ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವಾಣಿ ಭಂಡಾರಿ ಅವರ ಕವಿತೆ “ಗುಂಪಿಗೆ ಸೇರದ ಪದ”

ಕಾವ್ಯ ಸಂಗಾತಿ ವಾಣಿ ಭಂಡಾರಿ “ಗುಂಪಿಗೆ ಸೇರದ ಪದ” “ಗುಂಪಿಗೆ ಸೇರದ ಪದ” ಬಿಟ್ಟ ಸ್ಥಳ ತುಂಬುವಾಗೆಲ್ಲ ಆಯ್ದ ಪದವಾಗದೆ ಹೊರಗುಳಿದು ಬಿಟ್ಟೆ ಅನುಕಂಪದ ಕಡಲು ಉಕ್ಕಲಿಲ್ಲ ಸಹಕಾರದ ಸೇತುವೆಯೂ ಜೊತೆಯಾಗಲಿಲ್ಲ. ಜಗುಲಿ ಕಟ್ಟೆ ಪುರಾಣದ ಮಾತುಗಳೆನೂಕಿದ್ದವು ಬೇಲಿಯಾಚೆ,,ಕಡ್ಡಿ ಚುಚ್ಚಿ ಬೆಂಕಿಹಚ್ಚಿದಾಗೆಲ್ಲಉರಿದು ಬೂದಿಯಾದ ನಾನುಹಬ್ಬ ಹರಿದಿನಗಳಲಿ ಕರುಣೆ ಕಣಜವಾಗಿ ಕಸಮುಸುರೆಗಾಗೊ ಬಿಟ್ಟಿ ವಸ್ತು ನಾನು!. ಕಾಲ ಬದಲಾಗಿದೆ ಎಂದವರೆಲ್ಲಒಮ್ಮೆ ಇಣುಕಲಿ ಮಾನವೀಯತೆ ಮೆರೆದು,ಸೋತಾಗ ತೂಗುವ ತವರುಸೋಸಿ ಇಕ್ಕುವ ತಾಳಿ ಮಾಲೀಕರುಮಾನವೀಯತೆ ಮರೆತ ನೆರೆಹೊರೆಬಂಧು ಬಳಗ ಇವೆಲ್ಲಖಾಲಿ ಜೋಳಿಗೆಯ ವಾಸನೆಗಳು. ಸೌಜನ್ಯಕ್ಕಾದರೂ ಸೇರಿಸಬಹುದಿತ್ತು ಶಾಸ್ತ್ರಕ್ಕಲ್ಲದೆ ಶ್ರಾದ್ಧಕ್ಕಾದರೂ,ಮುಂಡೆ,ಬಂಜೆ ಸೂಳೆ, ಖೋಜಾ ಎಂದೇ ಹೊರಗಟ್ಟಿದ ಮೇಲೆ ಯಾರ ಹಂಗು?ಹೋಗಲಿ ಬಿಡಿ ನಾನು ಭಿನ್ನ ಪದವೆಯಾಕೆಂದರೆ ನಾನು ಮನಕೆ ಪಥ್ಯವಾಗದ ಮನುಷ ವಾಣಿ ಭಂಡಾರಿ

ವಾಣಿ ಭಂಡಾರಿ ಅವರ ಕವಿತೆ “ಗುಂಪಿಗೆ ಸೇರದ ಪದ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ನವಿಲಗರಿಯ ನೆನಪು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನವಿಲಗರಿಯ ನೆನಪು” ನೀನು ಮಳೆ, ನಾನು ನವಿಲು,ನಿನ್ನ ನಗು ಹೊನ್ನ ಹೊಳಪು;ನೀಲಿ ಹಸಿರು ಗರಿಯ ತುಂಬನಿನ್ನ ಒಲವ ರೇಷ್ಮೆ ಒನಪು. ಹನಿಯ ಗೆಜ್ಜೆ ಮಣ್ಣಿಗೆ ತಾಗಿ,ಅದರ ತಾಳಕೆ ನಾನು ಕುಣಿದೆ;ನೀನು ನಗುತ್ತ ನೋಡಿದಾಗಗರಿಯ ನೆರಳಲಿ ಜಾಗ ಕೊಟ್ಟೆ. ಕೃಷ್ಣನ ಮುಡಿಯ ನೀಲಿ ಗರಿಯಂತೆನಿನ್ನ ಮನದಿ ನೆಲೆ ಬಯಸಿದೆ;ನಿನಗಾಗಿ ತಂದ ನವಿಲಗರಿಯಕೊಡಲು ಕೈಯಲ್ಲಿ ಹಿಡಿದು ನಿಂತೆ. ಹೇಳಬೇಕಿದ್ದ ಮಾತು ಉಳಿಯಿತು,ಚಾಚಬೇಕಿದ್ದ ಕೈ ಮುದುಡಿತು;ಮೋಡದಂತೆ ನೀನು ಸರಿದೆ,ನನ್ನ ಹಾಡಲಿ ನಾನೇ ಉಳಿದೆ. ಪುಸ್ತಕದಲಿ ಹೊನ್ನಂಚಿನ ಗರಿಯಿಟ್ಟುಮರಿ ಬರುವುದೆಂದು ಕಾದೆ;ಪುಟ ತೆರೆದು ಗರಿಯ ಸವರಿನೀನು ಬರುವ ಕನಸು ಕಂಡೆ. ಮರೆಯಲೆಂದು ಮಧು ಹಿಡಿದೆ,ಹೊರಗೆ ಮಳೆಹನಿಯ ಸದ್ದು;ನೀನು ಬಂದೆಯೆಂದು ತಿರುಗಿದೆಬಾಗಿಲಲ್ಲಿ ಗಾಳಿಯ ಗುದ್ದು. ಮತ್ತೆ ಮಳೆ, ಮತ್ತೆ ಕುಣಿತ,ನೀನು ನಿಂತ ಜಾಗ ಮಾತ್ರ ಖಾಲಿ;ಪುಸ್ತಕ ಮುಚ್ಚಿ ಎದೆಗೊತ್ತಿಕೊಂಡೆಒಳಗೆ ಇನ್ನೂ ಮುರಿದ ಗರಿ. ಮೊದಲ ಹನಿಗೆ ಗರಿ ತೆರೆದೆ,ನಿನ್ನ ನೆನಪಿಗೆ ಕಣ್ಣು ತುಂಬಿ;ಮಳೆ ನಿಂತ ಮೇಲೂ ಒದ್ದೆನೀನು ಮುಡಿಯದ ನವಿಲಗರಿ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ನವಿಲಗರಿಯ ನೆನಪು” Read Post »

ಕಾವ್ಯಯಾನ

“ಯುದ್ಧ ಮತ್ತು ಅವಳು” ಡಾ. ಪುಷ್ಪಾವತಿ ಶಲವಡಿಮಠ

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಯುದ್ಧ ಮತ್ತು ಅವಳು” ಅವಳೆಂದೂ ಯುದ್ಧಕ್ಕಿಳಿಯಲೇ ಇಲ್ಲಶಸ್ತ್ರಗಳನೆoದೂ ತೊಡಲಿಲ್ಲಶತಶತಮಾನಗಳಿಂದ ಅವಳನು ಸೋಲಿಸಬೇಕೆಂಬಅವರ ದಾಹ ಮಾತ್ರ ತಣಿಯುತ್ತಿಲ್ಲ ಹೂಮೊಗ ತೊಟ್ಟುಅವರು ಇರಿಯಲು ಬರುತ್ತಾರೆಅವಳೋ ಬಂದವರಿಗೆಹೂ ಹಾಸುತ್ತಾಳೆ,ದಣಿವಾರಿಸುತ್ತಾಳೆಜೋಗುಳ ಹಾಡುತ್ತಾಳೆ, ನೆರಳಾಗುತ್ತಾಳೆಆದರೂ….ಕತ್ತರಿಸಬೇಕೆಂಬ ಅವರ ದಾಹ ತಣಿಯುತ್ತಿಲ್ಲ ಅವರು ಕತ್ತರಿಸುತ್ತಾರೆಅವಳೆಲ್ಲೋ ಮತ್ತೆ ಚಿಗುರುತ್ತಾಳೆವಿಸ್ಮಯವಿದು!ಮತ್ತೆಲ್ಲೋ ಹೂವಾಗಿ ಅರಳುತ್ತಾಳೆತುಂಡರಿಸಿದರೂ ತಮ್ಮಿಂದ ಬೇರ್ಪಡಿಸಿದಾಗಲೂಅವಳು ಅಖಂಡವಾಗುತ್ತಾಳೆಪರಿಪೂರ್ಣಳಾಗುತ್ತಾಳೆ ಅವಳೆಂದೂರಣಭೂಮಿಗಿಳಿಯಲೇ ಇಲ್ಲಮರಭೂಮಿಯನು ಹಸಿರಾಗಿಸುವ ಧಾವಂತದಲ್ಲಿದ್ದಾಳೆಅವರಾದರೋ ಯುದ್ಧಕ್ಕೆಕರೆಯುತ್ತಲೇ ಇದ್ದಾರೆಶಸ್ತ್ರಸ್ತ್ರ ಹಿಡಿದು ಬರುತ್ತಲೇ ಇದ್ದಾರೆಅವಳೋ ಶಸ್ತ್ರಗಳನ್ನೇ ಮುದ್ದಿಸಿಯುದ್ಧ ಮುಗಿಸಿ ಬಿಡುತ್ತಾಳೆ ಅಹಂಗಾಗಿ ಪ್ರತಿಷ್ಠೆಗಾಗಿಸೋಲಿಸುವ – ಗೆಲುವಈ ಯುದ್ಧ ನಡೆಯುತ್ತಲೇ ಇದೆಗೆಲ್ಲಲೇಬೇಕೆಂಬ ಹಠದಿಂದಅವರು ಸೋಲುತ್ತಲೇ ಇದ್ದಾರೆ…ಅವಳು ಮಾತ್ರ ಸೋಲುತ್ತಲೇ ಗೆಲ್ಲುತ್ತಿದ್ದಾಳೆ….ಅವಳೆಂದೂ ಯುದ್ಧಕ್ಕಿಳಿಯಲೇ ಇಲ್ಲ….. ಡಾ. ಪುಷ್ಪಾವತಿ ಶಲವಡಿಮಠ

“ಯುದ್ಧ ಮತ್ತು ಅವಳು” ಡಾ. ಪುಷ್ಪಾವತಿ ಶಲವಡಿಮಠ Read Post »

ಪುಸ್ತಕ ಸಂಗಾತಿ

ಗಂಗಾದೇವಿ ಚಕ್ರಸಾಲಿ ಅವರ “ಸೇದಿ ಬಾವಿ” ವಿಶಿಷ್ಠವಾದ ಕಥಾಸಂಕಲನ, ಬಸವರಾಜ ಹೊನಗೌಡರ

ಪುಸ್ತಕ ಸಂಗಾತಿ ಬಸವರಾಜ ಹೊನಗೌಡರ ಗಂಗಾದೇವಿ ಚಕ್ರಸಾಲಿ “ಸೇದಿ ಬಾವಿ” ಉತ್ತರ ಕರ್ನಾಟಕದ ವಿಶಿಷ್ಟ ಭಾಷೆಯನ್ನು ಸಮರ್ಥವಾಗಿ ಬಳಕೆ ಮಾಡಿ, ದಿನನಿತ್ಯದ ನಮ್ಮ ನಡೆಯುವ ಘಟನೆಗಳನ್ನು ಸುಂದರವಾಗಿ, ಮನಮುಟ್ಟುವಂತೆ ಕಥೆ ಹೆಣೆಯುವ ಕಲೆಯನ್ನು ಶ್ರೀಮತಿ ಗಂಗಾದೇವಿ ಚಕ್ರಸಾಲಿಯವರ ಎರಡನೇ ಕೃತಿ, “ಸೇದಿ ಬಾವಿ” ಕಥಾಸಂಕಲನದಲ್ಲಿ ನೋಡಬಹುದು. ಸುಮಾರು 110 ಪುಟಗಳ, 12 ಕತೆಗಳನ್ನೊಳಗೊಂಡ ಮಿಂಚುಳ್ಳಿ ಪ್ರಕಾಶನದಲ್ಲಿ ಮೂಡಿಬಂದಿದೆ. ಈ ಕಥಾಸಂಕಲನ ಕನ್ನಡ ಓದುಗರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಪ್ರತಿಯೊಂದು ಕತೆಯು ಜೀವನ್ಮುಖಿಯಾಗಿದೆ, ಒಂದಿಷ್ಟು ಸಮಾಜಕ್ಕೆ ಸಂದೇಶ ನೀಡುತ್ತವೆ. ಮೊದಲನೆಯ ಕಥೆ ‘ಅರುಂಧತಿ’ ಯಲ್ಲಿ, ಇಂದಿನ ದಾಂಪತ್ಯ ಜೀವನವು ಅಧುನಿಕ ಕೆಲಸದ ಜಂಜಾಟಗಳಲ್ಲಿ ತನ್ನ ಮಹತ್ವ ಕಳೆದುಕೊಳ್ಳುತ್ತಿರುವುದನ್ನು ಅರುಂಧತಿ ಮತ್ತು ಅಜಯ ಪಾತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇಬ್ಬರೂ ಹೊರಗೆ ದುಡಿಯುವ ದಂಪತಿಗಳಲ್ಲಿ ಸಮಾನತೆಯ ಪರಿಕಲ್ಪನೆ ಇದ್ದರೆ, ಒಬ್ಬರನ್ನೊಬ್ಬರು ಗೌರವಿಸಿದರೆ ಮಾತ್ರ ದಾಂಪತ್ಯ ಚಕ್ರ ಮುಂದೆ ಸಾಗುತ್ತದೆ. ಅಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಅಹಂ ಅಡ್ಡ ಬಂದರೆ ಸಂಸಾರ ಒಡೆಯುವುದನ್ನು ಈ ಕತೆಯಲ್ಲಿ ನೋಡಬಹುದು. ಅರುಂಧತಿ ತನ್ನ ಹಾಳಾದ ಸಂಸಾರವನ್ನು ಸರಿ ದಾರಿಗೆ ತರಲು ಮಾಡುವ ಪ್ರಯತ್ನ ತಡವಾಗುತ್ತದೆ, ಅಷ್ಟರಲ್ಲಿ ಅಜಯ ಮತ್ತೊಬ್ಬಳನ್ನು ಕಟ್ಟಿಕೊಂಡಿರುತ್ತಾನೆ. ಇಲ್ಲಿ ಅರುಂಧತಿಯ ಆಂತರಿಕ ತುಮುಲಗಳನ್ನು ನೋಡಬಹುದು. ಕತೆಯಲ್ಲಿ ಬರುವ ಸಾಲುಗಳು “ಅರುಂಧತಿಗೆ ಗಂಡಸರೆಂದರೆ ಸ್ವಾರ್ಥಿಗಳು ಎಂಬ ಅಭಿಪ್ರಾಯ ಅಚ್ಚೊತ್ತಿ ಬಿಟ್ಟಿತ್ತು. ಅಜಯ್ ನ ತರಹವೇ ಎಲ್ಲ ಗಂಡಸರು ಇರುತ್ತಾರೆ ಎಂದುಕೊಂಡೇ ಗಂಡಸರೊಂದಿಗೆ ಅವಳು ವ್ಯವಹರಿಸುತ್ತಿದ್ದಳು” ಅವಳ ಪೂರ್ವಾಗ್ರಹ ಪೀಡಿತ ಮನಸ್ಸೇ ಅವಳ ನೆಮ್ಮದಿಯನ್ನು ಹಾಳು ಮಾಡಿತ್ತು.“ಕಪ್ಪು ಹುಡುಗಿ” ಕಥೆ ಸಮಾಜದ ಅಂಕುಡೊಂಕಿಗೆ ಉದಾಹರಣೆಯಾಗಿ ನಿಲ್ಲುತ್ತದೆ. ಅವಳು ಕಪ್ಪುಹುಡುಗಿ, ಅವಳ ಹೆಸರು ಶ್ವೇತಾ. ಕಥೆಯಲ್ಲಿ ಕಪ್ಪು ಬಿಳಪುಗಳ ಸಂಘರ್ಷ ಕಾಣಬಹುದು. ಕಥೆಗಾರ್ತಿಯೇ ಹೇಳಿರುವ ಸಾಲುಗಳನ್ನು ನೋಡಬಹುದು “ಆರ್ಯರು ಬಿಳಿಯರು, ದ್ರಾವಿಡರು ಕಪ್ಪು, ದೇವರುಗಳು ಬಿಳಿ, ರಾಕ್ಷಸರು ಕಪ್ಪು. ಅಂದರೆ ಬಿಳಿ ಎಂದರೆ ಶ್ರೇಷ್ಠ, ಉತ್ತಮ ಗುಣ ಮೊದಲಿಂದಲೂ ಇದೆ. ಕಪ್ಪು ಎಂದರೆ ಅಶುಭ, ಕೆಟ್ಟ, ಕಡಿಮೆ ಹೀಗೆ ಅನಾವರ್ಥಕಗಳು ಬೆಳೆದುಕೊಂಡೇ ಬಂದಿವೆ” ಶ್ವೇತಾಳ ನೋಡಲು ಬರುವ ಹುಡುಗರು ಅವಳ ಗುಣ ನೋಡದೇ ಕೇವಲ ಬಣ್ಣವನ್ನು ನೋಡಿ ಮದುವೆಗೆ ಒಪ್ಪುತ್ತಿರಲಿಲ್ಲ. ನಂತರ ಅವಳು ದೊಡ್ಡ ಅಧಿಕಾರಿಯಾಗುತ್ತಾಳೆ ಮತ್ತೊಬ್ಬ ಅಧಿಕಾರಿ ಅವಳನ್ನು ಮದುವೆಯಾಗುತ್ತಾನೆ.ಲೇಖಕಿ ಸ್ವತಃ ಶಿಕ್ಷಕಿಯಾಗಿರುವುದರಿಂದ “ಕಲ್ಲೇಶಿ” ಎಂಬ ಕಥೆಯಲ್ಲಿ ಅವರು ನೋಡಿದ, ಅನುಭವಿಸಿದ ಘಟನೆಗಳು ಕಥೆಯಲ್ಲಿ ಮೂಡಿಬಂದಿರಬಹುದು. ಇದರಲ್ಲಿ ಕಲ್ಲೇಶಿನ ಪಾತ್ರ ಇಂದಿನ ಶಿಕ್ಷಣ ಪದ್ದತಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಅವನಿಗೆ ಇಷ್ಟವಿಲ್ಲದ ಕಲಿಕೆಯನ್ನು ಒತ್ತಾಯಪೂರ್ವಕವಾಗಿ ಕಲಿಸುವುದರಿಂದ ಶಿಕ್ಷಣದಿಂದ ಮತ್ತಷ್ಟು ವಿಮುಖನಾಗುತ್ತಾನೆ. “ಇಂದಿನ ಶಿಕ್ಷಣ ವ್ಯವಸ್ಥೆ ಏನಾಗಿದೆ. ಅಂಕಗಳಿಕೆಯೊಂದೇ ಪ್ರತಿಯೊಬ್ಬರಿಗೂ ಆದ್ಯತೆಯಾಗಿದೆ. ಅಂಕಗಳಿಕೆಯ ಪಂದ್ಯದಲ್ಲಿರುವವರು ಯಾರು? ಶಿಕ್ಷಣ ಇಲಾಖೆ… ಶಿಕ್ಷಕರು ಪಾಲಕರು… ಇಂದಿನ ಬದಲಾದ ಸಮಾಜ ವ್ಯವಸ್ಥೆ…. ಬದಲಾದ ವೃತ್ತಿಗಳು…. ಯಾವುದರ ಮೇಲೆ ಆಪಾದನೆ ಮಾಡಲು ಸಾಧ್ಯ?” ಹೀಗೆ ಕಥೆಯಲ್ಲಿ ಬರುವ ಸಾಲುಗಳು ಇಂದಿನ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿವೆ. “ಕುಲ ಮರ್ಯಾದೆ” ಕತೆಯಲ್ಲಿ ಕಥಾನಾಯಕ ಹಾಗೂ ಕಥಾನಾಯಕಿ ಬೇರೆ ಬೇರೆ ಜಾತಿಯವರು ಹೀಗಾಗಿ ಮದುವೆಗೆ ಹುಡುಗಿಯ ಮನೆಯಲ್ಲಿ ಒಪ್ಪಿಗೆ ಸಿಗದೇ ಅವಳು ಅನುಮಾನಾಸ್ಪದ ರೀತಿಯಲ್ಲಿ ಸಾಯುತ್ತಾಳೆ. ಕಾಲೇಜಿನ ವಯಸ್ಸಿನಲ್ಲಿ ಸಹಜವಾಗಿ ಮೂಡುವಂತೆ ಪ್ರೀತಿ ಮೂಡಿರುತ್ತದೆ. ಆದರೆ ಜಾತಿಯ ಗೋಡೆ ಅಡ್ಡ ಬಂದು ಕಥಾನಾಯಕಿ ಸಾವಿನಿಂದ ಕಥೆ ಕೊನೆಗೊಳ್ಳುತ್ತದೆ. ಕಲ್ಲೇಶಿ ಕಥೆಯಂತೆ “ನಾಣಿ” ಯ ಕಥೆಯು ಸಹ ಒಂದು ಮುಗ್ಧ ಹುಡುಗನ ಅಕ್ಷರ ಕಲಿಯಲು ನಡೆಸಿದ ಹೋರಾಟ, ಅವನ ದೈಹಿಕ ನ್ಯೂನತೆಗಳಿಂದ ಎಲ್ಲರಿಗೂ ಜೋಕರ್ ನಂತಾಗಿದ್ದು ಓದುಗರಿಗೆ ನಾಣಿಯ ಬಗ್ಗೆ ಅನುಕಂಪ ಮೂಡುವಂತೆ ಮಾಡುತ್ತದೆ.“ಮಡಿಲ ಕೆಂಡ” ಕಥೆಯು ಇಂದು ಮುಂದುವರೆದ ಸಮಾಜವು ಸಹ ಮಕ್ಕಳಾಗದೇ ಇದ್ದರೆ ಅದಕ್ಕೆ ಸ್ತ್ರೀ ಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇಲ್ಲಿಯೂ ಸಹ ಹೆಂಡತಿ ತನಗೆ ಮಕ್ಕಳು ಆಗದಿದ್ದಕ್ಕೆ ತಾನೆ ಕಾರಣವೆಂದು ತಿಳಿದು ತನ್ನ ಗಂಡನಿಗೆ ತನ್ನ ತಂಗಿಯ ಜೊತೆ ಮದುವೆ ಮಾಡಿಸುತ್ತಾಳೆ. ಆದರೆ ತಾನೇ ಮತ್ತೊಬ್ಬನಿಗೆ ಬಸುರಾಗುತ್ತಾಳೆ. ಇದನ್ನು ಗಂಡನಿಗೆ ಹೇಳಲಾಗದೇ ಒದ್ದಾಡುತ್ತಾಳೆ. “ಸೇದಿಬಾವಿ” ಕತೆಯಲ್ಲಿ ಗುರುಬಸಪ್ಪ ಹಾಗೂ ಸೇದಿಬಾವಿ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಾ ಎರಡು ಮೂರು ತಲೆಮಾರುಗಳ ಬದಲಾವಣೆಯನ್ನು ಹೇಳಿದ್ದಾರೆ. ಕನ್ನಡದಿಂದ ಇಂಗ್ಲೀಷ್ ಮೀಡಿಯಂ, ಬಾವಿ ನೀರಿನಿಂದ ನಳದ ನೀರು ಹೀಗೆ ಸಾಕಷ್ಟು ಬದಲಾವಣೆಯಾದರೂ ಕೊನೆಗೆ ಒಂದಿಷ್ಟು ಅಂಶಗಳು ಹಳೆಯದರ ಕಡೆಗೆ ವಾಲುವುದನ್ನು ಕಥೆಯಲ್ಲಿ ನೋಡಬಹುದು.ಇದೇ ರೀತಿ ಇನ್ನುಳಿದ ಕಥೆಗಳಾದ ಶರಣ, ಕಲ್ಯಾಣ ಜಂಕ್ಷನ್, ದೇವಮ್ಮಜ್ಜಿ ಮತ್ತು ಮನೆ ಕತೆಗಳು ಓದುಗರನ್ನು ಕಾಡುತ್ತವೆ. ಎಲ್ಲಾ ಕತೆಗಳು ಭಾಷೆಯ ಪ್ರಯೋಗದಿಂದ ಶಕ್ತಿಶಾಲಿಯಾಗಿವೆ. ಹೆಚ್ಚಿನ ಕಥೆಗಳು ಗ್ರಾಮೀಣ ಭಾಗದ ಕಥಾವಸ್ತು ಹೊಂದಿವೆ. ಇಂದಿನ ಸಮಾಜ ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಕಥೆಗಾರರು ಮಾಡಿದ್ದಾರೆ. ಇವರ ಸಾಹಿತ್ಯ ಕೃಷಿ ಹೀಗೆಯೇ ಬೆಳೆಯಲೆಂದು ಆಶಿಸುತ್ತೇನೆ. ಬಸವರಾಜ ಹೊನಗೌಡರ

ಗಂಗಾದೇವಿ ಚಕ್ರಸಾಲಿ ಅವರ “ಸೇದಿ ಬಾವಿ” ವಿಶಿಷ್ಠವಾದ ಕಥಾಸಂಕಲನ, ಬಸವರಾಜ ಹೊನಗೌಡರ Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಕವಿತೆ “ಪ್ರೇಮ ಸತ್ತ ದಿನ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ಪ್ರೇಮ ಸತ್ತ ದಿನ” ನಮ್ಮ ಪ್ರೇಮ ಸತ್ತ ದಿನಕವಿಗಳು ಹೇಳುವ ಹಾಗೆಯಾವ ಗುಡುಗು ಮಿಂಚುಧಾರಾಕಾರ ಮಳೆಯೂಬರಲಿಲ್ಲ..! ಕಣ್ಣು ಕೋರೈಸುವ ಹಾಗೆಅಸಂಖ್ಯ ನಕ್ಷತ್ರಗಳ ನಡುವೆತಣ್ಣಗೆ ಮಲಗಿತ್ತುನಿರ್ಜೀವಗೊಂಡ ನಮ್ಮ ಪ್ರೇಮ..! ದುಃಖಿಸಬೇಕಿತ್ತುನಾವು ಆ ದಿನಒಟ್ಟಿಗೆ ಇಬ್ಬರೂ ಕೂಡಿಆದರೆಬರಲಿಲ್ಲ ಅವಳು ಇತ್ತಒಂದು ಕ್ಷಣವೂಪಾಪ ಅವಳಿಗೆಬಿಡುಗಡೆ ಬೇಕಿತ್ತುನನಗದರ ಬಂಧನ ಬೇಕಿತ್ತು..! ಈ ವಿರೋಧಾಭಾಸದಲ್ಲಿಮಣ್ಣು ಮಾಡಲು ಮನಸ್ಸೊಪ್ಪದೆಹಟಕ್ಕೆ ಬಿದ್ದು ಕೂತಿದ್ದೆದನಿಯೆತ್ತಿ ಒಂಟಿಯಾಗಿ ಪ್ರತಿಭಟಿಸಿದ್ದೆದೊಡ್ಡ ಹೋರಾಟಗಾರನಂತೆಆದರೂಪ್ರಯೋಜನವಾಗಲಿಲ್ಲ..! ನಮ್ಮಿಬ್ಬರ ಪರಸ್ಪರಆರೋಪ ಪ್ರತ್ಯಾರೋಪಗಳನಡುವೆಯೂಯಾವ ಮರಣೋತ್ತರ ಪರೀಕ್ಷೆಗಳಿಲ್ಲದೆಪ್ರೇಮವನ್ನುಸಾಂಗವಾಗಿ ಸಮಾಧಿ ಮಾಡಿದ ಮೇಲೆಅಲ್ಲೊಂದು ಕೆಂಪು ಗುಲಾಬಿಯನ್ನೋಘಮಿಸುವ ಮಲ್ಲಿಗೆಯನ್ನೋ ನೆಟ್ಟುಕೈ ತೊಳೆದುಕೊಳ್ಳುವಕನಿಷ್ಠ ಸೌಜನ್ಯವನ್ನು ನಾವು ತೋರಲಿಲ್ಲ..! ಈಗಂತೂ ವರ್ಷಗಳೇ ಉರುಳಿವೆ  ಪ್ರೇಮವಿರದ ಹೃದಯದ ಅಟ್ಟಣಿಗೆಯಲ್ಲಿಧೂಳಿಡಿದ ಅದರ ನೆನಪುಗಳನ್ನಷ್ಟೇ  ಜತನವಾಗಿ ಜೋಡಿಸಿಟ್ಟಿದ್ದೆವೆ..!ಎದುರು ಸಿಕ್ಕರೆಅಪರಿಚಿತರಂತೆ ಸೋಗು ಹಾಕಿಮುಂದೆ ನಡೆದುಬಿಡುತ್ತೇವೆ..! ಆದರೆನಮ್ಮ ಪ್ರೇಮವನ್ನು ಕಂಡುನಿತ್ಯ ಹಲುಬುತ್ತಿದ್ದಈ ಜನ ಮಾತ್ರನಾವು ಬೇರಾದ ನಂತರವೂಸಮಾಧಾನಗೊಳ್ಳದೆತಮ್ಮ ಸಂಶಯಾಸ್ಪದ ಕಂಗಳಲ್ಲಿಎಂದೋ ಸಮಾಧಿಯಾಗಿರುವನಮ್ಮ ಪ್ರೇಮವನ್ನುನಾವು ಹೋದಲ್ಲಿ ಬಂದಲ್ಲಿಭೇಟಿಯಾಗುತ್ತಿದ್ದ ಜಾಗಗಳಲ್ಲಿಈಗಲೂ ತನಿಖೆ ನಡೆಸುತ್ತಿದ್ದಾರೆ..! ಪಾಪಪ್ರೇಮದ ಕುರಿತು ನಮಗಿಂತಲೂಜನರಿಗೆ  ತುಂಬಾ ಖಾತ್ರಿ ಇರಬೇಕುಸತ್ತ ನಂತರವೂ ಅದುಬದುಕುಳಿದು ಬಿಡುವಹಲವು ಸಾಧ್ಯತೆಗಳ ಬಗ್ಗೆ..! ಆದರೆ ನಾವು ಹಾಗಲ್ಲನಮ್ಮ ಹಳೆಯ ಡೈರಿಯನ್ನುಆಗಾಗವಿಷಾದದಲ್ಲಿ ತಿರುವು ಹಾಕುತ್ತಾಆತ್ಮ ವಿಲಾಪದಲ್ಲಿಪ್ರತಿನಿತ್ಯ ಪ್ರೇಮಸತ್ತ ದಿನವನ್ನುಆಚರಿಸುತ್ತೇವೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಕವಿತೆ “ಪ್ರೇಮ ಸತ್ತ ದಿನ” Read Post »

ಕಾವ್ಯಯಾನ

“ಹೊತ್ತು ಸಾಗುವವರಿಗೆ ಶವವಾಗು!” ಶಿವಲೀಲಾ ಹುಣಸಗಿ ಯಲ್ಲಾಪುರ

ಕಾವ್ಯ ಸಂಗಾತಿ ಶಿವಲೀಲಾ ಹುಣಸಗಿ ಯಲ್ಲಾಪುರ “ಹೊತ್ತು ಸಾಗುವವರಿಗೆ ಶವವಾಗು!” ನೀನಗೇನು ದಕ್ಕಿತುನಿನ್ನದೆನ್ನುವ ಕಿಂಚಿತ್ತು ಭಾವವೆದಹಿಸಿದಷ್ಟು ಸುಲಭವಾಗಿನೇವರಿಸಿ ಸರಿದಷ್ಟು ಗಾಢವಾಗಿ ಅಯ್ಯೋ, ಬಿಡು ಅದೇ ಮಾತುಅದೇ ಕಥೆ! ಸೊಗಸಿಲ್ಲದ ಭಾವಗೀತೆಅತ್ತು ಕರೆದಷ್ಟು ಉಮ್ಮಳಿಸಿತು  ಸಿಟ್ಟು,ಸೆಡುವು ನೆಲ ಸಮವಾತು. ಆದರೆ,ನಿನಗೇನೂ ಪರಕಾಗಿಲ್ಲಬಿಟ್ಟು ಹೋದ ಜಾಡುಗಳೆಲ್ಲಜಂಜಾಟದ ಬೇರುಗಳಾಗಿ ಇಳೆ ಸೇರಿಮೌನದ ಗಾಯ ಮಾಸಲಿಲ್ಲ ಹೋಗಲಿ ಬಿಡು ನಿನಗೇನು ಬೇಕಿತ್ತುದೈಹಿಕ ತೃಷೆ ಮಣ್ಣಾಗದಿದ್ದಿತೆಮುಖವಾಡಗಳು ಕಳಚಿ ಬಿದ್ದಾಗಿದೆಬಣ್ಣ ಮಾಸಲು ಸಮಯ ಬೇಕೆ ಇನ್ನಾದರೂ ದೂರ ಹೋಗಿ ಬಿಡುನಿನ್ನೊಳಗೆ ನಾನಿಲ್ಲವೆಂಬ ಸತ್ಯಅರಿವಿಗೆ ಬಂದರೆ ಸಾಕಲ್ಲವೆಮಸ್ತಕದ ಪುಟ ತಿರುವಿ ನೋಡಬೇಕೆ ಕೊನೆಗೂ,ನಾನಿಲ್ಲದ ಬದುಕು ನಿನ್ನಾಯ್ಕೆಹೊಸದೆನಿಲ್ಲ ಬಿಡು ಲೋಕ ಬಲ್ಲವಗೆಹಳೆ ನೀರು ಮುಂದಾಗಬೇಕುಹೊಸ ನೀರು ಹಳತಾಗಲು ಕಾಯಬೇಕು ಎಲ್ಲ ಕಳಚುವ ಮುನ್ನ ಎಚ್ಚರಾಗುನಿನ್ನದಲ್ಲದ ಚಿಂತೆಗೆ ಚಿತೆ ಕಟ್ಟುಹೊತ್ತು ಸಾಗುವವರಿಗೆ ಶವವಾಗುಮಣ್ಣಲಿ ಉಳುವವಗೆ ಹೊರೆಯಾಗದಿರು ಮತ್ತೆ ಸಿಗುವ ಹಂಬಲವಿಲ್ಲಯಾವ ಜನ್ಮದ ನಂಟುಬೇಕಿಲ್ಲಇದ್ದಾಗಲೇ ಸಾವ ಕಂಡವರಿಗೆಮತ್ತೆ ಹುಟ್ಟುವ ಕನಸಿಲ್ಲ….. ಶಿವಲೀಲಾ ಹುಣಸಗಿ ಯಲ್ಲಾಪುರ

“ಹೊತ್ತು ಸಾಗುವವರಿಗೆ ಶವವಾಗು!” ಶಿವಲೀಲಾ ಹುಣಸಗಿ ಯಲ್ಲಾಪುರ Read Post »

ಇತರೆ

“ಸ್ಪರ್ಧೆಗೆ ಬಿದ್ದ ಬದುಕು.” ಜಯಲಕ್ಷ್ಮಿ ಕೆ.

ಬದುಕಿನ ಸಂಗಾತಿ ಜಯಲಕ್ಷ್ಮಿ ಕೆ. “ಸ್ಪರ್ಧೆಗೆ ಬಿದ್ದ ಬದುಕು.” ನಾನು  ಮಂಗಳೂರಿನಿಂದ ಮಡಿಕೇರಿಗೆ ಬಂದ ಮೊದಲ ವರ್ಷದಲ್ಲಿ ನಡೆದ ಘಟನೆಯಿದು. ನಮ್ಮ ಮನೆಯ ಎದುರಿದ್ದ ಬಾಡಿಗೆ ಮನೆಗೆ ಒಂದು ಸಂಸಾರ  ಬಂತು, ಅಪ್ಪ, ಅಮ್ಮ, ಒಂದು ಮಗು.ಪುಟ್ಟ ಮಗುವನ್ನು ಆ ಅಪ್ಪ ಅಮ್ಮ ಆಡಿಸುತ್ತಿದ್ದ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಅವರಿಬ್ಬರೂ ಯಾವುದೇ ಉದ್ಯೋಗಕ್ಕೆ ಹೋಗುತ್ತಿರಲಿಲ್ಲ. ಬಹುಶಃ ಕಾಫಿ ತೋಟದ ಮಾಲಿಕರಿರಬೇಕು ಎಂದು ನಾವು ಭಾವಿಸಿದ್ದೆವು. ಹೀಗೆ ಭಾವಿಸಲೂ ಕಾರಣಗಳಿದ್ದವು. ಅವರ ಮನೆಯ ಮಾಲಿಕ ಒಂದು ಹೊಸ ಕಾರು ಖರೀದಿ ಮಾಡಿ ತಂದ ಮರುವಾರವೇ ಇವರೂ ಹೊಸ ಕಾರು ಕೊಂಡಿದ್ದರು. ಅವರು ವಿದೇಶ ಪ್ರಯಾಣ ಮಾಡಿ ಬಂದಿದ್ದೇ ಇವರೂ ಆ ಪುಟ್ಟ ಮಗುವಿನ ಜೊತೆಗೆ ವಿದೇಶಕ್ಕೆ ಹೋಗಿ ಬಂದು ಅಲ್ಲಿನ ಅನುಭವ ವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಮನೆ ಮಾಲೀಕನ ಮಗ ಟೆರೇಸ್ ನ ಮೇಲೆ ನಿಂತು ಇಳಿ ಸಂಜೆಯ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾಗ ಈ ಮಗು ಕ್ಯಾಮೆರಾ ಗೆ ಹಠ ಮಾಡಿತೆಂದು  ತಕ್ಷಣ ಪೇಟೆಗೆ ಹೋಗಿ ಮಗುವಿಗೆ ಕ್ಯಾಮರಾ ತಂದು ಕೊಟ್ಟಿದ್ದರು.( ಆಗ ಸ್ಮಾರ್ಟ್ ಫೋನ್ ಇರಲಿಲ್ಲ ) ಅವರ ವೈಭವದ ಜೀವನಾ ಶೈಲಿಯನ್ನು ನೋಡುತ್ತಿದ್ದ ನಮಗೆ ” ಸಿರಿವಂತರ ಬದುಕು ಎಷ್ಟು ಚಂದ!! ಬೇಕೆನಿಸಿದ್ದನ್ನು ಆ ಕ್ಷಣದಲ್ಲಿ ಕೊಂಡುಕೊಳ್ಳುವ ಸಾಮರ್ಥ್ಯ ಅವರಿಗಿರುತ್ತದೆ. ಆ ಮಗು ಅದೆಂತ ಅದೃಷ್ಟಶಾಲಿ! ” ಎಂದೆಲ್ಲ ಎನಿಸುತ್ತಿತ್ತು. ಹೀಗೆ ಹೆಚ್ಚು ದಿನಗಳೇನೂ ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ಅವರ ಮನೆಯ ಎದುರಿಗಿದ್ದ ಕಾರು ಕಣ್ಮರೆಯಾಗಿತ್ತು!! ಒಂದು ದಿನ ನಾನು ಕಾಲೇಜು ಮುಗಿಸಿ ಮನೆಗೆ ಬರಬೇಕಾದರೆ ಆ ಬಾಡಿಗೆ ಮನೆಯ ಎದುರು ಹತ್ತಾರು ಪೊಲೀಸರು !!! ಅಲ್ಲಿ ಏನು ನಡೆಯುತ್ತಿದೆ ಎಂದು ಕುತೂಹಲದಿಂದ ನನ್ನ ಮಗುವನ್ನು  ನೋಡಿಕೊಳ್ಳುತ್ತಿದ್ದಾಕೆಯನ್ನು ಕೇಳಿದೆ. ಆಕೆ ಹೇಳಿದ್ದು ಒಂದೇ ವಿಚಾರ…ಆ ಮನೆಯವರು ಯಾರೂ ಕಾಣಿಸುತ್ತಿಲ್ಲ, ಬರೀ ಪೊಲೀಸರು ಇದ್ದಾರೆ ಎಂದು. ಹೊತ್ತು ಹೋಗುತ್ತಿದ್ದಂತೆ ಸುದ್ದಿ ಸ್ಪಷ್ಟವಾಗಿ ಹಬ್ಬತೊಡಗಿತ್ತು. ಆ ಬಾಡಿಗೆ ಮನೆಯಾತ ಕಾರಿಗಾಗಿ ಸಾಲ ಮಾಡಿದ್ದ, ಸಾಲಗಾರರು ಕಾರನ್ನು ಒಯ್ದಿದ್ದರು. ಮನೆ ಬಾಡಿಗೆ ಪಾವತಿಸದೆ ಮೂರು ತಿಂಗಳು ಕಳೆದಿದೆ.ತಮ್ಮ ಐಷಾರಾಮಿ ಜೀವನಕ್ಕಾಗಿ ಇಲ್ಲೇ ಸಮೀಪದ ಹಳ್ಳಿಯಲ್ಲಿದ್ದ ಆತನ ಮಾವ ( ಮಡದಿಯ ತಂದೆ )ನನ್ನು   ಪದೇ ಪದೇ ಪಿಡಿಸಿ ಹಣ ತರುವುದು ಅವನ ಅಭ್ಯಾಸ . ಆ ದಿನ ಮಡದಿ ಮತ್ತು ಮಗುವನ್ನು ಕರೆದುಕೊಂಡು ಮಾವನ ಮನೆಗೆ ಹೋಗಿದ್ದಾನೆ . ಅಲ್ಲಿ ಹಣಕ್ಕಾಗಿ ಕಾಡಿದ್ದಾನೆ . ಮಾವ ಹಣ ಕೊಡಲು ಉಪ್ಪದೇ  ಹೋದಾಗ ಮಾವನನ್ನು ಇರಿದು ಕೊಂದು,  ಎದುರು ಬಂದ ಅತ್ತೆಗೂ ಮಡದಿಗೂ ಇರಿದು ಅರೆಸ್ಟ್ ಆಗಿದ್ದಾನೆ. ಮಗು ಅನಾಥ ಆಗಿದೆ, ಸುಂದರ ಬದುಕಿನ ಪಯಣ ದುರಂತಗೊಂಡಿದೆ. ಇತ್ತ,ಮನೆ ಮಜರು ನಡೆಸಲು ಪೊಲೀಸರು ಬಂದಿದ್ದಾರೆ. ನಾನು ಸಹಜತೆಯನ್ನು ಬಿಟ್ಟು  ಅಸಹಜ ಬದುಕಿನತ್ತ ಎಷ್ಟು ವೇಗವಾಗಿ ಹೆಜ್ಜೆ ಹಾಕುತ್ತೇವೆಯೋ ಅಷ್ಟೇ ವೇಗವಾಗಿ ಹೆಜ್ಜೆಗಳಿಗೆ ಸಂಪೂರ್ಣ ವಿರಾಮ ಹಾಕುವ ಸ್ಥಿತಿಗೆ ಇಳಿದುಬಿಡುತ್ತೇವೆ. ವೈಭವದಲ್ಲಿ ಬದುಕುವ ಯಾರನ್ನೋ ನೋಡಿ ನಾವು ಹಾಗೆಯೇ ಬದುಕಬೇಕು ಎಂದೇಕೆ ಬಯಸಬೇಕು?  ಹಾಸಿಗೆ ಇದ್ದಷ್ಟೇ ಕಾಲು ಚಾಚ ಬೇಕು. ನಮ್ಮ ಪಾಲಿಗೆ ಏನು ದೊರೆಯಬೇಕೋ ಅದಷ್ಟನ್ನು ದೇವರು ಕೊಟ್ಟೆ ಕೊಡುತ್ತಾನೆ.” What is in our fate, that much we definitly get ” ಎನ್ನುವ ಆಂಗ್ಲ ಮಾತಿನ ಅರ್ಥವೂ ಇದೇ. ” ಅದೃಷ್ಟವೋ..ಅವಕಾಶವೋ.. ಸಂಪತ್ತೋ… ಸೌಂದರ್ಯವೋ.. ನಿನಗೆ ಮೀಸಲಿಟ್ಟದ್ದು ಮಾತ್ರ ನಿನ್ನದು  ” ಎನ್ನುವ ಮಾತಿನಂತೆ  ಬದುಕಿನ ಪಯಣದಲ್ಲಿ ನಮಗೆ ಎಷ್ಟು ದೊರೆಯಬೇಕೋ ಅದಷ್ಟೇ  ಸಿಗಲು ಸಾಧ್ಯ. ನೆರೆಯ ಮನೆಯವನಿಗೆ ಗಿಟ್ಟಿತೆಂದು ಅದನ್ನು ಪಡೆಯುವ ಹಠಕ್ಕೆ ನಾವು ಬೀಳಬಾರದು. ಪಕ್ಕದ ಮನೆಯವರು ದುಬಾರಿ ಬೆಲೆಯ ಕಾರು,ಫೋನು,ಅಥವಾ ಇನ್ನಿತರ ವಸ್ತುಗಳನ್ನು ಖರೀದಿಸಿದಾಗ ತಾವೇನೂ ಅವರಿಗಿಂತ ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಲು ಸಾಲ ಮಾಡಿಯಾದರೂ ಅವುಗಳನ್ನು ಖರೀದಿಸುವ ಹಠಕ್ಕೆ ಬಿದ್ದರೆ ಸಮಾಜದಲ್ಲಿ ಅವಮಾನವನ್ನು ಎದುರಿಸಬೇಕಾಗುತ್ತದೆ. ಸಾಲಗಾರ ಎಂದೆನಿಸಬೇಕಾಗುತ್ತದೆ,ಅಥವಾ ಬದುಕೇ ದಿಕ್ಕು ತಪ್ಪುತ್ತದೆ. ಈ ವಿಷಯದಲ್ಲಿ  ನೆರೆಹೊರೆಯವರೊಡನಾಗಲೀ,   ಕುಟುಂಬದವರೊಡನಾಗಲೀ ಎಂದಿಗೂ ಸ್ಪರ್ಧೆಗೆ ಇಳಿಯಬಾರದು. ಅಂತಹ ಮನಸ್ಥಿತಿ ಬಂದಿದ್ದೇ ಆದಲ್ಲಿ ಮನಃಶಾಂತಿ ಕೆಡುತ್ತದೆ. ನಮ್ಮ ಕುಟುಂಬದ  ನೆಮ್ಮದಿ ಹಾಳಾಗುತ್ತದೆ. ಮನೆ ಅಶಾಂತಿಯ ಗೂಡಾಗಿ ಬದುಕಿನ ಆನಂದವೇ ಕಳೆದು ಹೋಗುತ್ತದೆ.  ಪ್ರಸ್ತುತ ಸಮಾಜದಲ್ಲಿ ಸ್ಪರ್ಧೆಗೆ ಬೀಳುವ ಪ್ರವೃತ್ತಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿರುವ ಬಗ್ಗೆ ವರದಿಗಳು ಬರುತ್ತಿವೆ. ಪಕ್ಕದ ಮನೆಯವರ ಬೆಳವಣಿಗೆಯನ್ನು ನೋಡಿ ಅಸೂಯೆ ಪಡುವುದು, ಆ ಹಂತಕ್ಕೇ ತಾನೂ ತಲುಪಬೇಕು ಎಂದು ವ್ಯರ್ಥ ಪ್ರಯತ್ನದಲ್ಲಿ ತೊಡಗುವುದು.. ಅದೊಂದು  ಮಾನಸಿಕ ಕಾಯಿಲೆ. ಒಮ್ಮೆ ಆ ಕಾಯಿಲೆ ಬಂತೆಂದರೆ ಮುಗಿಯಿತು! ಅವರಿಗಿಂತ ತಾವು ಮೇಲಿರಬೇಕೆಂದು ಪೈಪೋಟಿ ನಡೆಸುವ ಮನೋಭಾವ ಹೆಚ್ಚುತ್ತಾ ಹೋಗಿ  ಸಂತೋಷ ಸರ್ವನಾಶವಾದಂತೆ!!ಇಂತಹ ಮನಸ್ಥಿತಿ  ಕೆಲವೊಮ್ಮೆ  ಅಪರಾಧಗಳಿಗೂ ದಾರಿ ಮಾಡಿಕೊಡಬಹುದು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ನೆರೆಹೊರೆಯವರಲ್ಲಿ ಪರಸ್ಪರ ಸ್ಪರ್ಧೆ, ಫ್ಯಾಶನ್ ವಿಷಯದಲ್ಲಿ ಸ್ಪರ್ಧೆ, ವಸ್ತುಗಳ ಖರೀದಿಯ  ವಿಚಾರದಲ್ಲಿ ಸ್ಪರ್ಧೆ… ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ… ಸ್ಪರ್ಧೆ.  ಬದುಕು ಸ್ಪರ್ಧೆಗಿಟ್ಟ ಸರಕಲ್ಲ. ಅದೊಂದು ಅನನ್ಯ ಪಯಣ. ಪ್ರತಿಯೊಬ್ಬರ ಬದುಕಿನ ಶೈಲಿ ಕೂಡ ವಿಶಿಷ್ಟ,ವಿಭಿನ್ನ. ಜೀವನವೆಂಬ ಪರೀಕ್ಷೆ ನಕಲು ಮಾಡುವಂಥದ್ದಲ್ಲ. ಪ್ರತಿಯೊಬ್ಬರ ಜೀವನ ಶೈಲಿಯೂ ಅವರ ಕೌಟುಂಬಿಕ ಹಿನ್ನೆಲೆ, ಸಮಯ, ಸಂಪನ್ಮೂಲ ಇತ್ಯಾದಿಗಳ ತಳಹದಿಯಲ್ಲಿ ರೂಪುಗೊಂಡಿರುತ್ತದೆ. ಜೀವನದ ಪಥಗಳಲ್ಲಿ ಭಿನ್ನತೆ ಇರುವಂತೆ ಸಂತೋಷ ಕೊಡುವ ಅಂಶಗಳೂ ವಿಭಿನ್ನವಾಗಿರುತ್ತವೆ. ಯಾರದ್ದೋ ಬದುಕನ್ನು ನೋಡಿ ಅವರಂಥಾಗಲು ಸ್ಪರ್ಧೆಗೆ ಇಳಿಯುವ ಬದಲು ನಮ್ಮ ಬದುಕಿನ ಸುಧಾರಣೆಯತ್ತ ಗಮನ ಹರಿಸಿದಲ್ಲಿ ಸುಖ ಸಂತೋಷದ ಜೀವನ ನಮ್ಮದಾಗಬಹುದು. ಜ್ಞಾನಿಯೊಬ್ಬರ ನುಡಿಮುತ್ತು ” ಯಾರೊಂದಿಗೂ ಎಂದಿಗೂ ಸ್ಪರ್ಧಿಸಬೇಡಿ, ಯಾರಿಗಿಂತಲೂ ಶ್ರೇಷ್ಠವಾಗಬೇಕು ಎಂದು ಪ್ರಯತ್ನಿಸಬೇಡಿ, ನಿನ್ನೆ ನೀವು ಇದ್ದುದ್ದಕ್ಕಿಂತ ಇಂದು ಉತ್ತಮರಾಗಲು ಪ್ರಯತ್ನಿಸಿ  “ ಜಯಲಕ್ಷ್ಮಿ ಕೆ.

“ಸ್ಪರ್ಧೆಗೆ ಬಿದ್ದ ಬದುಕು.” ಜಯಲಕ್ಷ್ಮಿ ಕೆ. Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಗಡಿನಾಡ ಸೊಲ್ಲಾಪುರ- ಕನ್ನಡದ ಬೇರುಗಳು ಗಡಿನಾಡ ಸೊಲ್ಲಾಪುರ-ಕನ್ನಡದ ಬೇರುಗಳು ಸೊಲ್ಲಾಪುರದೊಳಗೆ ಸೊಲ್ಲ ಅಡಗಿಸಬ್ಯಾಡೋನಿಲ್ಲೆಂದು ತಾಯಿನುಡು ನಿಲ್ಲಿಸಿದರು-ಸಿದ್ದರಾಮ ಅಲ್ಲಗಳಿದವರಿಗೆ ತಿಳಿಹೇಳು || ಕನ್ನಡ ತಾಯಿನುಡಿ‌ |ಮನ್ನಿಸಿ ಮಾತನಾಡುಅನ್ಯಕ್ಕೆ ಮರುಳಾಗದಿರು ಮರುಳೇ-ನೀ ಕನ್ನಡಿಗನೆಂದು ಮರೆಯಬೇಡ|| ಎಂದು ಜಯದೇವಿ ತಾಯಿಯವರು ಗಡಿನಾಡ ಕನ್ನಡಿಗರಿಗೆ ತಿಳಿಹೇಳಿದರು. ಅನ್ಯ ಬಗೆದವರಿಗೆ ತಿಳಿಹಳೆಂದು  ಆರಾಧ್ಯ ದೈವನಾದ ಸೊನ್ನಲಿಗಿ ಸಿದ್ದರಾಮನಲ್ಲಿ ಬೇಡಿಕೊಂಡರು. ೧೯೫೬ರಲ್ಲಿ ವಿಶಾಲ ಮೈಸೂರು ರಾಜ್ಯ ಉದಯವಾದರೂ, ಅವರ ಮನಸ್ಸಿನ ಕರ್ನಾಟಕದ ಗಡಿ ಅಲ್ಲಿ ನಿಲ್ಲಲಿಲ್ಲ. ಗಡಿಭಾಗದ ಕನ್ನಡಿಗರಿಗೆ ನೋವಾಗಿತ್ತು….  ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಬೆಳಗಾವಿ ಮತ್ತು ಇತರ ಗಡಿಪ್ರದೇಶಗಳ ಕನ್ನಡಿಗರ ಹಕ್ಕಿನ ಪ್ರಶ್ನೆಗಳನ್ನು ಎತ್ತುತ್ತ ಜಯದೇವಿತಾಯಿಯವರ ಹೋರಾಟ ಜನರ ಮಧ್ಯೆ ಮುಂದುವರಿಯುತ್ತಿತ್ತು.  ಹಾಗೇ ಜೀವನದ ಕೊನೆಯವರೆಗೂ ಜೀವಂತವಾಗಿಟ್ಟರು. ಸೊಲ್ಲಾಪುರವೆಂಬುದು ಕನ್ನಡ ನಾಡಿನ ಐತಿಹಾಸಿಕ ನೆನಪುಗಳನ್ನು, ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಭಾಷಿಕ ಅಸ್ಮಿತೆಯನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ನೆಲ. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ಸೊಲ್ಲಾಪುರದೊಂದಿಗೆ ಕನ್ನಡ ನಾಡಿಗಿದ್ದ ಸಂಬಂಧವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.  ಶತಮಾನಗಳ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಮೂಲಕ ಈ ಪ್ರದೇಶವು ದಕ್ಷಿಣ ಭಾರತದ ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಅವುಗಳಲ್ಲಿ ಕನ್ನಡ ನಾಡಿನ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅನೇಕ ರಾಜಮನೆತನಗಳೂ ಸೇರಿದ್ದವು. ಶಾತವಾಹನರಿಂದ ಆರಂಭಿಸಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ದೇವಗಿರಿಯ ಯಾದವರು ಹಾಗೂ ವಿಜಯಪುರದ ಆದಿಲಶಾಹಿಗಳವರೆಗೆ ವಿವಿಧ ಅರಸು ಮನೆತನಗಳು ಈ ವಿಶಾಲ ಪ್ರದೇಶದ ಇತಿಹಾಸದ ಮೇಲೆ ತಮ್ಮ ಛಾಪು ಮೂಡಿಸಿವೆ. ಈ ರಾಜಮನೆತನಗಳ ಆಳ್ವಿಕೆಯ ಕಾಲದಲ್ಲಿ ಆಡಳಿತ, ಧರ್ಮ, ಸಾಹಿತ್ಯ, ಕಲೆ ಮತ್ತು ಜನಜೀವನದ ಹಲವು ಆಯಾಮಗಳಲ್ಲಿ ಪರಸ್ಪರ ಸಾಂಸ್ಕೃತಿಕ ವಿನಿಮಯಗಳು ಹುನ್ನಾರದಲ್ಲಿ ನಡೆದವು. ಎಲ್ಲ ಐತಿಹಾಸಿಕ ಬೆಳವಣಿಗೆಗಳನ್ನು ಗಮನಿಸಿದಾಗ ಸೊಲ್ಲಾಪುರ ಮತ್ತು ಕನ್ನಡ ನಾಡಿನ ನಡುವಿನ ಸಂಬಂಧವು ಕೇವಲ ಭಾಷೆಯ ಮಟ್ಟಕ್ಕೆ ಸೀಮಿತವಾಗಿರದೆ, ವಿಶಾಲವಾದ ಐತಿಹಾಸಿಕ ಹಾಗೂ ಸಂಸ್ಕೃತಿಕ ಹಿನ್ನೆಲೆಯನ್ನು ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರದೇಶದ ಕನ್ನಡದ ಬೇರುಗಳನ್ನು ಅರಿಯಲು ರಾಜಮನೆತನಗಳ ಇತಿಹಾಸ…..ಅಲ್ಲಿನ ಜನಸಾಮಾನ್ಯರ ಬದುಕು, ಆಡಳಿತ ವ್ಯವಸ್ಥೆ, ಧಾರ್ಮಿಕ ಸಂಸ್ಥೆಗಳು, ಜಾತ್ರೆಗಳು, ಆಚರಣೆಗಳು ಮತ್ತು ಶಾಸನಗಳೂ ಅಷ್ಟೇ ಮಹತ್ವದ ಆಧಾರಗಳಾಗಿವೆ.ಸೊಲ್ಲಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆತಿರುವ ಶಾಸನಗಳು, ದೇವಾಲಯಗಳ ಪರಂಪರೆ ಮತ್ತು ಸ್ಥಳೀಯ ಧಾರ್ಮಿಕ ಆಚರಣೆಗಳು ಈ ನೆಲದ ಬಹುಮುಖ ಇತಿಹಾಸವನ್ನು ಪರಿಚಯಿಸುತ್ತವೆ. ಅವುಗಳಲ್ಲಿನ ಭಾಷೆ, ಕಾಲಮಾನ ಮತ್ತು ವಿಷಯವಸ್ತುವಿನ ಅಧ್ಯಯನವು ಕನ್ನಡದ ಐತಿಹಾಸಿಕ ಪ್ರಭಾವವನ್ನು ಗುರುತಿಸಲು ನೆರವಾಗುತ್ತದೆ. ಒಂದು ಕಾಲದಲ್ಲಿ ಈ ಭಾಗದ ಆಡಳಿತಭಾಷೆಗಳ ಅಧ್ಯಯನ ಮಾಡಿದಾಗ, ಕನ್ನಡಿಗರ ಉಪಸ್ಥಿತಿ ಮತ್ತು ಕನ್ನಡ ಸಂಸ್ಕೃತಿಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ  ಸೊಲ್ಲಾಪುರದ ಕನ್ನಡ ಸಂಸ್ಕೃತ ಪ್ರತಿಬಿಂಬಿಸುವ ಧಾರ್ಮಿಕ ಆಚರಣೆಗಳಲ್ಲಿಯೂ ಕನ್ನಡದ ಪರಂಪರೆಯ ಛಾಯೆಯನ್ನು ಕಾಣಬಹುದು. ಹನ್ನೆರಡನೇ ಶತಮಾನದ ಸಿದ್ಧರಾಮೇಶ್ವರರ ಪರಂಪರೆ ಮತ್ತು ಅವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಈ ಪ್ರದೇಶದ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಸಿದ್ಧರಾಮೇಶ್ವರರು  ಶರಣ ಪರಂಪರೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.   ಕನ್ನಡದ ಶರಣ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರರ ಅಂದರೆ ಈ ನೆಲದ ಧಾರ್ಮಿಕ ಇತಿಹಾಸದ ಜೊತೆಗೆ ಕನ್ನಡದ ಶರಣ ಚಳವಳಿಯ ಪ್ರಭಾವವನ್ನೂ ಅರಿಯುವುದಾಗಿದೆ.ಜಾತ್ರೆಗಳು  ಒಂದು ಸಮಾಜದ ಸಾಮೂಹಿಕ ಸ್ಮೃತಿ, ಪರಂಪರೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತಗಳಾಗಿವೆ. ತಲೆಮಾರುಗಳಿಂದ ಮುಂದುವರಿದು ಬಂದ ಆಚರಣೆಗಳು, ಜನರ ನಂಬಿಕೆಗಳು, ಶರಣರ ಬಗೆಗಿನ ಭಕ್ತಿ ಮತ್ತು ಸ್ಥಳೀಯ ಸಂಪ್ರದಾಯಗಳು ಒಂದು ಪ್ರದೇಶದ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸೊಲ್ಲಾಪುರದ ಸಿದ್ಧರಾಮೇಶ್ವರರ ಪರಂಪರೆಯೂ ಅಂತಹ ಮಹತ್ವವನ್ನು ಹೊಂದಿದೆ. ಈ ಪರಂಪರೆಯ ಐತಿಹಾಸಿಕ ಬೇರುಗಳನ್ನು ಪರಿಶೀಲಿಸಿದಾಗ, ಕನ್ನಡದ ಶರಣ ಸಂಸ್ಕೃತಿ ಈ ಪ್ರದೇಶದ ಜನಜೀವನದೊಂದಿಗೆ ಹೊಂದಿದ್ದ ಸಂಬಂಧದ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಮುಂದೆ ಸೊಲ್ಲಾಪುರ ೧೩ನೇ ಶತಮಾನದಲ್ಲಿ ಉದ್ಯಮ ಕ್ಷೇತ್ರಕ್ಕೆ ವಲಸೆದಾರರು ಬಂದು ಮರಾಠಿಗರಿಂದ ಯಂತ್ರೋದ್ಯಮ ಕಲಿತ ಕನ್ನಡಿಗರು ಮರಾಠಿ ಪ್ರಭಾವಕ್ಕೆ ಒಳಗಾಗಿ ಕನ್ನಡವನ್ನು ಹಿಂದಕ್ಕೆ ಸೇರಿಸಲಾಯಿತು .ಆ ಸ್ಥಾನದಲ್ಲಿ ಮರಾಠಿ ಕಲಿತರು ತಾಯಿನುಡಿಯ ಅಭಿಮಾನಿಗಳಾದ ಮರಾಠಿಗರು ಕನ್ನಡವನ್ನು ಬಳಸಲು ಪ್ರಯತ್ನಿಸಲಿಲ್ಲ. ಬ್ರಿಟಿಷರ ವಿರುದ್ಧದ ಹೋರಾಟದ ಸಂಬಂಧದಲ್ಲಿ ತಿಲಕರು ಸೊಲ್ಲಾಪುರಕ್ಕೆ ಬಹಳ ಬಂದು ಹೋಗುತ್ತಿದ್ದರು. ಹೀಗಾಗಿ ಅವರ ಪ್ರಚಾರ ಮರಾಠಿಯಲೇ ಇರುತಿತ್ತು . ಇದು ಕೂಡ ಪ್ರಬಲವಾದ ಕಾರಣ ಅಂತ ಹೇಳಬಹುದು.ಅಧಿಕಾರದ ಪ್ರಭಾವದಿಂದ ಮರಾಠಿ ತನ್ನ ನೆಲೆಯನ್ನು ಕಂಡು ಕೊಂಡು ಭದ್ರವಾಗಿತ್ತು.  ಕನ್ನಡವು ಅನ್ಯ ನುಡಿಗಳಿಂದ ಹತ್ತಿಕಲ್ಪಟ್ಟಿತು.  ಈ ಮಧ್ಯದಲ್ಲಿ ಕನ್ನಡಪರ ಪ್ರಬಲ ಶಕ್ತಿಗಳಾಗಿ ಕೆಲವು ಕನ್ನಡ ಮನೆತನಗಳು ಇವೆ ಅಖಂಡ ಕರ್ನಾಟಕ ಸಾಹಿತ್ಯ ಪರಿಷತ್ತು, ಅಖಂಡ ಕರ್ನಾಟಕ ಏಕೀಕರಣ ಪರಿಷತ್ತು, ಅಖಂಡ ಕರ್ನಾಟಕ ಆಯುರ್ವೇದ ಪರಿಷತ್ತು ,ಮೊದಲಾದ ಕನ್ನಡ ಪರ ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತಿದ್ದವು .ಮುಂಬೈ ಹೈಕೋರ್ಟಿನ ಚೀಫ್ ಜಸ್ಟಿಸ್ ಸೊಲ್ಲಾಪುರಕ್ಕೆ ಬೆಟ್ಟಿ ಕೊಟ್ಟಾಗ ಅಲ್ಲಿಯ ಕೋರ್ಟಿನಲ್ಲಿಯು ಸಹ ಕನ್ನಡ ಮಾಧ್ಯಮವಿರಬೇಕೆಂದು ಕೇಳಿಕೊಳ್ಳಲಾಯಿತು.  ಸೊಲ್ಲಾಪುರ 12 ಶತಮಾನಕ್ಕಿಂತ ಮೊದಲನೇ ಕನ್ನಡ ಭಾಷೆಯು ಅವಿಭಾಜ್ಯ ಅಂಗವಾಗಿತ್ತು ಅಲ್ಲಿ ನೂರು ವರ್ಷಗಳಿಂದಲೂ ಕಾಗದ ಪತ್ರಗಳು ಕನ್ನಡದಲ್ಲಿ ಇರುವುದು ಗಮನಾರ್ಹವಾಗಿದೆ.ಹೀಗಾಗಿ ಸೊಲ್ಲಾಪುರ ಪಟ್ಟಣವು ತನ್ನ ಪ್ರಭಾವವನ್ನು ಕನ್ನಡಿಗರ ಮೇಲೆ ಹೊಂದಿರುವುದು ಇಂದಿಗೂ ಕಾಣಬಹುದಾಗಿದೆ.  ಕನ್ನಡ ಪಟ್ಟಣವಾದ ಸೋಲಾಪುರ ಮರಾಠಿ ಸ್ಥಳವಾಗಿ ಮಾರ್ಪಟ್ಟಿದ್ದು ಒಂದು ಆಕಸ್ಮಿಕ ಈ ಪಟ್ಟಣದ ಒಂದೇ ಒಂದು ಸಣ್ಣ ಭಾಗ ಮರಾಠಿ ಹಳ್ಳಿಗಳ ಜೊತೆಗೆ ಸಂಪರ್ಕ ಹೊಂದಿದ್ದು ಉಳಿದೆಲ್ಲ ಭಾಗ ಅಂದರೆ ತಾಲೂಕು ಹಳ್ಳಿಗಳು ಕನ್ನಡ ಪ್ರದೇಶಗಳಾಗಿವೆ. ಕನ್ನಡ ಜನತೆಯ ಕುಲ ಕಸುಬುಗಳು ಇಂದಿಗೂ ಕನ್ನಡ ಮಾಧ್ಯಮಿಕ ಪ್ರಾಥಮಿಕ ಮತ್ತು ಶಾಲೆಗಳು ನಡೆಯುತ್ತಿವೆ . ಕನ್ನಡ ಗಡಿ ಭಾಗವೆಂದು ಕೊಳ್ಳುವ ಸೊಲ್ಲಾಪುರ ಅಕ್ಕಲಕೋಟ ಜತ್ತ ಕಾಸರಗೋಳ ತಾಳವಾಡಿ ಆದೂನಿ ,ಆಲೂರ ,ರಾಯದುರ್ಗ ,ಹೊಸೂರ ನೀಲಗಿರಿ, ಇಲ್ಲಿ ವಾಸಿಸುವ ಕನ್ನಡದ ಮಕ್ಕಳಿಗೆ ಶಾಲೆಗಳು  ಈಗಲೂ ಇವೆ. ಕರ್ನಾಟಕದಿಂದ ಹೊರಗುಳಿದ ಕನ್ನಡ ನಾಡುಗಳ ಅಂಕಿ..ಅಂಶಗಳ ವಿವರ ಹೀಗಿದೆ….೧೯೫೬ ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ, ದ್ವಿಭಾಷಾ ಮುಂಬೈ ಪ್ರಾಂತ್ಯದಲ್ಲಿ ಸುಮಾರು *೧೩ ಲಕ್ಷ ಕನ್ನಡಿಗರು* ಕರ್ನಾಟಕಕ್ಕೆ ಸೇರದೆ ಹೊರಗೆ ಉಳಿದರು.  ಕೊಲ್ಲಾಪುರ ಮತ್ತು ಸತಾರಾ ಭಾಗ….ಗಡಹಿಂಗ್ಲಜ ತಾಲೂಕು..ಜನಸಂಖ್ಯೆ ೧,೧೧,೨೪೨, ವಿಸ್ತೀರ್ಣ ೧೫೧ ಚದರ ಮೈಲುಗಳಷ್ಟಾದರೆ, ಶಿರೋಳ ತಾಲೂಕಿನ…. ಜನಸಂಖ್ಯೆ ೧,೨೧,೯೧೨, ವಿಸ್ತೀರ್ಣ ೨೧೨ ಚದರ ಮೈಲುಗಳು,  ಇನ್ನು ಹತ್ಕಣಂಗಲೆ ತಾಲೂಕು… ಜನಸಂಖ್ಯೆ ೧,೬೫,೨೦೦,ಮಿರಜ್ ತಾಲೂಕು… ಜನಸಂಖ್ಯೆ ೨,೮೫,೫೨೯, ವಿಸ್ತೀರ್ಣ ೨೧೧ ಚದರ ಮೈಲುಗಳು,ಜತ ತಾಲೂಕು… ಜನಸಂಖ್ಯೆ ೧,೦೯,೫೨೦, ವಿಸ್ತೀರ್ಣ ೯೨ ಚದರ ಮೈಲುಗಳು,ಇದರ ಜೊತೆಗೆ ತಾಸಗಾಂವ್ ಮತ್ತು ಏಳವಾ ತಾಲೂಕಿನ ಅನೇಕ ಕನ್ನಡ ಹಳ್ಳಿಗಳು ಕೂಡ ಸೇರಿವೆ. ಸೊಲ್ಲಾಪುರ ಭಾಗ…..ದಕ್ಷಿಣ ಸೊಲ್ಲಾಪುರ ಅಂದರೆ ಸೊಲ್ಲಾಪುರ ನಗರ ಸೇರಿ…ಜನಸಂಖ್ಯೆ ೩,೨೦,೫೯೦ಮಂಗಳವೇಡೆ ಮತ್ತು ಉತ್ತರ ಸೊಲ್ಲಾಪುರ… ಸುಮಾರು ೨೦ ಕನ್ನಡ ಹಳ್ಳಿಗಳು,ಸಾಂಗೋಲಾ ತಾಲೂಕು….ಕೆಲವು ಕನ್ನಡ ಹಳ್ಳಿಗಳುಅಕ್ಕಲಕೋಟೆ ಪೂರ್ಣ ತಾಲೂಕು… ಜನಸಂಖ್ಯೆ ೧,೪೭,೭೪೫, ವಿಸ್ತೀರ್ಣ ೪೫೪ ಚದರ ಮೈಲು ಇನ್ನು ಮರಾಠವಾಡದ ಭಾಗಗಳತ್ತ ಬಂದರೆ…..ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ಮತ್ತು ನಳದುರ್ಗ ತಾಲೂಕುಗಳ ಅರ್ಧದಷ್ಟು ಭಾಗ,ಲಾತೂರು ತಾಲೂಕಿನ ಕನ್ನಡ ಹಳ್ಳಿಗಳು, ನಾಂದೇಡ ಜಿಲ್ಲೆಯ ದೇಗಲೂರು ತಾಲೂಕು … ಇಲ್ಲಿ ಗೋದಾವರಿ ನದಿ ಹರಿಯುತ್ತದೆ, ಅದರ ತೀರದವರೆಗೆ ಇಂದಿಗೂ ಅಚ್ಚ ಕನ್ನಡ ಮಾತನಾಡುವ ಜನರಿದ್ದಾರೆಭೀಡ ಮತ್ತು ಪರಭಣಿ ಜಿಲ್ಲೆಗಳಲ್ಲಿ ಸುಮಾರು ಎರಡು ತಾಲೂಕುಗಳಷ್ಟು ವಿಸ್ತೀರ್ಣದ ಕನ್ನಡ ಹಳ್ಳಿಗಳು ಇವೆ. ಈ ಪಟ್ಟಿಯಲ್ಲಿಯೇ ಸುಮಾರು ೧೨ ರಿಂದ ೧೩ ಲಕ್ಷ ಜನಸಂಖ್ಯೆ ಮತ್ತು ೧೫೦೦ ಚದರ ಮೈಲುಗಿಂತ ಹೆಚ್ಚು ವಿಸ್ತೀರ್ಣದ ಕನ್ನಡ ನಾಡು ಹೊರಗೆ ಉಳಿದಿದೆ. (೧೯೫೧ ರ ಜನಗಣತಿಯ ಆಧಾರದ ಮೇಲೆಯೇ ಈ ಲೆಕ್ಕವನ್ನು ನೀಡಲಾಗಿದೆ.) ೯೨ ಚದರ ಮೈಲಿ ವಿಸ್ತೀರ್ಣ ಮತ್ತು ೧,೦೯,೫೨೦ ಜನಸಂಖ್ಯೆ ಹೊಂದಿರುವ ಈ ಪ್ರದೇಶ ಇಂದಿಗೂ ಕರ್ನಾಟಕದ ಗಡಿಯಿಂದ ಹೊರಗೆ ಉಳಿದುಹೋಯಿತು ಅನ್ನುವ ನಿರಾಸೆ ಜಯದೇವಿ ತಾಯಿಯವರಲಿತ್ತು…. ಅಕ್ಕಲಕೋಟೆ ಇಡೀ ತಾಲೂಕು …೪೫೪ ಚದರ ಮೈಲು ವಿಸ್ತೀರ್ಣ ಮತ್ತು ೧,೪೭,೭೪೫ ಜನಸಂಖ್ಯೆ ಹೊಂದಿದ್ದರೂ ಕರ್ನಾಟಕಕ್ಕೆ ಸೇರಿಲ್ಲ. ಇದೇ ರೀತಿ ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ಮತ್ತು ನಳದುರ್ಗ ತಾಲೂಕುಗಳ ಅರ್ಧ ಭಾಗ, ಲಾತೂರು ತಾಲೂಕಿನ ಕನ್ನಡ ಹಳ್ಳಿಗಳು, ನಾಂದೇಡ ಜಿಲ್ಲೆಯ ದೇಗಲೂರು ತಾಲೂಕು ….ಈ ತಾಲೂಕಿನ ಮಧ್ಯದಲ್ಲಿಯೇ ಗೋದಾವರಿ ನದಿ ಹರಿಯುತ್ತದೆ, ಆ ನದಿಯ ತೀರದವರೆಗೂ ಇಂದಿಗೂ ಶುದ್ಧ ಕನ್ನಡ ಮಾತನಾಡುವ ಜನ ವಾಸಿಸುತ್ತಿದ್ದಾರೆ. ಅದಲ್ಲದೆ ಬೀಡ ಮತ್ತು ಪರಭಣಿ ಜಿಲ್ಲೆಗಳಲ್ಲಿ ಸುಮಾರು ಎರಡು ತಾಲೂಕುಗಳಷ್ಟು ಕನ್ನಡ ಹಳ್ಳಿಗಳು ಕರ್ನಾಟಕದಿಂದ ಹೊರಗುಳಿದಿವೆ. *ಕನ್ನಡ ನಾಡಿನ ಸ್ಥಳದಲ್ಲಿ ಮತ್ತೊಂದು ಭಾಷೆವನ್ನು ತನ್ನ ಪ್ರಾಬಲ್ಯವನ್ನು ಸಾಧಿಸುವುದೆಂದರೆ ಅದರ ಪ್ರಭಾವಕ್ಕೆ ಒಳಗಾಗಿ ತನ್ನತನವನ್ನು ಕಳೆದುಕೊಂಡಿದೆ ಅನ್ನುವುದಕ್ಕೆ ಉದಾಹರಣೆ ಎಂದರೆ ಮುಂಬೈ ಅಂತ ನಗರದಲ್ಲಿ ಮೊಟ್ಟಮೊದಲ ಆಂಗ್ಲ ಗೌರ್ನರ್ ಗೆ ಕೊಡಮಾಡಿದ ನಾಗರಿಕ ಸನ್ಮಾನ ಪತ್ರ ಕನ್ನಡ ಭಾಷೆ ಕನ್ನಡ ಲಿಪಿಯಲ್ಲಿ ಇತ್ತು ಎನ್ನುವುದನ್ನು ನೆನೆಸಿಕೊಂಡು ಅಂದಿನಿಂದ ಇಂದಿನವರೆಗೂ ಪರಿಸ್ಥಿತಿಯನ್ನು ವೀಕ್ಷಿಸಿದರೆ ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದುಕೊಂಡು ಬಂದಿರುವುದು ಸ್ಪಷ್ಟವಾಗುವದು.* ಸೊಲ್ಲಾಪುರದ ಇತಿಹಾಸವನ್ನು ಈ ದೃಷ್ಟಿಕೋನದಿಂದ ಅಧ್ಯಯನ ಮಾಡಿದಾಗ, ಕರ್ನಾಟಕ ಏಕೀಕರಣದ ಹೋರಾಟದ ಹಿಂದೆ ಇದ್ದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡದ ಬೇರುಗಳು ಎಷ್ಟೇ ಆಳವಾಗಿದ್ದರೂ….ಅವುಗಳನ್ನು , ಸಂರಕ್ಷಿಸಿ, ಮುಂದಿನ ತಲೆಮಾರಿಗೆ ತಲುಪಿಸುವುದು ಕೂಡ ಇತಿಹಾಸದ ಅಧ್ಯಯನದ ಉದ್ದೇಶವಾಗ ಬೇಕೆನ್ನುತ್ತಿದ್ದರು ಜಯದೇವಿ ತಾಯಿಯವರು. ಹೊರನಾಡ ಮತ್ತು ಗಡಿನಾಡ ಕನ್ನಡಿಗರಲ್ಲೂ ಕನ್ನಡದ ಕಿಚ್ಚು ಕನ್ನಡದ ಧರ್ಮ ಉಳಿದುಕೊಂಡು ಬೆಳೆದುಕೊಂಡು ಬರುವಂತೆ ನಮ್ಮ ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು ಎನ್ನುತ್ತಿದ್ದರು. ಜಯದೇವಿ ತಾಯಿಯವರು ಕನ್ನಡ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸಲು ತಯಾರಿಸಿದರು. ತಮ್ಮ ಸ್ವಹಿತಾಸಕ್ತಿಗಳನ್ನು ಬದಿಗಿಟ್ಟು ಕುಟುಂಬದ ಸಮಸ್ಯೆಗಳ ಮಧ್ಯದಲ್ಲೂ ಮನೆಯವರ ಮನ ಒಲಿಸಿಕೊಂಡು ಅಡುಗೆ ಕೆಲಸದವರನ್ನು ಕರೆದುಕೊಂಡು, ಮನೆಯಲ್ಲಿ ಕಾಳು ಕಡಿಗಳನ್ನು ಅಡುಗೆ ಸಾಮಾಗ್ರಿಗಳನ್ನು ಕಟ್ಟಿಕೊಂಡು ಕಾರಿನಲ್ಲಿ ಪ್ರಚಾರಕ್ಕೆ ಹೊರಡುವರು .ಕಾರುಹೋಗದ ಊರುಗಳಿಗೆ ಎತ್ತಿನ ಬಂಡಿಯಲ್ಲಿ ಸಂಚರಿಸಿದರು. ಅಕ್ಕನ ಬಳಗ, ಬಸವ ಜಯಂತಿ,ನಾಡಹಬ್ಬ, ಅನೇಕ ಸಭೀ ಸಮಾರಂಭಗಳ ವೇದಿಕೆಗಳ ಮೂಲಕ ಕನ್ನಡ ಪ್ರಚಾರ ಕೈಗೊಂಡರು. ಹೋದ ವೇದಿಕೆಯಲ್ಲಿ ಪ್ರಯಾಣದ ಭತ್ತಿ ತೆಗೆದುಕೊಳ್ಳುತ್ತಿರಲಿಲ್ಲ .ಇರಲು ಅವಕಾಶಕೊಟ್ಟರೆ ಅಲ್ಲಿ ಕನ್ನಡತನವನ್ನು ಬೆಳೆಸಲು ಉಪಯೋಗಿಸುತ್ತಿದ್ದರು. “ಇಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸೊಲ್ಲಾಪುರದ ನೆಲದಲ್ಲಿಯೇ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಮುಂದುವರಿಸಿಕೊಂಡು ಹೋಗುವ ಪ್ರಶ್ನೆ ಜಯದೇವಿತಾಯಿಯವರ ಬದುಕಿನ ಮಹತ್ವದ ಧ್ಯೇಯವಾಗಿ ರೂಪುಗೊಂಡಿತು. ತಮ್ಮ ಬದುಕನ್ನೇ ಹೋರಾಟದ ಹಾದಿಯಲ್ಲಿ ಮುಡಿಪಾಗಿಟ್ಟರು.ಅದೇ ರೀತಿಯಾಗಿ….ಅಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನು ಅನ್ಯ ಭಾಷೆಕರೊಂದಿಗೆ ಬೆಲೆಯೂ ಅವರೊಂದಿಗೆ ಸೌಹಾರ್ದತೆಯಿಂದ ಬಾಳ ಬದುಕಬೇಕು ಅನ್ನುವನ ಕರೆ ಕೊಟ್ಟರು. ಹಾಗೇಯೇ  ಗಡಿನಾಡ ಕನ್ನಡಿಗರು ಅನ್ಯಭಾಷಿಕರೊಂದಿಗೆ ಅನುಸರಿಸಿಕೊಂಡು ಬದುಕುತ್ತಿದ್ದರೂ ಕೂಡ. ಸವಿತಾ ದೇಶಮುಖ

Read Post »

ಇತರೆ, ರಂಗಭೂಮಿ

“ನೂರು ಸಿನಿಮಾ ಕನಸು ಹೊತ್ತು ಬಂದೆ, ರಂಗನಟನಾದೆ”  ರಮೇಶ್ ಸುರ್ವೆ ಗೊರೂರು ಅನಂತರಾಜು

ಕಾವ್ಯ ಸಂಗಾತಿ ಗೊರೂರು ಅನಂತರಾಜು “ನೂರು ಸಿನಿಮಾ ಕನಸು ಹೊತ್ತು ಬಂದೆ, ರಂಗನಟನಾದೆ”  ರಮೇಶ್ ಸುರ್ವೆ ನೂರು ಸಿನಿಮಾ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಮಾಡಲು ಸಾಧ್ಯವಾಗಿದ್ದು ಒಂದೆ ಸಿನಿಮಾ ಅದು ಮಂದಾಕಿನಿ ಎಂದರು ರಮೇಶ್ ಸುರ್ವೆ. ಕಥೆ, ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲಾ ನನ್ನದೆ. ಸಿನಿಮಾ ನೋಡಿದವರು ಒಂದು ಸಾವಿರ. ಚಿತ್ರದಲ್ಲಿ ಮನರಂಜನೆ  ಇತ್ತು. ಅದೃಷ್ಟ ಕೈ ಕೊಟ್ಟಿತ್ತು. ಸಾಮಾಜಿಕ ಜಾಲ ತಾಣದಲ್ಲಿ ನೋಡಿದವರು ಬಹಳ ಇರಬಹುದು. ಬಾನಿಗೆ ಭಾಸ್ಕರ್ ಚೆಂದ..ಎಂಬ ನನ್ನ ಗೀತೆಗೆ ೨೦೦೮ರಲ್ಲಿ ಹಿನ್ನೆಲೆ ಗಾಯನಕ್ಕೆ ನಂದಿತಾ ಅವರು ಪ್ರಶಸ್ತಿ ಪಡೆದರು.. ಎಂದು  ಸುರ್ವೆ ಸಮಾಧಾನಗೊಂಡರು. ಇವರು ನನಗೆ ಹಲವು ವರ್ಷಗಳಿಂದ ಪರಿಚಿತರು. ಸುರ್ವೆ ಪತ್ರಿಕೆ. ಇಂಜಿನಿಯರ್ ಡೈರಿ ಎರಡೂ ಪತ್ರಿಕೆಗಳ ಸಂಪಾದಕರು. ಸಿನಿಮಾ ರಂಗ ಇವರ ಕೈ ಹಿಡಿಯಲ್ಲಿಲ್ಲ. ಆದರೆ ಬರವಣಿಗೆ ಕೈ ಬಿಡಲಿಲ್ಲ.ನಾನು ಜನಿಸಿದ್ದು ಇಟಗಿಯಲ್ಲಿ ದಿ. ೫.೫.೧೯೫೮ರಂದು. ಇಟಗಿ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿಗೆ ಸೇರಿದ್ದು ಮಹಾದೇವ ದೇವಸ್ಥಾನದಿಂದ ಇತಿಹಾಸ ಪ್ರಸಿದ್ಧವಾಗಿದೆ.  ನಾನು ಓದಿದ್ದು ಪಿಯುಸಿವರೆಗೆ.  ನನ್ನ ಮೊದಲ ಕವಿತೆ ಮೊರಾರ್ಜಿ ಸ್ವಾಗತ ಗೀತೆ. ಬರೆದು ವಾಚಿಸಿದ್ದೆ. ದಿನಕರ ದೇಸಾಯಿ ಅವರ ಚುಟುಕು ನನಗೆ ಇಷ್ಟ. ಮೊದಲಿಗೆ ನನ್ನ ಕವಿತೆಗಳು ದುಡಿಮೆ, ವಾಸವಿ, ವಿಶ್ವ ಪರ್ಯಟನೆ, ವಿನೋದವಾಣಿ ಪತ್ರಿಕೆಗಳಲ್ಲಿ ಬೆಳಕು ಕಂಡವು. ನನ್ನ ತಂದೆ ಮಾರುತಿರಾವ್ ಸುರ್ವೆ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು. ಅಜ್ಜ ಗೋವಿಂದರಾವ್ ಸುರ್ವೆ ಕರಣಿಕರು. ಕರಾರು ಪತ್ರ ಆಸ್ತಿ ಪತ್ರ ಬರೆಯುವ ಪರಿಣಿತರು.    ಚಿಕ್ಕಪ್ಪ ಕೇಶವರಾವ್ ಭಜನಾ ಕಲಾವಿದರು. ಮಾವ ವಾಸುದೇವರಾವ್ ಬಯಲಾಟದಲ್ಲಿ ಆಂಜನೇಯ ಪಾತ್ರ ಮಾಡಿದ್ದರು.  ಇವರೆಲ್ಲಾ  ಪ್ರಭಾವ ನನ್ನ ಮೇಲಿತ್ತು. ಪ್ರಾಚಾರ್ಯ ಸೂರ್ಯನಾರಾಯಣರಾವ್ ಪ್ರೋತ್ಸಾಹದಿಂದ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕಾಲಿಟ್ಟೆ. ೧೦ ನಿಮಿಷದ ಭೀಮ ಏಕಪಾತ್ರಾಭಿನಯದಲ್ಲಿ ಗದೆ ಎತ್ತಿ ಆರ್ಭಟಿಸಿದೆ. ಇವೇ ೮೫ ಪ್ರದರ್ಶನ ಆಗಿವೆ. ಸೇತು ಮಾದವರಾವ್ ಹಂಜಕ್ಕಿ ಅವರ ಮಾರ್ಗದರ್ಶನದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೋಣಾಚಾರ್ಯ ಪಾತ್ರ ನಿರ್ವಹಿಸಿದಾಗ ನನಗೆ ವಯಸ್ಸು ೧೮. ನನಗೆ ಮೊದಲು ಗುಬ್ಬಿ ಕಂಪನಿ ಜೊತೆ ಒಂದು ವರ್ಷದ ಗೆಳತನವಿತ್ತು. ಚಿತ್ರನಟಿ ಶೃತಿ ಅವರ ತಾಯಿ ರಾಧಾ ರುಕ್ಮಿಣಿ ಲವಕುಶ ಪಾತ್ರ ಮಾಡುತ್ತಿದ್ದರು.  ನನ್ನ ರಂಗಾಸಕ್ತಿ ಗಮನಿಸಿ ವೀರಣ್ಣನವರು ನಾಟಕ ನೋಡಲು ಅವರ ಕ್ಯಾಂಟಿನ್‌ನಲ್ಲಿ ಊಟ ತಿಂಡಿ ನೀಡಿದರು. ಇದರಿಂದ  ನನ್ನ ರಂಗಾಸಕ್ತಿ ಹೆಚ್ಚಿತು. ಕುಕನೂರು ರಹಮಾನರ ಕಂಪನಿ, ಮಹಾಂತೇಶ ಶಾಸ್ತ್ರಿಗಳ ಕಂಪನಿ, ಹಾರಾಪೂರ ರಾಮರಾವ್ ದೇಸಾಯಿ ಕಂಪನಿ, ಬನಶಂಕರಿ ನಾಟ್ಯ ಸಂಘ, ಹುಮ್ನಾಬಾದ್ ಕಂಪನಿಗಳ ಸಹವಾಸ.  ಇಲ್ಲೆಲ್ಲಾ ಏಕದೃಶ್ಯ ಪಾತ್ರಕ್ಕೆ ಮಾತ್ರ ಸೀಮಿತ.   ೧೯೭೭ರಲ್ಲಿ ಬೆಂಗಳೂರಿಗೆ ಬಂದೆ. ಆದರ್ಶ ಫಿಲಂ ಇನ್ಸ್ಟ್ಯೂಟ್ ಸೇರಿದೆ. ಬಿ.ವಿ.ಕಾರಂತರು, ಗಿರೀಶ್ ಕಾಸರವಳ್ಳಿ ಪ್ರಾಚಾರ್ಯರು. ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ನಾಗಾಭರಣ, ಟಿ.ಎಸ್.ರಂಗ, ಜಿ.ವಿ.ಅಯ್ಯರ್, ಸುಂದರರಾಜ್, ಆರ್.ಟಿ.ರಮಾ, ರಾಜನ್ ನಾಗೇಂದ್ರ ಮುಂತಾದ ದಿಗ್ಗಜರ ಪಾಠ ಮತ್ತು ಒಡನಾಟ ದೊರಕಿತು. ೧೯೭೮ರಲ್ಲಿ  ಬೆಂಗಾಲಿ ನಾಟಕ ಕನ್ನಡಿಕರಿಸಿ ಬರೆದ ಪರಮೇಶಿ ಪಂಗನಾಮ ರವೀಂದ್ರ ಕಲಾಕ್ಷೇತ್ರದಲ್ಲಿ  ಪ್ರಯೋಗ ಕಂಡಿತು. ಹಾಸ್ಯನಟ ವೈಜನಾಥ ಬಿರಾದಾರ ನನ್ನೊಂದಿಗೆ ನಟಿಸಿದ್ದರು. ಇದು ೨೦ ಪ್ರಯೋಗ ಕಂಡಿದೆ. ನನ್ನ ೨ನೇ ನಾಟಕ ಕುಟುಂಬದಲ್ಲಿ ಕುರುಕ್ಷೇತ್ರ.  ನನ್ನೊಟ್ಟಿಗೆ ನಟಿಸಿದವರು ಮೈಸೂರು ರಮಾನಂದ, ವೈಜನಾಥ ಬಿರಾದರ, ಜಯಶ್ರೀ.  ಜಲೀಲನ ಜಟಕಾ,  ಕಿತಾಪತಿ ಕೃಷ್ಣಯ್ಯ ನನ್ನ ಇನ್ನೆರೆಡು ನಾಟಕಗಳು. ಹಾಸ್ಯವೇ ಈ ನಾಟಕಗಳ ಜೀವಾಳ.  ೩೦ ನಿಮಿಷಗಳ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಏಕಪಾತ್ರಾಭಿನಯ ಸ್ತ್ರಿಪ್ಟ್ ಬರೆದು ಅಭಿನಯಿಸಿರುವೆ. ಛತ್ರಪತಿ ಶಿವಾಜಿ, ಕೆಂಪೇಗೌಡ ಮೊದಲಾಗಿ ವಿವಿಧ ಪಾತ್ರಗಳ ವೇಷ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪೋಟೋಗಳು ನನ್ನ ಆಲ್ಬಂನಲ್ಲಿವೆ.  ಇದು ಸುರ್ವೆ ಅವರ ನಾಟಕ ಸಿನಿಮಾ ರಂಗದ ಕಿರುನೋಟ. ಇನ್ನೂ ಪತ್ರಿಕೆ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಇವರ ಸಾಧನೆ ಬಹಳಷ್ಟಿದೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ನೂರು ಸಿನಿಮಾ ಕನಸು ಹೊತ್ತು ಬಂದೆ, ರಂಗನಟನಾದೆ”  ರಮೇಶ್ ಸುರ್ವೆ ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಗಿರಿಜಾ ನಿರ್ವಾಣಿ ಹಾಸನ ಅವರ ಕೃತಿ “ಕರಿ ಮುಗಿಲು (ಕವನ ಸಂಕಲನ)ಅವಲೋಕನ,ಶಿವಲೀಲಾ ಹುಣಸಗಿ

ಪುಸ್ತಕ ಸಂಗಾತಿ ಶಿವಲೀಲಾ ಹುಣಸಗಿ ಗಿರಿಜಾ ನಿರ್ವಾಣಿ ಹಾಸನ “ಕರಿ ಮುಗಿಲು“ ಕವಯತ್ರಿಗಿರಿಜಾ ನಿರ್ವಾಣಿಯವರು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು.’ಕರಿಮುಗಿಲು’ ಇವರ ಎರಡನೇ ಕೃತಿಯಾಗಿದೆ.ಗಿರಿಜಾರವರ ಮನಸ್ಸು ಮತ್ತು ಕಾಯಕ ಸದಾ ಚೈತನ್ಯದಿಂದ ಕೂಡಿದ್ದು.ವೃತ್ತಿಗೆ ಸೇರಿದ ಎಲ್ಲ ಶಿಕ್ಷಕರ ಹೃದಯ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ಮಾಧ್ಯಮವೆಂದರೆ ತಪ್ಪಾಗದು.ಯಾವಾಗಲೂ ಒಂದಿಲ್ಲೊಂದು ಕ್ರಿಯಾತ್ಮಕ ಹಾಗೂ ಕ್ರಿಯಾಶೀಲ ಗುಣದಿಂದ ಕೂಡಿರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಗಿರಿಜಾರವರು.ಮಕ್ಕಳೊಂದಿಗೆ ಮಕ್ಕಳಾಗಿ ನಲಿಯುವ ಭಾಗ್ಯ ಶಿಕ್ಷಕರಿಗೆ ಭಗವಂತ ನೀಡಿದ ಕೊಡುಗೆಯಿದೆ.ಸಂತೃಪ್ತ ಭಾವ ಮೂಡುತ್ತದೆ.ಅದನ್ನು ಯಥೇಚ್ಛವಾಗಿ ಅನುಭವಿಸುವ ಯೋಗ ಎಲ್ಲರಿಗೂ ಒಲಿದರೆ ಅದರಷ್ಟು ಅದೃಷ್ಟ ಯಾರಿಗುಂಟು,ಯಾರಿಗಿಲ್ಲ..ಕವಿತೆಗಳ ವಿಮರ್ಶೆ ಮಾಡುವಷ್ಟು  ಅನುಭವ ನನಗಿಲ್ಲ.ಆದರೆ ಕವಿತೆಗಳನ್ನು ಓದಿ ಆಸ್ವಾಧಿಸುವ ಸಹೃದಯ ನನಗಿದೆ.ಕವಿತೆ ಬರೆಯುವ ಹುಚ್ಚು ಎಲ್ಲರಿಗೂ ದಕ್ಕುವುದಿಲ್ಲ.ದಕ್ಕಿದ್ದೆಲ್ಲವೂ ಕವಿತೆಯಾಗುವುದಿಲ್ಲ.ಓದುಗರ ಮನದಲ್ಲಿ ನೆಲೆ ನಿಲ್ಲುವುದಿಲ್ಲ..ಅದೊಂದು ತಪಸ್ಸು. ಓದು,ಬರಹ,ಅರಿವಿನ ಪಥ ಹುಡುಕ ಹೊರಟವನಿಗೆ ಗಿರಿಜಾರ ಕರಿಮುಗಿಲು ಕೊಂಚ ಆಶಾ ಭಾವ ಹುಟ್ಟು ಹಾಕುವುದರಲ್ಲಿ ಸಂಶಯವಿಲ್ಲ.. ಮುನ್ನುಡಿಯನ್ನು ಹಿರಿಯ ಸಾಹಿತಿಗಳಾದ ಶ್ರೀ ರಂಜಾನ್ ದರ್ಗಾ ಅವರು;”ಯಾವುದೇ ಸೃಜನಶೀಲ ಬರಹಗಾರ ಮೊದಲಿಗೆ ಕವಿಯಾಗಲು ಬಯಸುತ್ತಾನೆ;ಆದರೆ ಬರಬರುತ್ತಾ ಕಾವ್ಯದ ಜೊತೆಗಿನ ಸಂಬಂಧ ಬಹಳ ಕಠಿಣ ಭಾವ ಮೂಡುವುದು”.” ಕಾವ್ಯ ಪ್ರತಿಭೆಯೆಂಬುದು ಬಂದೂಕು ಇದ್ದಂತೆ;ಕವಿಯ ಪ್ರತಿಭೆಯಿಂದ ಮಾತ್ರ. ಶಬ್ದಗುಂಡುಗಳು ತೀವ್ರ ತರವಾಗಿ ಹಾರಿ ಅಜ್ಞಾನ ಎಂಬ ವೈರಿಯನ್ನು ಕೊಲ್ಲಬಲ್ಲವು” ಎಂಬ ಸಾಲುಗಳು ಸಾಕು.ಒಬ್ಬ ಕವಿಗಿರಬೇಕಾದ ತಾಳ್ಮೆ ಕಾಯಕನಿಷ್ಠೆ ಜೊತೆಗೆ ಸಮಾಜದ ಒಳಹರಿವನ್ನು ಗುರುತಿಸಿ ತೀಕ್ಷ್ಣವಾಗಿ ಖಂಡಿಸುವ ಎದೆಗಾರಿಕೆ ಬೆರಳೆಣಿಕೆಯಷ್ಟು ಕವಿಗಳಿಗೆ ಸಾಧ್ಯ.ನಿಷ್ಠುರವಾಗಿ ಎಲ್ಲರಿಂದಲೂ ದೂರಾಗುವ ಮುನ್ಸೂಚನೆ ದಕ್ಕಿ ದೂರಾದ ಉದಾಹರಣೆ ಕೂಡ ಇದೆ.ಹೀಗಾಗಿ ಕಾಲಕ್ಕೆ ತಕ್ಕಂತೆ ಕವಿಗಳು ಕೂಡ ಬದಲಾಗುತ್ತಿದ್ದಾರೆ…ಅಂದರೆ ತಪ್ಪಿಲ್ಲ….ಗಿರಿಜಾರವರು ತಮ್ಮ ಅನುಭವದ ಮೂಸೆಯಲ್ಲಿ ಮಿಂದೆದ್ದ ಜನಪರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸೃಜನಶೀಲ ಬರಹಗಾರ್ತಿ. “ಕರಿಮುಗಿಲು” ಕವನ ಸಂಕಲನ ಒಟ್ಟು 63 ಕವನಗಳನ್ನು ಹೊಂದಿದೆ. ಪ್ರತಿ ಕವಿ ಮನಸು ಆರಾಧಿಸುವುದು ” ನಿಸ್ವಾರ್ಥ ಪ್ರೀತಿ”ಯನ್ನು ಅದು “ರಾಧಾ ಕೃಷ್ಣ” ಇಂದಿಗೂ ಅಜರಾಮರ.ಎಷ್ಟೋ ಪ್ರೀತಿಗಳು ನನಸಾಗದೇ ಕನಸಾಗಿ ಉಳಿದಿವೆ..ಆದರೆ ಕವಯತ್ರಿಯ ಪ್ರೇಮದಲಿ ಸ್ವತಃ ತಾನೆ ಕೃಷ್ಣನಾಗಿ ರಾಧೆಯನ್ನು ಪಡೆದ ಪ್ರೀತಿ ಮೆಚ್ಚುವಂತಹುದು. ಕನಸಿನಲ್ಲಿ ಬಂದವಳು ನನಸಾಗಿ ನಿಂತಳುಭವ ಬಂಧನಗಳ ಬೆಸೆದುಬಾಳೆಂಬ ಪಥದಿ ಒಲವೆಂಬ ಹೂಚಲ್ಲಿಜೀವನವೆಂಬ ಬಂಡಿಯ ಎಳೆದೇವೂ..                                            –  ಕನಸಿನ ರಾಧೆ ಪ್ರೀತಿಯಂದರೆ ಹಾಗೆಯೇ, ಒಮ್ಮೆ ಹೃದಯದಿ ಬೆರೆತು ನಿಂತಾದ ಮೇಲೆ ಅದು ತನ್ನ ನಶೆಯನ್ನು ಹಂತಹಂತವಾಗಿ ಇಡೀ ಜೀವನದುದ್ದಕ್ಕೂ ಬೆಸುಗೆಯಾಗಿ ನಿಲ್ಲುವಂತೆ ಮಾಡುವುದಾಗಿದೆ.ದಾಂಪತ್ಯ ರಸವತ್ತಾಗಿರಲು ದಂಪತಿಗಳು ವಿರಸದತ್ತ ಸಾಗದೇ ನವರಸದತ್ತ ಒಲವ ಹರಿಸಿದರೆ ಪ್ರೇಮಕ್ಕೊಂದು ಬೆಲೆ..ತನ್ನ ಉಸಿರಾದ ಜೀವಕ್ಕೆ ಕೊಡುವ ಗೌರವ. ಹೋಗದಿರು ನೆರಳೆ ನೀ ನನ್ನ ಬಿಟ್ಟುಬಯಸಿ ಬಂದೆ ಅಪ್ಪುಗೆಯನಿಲ್ಲು ನಿಲ್ಲು ಅಂತರಾಳದ ಬಿಂಬವೆಆಗಸದಿ ತೇಲುತ್ತಿಹ ಮೋಡವೇ                                        –  ಓ ನನ್ನ ಪ್ರಿಯತಮ ಕವಯತ್ರಿ ಗಿರಿಜಾ ನಿರ್ವಾಣಿಯವರು,ಸಾಧಿಸುವ ಹಾದಿ ಯಾವತ್ತೂ ಹೂಗಳಿಂದ ಕೂಡಿರುವುದೆಂದು ತಿಳಿದರೇ ಅದು ಸಾಧನೆಯ ಮೊದಲ ಅಡತಡೆ..ಕಾರಣ ಸಾಧಿಸುವ ಛಲಗಾರನಿಗೆ ಮಾತ್ರ ಸಾಧನೆಯ ಮಹತ್ವ ಗೊತ್ತು..ಹಠವಿರಬೇಕು ತನ್ನ ಗುರಿಯ ತಾನು ಮುಟ್ಟಲು.ಎಷ್ಟೋ ಹಗೆ ಸಾಧಿಸುವವರ ಮುಂದೆ ಸೋಲದೇ,ಸೋಲನ್ನು ಗೆಲುವಿನ ಮೆಟ್ಟಿಲು ಮಾಡಿಕೊಳ್ಳುವ ಗುಣ ಹೊಂದಬೇಕು…ಸ್ವತಃ ಕ್ರೀಡಾಪಟುವಾದ ಗಿರಿಜಾರವರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಾಧಿಸಬೇಕಾದ ಹಾದಿಯನ್ನು ಸರಳವಾಗಿ ಉದಾ.ಮೂಲಕ ವ್ಯಕ್ತ ಪಡಿಸಿದ್ದಾರೆ. ಸಾಧಕನಿಗೆ ಛಲವಿರಬೇಕೆ ವಿನಃಅಸೂಯೆ ಇರಬಾರದುಏನಾದರೂ ಆಗಲಿ ಎಂತಾದರುಆಗಲಿ ಸಾಧಿಸುವ ಅಟ್ಟ ಛಲವಬಿಡಬೇಡವೆಂದ ನಮ್ಮಪ್ಪ ನಿಮ್ಮಪ್ಪ ಬಸಪ್ಪ                                –   ಸಾಧನೆಯ ಹಾದಿ ಹೆಣ್ಣು ಮಕ್ಕಳ ಜೀವನ ಕಷ್ಟಕಾರ್ಪಣ್ಯಗಳ ಸಂಗಮ.ವೃದ್ಧಾಪ್ಯದಗೋಳು ಒಂದುತರ.ಅದರಲ್ಲೂ ಮದುವೆಯಾಗಿ ಮಕ್ಕಳಾಗಿದ ಮೇಲೆ ಅನುಭವಿಸುವ ನೋವನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಸಮಾಜದ ಅಂಕುಡೊಂಕಿನ ಭಾವಕ್ಕೆ ಸವಾಲಾಗಿ ಬರೆದಿದ್ದಾರೆ.ಬಂಜೆಯಾದರೂ ಪರವಾಗಿಲ್ಲ,ಮಕ್ಕಳಿದ್ದೂ ಬಂಜೆಯ ಬಾಳು ಕಾಣುವವರಿಗೆ ಇದರಂತ ಸಂಕಷ್ಟ ಬೇರೊಂದಿಲ್ಲ..ಸಮಾಜದಲ್ಲಿ ವೃದ್ದಾಶ್ರಮಗಳು ಹೆಚ್ಚುತ್ತಿರುವ ಬಗ್ಗೆ ಮಕ್ಕಳು ಏಕೆ ಬೇಕು ಎನ್ನುವುದನ್ನು ಮಾರ್ಮಿಕವಾಗಿ ಕವಿತೆಯ ಮೂಲಕ ವ್ಯಕ್ತ ಪಡಿಸಿದ್ದಾರೆ. ಕಷ್ಟ ಪಟ್ಟು ಕೂಲಿಯ ಮಾಡಿಹೊಟ್ಟೆಗೆ ಬಟ್ಟೆಯ ಕಟ್ಟಿ ತಾವುಕಟ್ಟಿದ ಮನೆಯೊಳಗೆ ಜಾಗವಿಲ್ಲಅವರ ಕೂಗು ದೇವರಿಗೆ ಕೇಳಿಸಬೇಕಲ್ಲ.. ಮನೆತುಂಬ ರಂಪಾಟ ಮಾಡಿಮಕ್ಕಳು ಬಂದಾಗ ಕಿವಿ ಚುಚ್ಚುತ್ತಾರನಿಮ್ಮಪ್ಪನ ಹತ್ತಿರ ಮನೆಭಾಗ ಕೇಳಿಒಟ್ಟಿಗೆ ಇರಲು ಆಗೋಲ್ಲ ಅಂತಾರ                          – ಬಂಜೆ ಎನ್ನುವ ಪದ ಒಂದೇ ಸಾಕು ನವಮಾಸ,ಹಣೆಯ ಸಿಂಧೂರ,ತಾಯಿಹಕ್ಕಿ,ಜೀವನವೊಂದು ನಾಟಕ,   ಸೂರು,ಜೀವನ ನೀರ ಮೇಲಿನ ಗುಳ್ಳೆ,ಬಯಕೆ ಹೂ ಬಿಡದ ಬಳ್ಳಿನಾನು,ಎಂಬೆಲ್ಲ ಕವಿತೆಗಳು ಸ್ರ್ರೀ ಪರ ಮತ್ತು ಶೋಷಿತ ಮನಕೆ ಧೈರ್ಯ,ನೈಜತೆಯನ್ನು ಸಾರುವ ಮತ್ತು ಜೀವನದ ವಿವಿಧ ಮಜಲುಗಳನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಕವನ ಸಂಕಲನದ ಶೀರ್ಷಿಕೆ ಕವಿತೆ “ಕರಿಮುಗಿಲು” ಮರವು ಬಾಗಿ ಗಿಡವು ನೆಲವನ್ನು ಕಚ್ಚಿದೆಬಾರಿ ಬಿರುಗಾಳಿ ಬೀಸಿ ಮೋಡ ಮಳೆ ಸುರಿಸಿದೆಸುರಿವ ಮಳೆಯ ಸದ್ದಿಗೆಮಗುವು ಮಲಗದೆ ಎದ್ದಿದೆಪಕ್ಷಿಗಳ ಕಲರವು ಮುಗಿಲು ಮುಟ್ಟಿದೆರೆಕ್ಕೆ ಬಡಿದು ಸದ್ದು ಮಾಡದೆಮುದುಡಿ ಎಲೆಗಳ ಮರೆಯಲಿ ಮಲಗಿವೆ                                          -ಕರಿಮುಗಿಲುರೈತನ ಮೊಗದಲ್ಲಿ ಜೀವಕಳೆ ಬರಬೇಕು ಎಂದರೆ,ಇಳೆಗೆ ವರುಣ ತಂಪೆರೆಯಬೇಕು..ಹಚ್ಚ ಹಸಿರು ಜೀವಜಗತ್ತಿನ ಉಸಿರೆಂಬುದನ್ನು ಸಾರಿ ಸಾರಿ ಹೇಳಬೇಕು..ಅಂದಾಗ ಮಾತ್ರ ಧರಣಿ ಹರಿಣಿಯಂತೆ ಕುಣಿದು ಕುಪ್ಪಳಿಸಲು ಸಾಧ್ಯ.ಕರಿಮುಗಿಲು ಚೈತನ್ಯವನ್ನು ಹಿಡಿದಿಟ್ಟುಕೊಂಡ ಜೀವಸೆಲೆ…ಇದನ್ನು ಆರಾಧಿಸುವ ಮಣ್ಣಿನ ಮಕ್ಕಳು ಬಲ್ಲರು.ಅನ್ನದಾತ ನೀಡುವ ಬೆಳೆ ಅಮೃತಕ್ಕೆ ಸಮಾನ..ಕವಯತ್ರಿ ಜಗತ್ತಿನ ಜೀವಾಳ ಸೂರ್ಯನನ್ನು ಐಶ್ವರ್ಯದ ಸಂಕೇತವೆಂಬಂತೆ ಭಾವಿಸಿದ್ದು ಪ್ರಸ್ತುತ..ಉಷೆಯ ಕಿರಣ,ಶ್ರಾವಣ ಮಾಸದ ಜಡಿಮಳೆ,ತಾಯಿಮಡಿಲು, ಬೇಸರ,ಚಿಗುರೊಡೆದ ಹೊಂಗೆಮರ,ಇಳೆ ಮಳೆ..ಹೀಗೆ ಪ್ರಕೃತಿಯನ್ನು ವಿಧ ವಿಧವಾಗಿ ವರ್ಗೀಕರಿಸಿ ತಮ್ಮೊಳಗಿನ ಭಾವವನ್ನು ಕವಿತೆಯಲ್ಲಿ ಪ್ರತಿನಿಧಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ,, “ಕರಿಮುಗಿಲು” ಕವನಸಂಕಲನ ತನ್ನದೇ ಆದಂತಹ ವಿವಿಧ ಮಜಲುಗಳನ್ನು ಹೊತ್ತು ಕವಯತ್ರಿಯ ಮನದಂಗಳದಲ್ಲಿ ಅರಳಿರುವ ಹತ್ತಾರೂ ಭಾವದ ಹೂವುಗಳಾಗಿವೆ.ದೇಶ ಸೇವೆಯೆಂದ ಹಿಡಿದು ಮನುಷ್ಯನ ಸ್ವಾರ್ಥಕ್ಕೆ ಬಲಿಯಾದ ಎಲ್ಲ ವಾಸ್ತವತೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.ಅವರ ಅಕ್ಷರ ಪ್ರೀತಿ ಕನ್ನಡ ಸಾಹಿತ್ಯ ಕಣಜಕ್ಕೆ ಹೊಸ ಆಯಾಮಗಳಿಂದ ತುಂಬುವ ಶಕ್ತಿ ನೀಡಲೆಂದು ಹಾರೈಸುತ್ತೇನೆ. ಶಿವಲೀಲಾ ಹುಣಸಗಿ ಯಲ್ಲಾಪುರ.

ಗಿರಿಜಾ ನಿರ್ವಾಣಿ ಹಾಸನ ಅವರ ಕೃತಿ “ಕರಿ ಮುಗಿಲು (ಕವನ ಸಂಕಲನ)ಅವಲೋಕನ,ಶಿವಲೀಲಾ ಹುಣಸಗಿ Read Post »

You cannot copy content of this page

Scroll to Top