇವರಿಗೆ ಇಲ್ಲಿಯೇ ಪಕ್ಕದಲ್ಲಿರುವ ಹಾಸಿಗೆಯನ್ನು ತಯಾರು ಮಾಡು”….ಎಂದು ಹೇಳಿ… “ಸುಮತಿಯವರೇ ಇಲ್ಲಿಯೇ ಇರುವ ಸ್ಟೂಲ್ ಮೇಲೆ ಕುಳಿತುಕೊಳ್ಳಿ…. ಆಯಾ ಹಾಸಿಗೆ ತಯಾರು ಮಾಡಿದ ನಂತರ ಅಲ್ಲಿ ಮಲಗಿಕೊಳ್ಳಿ…. ವೈದ್ಯರ ಸಲಹೆಯಂತೆ ನಿಮಗೆ ಇಂಜೆಕ್ಷನ್ ಕೊಡುವುದಿದೆ”…. ಎಂದು ಹೇಳಿದರು. ಆಯಮ್ಮ ಹಾಸಿಗೆ ರೆಡಿ ಮಾಡಿ ಸುಮತಿಗೆ ಅಲ್ಲಿ ಮಲಗಿಕೊಳ್ಳುವಂತೆ ಹೇಳಿದರು. ಮಗಳು ಸುಮತಿಯನ್ನು ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು…. “ಅಮ್ಮಾ ನೀನು ಮಲಗಿ ವಿಶ್ರಾಂತಿ ತೆಗೆದುಕೋ…. ನಾನು ಡಾಕ್ಟರನ್ನು ಭೇಟಿ ಮಾಡಿ ಅವರು ಬರೆದುಕೊಡುವ ಔಷಧಿಯನ್ನು ಹೊರಗಿನ ಮೆಡಿಕಲ್ ಶಾಪಿಗೆ ಹೋಗಿ ಖರೀದಿಸಿ ತರುತ್ತೇನೆ”…. ಎಂದು ಹೇಳಿ, ನರ್ಸ್ ಬಳಿ ಹೋಗಿ ತನ್ನನ್ನು ಡಾಕ್ಟರ್ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಎಂದು ಹೇಳಿ ಅವರ ಸಮ್ಮತಿ ಪಡೆದು ವಾರ್ಡಿನಿಂದ ಹೊರ ನಡೆದಳು. ವಾರ್ಡ್ ನಿಂದ ಆಚೆ ಬರುವಾಗ ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು…” ಶ್ರೀ ಕೃಷ್ಣಾ ನನ್ನ ತಾಯಿಗೆ ಯಾವುದೇ ತೊಂದರೆ ಆಗದಿರಲಿ…..ನೀನೊಬ್ಬನೇ ನಮಗೆ ದಿಕ್ಕು… ನಮ್ಮನ್ನು ಸದಾ ಕಾಪಾಡುತ್ತಿರುವವನು ನೀನು…. ಆದಷ್ಟು ಬೇಗ ಅಮ್ಮ ಚೇತರಿಸಿಕೊಳ್ಳುವಂತೆ ಮಾಡು”…. ಎಂದು ಬೇಡಿಕೊಂಡಳು. ವೈದ್ಯರ ಕೊಠಡಿಯ ಬಳಿ ಬಂದಾಗ ಇನ್ನೂ ಅನೇಕ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಅಲ್ಲಿಯೇ ನಿಂತಿದ್ದ ಅಟೆಂಡರ್ ನನ್ನು… ನಾನು ಈಗ ವೈದ್ಯರನ್ನು ಭೇಟಿ ಮಾಡಬಹುದೇ?…ಎಂದು ಕೇಳಿದಳು. ….”ಒಳಗೆ ವೈದ್ಯರ ಬಳಿ ಕುಳಿತಿರುವ ರೋಗಿ ಹೊರಬಂದ ನಂತರ ನೀನು ಹೋಗಿ ವೈದ್ಯರನ್ನು ಕಾಣಬಹುದು”… ಎಂದನು. ಸ್ವಲ್ಪ ಹೊತ್ತು ಅಲ್ಲಿಯೇ ಬೆಂಚಿನ ಮೇಲೆ ಕುಳಿತಿದ್ದ ಹುಡುಗಿ ಒಳಗಿನಿಂದ ರೋಗಿಯೊಬ್ಬರು ಹೊರಗೆ ಬಂದ ನಂತರ ವೈದ್ಯರ ಕೊಠಡಿಯನ್ನು ಪ್ರವೇಶಿಸಿದಳು. ಸುಮತಿಯ ಮಗಳನ್ನು ಕಂಡ ವೈದ್ಯರು… “ಬಾರಮ್ಮಾ …ಇಲ್ಲಿ ಕುಳಿತುಕೋ…. ಎಂದು ತಮ್ಮ ಮುಂದೆ ಇದ್ದ ಕುರ್ಚಿಯ ಕಡೆಗೆ ಕೈ ಮಾಡಿದರು…. “ನಿನ್ನ ತಾಯಿಯನ್ನು ವಾರ್ಡಿಗೆ ಅಡ್ಮಿಟ್ ಮಾಡಿ ಆಯಿತೇ?…. ಎಂದು ಕೇಳಿದರು. ಹೌದು ಎನ್ನುವಂತೆ ಹುಡುಗಿ ತಲೆಯಾಡಿಸಿದಳು. ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ….. “ಮಗೂ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲವೇ?…. ಎಂದಾಗ…. “ನಮ್ಮ ಮನೆಯಲ್ಲಿ ನಮ್ಮ ತಾಯಿ ನಾನು ಮತ್ತು ಒಬ್ಬಳು ತಂಗಿ ಮಾತ್ರ ಈಗ ಇರುವುದು…. ನನ್ನ ಅಕ್ಕನಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇದ್ದಾರೆ…. ಕೊನೆಯ ತಂಗಿ ದೂರದ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾನೂ ಕೂಡ ಇಲ್ಲಿ ಒಂದು ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ…. ಅಮ್ಮನ ಜೊತೆ ಮನೆಯಲ್ಲಿ ಇರುವುದು ತಂಗಿ ಮಾತ್ರ”…. ಎಂದಳು. ಅವಳು ಹೇಳಿದ ಮಾತನ್ನು ಕೇಳಿದ ವೈದ್ಯರು ಚಿಂತಾಕ್ರಾಂತರಾದರು. ಆದರೂ ವಿಷಯವನ್ನು ಈ ಹುಡುಗಿಗೆ ತಿಳಿಸಲೇಬೇಕಿತ್ತು. ಹಾಗಾಗಿ…. “ನೋಡು ಮಗೂ ….ಕೆಲವು ಮುಖ್ಯವಾದ ವಿಚಾರವನ್ನು ನಿನಗೆ ತಿಳಿಸುವುದಿತ್ತು…. ಹಾಗಾಗಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲವೇ ಎಂದು ಕೇಳಿದೆ…. ಎಂದರು. 

Read Post »

ಇತರೆ, ಲಹರಿ

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ

ನೆನಪಿನ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಓಯ್ ಪಾರ್ಲೆ ಹುಡುಗಿ” ನಾನು ಇನ್ನೂ ಚಿಕ್ಕವಳಿದ್ದೆ ಒಂದು ದಿನ ಅಂದು ಭಾನುವಾರ. ನಮ್ಮದೇ ಅಂಗಡಿ ಇತ್ತು, ಅಂಗಡಿಗೆ ಹೋಗಿ ಪಾರ್ಲೆ ಬಿಸ್ಕಿಟ್ ತರಬೇಕ ಅಂತ ಹೋದೆ.ಬಹಳ ದೂರ,ಅಷ್ಟು ಸಮೀಪ ಅಲ್ಲದ,ನಡೆದುಕೊಂಡೆ ಹೋಗಬೇಕಿತ್ತು.‌ ಅಂಗಡಿಯಲ್ಲಿ ಅಪ್ಪ ಇದ್ದರೆ, ಎನ್ ಬೇಕೋ ಅದನೆಲ್ಲ ತಿನ್ನಬಹುದಿತ್ತು.. ಆದರೆ ದೊಡ್ಡಪ್ಪ ಇದ್ದಾಗ ಕಿರಿ ಕಿರಿ, ಅದನ್ನ ತಿನ್ನಬ್ಯಾಡ್ರಿ,ಮುಟ್ಟಬ್ಯಾಡ್ರಿ ಅಂತ ಕಣ್ಣಲ್ಲೇ ಬಯ್ಯುವ. ಅಂದು ದಾರಿಯಲ್ಲಿ ಒಬ್ಬ ಹುಡುಗ ಹರಿದ ಬಟ್ಟೆ, ಕೆದರಿದ ಕೂದಲು, ಕೊಳಕು ಕೈ,ಕಾಲುಗಳು. ನನ್ನ ಬೆನ್ನತ್ತಿ ಬಂದಿದ್ದ. ನಾನು ಬಿಸ್ಕಿಟ್ ತಗೊಂಡು ಮನೆಗೆ ಬರತಿದ್ದಾಗ ಅವನು ಹಿಂದಿಂದೆ ಬಂದು ಮನೆಗೆ ಹತ್ತಿರ ಆಗ್ತಿದ್ದಂತೆ ” ಓಯ್ ಪಾರ್ಲೆ ಹುಡುಗಿ, ಓsಯ್ , ಕಿವಿ ಕೇಳಿಸೋದಿಲ್ಲ ನಿನಗ? ಎನ್ನುತಾ ನಮ್ಮ ಮನೆಯ ಕಟ್ಟೆಯ ಮೇಲೆ ಬಂದು ಕುಳಿತ”. ಎಲ್ಲರಿಗೂ ಆಶ್ಚರ್ಯ, ಯಾರ ಇವನು? ಇವನನ್ನ ಯಾಕ ಕರೆದುಕೊಂಡ ಬಂದೆ? ನೂರೆಂಟು ಪ್ರಶ್ನೆಗಳು. ಅವನ್ನ ನಾನು ಕರಕೊಂಡ ಬಂದಿಲ್ಲ, ಅವನೇ ಬಂದಿದ್ದಾನ ಅಂದೆ, ಅವ್ವ, ಯಾರೋ ಕಂದ ನೀನು ? ಎನ್ ಬೇಕು? ನಿಮ್ಮನೆ ಎಲ್ಲಿ? ನಿನ್ಯಾಕಿಲ್ಲಿ ಬಂದಿಯಾ? ಅಂದಾಗ ಅವನ ದೃಷ್ಟಿ ಆ ಬಿಸ್ಕಿಟ್ ಕಡೆಗೆ ಇತ್ತು. ಆವಾಗ ಅನಿಸಿತ್ತು ನನಗೆ ಓಹೋ, ಪಾಪ! ಇವನಿಗೆ ಬಿಸ್ಕಿಟ್ ತಿನ್ನುವ ಆಸೆ ಆಗಿರಬೇಕು. ಬಿಸ್ಕಿಟ್ ಬೇಕಾ? ಅಂತ ಬರಿ ಕೈ ಮುಂದೆ ಮಾಡಿದೆ, ಕಿತ್ತುಕೊಂಡವನೇ ಅಲ್ಲಿಂದ ಓಡಿ ಹೋದ.ಅವ್ವ,ಬಾರೋ ಇಲ್ಲಿ ಊಟ ಮಾಡುವಂತೆ. ಅಂತ ಕೂಗಿದರೂ ತಿರುಗಿ ನೋಡಲಿಲ್ಲ ಅವನು. ಅವ್ವ ಅವನು ಮರೆಯಾಗುವವರೆಗೆ ಬಿಡಳು. ಅಯ್ಯೋ, ಅವ್ವಾ ಅವನು ಹೋದಾ, ನನಗೆ ಹಸಿವಾಗಿದೆ.‌ಮತ್ತೆ ಅಂಗಡಿಗೆ ಹೋಗಿ ಬಿಸ್ಕಿಟ್ ತರಲಾ? ಅಂದೆ. ಬೇಡ ಊಟ ಮಾಡು ಬಾ. ಬಿಸ್ಕಿಟ್ ಬಹಳ ತಿನ್ನಬಾರದು ಅಂತ ಒಳಗೆ ಹೋದಳು. ಇದ್ದದ್ದನ್ನ ಕಸಿದುಕೊಂಡು ಹೋದ, ಇನ್ನೂ ತಿನ್ನೊದೆಲ್ಲಿಂದ. ನನಗೆ ಊಟ ಬೇಡವಾಗಿತ್ತು, ಆ ಹುಡುಗ ಯಾರಿರಬಹುದು? ದಾರಿಯಲ್ಲಿ ತಾನಾಗಿಯೇ ಹಿಂದೆ ಬಂದು ಹೋಗಿಯೆ ಬಿಟ್ಟ್ನಲ್ಲ.! ಅನಾಥನಾ? ಅವನಿಗೆ ಅವ್ವ-ಅಪ್ಪ ಇಲ್ಲವಾ? ಅವನು ಹಾಗೇಕಿದ್ದ. ಉತ್ತರವಿಲ್ಲದ ಪ್ರಶ್ನೆಗಳು.ಆ ದಿನ ,ಆ ಕ್ಷಣ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಕಾರಣ ಆ ಹುಡುಗ ಹುಡುಕಿದರೂ‌ ಸಿಗದವ. ಹಸಿವು ಅನ್ನೋದು ಏನೆಲ್ಲ ಮಾಡಿಸಬಹುದಲ್ಲವೆ.??!! pics:chatgpt ಕಲ್ಪನಾ ಎಸ್ ಪಾಟೀಲ್

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ ಅವರ ಕವಿತೆ “ಹಬ್ಬೆ ಜಲಪಾತ”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಹಬ್ಬೆ ಜಲಪಾತ” ಹಬ್ಬೆ ನಿನ್ನ ನೋಡಿ ದಿಬ್ಬೆರಗಾದೆಎತ್ತರದಿಂದ ದುಮ್ಮುಕ್ಕುವ ನಿನ್ನ ಜಲದಾರೆ|ಹಾಲನೊರೆಯ ಪರದೆಯ ಪರಿಯುಸೊರೆ ಗೊಂಡಿಹುದು ಮನಸಾರೆ|| ಒರಟು ಕಲ್ಲು ಬಂಡೆ ಮೇಲೆ ಸ್ಪುರಿಸುವಮೃದು ಅಮೃತದ ಹಾಲಹೊಳೆ ಸಂತೆ|ಗಡಸು ದೇಹದೋಳಗೆ ಗುಪ್ತವಾಗಿ ಹರಿಯುವಪ್ರೀತಿ, ಪ್ರೇಮ ಕರುಣೆಯ ಕಹಳೆ‌ ಅಂತೆ|| ನಿನ್ನ ಆಳದೊಳಗೆ ನಾನಿಳಿದುನನ್ನ ಅಂತರಾಳದ ನೋವನ್ನು ಮರತೆ|ನಿನ್ನ ಬೋರ್ಗರೆಯುವ ಶಬ್ಧದೊಳಗೆಸಂಸಾರದ ಜಂಜಡದ ಬೆಂಬಿಡದಕರ್ಕಸವನ್ನು ಕ್ಷಣಕಾಲ ತೊರದೆ|| ದೃಡವಾದ ಕಲ್ಲುಬಂಡೆಯನ್ನು ಕೂಡಾಪಾಚಿಗಟ್ಟಿಸಿ ಜಾರಿ ಎಡವಿ ಬಿಳಿಸುವದುಕಲಿಸುವದು ಪಾಠ ಮನದೊಳಗೆ|ರಾಚಿಸುವ ರಾಡಿ ಕೆಡುಸುವದುಬೀಳಿಸುವದು ನಿನ್ನ ಬದುಕಿನ ಏಳಿಗೆ|| ಉನ್ಮಾದದ ಅಲೆಗಳನ್ನು ತಡೆಯಲುಹೆಬ್ಬಂಡೆಗಳನ್ನು ಹೊತ್ತು ನಿಂತಹಿಳು ಧಾತ್ರಿ|ಬಿಳಿ ಸೀರೆ ಉಟ್ಟ ನಿತ್ಯ ನೃತ್ಯವನ್ನುಕಣ್ಣತುಂಬಿಕೊಳ್ಳಲು ಮುತ್ತಿಹುದು ಜನಜಾತ್ರಿ||ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ ಅವರ ಕವಿತೆ “ಹಬ್ಬೆ ಜಲಪಾತ” Read Post »

ಕಾವ್ಯಯಾನ

“ಲೋಕಾತೀತ” ಕವಿತೆ ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್

ಅನುವಾದ ಸಂಗಾತಿ “ಲೋಕಾತೀತ” ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ ಎಲ್ಲಿಗೆ ಹೋಗಿ ಬಂದೆ? ಲೋಕಾತೀತಆಕಾಶದಾಚೆಯ ಅನಂತ ಲೋಕಕ್ಕೆ.ಏನಿವೆ ಅಲ್ಲಿ?ರಕ್ತವರ್ಣದ ನಕ್ಷತ್ರಗಳ ಝಗಮಗಿಸುವ ಹೊಳಪು.ಆ ಹೊಳಪಿನಲಿ ಏನಿವೆ?ಮರೆಯಲಾಗದ ನೆನಪುಗಳ ಅಳಿಯದ ಕಲೆಗಳು.ಯಾರಿರುತ್ತಾರೆ ಅಲ್ಲಿ?ದೈವಕೃಪೆ! ಮನುಷ್ಯರಂತೂ ಖಂಡಿತಾ ಇಲ್ಲ.ಅಲ್ಲಿಗೆ ಹೋಗಿ ಏನು ಮಾಡಿದೆ?ಕಾಲದ ಕಣ್ಣುಮುಚ್ಚಿಸಿ ಟಣಕ್ಕೆ ಹೂಡಿ ಬಂದೆ.ಅದು ಸರಿ, ಈಗೇನು ಮಾಡಬೇಕೆಂದಿರುವೆ?ಮರಣವನ್ನೇ ಕೊಲ್ಲಬೇಕೆಂದಿರುವೆ.

“ಲೋಕಾತೀತ” ಕವಿತೆ ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ Read Post »

ಕಾವ್ಯಯಾನ

ಡಾ.ಮೀನಾಕ್ಷಿ‌ ಪಾಟೀಲ್ ಅವರ ಕವಿತೆ “ಬಳಲುತಿದೆ ಭೂಮಿ”

ಕಾವ್ಯ ಸಂಗಾತಿ ಡಾ.ಮೀನಾಕ್ಷಿ‌ ಪಾಟೀಲ್ “ಬಳಲುತಿದೆ ಭೂಮಿ” ಕಂಗೆಟ್ಟ ಭೂಮಿಗೆತಂಪೆರೆಯಬೇಕಾಗಿದೆಕೋಟಿ ಕೋಟಿ ಜನಬದುಕಬೇಕಾಗಿದೆಭೂಮಿ ಸುಡು ಸುಡು ಕೆಂಡವಾದರೆತಾಯಿಯ ಹಾಲೆ ನಂಜಾದಂತೆಇರುವುದು ಒಂದೇ ಭೂಮಿಬೇರಿಲ್ಲ ಕಾಣಿರೋ ಸತ್ಯವಚಂದ್ರನ ಮೇಲೆ ಇಳಿದಾಯಿತು.ಬರಿ ಬರಡೋ ಬರಡುಮಂಗಳ ಗುರು ಶನಿಗಳನ್ನೆಲ್ಲ ಸುತ್ತಿ ಆಯಿತುಎಲ್ಲೆಲ್ಲೂ ಜೀವದ ಸುಳಿವಿಲ್ಲಯಂತ್ರದೂತರುಸಕಲ ಗ್ರಹಗಳ ಸಂದೇಶವಿತ್ತರುಭೂಮಿಯಂತಹ ಸ್ವರ್ಗ ಮತ್ತೊಂದಿಲ್ಲಜೀವರಾಶಿ ತುಂಬಿ ತುಳುಕುವಧರೆಯನ್ನೀಗ ಕಾಪಿಟ್ಟುಕೊಳ್ಳಬೇಕುಜೀವದ ಉಸಿರಿಗೆಜೀವ ಜಲ ಸಿಂಚನವಾಗಬೇಕುಓ ಮನುಜ ಅತಿರೇಕದ ಬುದ್ಧಿ ಬೇಡಅತಿ ಆಧುನಿಕತೆಯ ಬೆನ್ನ ಹಿಂದೆ ಓಡಬೇಡಎಲ್ಲಿಯಾದರೂ ಯಾವಾಗಲಾದರೂಎಡವಿ ಬಿದ್ದೆನೆಂಬ ಎಚ್ಚರವಿರಲಿಕಾಡು ಬೆಳೆಸಬೇಕಿದೆಶಕ್ತಿಮೂಲಗಳ ದುರ್ಬಳಕೆ ನಿಲ್ಲಿಸಬೇಕಿದೆಭೂಮಿಗೆ ಭಾರವಾಗುವ ಪದಾರ್ಥಗಳನ್ನ ತ್ಯಜಿಸಬೇಕಿದೆ ವಿಜ್ಞಾನ ತಂತ್ರಜ್ಞಾನದ ಹೆಸರಿನಲ್ಲಿಭಯಾನಕ ಭವಿಷ್ಯವನ್ನುಕಟ್ಟ ಹೊರಟಿದ್ದೇವೆತಂತ್ರಜ್ಞಾನ ಮಂಡಿಯೂರಿದೆಅಣುಯುದ್ಧ ಬರಗಾಲ ದುಃಖ ದಾರಿದ್ರ್ಯಜನರ ಕಣ್ಣಲ್ಲಿ ಕಣ್ಣೀರಲ್ಲ ನೆತ್ತರುಜೀವಸಮತೋಲನವಿರಲಿಪ್ರಗತಿ ಇರಲಿಮಾರಕವಾಗದಂತಿರಲಿಮಾರ್ಗ ಬದಲಿಸೋಣವಿಚಾರಗಳು ಬದಲಾದಂತೆಜಗದ ಜೀವ ಸಂಕುಲಉಳಿಯಬೇಕುಭೂಮಿ ತಾಯಿಯ ಒಡಲುತಣ್ಣಗಾಗಬೇಕು ಡಾ.ಮೀನಾಕ್ಷಿ ಪಾಟೀಲ್

ಡಾ.ಮೀನಾಕ್ಷಿ‌ ಪಾಟೀಲ್ ಅವರ ಕವಿತೆ “ಬಳಲುತಿದೆ ಭೂಮಿ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಸವಿತಾ ದೇಶಮುಖ ಭಾರತಕ್ಕೆ ಸ್ವಾತಂತ್ರವೇನೋ ದೊರೆತಿತ್ತು ನಿಜ ಆದರೆಅನೇಕ ಸ್ಥಿತ್ಯಂತರಗಳು ಹಾಗೂ ಸಮಸ್ಯಗಳ ಕುರಿತು ಪರಿಹಾರ ಹುಡುಕಬೇಕಾಗಿತ್ತು.ಇಂತಹ ಕಾಲದಲ್ಲಿ ಜನತೆಗಾಗಿ ದೇಶದ ಅಭಿವೃದ್ಧಿಗೆ ಪೂರಕವಾಗ ಬೇಕೆಂತಹ ಕಾರ್ಯಗಳನ್ನು ಹಮ್ಮಿಕೊಳ್ಳ ಬೇಕಾಗಿದನ್ನು ಅರಿತುಕೊಂಡಿದ್ದರು ಜಯದೇವಿ ತಾಯಿಯವರು ಹಾಗೂ ಅವರ ಸಂಘಟನಾ ಸದಸ್ಯರು. ೧೯೪೭ ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ದೇಶದ ಮುಂದೆ ದೊಡ್ಡ ಸವಾಲಾಗಿ ನಿಂತದ್ದು ಸಂಸ್ಥಾನಗಳ ವಿಲೀನಿಕರಣ …… ಸುಮಾರ ೫೬೫ ಕ್ಕೂ ಹೆಚ್ಚು ಸಂಸ್ಥಾನಗಳು ಇದ್ದವು ಮತ್ತು ಅವುಗಳಿಗೆ ಸ್ವತಂತ್ರವಾಗಿರುವದೇ ಅಥವಾ ಭಾರತ ಇಲ್ಲವೇ ಪಾಕಿಸ್ತಾನಕ್ಕೆ ಸೇರೋದು ಎಂಬ ಆಯ್ಕೆ ನೀಡಲಾಗಿತ್ತು…..ಇದರಿಂದ ಅನೇಕ ಸಮಸ್ಯೆಗಳು ಉಂಟಾದವು. ಸ್ವಾತಂತ್ರ್ಯದ ಆಸೆ ಯಿಂದಾಗಿ ಕೆಲವು ರಾಜರು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೂ ಸೇರುವುದನ್ನು ಬಯಸದೇ, ಸ್ವತಂತ್ರ ರಾಷ್ಟ್ರವಾಗಿರಲು ಯತ್ನಿಸಿತ್ತು ಅದುವೇ* ಹೈದರಾಬಾದ ಸಂಸ್ಥಾನ*…..ಇದರಿಂದ ದೇಶ ತುಂಡಾಗಿ ಹೋಗುವ ಭೀತಿ  ಉಂಟಾಯಿತು.ಧರ್ಮ ಮತ್ತು ಭೌಗೋಳಿಕವಾಗಿ ಕೆಲವು ಸಂಸ್ಥಾನಗಳಲ್ಲಿ ಜನಸಂಖ್ಯೆ ಮತ್ತು ರಾಜರ ಧರ್ಮ ಭಿನ್ನವಾಗಿತ್ತು.*ಜುನಾಗಢದ*ಲಿ….ಹಿಂದೂ ಜನರು…ಮುಸ್ಲಿಂ ನವಾಬ ಇದ್ದನು..ಅದೇ‌ ರೀತಿ ಕಾಶ್ಮೀರದಲ್ಲಿಮುಸ್ಲಿಂ ಜನರು…ಹಿಂದೂ ರಾಜನಿದ್ದ….ಇದರಿಂದ ಗೊಂದಲ, ಹೋರಾಟಗಳು ನಡೆದವು. ಇಲ್ಲಿ ಮೈಸೂರು ಸಂಸ್ಥಾನ ಒಂದು ಪ್ರಮುಖ ಸಂಸ್ಥಾನವಾಗಿತ್ತು….ಮೈಸೂರು ಅರಸರು ಭಾರತ ಸೇರುವುದನ್ನು ವಿರೋಧಿಸಿದಾಗ ಜನರು ದಂಗೆ ಎದ್ದಾಗ ಅಲ್ಲಿ ಗೋಲಿಬಾರ್ ಆಗಿ ಕೆಲ ಜನರು ಅನಾಹುತಕ್ಕೆ ಇಡಾದರು…. ಇದನ್ನು ಖಂಡಿಸಿ *ಜಯದೇವಿ ತಾಯಿಯವರು* ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟ ಧೀರ ಮಹಿಳೆ.ಅದರಂತೆ ಮುಂದೆ ಮಹಾರಾಜ ಜಯಚಾಮರಾಜೇಂದ್ರ ವಡಿಯರ.  ೯ ಆಗಸ್ಟ್೧೯೪೭ ರಂದು ಭಾರತಕ್ಕೆ ಸೇರುವ ಒಪ್ಪಂದಕ್ಕೆ ಸಹಿ ಹಾಕಿದರು.ಮುಂದೆ ಮೈಸೂರು ಶಾಂತಿಯುತವಾಗಿ ಭಾರತಕ್ಕೆ ಸೇರಿತು‌. ಇಲ್ಲಿ ಸಮಸ್ಯೆ ಉದ್ಭವಿಸಿದ್ದು ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ……!!! ಹೈದರಾಬಾದ್ ಸಂಸ್ಥಾನವು ಭಾರತದ ಅತಿ ದೊಡ್ಡ ಮತ್ತು ಶ್ರೀಮಂತ ಸಂಸ್ಥಾನವಾಗಿತ್ತು.ಜನಸಂಖ್ಯೆಯಲ್ಲಿ ಬಹುಪಾಲು ಹಿಂದೂಗಳು, ಆದರೆ ಆಡಳಿತ ಮುಸ್ಲಿಂ ನಿಜಾಮನ ಕೈಯಲ್ಲಿ ಇತ್ತು.ನಿಜಾಮ್ ತನ್ನ ರಾಜ್ಯವನ್ನು “ಸ್ವತಂತ್ರ ದೇಶ”ವಾಗಿ ಉಳಿಸಿಕೊಳ್ಳಲು ಬಯಸಿದ “ಮಿರ್ ಒಸ್ಮಾನ್ ಅಲಿ ಖಾನನು ಭಾರತಕ್ಕೂ ಸೇರುವುದಿಲ್ಲ,ಪಾಕಿಸ್ತಾನಕ್ಕೂ ಸೇರುವುದಿಲ್ಲವೆಂದು…..“ಸ್ವತಂತ್ರ ಹೈದರಾಬಾದ್ ರಾಷ್ಟ್ರ” ನಿರ್ಮಿಸಲು ಬಯಸಿದ ಅವರು ಭಾರತ ಸರ್ಕಾರದ ಜೊತೆ  “ಸ್ಟ್ಯಾಂಡ್ ಸ್ಟಿಲ್” ಒಪಂದ ಮಾಡಿಕೊಂಡು ಸಮಯ ಕಳೆಯಲು ಪ್ರಯತ್ನಿಸಿದ. ನಿಜಾಮನ ಆಡಳಿತದಲ್ಲಿ, ವಿಶೇಷವಾಗಿ ರಜಾಕಾರ್ ದಳದ ಕಾರಣದಿಂದ ಜನರು ತುಂಬಾ ಸಂಕಷ್ಟ ಅನುಭವಿಸಿದರು.ಕಾಸಿಂ ರಿಜ್ವಿ ನೇತೃತ್ವದಲ್ಲಿ ರಜಾಕಾರ ಸಂಘಟನೆಗ್ರಾಮಗಳಲ್ಲಿ ದಾಳಿ, ಹಿಂಸೆ, ಲೂಟಿ ಮಹಿಳೆಯರ ಮೇಲೆ ಅತ್ಯಾಚಾರಗಳಂಥ ದುಷ್ಕೃತ್ತಿಗಳು ನಡೆದವು..ಇದರಿಂದ ಸಾವಿರಾರು ಜನರು ಮನೆಬಿಟ್ಟು ಓಡಿನಿರಾಶ್ರಿತರ ಆಗಿ ಬೇರೆ ಪ್ರದೇಶಗಳಿಗೆ ಹೋದರುರೈತರು ಮತ್ತು ಸಾಮಾನ್ಯ ಜನರ ಸ್ಥಿತಿ ಹೇಳತೀರದಾಗಿತ್ತು….. ಜಮೀನ್ದಾರರು ದೌರ್ಜನ್ಯಕೆ ಒಳಪಟ್ಟು ಭಾರೀ ತೆರಿಗೆ ಕಟ್ಟಬೇಕಾಗಿ ಬಂತು…ಬಡ ರೈತರು ಹಿಂಸೆಗೆ ಒಳಗಾದರು…..ಇದಕ್ಕೆ ಪ್ರತಿಯಾಗಿಹೈದರಾಬಾದ್ ಜನರು ಸ್ವಾತಂತ್ರ್ಯ ಬಂದರೂ ಕೂಡಸ್ವಾತಂತ್ರ್ಯದ ಸುವಾಸನೆ ಅನುಭವಿಸಲಿಲ್ಲ… ನಿಜಾಮನ ಸ್ವತಂತ್ರವಾಗಿ ರಾಜ್ಯ ಕಟ್ಟುವ ಆಸೆ ಜನರಿಗೆ ಸಂಕಷ್ಟವಾಯಿತು…ಹೈದರಾಬಾದ್ ಸಂಸ್ಥಾನದಲ್ಲಿ ಮಿರ್ ಒಸ್ಮಾನ್ ಅಲಿ ಖಾನ್ ಅವರ ಆಡಳಿತದ ಕೊನೆಯ ದಿನಗಳಲ್ಲಿ, ವಿಶೇಷವಾಗಿ ರಜಾಕಾರ್ ಹಿಂಸಾಚಾರದ ಸಮಯದಲ್ಲಿ, ಸಾವಿರಾರು ಜನರು ನಿರಾಶ್ರಿತರಾಗಿ ಭಾರೀ ಸಂಕಷ್ಟ ಅನುಭವಿಸಿದರು. ರಜಾಕಾರ್ ದಾಳಿಗಳು ಹಠಾತಆಗಿ ನಡೆಯುತ್ತಿತ್ತುಗ್ರಾಮಗಳಲ್ಲಿ ಹತ್ಯೆ, ಬೆಂಕಿ ಹಚ್ಚುವುದು, ದೋಚಾಟ ಸಾಮಾನ್ಯವಾಗಿತ್ತು ಜನರು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಯಿತು….ಮನೆಗಳನ್ನು ಸುಟ್ಟುಹಾಕುವುದು ಧಾನ್ಯ, ಪಶು, ಆಸ್ತಿ ದೋಚಿಕೊಳ್ಳುವಂಥ ದುಷ್ಕೃತ್ಯಗಳು ನಡೆದವು. ಒಂದೇ ರಾತ್ರಿಯಲ್ಲಿ ಜನರು ಎಲ್ಲವನ್ನೂ ಕಳೆದುಕೊಂಡರು.  ಮಹಿಳೆಯರ ಮೇಲಿನ ಹಿಂಸೆ ಅತ್ಯಾಚಾರ, ಅವಮಾನಕಾರಿ ವರ್ತನೆಯಿಂದಾಗಿ ಕುಟುಂಬಗಳು ಭೀತಿಯಿಂದ ಊರು ಬಿಟ್ಟು ಹೋಗುವ ಪರಿಸ್ಥಿತಿ  ಬಂದಿತು,ಆಹಾರ ಮತ್ತು ಆಶ್ರಯದ ಕೊರತೆಯಿಂದಾಗಿ ಓಡಿಹೋಗುವಾಗ ಆಹಾರ ಇಲ್ಲದೆ ನರಳಿದರು ….ಚಿಕ್ಕ ಮಕ್ಕಳೊಂದಿಗೆ ಕಾಡು, ಹೊಲಗಳಲ್ಲಿ ಅಲೆದಾಡಲಾರಂಭಿಸಿದರು.ಹಸಿವು, ದಾಹ, ರೋಗಗಳಿಂದ ನರಳಿದರು. ಓಡಾಟದಲ್ಲಿ ಕುಟುಂಬದವರು ಬೇರೆಯಾದರು ಮಕ್ಕಳು, ಮಹಿಳೆಯರು ಕಳೆದುಹೋಗುವ ಘಟನೆಗಳು ನಡೆದವು…. ಹೀಗಾಗಿಹೈದರಾಬಾದ್ ಸಂಸ್ಥಾನದ ಜನರು ಹತ್ತಿರದ *ಮೈಸೂರು ಪ್ರದೇಶ *…ಇಂದಿನ ಕರ್ನಾಟಕಕ್ಕೆ ಸುರಕ್ಷಿತ ಪ್ರದೇಶಗಳಿಗೆ ಕುಟುಂಬ ವನ್ನು ರವಾನಿಸಿದರು.ಬಳ್ಳಾರಿ,ರಾಯಚೂರು ಪ್ರದೇಶಗಳಿಗೆ ಹಲವರು ಹೋದರು……ಇಲ್ಲಿ ಜನರು ತಾತ್ಕಾಲಿಕ ಆಶ್ರಯ ಪಡೆದರು. ಇನ್ನು ಹಲವರು* ಬಾಂಬೆ ಪ್ರೆಸಿಡೆನ್ಸಿ* ಭಾಗಗಳು  ಅಂದರೆ ಇಂದಿನ ಮಹಾರಾಷ್ಟ್ರ. ಸೋಲಾಪುರ,ಪೂಣೆಗಡಿ ಪ್ರದೇಶಗಳಿಗೆ ಹೆಚ್ಚಿನ ಜನರು ಹರಿದು ಬಂದರು. ಇನ್ನು ಹಲವರು *ಮದ್ರಾಸ್ ಪ್ರೆಸಿಡೆನ್ಸಿ *ಭಾಗಗಳು ಇಂದಿನ ಆಂಧ್ರಪ್ರದೇಶ ಮತ್ತು ತಮಿಳುನಾಡು, ಕುರ್ನೂಲ್,ಗುಂಟೂರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡರು…. ಎಲ್ಲ ಪ್ರದೇಶಗಳಲ್ಲಿ ಅಲ್ಲಲ್ಲಿ ನಿರಾಶ್ರಿತ್ರಿಗೆ ಶಿಬಿರಗಳಲ್ಲಿ ತಂಗಿದರು.ಸರ್ಕಾರ ಮತ್ತು ಸಮಾಜದಿಂದ ಸ್ವಲ್ಪ ಸಹಾಯ ದೊರೆತರೂ ಅನಿಶ್ಚಿತ ಭವಿಷ್ಯ “ನಮ್ಮ ಊರು ಯಾವಾಗ ಮರಳಿ ಸಿಗುತ್ತೆ?” ಎಂಬ ನೋವು ಹೊತ್ತು ಬಾಳುತ್ತಿದ್ದರು. *ಈ ಸಮಯದಲ್ಲಿ ಸಾವಿರಾರು ಜನರು ಸೊಲ್ಲಾಪುರದತ ಧಾವಿಸಿದರು ರಜಾಕಾರರ ರಕ್ಕಸಿಯ ದವಡೆಗೆ ಸಿಲುಕಿದ ನಿರಾಶ್ರಿತರಿಗೆ ಅನ್ನ ಅರಿವೆ ಆಶ್ರಯವನ್ನು ಜಯದೇವಿ ತಾಯಿಯವರು ಕೊಟ್ಟ‌ ಸಲುಹಿದರು* ಮನೆಮಾರ ತೊರೆದಾರ, ಕನವರೆಸಿ ಬಂದಾರಅನ್ನ ನೀರಿಗೆ ದಿಕ್ಕಿಲ್ಲ ,ನನ್ನ ಜನಸೊನ್ನಲಿಗಿ ದಾರೀ ಹಿಡಿದಾರ !! ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿಗೆ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು.  ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ಬಡವರು ದಲಿತರ ಬದುಕನ್ನು ತಮ್ಮ ಹಿತಾಸಕ್ತಿಗಾಗಿ ನಾಶ ಮಾಡುತ್ತಿದ್ದಂತೆ ಜಮೀನ್ದಾರಿ ವರ್ಗಕ್ಕೆ ವೆತರಿಕ್ತವಾಗಿ ಜನಪರ ಕೆಲಸವನ್ನು ಮಾಡುತ್ತಾ ಬಂದರು.  ಶಾಲಾ ವಿದ್ಯಾರ್ಥಿಗಳಿಗೆ ಕುಂಟೋಜಿ ಮಠದಲ್ಲಿ ಇವರಿಗೆ ವ್ಯವಸ್ಥೆ ಮಾಡಲಾಯಿತು. ನಿರಾಶ್ರಿತರಿಗೆ  ಬೇಕಾದ ಸಾಮಾನುಗಳು ದವಸ ಧಾನ್ಯ ಪಟ್ಟಿಯನ್ನು ಮಾಡಿ ಉದ್ಯಮಿ ಪತಿಗಳು ನಿಗದಿತ ಸ್ಥಳಕ್ಕೆ ತಂದು ತಲುಪಿಸುವಂಥ ಯೋಜನೆಗಳನ್ನು ಹಾಕಿದರು. ಇಂಥ ಕೆಲಸಗಳಲ್ಲಿಜಯದೇವಿ ತಾಯಿಯವರ ಜೊತೆಗೂಡಿದವರು  ಶ್ರೀಮತಿ ಘಾಟಿಗೆ ಸುಮಿತ್ರಾಬಾಯಿ ,ವಾರದ ಬಾಬಾ ಸಾಹೇಬ ,ನಾಗಪ್ಪ ಕಾಡದಿ, ಚಾಕುತಿ ಈರಮ್ಮ, ಸಂಗವ್ವ ಮಡಿಕೆ ಮೊದಲಾದ ಪ್ರಮುಖರು ಸಭೆಯೊಂದು ಸೇರಿ ಸೌಲಭ್ಯ ಒದಗಿಸುವ ನಿರ್ಣಯವನ್ನು ತೆಗೆದುಕೊಂಡರು .ಬೀದರ್ ರೈಚೂರ್ ಕಲ್ಬುರ್ಗಿಯಿಂದ ವಲಸಿ ಬಂದ ಮಕ್ಕಳಿಗೆ ಕಾಡದೇ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು . ಜಯದೇವಿ ತಾಯಿಯವರು ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು …ಅವರಿಗಾಗಿ ೫ ಲಕ್ಷ ೮೦೧೪ ರೂಪಾಯಿಗಳನ್ನು ಸಂಗ್ರಹಿಸಿದರು . ಸಾವಿರಾರು  ಸೀರೆಗಳು ಮತ್ತು ಅಷ್ಟೇ ಬೆಲೆ ಬಾಳುವ ರಘ ಪಡೆದರು. ಸರಿಯಾಗಿ ಹಂಚಿ ಅವುಗಳನ್ನು ವಿತರಿಸಿದರು ವುಲನ್ ತಂದು ಶಾಲಾ ಶಿಕ್ಷಕಿಯರಿಂದ ಸ್ವೀಟರ್ ಗಳನ್ನು ಹೆಣಿ‌ಸಿ ನಿರಾಶೆತ್ರಿಗೆ ಕೊಡುತ್ತಿದ್ದರು. ಇನ್ನುಳಿದ ಮಕ್ಕಳಿಗೆ ಅನುಕೂಲವಾಗುವಂತೆ ಮಾಧ್ಯಮಿಕ ಶಾಲೆಯನ್ನು ಕೂಡ ಪ್ರಾರಂಭಿಸಿದರುತಾಯಿಯವರು ಹೇಳ್ತಾರೆ. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ಸವಿತಾ ದೇಶಮುಖ

Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ” ಹಸಿರ ಉಸಿರ ಹೊತ್ತ  ಭೂದೇವಿ ನೀನು,ನಮ್ಮ ಬಾಳ ಹಾದಿಗೆ ದಿವ್ಯ ಬೆಳಕು ನೀನು.ಕೋಟಿ ಜೀವ ರಾಶಿಗೆ ಆಸರೆಯ ಮಡಿಲು,ನಿನ್ನ ಪ್ರೀತಿಗೆ ಸಾಟಿಯಿಲ್ಲ, ಕರುಣೆ  ಕಡಲು. ಬೆಟ್ಟ ಸಾಲುಗಳು ನಿನ್ನ  ಮುಡಿಗೆ ಹೂವು,ಹರಿಯುವ ನದಿಗಳು ನಿನ್ನ ಜೀವ ಸೆಲೆಯು.ಗಾಳಿ, ಮಣ್ಣು, ನೀರು ಮರ ನಿನ್ನ ಕೊಡುಗೆ,ಮರೆತ ಮಾನವನ ಎಂತ ಉಡುಗೆ ತೊಡುಗೆ   ನಮ್ಮ ಭೂಮಿ ನಾವು ಉಳಿಸ ಬೇಕು,ಕಲುಷಿತವ ತೆಗೆದು ಹಸಿರ ಬೆಳೆಸ ಬೇಕು.ಮರಗಿಡಗಳ ನಟ್ಟು ತಂಪ ಹರಡ ಬೇಕು,ಭೂ ಮಾತೆಯ ಋಣ ತೀರಿಸಬೇಕು. ಭೂಮಿ ದಿನ  ಅಲ್ಲ ಬರಿ ಆಚರಣೆ,ಧರೆಯ ಉಳಿಸುವ ಸಂಕಲ್ಪ  ರಕ್ಷಣೆ.ಇರುವುದೊಂದೇ  ಭೂಮಿ,  ಉಳಿಸ ಬನ್ನಿ,ಭವ್ಯ ಭವಿಷ್ಯಕೆ  ಹೆಜ್ಜೆ ಹಾಕ ಬನ್ನಿ. ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ” Read Post »

ಕಾವ್ಯಯಾನ, ಗಝಲ್

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯಸಂಗಾತಿ ಡಾ. ರೇಣುಕಾತಾಯಿ. ಸಂತಬಾ ಗಜಲ್ ನುಡಿಗೆ ಬೆರಗು ಮೂಡಿಸಿ ವಚನ ಬರೆದನು ನಮ್ಮ ಬಸವಣ್ಣದಯವಿಲ್ಲದ ಧರ್ಮವೆ ಇಲ್ಲವೆಂದು ಸಾರಿದನು ನಮ್ಮ ಬಸವಣ್ಣ.ll ಆಚಾರ ಸ್ವರ್ಗ ಅನಾಚಾರವೇ ನರಕವೆಂದ ನಮ್ಮ ಭಕ್ತಿ ಭಂಡಾರಿ,ಜಾತಿ ಮತ ಸರಿಸಿ ಸಮಾನತೆ ಬಿತ್ತಿದವನು ನಮ್ಮ ಬಸವಣ್ಣ.ll ಕಳಬೇಡ ಕೊಲ್ಲಬೇಡ ಹುಸಿ ನುಡಿಬೇಡವೆಂಬ ಮೌಲ್ಯ ಹೇಳಿಕೊಟ್ಟಮಾತಿನಲ್ಲಿಯೇ ಮುತ್ತುರತ್ನ ಜೋಡಿಸಿ ಇಟ್ಟವನು ನಮ್ಮ ಬಸವಣ್ಣ ll ಮೌಢ್ಯತೆಯ ದೊಡ್ಡ ಗೋಡೆ ದಾಟಿಸಿ ಹೊಸ ಬಾಗಿಲನು ತೆರೆದುಬಿಟ್ಟ,ಎಲ್ಲರನು ಇವ ನಮ್ಮವನೆಂದು ಹೇಳಿದವನು ನಮ್ಮ ಬಸವಣ್ಣ ll ತಾಯಿ ಅಕ್ಕಮ್ಮ ನೀಲಮ್ಮ ಶರಣೆಯರೆಲ್ಲರ ವಚನ ಗೌರವಿಸಿದ.ಶ್ರಮದಲಿ ಶಿವ ಕೈಲಾಸ ತೋರಿದ ಶರಣನು ನಮ್ಮ ಬಸವಣ್ಣ l ಡಾ. ರೇಣುಕಾತಾಯಿ. ಸಂತಬಾ. “ರೇಮಾಸಂತ”

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಇತರೆ

“ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನಕ್ಕೆ ವಿಶೇಷಲೇಖನ,ಡಾ. ಭಾರತಿ ಮೂಲಿಮನಿ

ವ್ಯಕ್ತಿ ಸಂಗಾತಿ ಡಾ. ಭಾರತಿ ಮೂಲಿಮನಿ “ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನ ಮನುಷ್ಯನು ಅಜ್ಞಾನದಿಂದ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ, ಆ ಮೂಲಕ ಅದನ್ನು ತಿದ್ದುವ ಕೆಲಸವನ್ನು ಹಾಸ್ಯ ಸಾಹಿತ್ಯ ಮಾಡುತ್ತದೆ. ಹಾಸ್ಯದ ತೀವ್ರತೆ ಹೆಚ್ಚಾದಂತೆ ಅದರ ವಿಡಂಬನೆಯ ತೀವ್ರತೆಯು ಹೆಚ್ಚಾಗುತ್ತ ಹೋಗುತ್ತದೆ. ವಿಡಂಬನೆಯ ಮೊನಚು ಹೆಚ್ಚುವುದು ಅಸಹನೀಯವಾದ ಕೃತ್ಯಗಳು ನಡೆದಾಗ. “ಒಂದು ವಿಷಯವನ್ನು ಒಬ್ಬ ವ್ಯಕ್ತಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಹೇಳುವ, ಆ ಮೂಲಕ  ಅಜ್ಞಾನದಿಂದ ನಡೆಯುವ ತಪ್ಪನ್ನು ತಿದ್ದುವ, ತಡೆಯುವ ಪರಿಣಾಮಕಾರಿ ಸಾಧನ ವಿಡಂಬನೆ” ಹಿಂದೆ ಜಾನಪದರು ಹಬ್ಬದ ದಿನಗಳಲ್ಲಿ ತಮ್ಮ ಬಂಧುಗಳೊಂದಿಗೆ ಸಂತೋಷದಿಂದ ಕಾಲ ಕಳೆಯಲು ಒಬ್ಬರನ್ನೊಬ್ಬರು ಹಾಸ್ಯ, ಮೊನಚಾದ  ವಿಡಂಬನೆಯಿಂದ ನಿಂದಿಸಿಕೊಳ್ಳುತ್ತಿದ್ದರು. ಹೀಗೆ ಬೇರೆಯವರನ್ನು  ವಿಡಂಬನೆ ಮಾಡಿದರೆ ಅದು ಅತಿರೇಕದ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು.. ಆದರೆ ಮೊನಚಾದ ಹಾಸ್ಯದ ಮೂಲಕ ವಿಡಂನೆಯ ಗಾಂಭೀರ್ಯವನ್ನು ತಮ್ಮ ಮಾನಸ ಪುತ್ರ ತಿಂಮನ ಕೈಗೆ ಲೇಖನಿ ಕೊಟ್ಟವರು ಬೀಚಿ.ತಿಂಮ ಒಮ್ಮೊಮ್ಮೆ ಗುರುವು ಮೀರಿಸಿದ್ದು ಉಂಟೆಂದು ಅವರೇ ಹೇಳುತ್ತಾರೆಬೀಚಿಯವರು ಒಂದೂ ಶಬ್ಧವನ್ನೂ ನಿರರ್ಥಕವಾಗಿ ಬಳಸಿಕೊಂಡಿಲ್ಲ. ಯಾವದನ್ನೂ ಸುಮ್ಮನ್ನೇ ಎಳೆದು ತರುವುದಿಲ್ಲ. ಎನ್ನುವ ವಿಮರ್ಶಕರ ಮಾತಿನಲ್ಲಿ ಸತ್ಯವಿದೆ. ೬೩ಕೃತಿಗಳಲ್ಲಿ ಯಾವುದನ್ನು ಕೈಗೆತ್ತಿಕೊಂಡರೆ ಆ ಕಾಲದ,ಈ ಹೊತ್ತಿಗೂ ಹಸಿ ಹಸಿಯಾದ ಸಮಸ್ಯೆಗಳನ್ನು ಅದಕ್ಕೆ ಸುಡು ಸುಡು ಉದಾಹರಣೆ ಸಮೇತ ಓದುಗರ ಮುಂದೆ ತೆರೆದಿಡುವ,  ಆ ಮೂಲಕ  ಸಮಾಜದ ಶ್ರೇಣಿಯಲ್ಲಿ ಮೇಲಿಂದ ತುತ್ತ ತುದಿಯಲ್ಲಿ ಬದುಕುವ ಪ್ರತಿಯೊಬ್ಬರಿಗೂ ಅನ್ವಯಿಸುವ ತಾತ್ವಿಕತೆಯನ್ನು ಹೊತ್ತ ಮಹತ್ವದ ಹೊತ್ತಿಗೆಗಳೇ ಆಗಿವೆ. ಮುಂದೆ ಅಧ್ಯಯನ ಮಾಡಿದ ಕೃತಿಗಳಲ್ಲಿನ ಅವರ ತಾತ್ವಿಕತೆಯ ತುಣುಕುಗಳನ್ನು ಕಾಣಿಸಿದ್ದೇನೆ. ಇದು ನಾನು ಸಂಶಿಧನಾ ವಿದ್ಯಾರ್ಥಿಯಾಗಿ ಅವರನ್ನು ಕಂಡ ಬಗೆ . ಆ ಮೂಲಕ ಬೀಚಿ ಗುರುವಿಗೆ ನನ್ನ ನುಡಿ ನಮನ ಧರ್ಮ ಎನ್ನುವುದು ಬದುಕುವ ರೀತಿ. ಅದು ನೈತಿಕ ತಳಹದಿಯ ಮೇಲೆ ರಚನೆಯಾಗಿರಬೇಕಾದ ಅಗತ್ಯವಾಗಿದೆ. ನೈತಿಕತೆ ಎನ್ನುವುದು ಆಯಾ ಕಾಲ ಸಮಾಜ ನಂಬಿರುವ ಮತ್ತು ಒಪ್ಪಿರುವ ನಿಯಮಗಳೇ ಆಗಿವೆ, ಧರ್ಮ ಎನ್ನುವುದು ಬಲ ಹೀನನನ್ನು ಬಲಿಷ್ಟನು ಕಾಪಾಡುವುದೇ ಆಗಿದೆ. ಅದು ಎಲ್ಲಾ ಪ್ರಾಣಿ ಸಮೂಹಕ್ಕೂ ಅನ್ವಹಿಸುತ್ತದೆ. ಮನುಷ್ಯ ಮನುಷ್ಯನನ್ನು ನಂಬಿ ಆಶ್ರಯಕ್ಕೆ ಬಂದರೆ ನಂಬಿಕೆಗೆ ದ್ರೋಹ ಎಸಗುವುದು ಧರ್ಮ ಎನಿಸಲಾರದು. ಆಶ್ರಯ ಅದಕಿಲ್ಲ ಬಂಧುಗಳು ಯಾರಿಲ್ಲ!ಆಸೆ ಬದುಕಲು ಅದಕೆ ಪಾಪ ಪಾಪ!!ಆಶ್ರಮಕೆ ಬಂದಳು ಸ್ವಾಮಿ ಪಾದವ ನಂಬಿ!ಪ್ರಸವ ವೇದನೆ ಮಾತ್ರ ತಪ್ಪಲಿಲ್ಲವೋ ತಿಂಮ!! ಬೀಚಿಯವರು ಹೇಳುವುದು ಅದನ್ನೇ ಇಲ್ಲಿ ಎಲ್ಲವನ್ನು, ಎಲ್ಲರನ್ನು ಕಳೆದುಕೊಂಡು ಏಕಾಂಗಿಯಾಗಿರುವ ಹೆಣ್ಣು ಆಶ್ರಯ ಬೇಡಿ ಬಂದರೆ ಆಕೆಯ ಶೀಲವನ್ನೇ ದೋಚುವುದು, ಅದು ಒಂದು ಆಶ್ರಮದ ಸ್ವಾಮಿಯಿಂದ ಇಂಥಹ ಕುಕೃತ್ಯ ನಡೆಪದರೆ ಯಾರನ್ನು ನಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಪ್ರಶ್ನೆ ಖಂಡಿತ ಕಾಡುತ್ತದೆ. ನಂಬಿಕೊಂಡು ಬಂದ ಹೆಣ್ಣಿನ ಮೇಲೆ ಪುರುಷ ಸಮಾಜದಿಂದ ಆಗುವ  ದೌರ್ಜನ್ಯವನ್ನು  ಹೇಳುತ್ತಾ ಹೆಣ್ಣಿನ ಬದುಕಿಗೆ ಪುರುಷ ಸಮಾಜದಿಂದ ಆಗುವ ತೊಂದರೆಯನ್ನು, ಅದರಿಂದ ಅವಳಿಗಾಗುವ ಮಾನಸಿಕ, ದೈಹಿಕ ಹಿಂಸೆಯ ಒಟ್ಟು ನಷ್ಟವನ್ನು ಹೇಳುತ್ತಾರೆ. ಸ್ತ್ರೀಯನ್ನು ಸ್ವಾತಂತ್ರ್ಯಳಾಗಿ ಬದುಕಲು ಬಿಡದ ಮತ್ತು ನಂಬಿ ಆಶ್ರಯಕ್ಕೆ ಬಂದವಳನ್ನು ವಂಚಿಸುವ ಧರ್ಮಾಧಿಕಾರಿಯು ಒಂದು ಆಶ್ರಮವನ್ನು ನಡೆಸುವಂತಹದ್ದು, ಮತ್ತು  ನಂಬಿದವಳನ್ನು ವಂಚಿಸುವಂತಹದ್ದು  ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಯಾಗಿದೆ. ಮತ್ತು ಧರ್ಮಕ್ಕೆ ಮಸಿ ಬಳಿಯುವ  ಮೂರ್ಖತನ ಅದು. ಇದು ಇಂದು ನೆನ್ನೆಯದ್ದಲ್ಲ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿದೆ. ಸಮಾಜದ ಸಾಮನ್ಯ ಜನರ ಮೇಲಿಲ್ಲದ ನಂಬಿಕೆ  ಆಶ್ರಮಗಳು ಮತ್ತು ಮಠಗಳ ಮೇಲಿರುವುದು. ಅಲ್ಲಿಯೂ ಹೆಣ್ಣಿಗೆ ರಕ್ಷಣೆ ಇಲ್ಲ ಎನ್ನುವುದು ಇಲ್ಲಿ ಸಾಭಿತಾಗುತ್ತದೆ. ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು ಜನರ ಬದುಕನ್ನು ಅದರಲ್ಲೂ ದಿಕ್ಕಿಲ್ಲದ ಅನಾಥ ಮಕ್ಕಳ, ಸ್ತ್ರೀಯರ ಬದುಕನ್ನು ರಕ್ಷಿಸುತ್ತವೆ ಎನ್ನುವ ಬಲವಾದ ನಂಬಿಕೆ ಸುಳ್ಳಾಗುತ್ತದೆ. ಯಾವ ದೈವದ ಮೇಲೆ ನಂಬಿಕೆ ಇಟ್ಟು  ದೈರ್ಯದಿಂದ ಆಶ್ರಯವನ್ನು ಬೇಡಿ  ಬಂದ ಹೆಣ್ಣಿಗೆ  ನಂಬಿಕೆ ದ್ರೋಹ, ಅವಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಆಗುವ ವಿಫಲತೆ  ಮತ್ತು ಮಠ ಮಂದಿರಗಳ ಮೇಲಿನ ನಂಬಿಕೆ ಸುಳ್ಳಾಗುತ್ತದೆ. ಹೆಣ್ಣಿನ ರಕ್ಷಣೆ ಮಾಡಬೇಕಾದುದು ಕುಟುಂಬ. ಅಂಥಹ ಕುಟುಂಬವನ್ನು ಕಳೆದುಕೊಂಡ ಹೆಣ್ಣು ಸಮಾಜದಲ್ಲಿ ಬದುಕುವುದು ಇಷ್ಟೊಂದು ಕಠಿಣ ಎನ್ನುವುದು ಈ ಮಾತಿನಲ್ಲಿ ಅಡಕವಾಗದೆ. ಒಂದು ಹೆಣ್ಣು ಯಾರ ಸಹಾಯವಿಲ್ಲದೇ ಬದುಕು ರೂಪಿಸಿಕೊಳ್ಳಲು ಆದದಂತಹ ಸ್ಥಿತಿ. ಆದರೂ ಆಶ್ರಮಕ್ಕೆ ಬಂದ ಹೆಣ್ಣಿಗೆ ಅಲ್ಲಿಯೂ  ಕಾಮುಕರ ಕಾಟ  ತಪ್ಪುವುದಿಲ್ಲ ಆಶ್ರಮ ಎಂದರೆ ಕುಟುಂಬಕ್ಕಿಂತಲೂ ಹೆಚ್ಚು ಭದ್ರತೆ ಒದಗಿಸುವ ತಾಣ, ಅಂತಹ ಆಶ್ರಮ ನಡೆಸುವ ಮಹನೀಯರು ಆಶ್ರಯ ಕೊಡುವ  ನೆಪದಲ್ಲಿ  ಹೆಣ್ಣಿನ ಶೀಲ ದೋಚುವ ಅವಳ ಬದುಕನ್ನು ಕಿತ್ತುಕೊಳ್ಳುವ ತಾಣಗಳಾಗಿ ಮಾರ್ಪಟ್ಟಿರುವುದು ಶೊಚನೀಯ ಸಂಗತಿಯಾಗಿದೆ. “ಗಂಡ ಹೆಂಡತಿ ಜಗಳ ಬೀದಿಗೆ ಬಂತೊಮ್ಮೆ|                                          ಕಂಡು ನಿಂತರು ಎಲ್ಲ, ಜಾಣೊಬ್ಬ ನುಡಿದ||ಗಂಡ ಹೆಂಡತಿ ಜಗಳ ಉಂಡು ಮಲಗುವತನಕಉಂಡರೆ ಮುಗಿದೀತು, ಊಟಕಿಲ್ಲದಕೆ ಜಗಳವೋ ತಿಂಮ|”ಈ ಚೌಪದಿಯಲ್ಲಿ ಬೀಚಿಯವರು ಸಮಾಜದಲ್ಲಿ ನಡೆಯುವ ಘಟನೆಗಳಿಗೆ ತುಂಬಾ ಸೂಕ್ಷ್ಮವಾಗಿ ಸಂವೇದಿಸುತ್ತಾರೆ. ಬಡತನಲ್ಲಿ ಹುಟ್ಟಿ ಬೆಳೆದ ಅವರಿಗೆ ಅದು ಹೊಸದಲ್ಲ. ಅದರಲ್ಲೇ ಸಂತೋಷದಿಂದ  ಬಾಳಿ ಬದುಕಿದವರು. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವುದು ಸಾಮಾನ್ಯವಾದ ಗಾದೆ. ಆದರೂ ಅದು ಬಾಗಶಃ ಸತ್ಯ. ಅಂದರೆ ಒಂದು ಕುಟುಂಬವು ನೆಮ್ಮದಿಯಿಂದ ಬಾಳಲು ಕೌಟುಂಬಿಕ ಹಿನ್ನಲೆಯೂ ಕಾರಣವಾಗಿರುತ್ತದೆ. ಹಸಿವು ಮನುಷ್ಯನನ್ನು ಎಂಥ ಹೀನ ಕೆಲಸÀಕ್ಕೂ ತೊಡಗಿಸುತ್ತದೆ. ಕೌಟುಂಬಿಕ ಸುಖ ಎನ್ನುವುದು ಬದುಕಿನ ಮೂಲಭೂತ ಅಗತ್ಯವನ್ನು ಮೀರಿದ್ದು. ಇಲ್ಲಿ ಅವರು ಹೇಳುತ್ತಿರುವುದು ಜೀವಿಸಲು ಅತೀ ಮುಖ್ಯವಾಗಿ ಬೇಕಾದುದು ಆಹಾರ ಅದೇ ಅವರಿಗೆ ಇಲ್ಲದಿದ್ದಾಗ ಅದಕ್ಕಾಗಿಯೇ ಮನೆಯಲ್ಲಿ ಕಲಹ ಹಸಿವನ್ನು ಮೀರಿದ್ದು ಇನ್ನೊಂದಿಲ್ಲ. ಆ ಅಗತ್ಯ ತೀರಿದರೆ ಮುಂದಿನ ಬೇಡಿಕೆ. ನೆಮ್ಮದಿಯಿಂದ ಹೊಟ್ಟೆ ತುಂಬಿದರೆ ತೃಪ್ತ ಮನಸ್ಸು ನಿದ್ದೆಗೆ ಜಾರುತ್ತದೆ. ಅಲ್ಲಿ ಜಗಳ ಇಲ್ಲದೇ ನೆಮ್ಮದಿಯಿಂದ ಬದುಕು ಸಾಗುತ್ತದೆ ಆದರೆ, ತಿನ್ನಲು ಅನ್ನವೇ ಇಲ್ಲದಿದ್ದಾಗ ಊಟಕ್ಕಾಗಿಯೇ ಜಗಳ ಆಗುವುದು ವಿಪರ್ಯಾಸ ಸತ್ಯ. ಉಂಡು ಮಲಗುವತನಕ ಜಗಳ ಎಂದರೆ ಉಂಡರೆ ಮಲಗುವ ಅವಸರ ಉಣ್ಣಲು ಅನ್ನ ಬೇಡವೇ? ಲೇಖಕರು ಇಲ್ಲಿ ಬಡತನವನ್ನು ಒತ್ತಿ ಹೇಳುತ್ತಾ…ದಾಂಪತ್ಯ ಪಾಡು ಮತ್ತು ಬಡತನವನ್ನು ಮುಖಾ ಮಖಿಯಾಗಿಸುತ್ತಾರೆ. ಉಂಡು ಮಲಗುವುದಾದರೆ ಜಗಳ ನಿಂತೀತು, ಅದಕ್ಕಾಗಿ ಉಣ್ಣಬೇಕು, ಆ ಉಣ್ಣಲು ಇಲ್ಲದಿರುವುದಕ್ಕೆ ಈ ಜಗಳಿನ್ನು ಅದು ಮುಗಿಯುವುದೆಂತು ಮುಗಿಯಲು ಉಣ್ಣಬೇಕು. ಒಂದಕ್ಕೊಂದು ಬೆಸೆದುಕೊಂಡಿವೆ. ಊಟ ಮಾಡಲು ಆಹಾರವೇ ಇಲ್ಲದಿರೆ ಜಗಳ ನಿಲ್ಲುವುದಿಲ್ಲ, ಜಗಳ ನಿಲ್ಲಲು ಊಟ ಬೇಕು. ಬಡತನದ ಬದುಕು, ಬಡವ ಅನುಭವಿಸುವ ನೋವು ಹಸಿವಿನ ಸಂಕಟ, ಏನೆಲ್ಲಾ ಸಂಕಷ್ಟಗಳನ್ನು ತಂದೊಡ್ಡುತ್ತದೆ ಎನ್ನುವುದನ್ನು ಚಿತ್ರಿಸುತ್ತದೆ. ಊಟ ಇಲ್ಲದ್ದಕ್ಕೆ ಜಗಳ ನಡೆಯುತ್ತಿದೆ, ಜಗಳವು ಜಗಜ್ಜಾಹಿರಾಗುತ್ತಿದೆ. ಕುಟುಂದ ಕಲಹ ಬೀದಿಗೆ ಬರಬಾರದು ಎನ್ನುವುದು ಸೂಕ್ಷö್ಮ ಆದರೆ ಅದು ಬೀದಿಯಲ್ಲೇ ಬದುಕುವ ಜನರಿಗೆ ಜಗಳಕ್ಕಾಗಿಯೇ ಮನೆ ಎಲ್ಲಿಂದ ತರುವುದು. ತಮ್ಮ ಮನೆಯಲ್ಲಿ ಕತ್ತೆ ಸತ್ತರೂ ಪಕ್ಕದವರ ತಟ್ಟೆಯ ನೊಣ ತೆಗೆಯುವ ಬುದ್ಧಿ ಮಾತ್ರ ಹೋಗುವುದಿಲ್ಲ  ಜನರಿಗೆ. ಅದನ್ನು ಹೇಳುವುದು ಸಹ ಬೀಚಿಯವರ ಉದ್ಧೇಶವಾಗಿದೆ. ಇದರಿಂದ ತಿಳಿಯಬೇಕಾದುದಿಷ್ಟೆ  ಸಂಸಾರ ಎಂದ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಇಂಥ ಸಣ್ಣ ಪುಟ್ಟ ಕಲಹಗಳು ಇದ್ದೇ ಇರುತ್ತವೆ. ಎಂದು ತಿಳಿದು ಜನ ಸುಮ್ಮನಿರದೇ ತಾವು ಅಲ್ಲಿ ಇಣುಕುವುದ ಸರಿಯಲ್ಲ. ಎಲ್ಲರ ಮನೆ ದೋಸೆ ತೂತೇ ಎನ್ನುವ ಮಾತು ಅವರಿಗೆ ಗೊತ್ತಿರಬೇಕು. “ಹಿಂದೊಂದು ಕಾಲದಿ ನಮಿಸುತ್ತ ಹೊರಟೆ|ಬಂದವರೆಲ್ಲರೂ ತಲೆಗೆ ಕಾಲಿಟ್ಟರು||ಅಂದು ಕಾಲೆತ್ತಿದೆ ಬಾಗಿದವು ತಲೆಗಳು|\ಒಂದು ತಿಳಿ, ದುಂಡು ಜಗತ್ತಿಗೆ ರುಂಡವಿಲ್ಲವೂ ತಿಂಮ|” ಜಗತ್ತು ಎಂದರೆ ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ  ಅದರ ಇರುವಿಕೆ. ನಮ್ಮನ್ನು ನಾವು ಹೇಗೆ ಪರಿಚಯಿಸಿಕೊಂಡಿರುತ್ತೇವೆ ಎನ್ನವುದರ ಮೇಲೆ ನಮ್ಮನ್ನು ಅದು ಉಪಚರಿಸುತ್ತದೆ, ನಾವು ಹೆದರಿ ವಿಧೇಯತೆ ತೋರಿದರೆ ತನ್ನ ಹಿಡಿತಲ್ಲಿಟ್ಟುಲೊಳ್ಳುತ್ತದೆ, ನಮ್ಮ ಬದುಕನ್ನು ತನ್ನ ಕಾಲ ಬುಡದಲ್ಲಿರಿಸಿಕೊಳ್ಳುತ್ತದೆ, ಹಾಗೆ ನಾವು ಬಲಿಷ್ಟರಾಗಿದ್ದರೆ ನಮ್ಮ ಹಿಡಿತದಲ್ಲಿ ತಾನು ಇರುತ್ತದೆ, ನಮ್ಮ ಕಾಲ ಬುಡದಲ್ಲಿದ್ದು ವಿಧೇಯತೆಯನ್ನು ತೋರುತ್ತದೆ. ಜಗತ್ತಿಗೆ ಹೀಗೆ ಇರಬೇಕೆನ್ನುವುದು ನಿಯಮವಲ್ಲ ಅದು ಅಲ್ಲಿನ ಜನತೆಯ ಬದುಕಿನ ಶೈಲಿಯ ಮೇಲೆ ಅವಲಂಬಿಸಿದೆ. ಇದೊಂದು ವಿಷವರ್ತುಲ ಎಂದೂ ನಿಲ್ಲುವುದಿಲ್ಲ ಒಬ್ಬನನ್ನು ತುಳಿಯಲು ಮತ್ತೊಬ್ಬ, ಅವನನ್ನು ತುಳಿಯಲು ಇನ್ನೊಬ್ಬ ಹೀಗೆ ಸಾಗುತ್ತಾ ಯಾವುದೂ ಸ್ಥಿರವಲ್ಲದ ಸ್ಥಿತಿಗೆ ತಲುಪುತ್ತದೆ ಎನ್ನುವ ಸಂದೇಶವನ್ನು ಬೀಚಿಯವರು ಕೊಡುತ್ತಾರೆ. ದಾಸಕೂಟದ ರಂಗನಾಥರಾಯರು ತಮ್ಮ ಬಂಗಲೆಗೆ “ಆನಂದವಿಲ್ಲ” ಎಂದು ಹೆಸರಿಸಿದ್ದು ಸೂಕ್ತವಾಗಿದೆ. ಸರಿಯಾಗಿ ಆ ಸಮಯಕ್ಕಾಗಲೇ ತಮ್ಮ ಆ ಸ್ವಾಮಿನಿಷ್ಠೆಯ ದಾಸ್ಯದಲ್ಲಿಯ ಆನಂದಕ್ಕೆ ಕೊನೆ ಅಲ್ಲಿಗೆ ಬ್ರಿಟಿಷರ ಆಳ್ವಿಕೆಗೆ ವಿರುದ್ಧವಾಗಿ ಹೇಗಾದರೂ ಅವರನ್ನು ಇಲ್ಲಿಂದ ಓಡಿಸುವ ಮತ್ತು ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಹೋರಾಟ ದೇಶಾದ್ಯಂತ ನಡೆಯುತ್ತಿದೆ. ಎಲ್ಲೆಡೆ ಗಾಂಧೀಜಿಯವರ ಮುಂದಾಳತ್ವದಲ್ಲಿ ಅವರ ತತ್ವಗಳನ್ನು ಆಧರಿಸಿ ಚಳುವಳಿ ಉಗ್ರ ರೂಪ ತಾಳಿದೆ. ಆಂಗ್ಲರ ಆಳ್ವಿಕೆ ಯಾವಾಗ ಕೊನೆಯಾಗುತ್ತದೆ ಗೊತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಾವು ಹಿಂದೆ ೧೨ ರೂಪಾಯಿ ವೇತನ ಪಡೆದರೂ ಸುಖ ಜೀವನ ನಡೆಸುತ್ತಿದ್ದರು. ಅಮಾಯಕ ಜನಗಳ ಬದುಕನ್ನು ಛಿದ್ರಗೊಳಿಸಿ ಸತ್ತ ದನಗಳನ್ನು ಬಿಡದೆ ಲೀಲಾವೂ ಮಾಡಿಸಿ ರಾಜ ಸತ್ತೆಯ ಖಜಾನೆಗೆ ತುಂಬುತ್ತಿದ್ದ ಕಾಲ ಇನ್ನೂ ಮರೆಯಾಗುತ್ತಿದೆ. ಆನಂದ ಖಂಡಿತ ಇಲ್ಲದಾಗುತ್ತದೆ. ತಮ್ಮ ಬಂಗಲೆಗೆ ಕೊಟ್ಟ ಹೆಸರು ಎಷ್ಟೊಂದು ಹಾಸ್ಯಾಸ್ಪದವಾಗಿದೆ. “ಅವಶ್ಯಕತೆ ಇದ್ದರಷ್ಟೇ ಆಯಾ ವಸ್ತುವಿಗೆ ಬೆಲೆ ಇಲ್ಲದಾಗ ಅದೊಂದು ಕಸ. ಸಾಮಾನ್ಯವಾಗಿ ಅನೇಕರಿಗೆ ದೇವರು ಕೂಡ ಇಂಥದ್ದೊಂದು ಕೊಡೆ” ದೇವರು ಇದ್ದಾನೆ ಎನ್ನುವ ಆಸ್ತಿಕರ ಮುಂದೆ ದೇವರೇ ಇಲ್ಲ ಎನ್ನುವ ನಾಸ್ತಿಕನೊಬ್ಬನಿಗೆ ಪಾಠ ಕಲಿಸಬೇಕಾದರೆ ಅವನಿಗೆ ಪರಿಸ್ಥಿತಿಯನ್ನು ಅರ್ಥೈಸಬೇಕು ಅದು ಅವನ ಲೈಂಗಿಕ ಬಯಕೆಯನ್ನು ಅದರೊಂದಿಗೆ ಬೆಸೆದು .ಅದಕ್ಕೆ ಪೂರಕವಾಗಿ ಅದನ್ನು ಸಾಧಿಸಿ ತೋರಿ.ಸಿ. ನೋಡು, ಇದೇ ದೇವರು ನಿನ್ನ ಮನೋ ಕಾಮನೆಗಳನ್ನು ಈಡೇರಿಸಿದವನು ಎಂದು ದೇವಸ್ಥಾನದಲ್ಲಿ ನಿಂತು ಲೈಂಗಿಕ ಅತೃಪ್ತನೊಬ್ಬನಿಗೆ ದೇವರಿದ್ದಾನೆ ಎಂದು ತೋರಿಸುವುದು ವಿಡಂಬನಾತ್ಮಕವಾಗಿದೆ. ಲೇಖಕರದು ಇಧೆ ವಾದ “ಅವರನ್ನು ಯಾರಾದರೂ ವೇವರಿದ್ದಾನೆಯೇ ಎಂದರೆ ಇದ್ದಾನೆ, ಇಲ್ಲವೇ ಎಂದರೆ ಇಲ್ಲ” ಎನ್ನುತ್ತಾರೆ. ಅಂದರೆ ದೇವರ ಬಗೆಗೆ ತಮಗಿರುವ ಕಲ್ಪನೆಯೂ ಕೊಡೆಯಂತೆಯೆ ಅಗತ್ಯವಿದ್ದಾಗ ಅದನ್ನು ಬಳಸಿಕೊಂಡು ಅಗತ್ಯವಿಲ್ಲದಿದ್ದಾಗ ಮೂಲೆ ಸೇರಿಸುವುದು. ದೇವರು ಅಷ್ಟೇ! ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಾನೆ ಅಗತ್ಯ ಇಲ್ಲದಾಗ ಮೂಲೆ ಸೇರುತ್ತಾನೆ. “ನಮಗೆ ಬೇಡವಾದುದನ್ನೆಲ್ಲ ಕರ್ಮದ ತಲೆಗೆ ಕಟ್ಟುವುದು ಸುಲಭ”ತಂದೆ ತಾಯಿಗಳು ಆಸ್ತಿಕರಾಗಿದ್ದರೂ, ಮಹಾನ್ ದೈವ ಭಕ್ತರಾಗಿದ್ದಾಗಲೂ ಮಗ ನಾಸ್ತಿಕನಾದರೆ ಅದು ಅವನ ಪೂರ್ವಾರ್ಜಿತ ಕರ್ಮ ಎಂದು ಅಂದುಕೊಂಡು ತಂದೆ ತಾಯಿ ಅವನನ್ನು ಅವನ ಪಾಡಿಗೆ ಬಿಟ್ಟು ತಾವು ಅವನ್ನು ಕರ್ಮ ಫಲ ಎಂದು ಹೇಳುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಯಾವುದು ಮನುಷ್ಯನ ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವುದಿಲ್ಲ. ಅದು ಅವನು ರೂಢಿಸಿಕೊಂಡದ್ದಾಗಿರುತ್ತದೆ. ಸಾಧ್ಯವಾದರೆ ಹಿರಿಯರು ಅವನ ಮನೋಭಾವಗಳನ್ನು ಬದಲಾಯಿಸಬಹುದು. ಅವನನ್ನು ತಿದ್ದಲಾಗದೆ ಅವನ ಇಚ್ಛೆಯಂತೆ ಅವನನ್ನು ಬೆಳೆಯಲು ಬಿಟ್ಟು ಬಿಡುವುದು ತಮ್ಮ ಬೇಜವಾದ್ಬಾರಿ  ಆಗಿದೆ.

“ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನಕ್ಕೆ ವಿಶೇಷಲೇಖನ,ಡಾ. ಭಾರತಿ ಮೂಲಿಮನಿ Read Post »

You cannot copy content of this page

Scroll to Top