ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ” ನನಗೊಂದು ವರ” ಮಾತುಗಳಿಲ್ಲದ ಮೌನದಲ್ಲೂ,ಮನದ ಭಾವತಿಳಿಯುವೆ ನೀನು.ಕಷ್ಟದ ಹಾದಿಯ ಪಯಣದಲ್ಲೂ, ಜೊತೆಯಲಿನಡೆವೆ ನೀನು. ನಗುವಿನ ಅಲೆಯಲ್ಲಿ ಜೊತೆಯಾಗಿ ತೇಲಿ,ಕಣ್ಣೀರಿನ ಹನಿಗೂ ಹೆಗಲಾದೆ ನೀನು.ಲೋಕವೇ ಎದುರಾಗಿ ನಿಂತರೂ ಕೂಡ,ನನ್ನ ಹೆಜ್ಜೆಗೆ ಶಕ್ತಿ ತುಂಬುವೆ ನೀನು. ಕಾಲದ ಚಕ್ರವುಉರುಳಿದರೂ ,ನಮ್ಮೀ ಪ್ರೀತಿಯಬಂಧವು ಅಜರಾಮರ.ನಿನ್ನೊಲವ ಸನಿಹವೇ ನನಗೊಂದು ವರ.ಶ್ರಮ ಪೂಜೆಬಸವನಿಗೆ ಹೂಹಾರ ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್‌ ಚೇತನ ಸೊಲ್ಲಾಪುರದಿಂದ ದೆಹಲಿಯವರೆಗೆ *ಜವಾಹರ ನೆಹರು ಪಂಡಿತರಿಗೆ ನುಡದೇವಅವರವರ ನುಡಿಯಲಿ ರಾಜ್ಯವ, ನಡೆಯಲಿ ಅವಿಭಾಜ್ಯ ಭಾರತಕೆ ಬಲ ಬರಲಿ||*ಡಾ.ಜಯದೇವಿತಾಯಿ ೧೯೫೨ರ ಸಮಯ…… ಸಾರ್ವತ್ರಿಕ ಚುನಾವಣೆಯ ನಂತರ ವರ್ಷದ ಅಂತ್ಯದವರೆಗೂ ಆಂಧ್ರ ಮತ್ತು ಕರ್ನಾಟಕವನ್ನು ಪ್ರತ್ಯೇಕ ಪ್ರಾಂತ್ಯಗಳಾಗಿ ರಚಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆರಂಭದಲ್ಲಿ ಮನವಿ, ಅರ್ಜಿ ಮತ್ತು ವಿನಂತಿಗಳ ಮೂಲಕ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದರೂ, ನಂತರ ಹೋರಾಟ ಮತ್ತು ಪ್ರತಿಭಟನೆಯಂತಹ ಕಾರ್ಯಾಚರಣೆಗಳು ಆರಂಭವಾದವು.ಆಂಧ್ರದ ಪ್ರತ್ಯೇಕ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೀರ್ಘಕಾಲ  ೬೮ ದಿನ ಉಪವಾಸ ಮಾಡಿದರು ….೬೮ ನೆ ದಿನ‌ ಅವರು  ನಿಧನರಾದರು.  ಅವರ ಸಾವಿನಿಂದ ಆಂಧ್ರದಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.ಹೈದರಾಬಾದನ ನಾನಲ ನಗರದಲ್ಲಿ ನಡೆದ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ ಸಮಿತಿಯು ಆಂಧ್ರ ಪ್ರಾಂತ್ಯ ರಚನೆಯ ಬೇಡಿಕೆಯನ್ನು ಪರಿಗಣಿಸಿತು. ನಂತರ ಪ್ರಧಾನಿ ನೆಹರು ಸಂಸತ್ತಿನ ಡಿಸೆಂಬರ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕರ್ನಾಟಕದ ಬಗ್ಗೆ ಯಾವ ಮಾತನ್ನು ಅವರು  ಎತ್ತಲಿಲ್ಲ. ಅದರ ಪರಿಣಾಮವಾಗಿ ಮಾರ್ಚ್‌ನಲ್ಲಿ ಪ್ರತ್ಯೇಕ ಆಂಧ್ರ ಪ್ರಾಂತ್ಯ ರಚನೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದರಿಂದ ಕನ್ನಡಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಯಿತು. ಆಂಧ್ರದ ಬೇಡಿಕೆಗೆ ಸ್ಪಂದಿಸಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಭಾವಿಸಿದರು.  ಪರಿಣಾಮವಾಗಿ ಕನ್ನಡಿಗರು ಕಾಂಗ್ರೆಸ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ವಿಶಾಲ ಕರ್ನಾಟಕವನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಇನ್ನಷ್ಟು ಬಲವಾದದ ಆಶಯ ಮುಂದಿಟ್ಟರು. ಈ ಹೋರಾಟವೇ ಮುಂದೆ ಕರ್ನಾಟಕ ಏಕೀಕರಣ ಚಳವಳಿಗೆ ಮತ್ತಷ್ಟು ವೇಗ ನೀಡಿತು.ಈ ಘಟನೆ ಕರ್ನಾಟಕ ಏಕೀಕರಣ ಚಳವಳಿಯ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘಟ್ಟವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಆಡಳಿತಗಳ ಅಡಿಯಲ್ಲಿ ಚದುರಿಹೋಗಿದ್ದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮದ್ರಾಸ ಪ್ರಾಂತ್ಯದ ಕನ್ನಡ ಪ್ರದೇಶಗಳು ಹೀಗೆ ಕನ್ನಡಿಗರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ರಾಜ್ಯ ನಿರ್ಮಿಸಬೇಕು ಎಂಬ ಹಂಬಲ ಜನರಲ್ಲಿ ಬಲವಾಗುತ್ತಿತ್ತು. ನವೆಂಬರ ೧೯೫೨ರ ಅವಧಿಯಲ್ಲಿ ಈ ಬೇಡಿಕೆ ಕೇವಲ ಸಭೆ, ಮನವಿ ಮತ್ತು ನಿರ್ಣಯಗಳಿಗೆ ಸೀಮಿತವಾಗದೆ ತ್ಯಾಗ ಮತ್ತು ಹೋರಾಟದ ಹಂತಕ್ಕೆ ತಲುಪಿತು.  ಅದರಗುಂಟೆ ಶಂಕರಗೌಡರು, ದೊಡ್ಡಮೇಟಿ ಅಂದಾನಪ್ಪ, ತಲ್ಲೂರ ರಾಯಣ್ಣಗೌಡರು ಮುಂತಾದ ಏಕೀಕರಣ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗಾಗಿ ಮರಣಾಂತ ಉಪವಾಸ ವ್ರತ ಕೈಗೊಂಡರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಸರ್ಕಾರದ ಗಮನ ಸೆಳೆಯಲು ಅವರು ಮುಂದಾದರು.ಈ ಉಪವಾಸ ಸತ್ಯಾಗ್ರಹವು ಕನ್ನಡಿಗರ ಬಹುದಿನಗಳ ಆಶಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಒಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿತ್ತು. ಉಪವಾಸಿಗರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಂತೆ ಏಕೀಕರಣ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳಲ್ಲಿ ಆತಂಕ ಹೆಚ್ಚಾಯಿತು. ಇಂಥ  ಸಂದರ್ಭದಲ್ಲಿ ಜಯದೇವಿ ತಾಯಿಯವರು ಹೋರಾಟಗಾರರ ಬೆನ್ನಿಗೆ ದೃಢವಾಗಿ ನಿಂತರು. ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾಗ ಅವರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಅಗತ್ಯವಾಗಿತ್ತು. ಜಯದೇವಿ ತಾಯಿಯವರು* ತಮ್ಮ ರಕ್ತದಿಂದಲೇ ಹಸ್ತಾಕ್ಷರ ಹಾಕಿ ಉಪವಾಸ ಸತ್ಯಾಗ್ರಹಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು* ಎಂಬುದು ಅವರ ಹೋರಾಟದ ತೀವ್ರತೆ ಮತ್ತು ಬದ್ಧತೆಯನ್ನು ತೋರಿಸುವ ಅಪೂರ್ವ ಘಟನೆ. ಇದು “ಕರ್ನಾಟಕ ಏಕೀಕರಣಕ್ಕಾಗಿ ನಡೆಯುವ ನಿಮ್ಮ ಹೋರಾಟಕ್ಕೆ ನನ್ನ ಜೀವದ ಕೊನೆಯ ಹನಿಯವರೆಗೂ ಬೆಂಬಲವಿದೆ” ಎಂಬ ಸಂಕಲ್ಪದ ಸಂಕೇತವಾಗಿತ್ತು. ಅವರ ಈ ನಡೆ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಮಹಿಳೆಯರು ಕೂಡ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು, ಅಗತ್ಯವಾದರೆ ವೈಯಕ್ತಿಕ ತ್ಯಾಗಕ್ಕೂ ಸಿದ್ಧರಾಗಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು. *ನುಡಿನಾಡ ಮಾಡುವಗ |ಗಡಿನಾಡ ಮರಿಬ್ಯಾಡ್ರಿಬೇಡಿದೆವು ನ್ಯಾಯವ ಕೊಡಿರೆಂತ -ಸರ್ಕಾರಕತೊಡಕ ಇಡಬ್ಯಾಡರಿ ಕಡೆ ತನಕ||*ಎಂದು ಹಾಡುತ್ತಾ ಜಯದೇವಿ ತಾಯಿಯವರು ಸರ್ಕಾರಕ್ಕೆ ಎಚ್ಚರಿಸಲು ಪ್ರಯತ್ನಿಸಿದರು. ಹೋರಾಟದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇವಲ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿತು. ಕರ್ನಾಟಕದ ಏಕೀಕರಣದ ಪ್ರಶ್ನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ಕೊಂಡೊಯ್ಯಬೇಕಾಗಿತ್ತು. ಆದ್ದರಿಂದ ಜಯದೇವಿ ತಾಯಿಯವರು ತಮ್ಮ ಸಂಗಡಿಗರೊಂದಿಗೆ ಸೊಲ್ಲಾಪುರದಿಂದ ದೆಹಲಿಯವರೆಗೆ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದರು.  ಪ್ರವಾಸ ಕನ್ನಡಿಗರ ನೋವು, ಅಸಮಾಧಾನ ಮತ್ತು ಅಖಂಡ ಕರ್ನಾಟಕದ ಆಶಯವನ್ನು ದೇಶದ ರಾಜಧಾನಿಗೆ ಕೊಂಡೊಯ್ಯುವ ಪ್ರತೀಕಾತ್ಮಕ ರಾಜಕೀಯ…ಸಾಮಾಜಿಕ ಯಾತ್ರೆಯಾಗಿತ್ತು. ದಾರಿಯುದ್ದಕ್ಕೂ ಕನ್ನಡಿಗರ ಸಮಸ್ಯೆಗಳನ್ನು ಜನರಿಗೆ ತಿಳಿಸುವುದು, ಕರ್ನಾಟಕ ಏಕೀಕರಣದ ಅಗತ್ಯವನ್ನು ವಿವರಿಸುವುದು ಮತ್ತು ಕೇಂದ್ರ ನಾಯಕರ ಗಮನ ಸೆಳೆಯುವುದು ಈ ಪ್ರಯತ್ನದ ಉದ್ದೇಶವಾಗಿತ್ತು. *ನಾಡೊಂದುಗೂಡಿಸಿ ಕೊಡಿರೆಂದು ಹೊಂದಿಸಿಬೇಡ ಹೋದೆವ ದಿಲ್ಲಿಯ ಸರ್ಕಾರಕನುಡಿದೇವ “ಕನ್ನಡ ನಾಡೊಂದೇ “*ಎಂದು ಹಾಡಿದ ಜಯದೇವಿ ತಾಯಿಯವರು ಸೊಲ್ಲಾಪುರದಿಂದ ದೆಹಲಿಯವರೆಗೆ ಸಾಗಿದ ಈ ಪ್ರಯತ್ನವು ಒಂದು ಮಹತ್ವದ ಸಂದೇಶವನ್ನು ನೀಡಿತು….ಕರ್ನಾಟಕ ಏಕೀಕರಣವು ಕನ್ನಡಿಗರ ಸಾಮೂಹಿಕ ಹಕ್ಕು ಮತ್ತು ಭಾವನೆಯಾಗಿದೆ. ಜಯದೇವಿ ತಾಯಿಯವರಂತಹ ಮಹಿಳಾ ಹೋರಾಟಗಾರ್ತಿಯರು ಈ ಹಂತದಲ್ಲಿ ವಹಿಸಿದ ಪಾತ್ರ ವಿಶೇಷವಾದದ್ದು. ಅವರು ಭಾಷಣಗಳನ್ನು ಮಾಡುತ್ತಾ, ಸಮಾಲೋಚನೆಗಳನ್ನು ಆಯೋಜಿಸುತ್ತಾ … ಅಲ್ಲಲ್ಲಿ ಸಭೆಗಳನ್ನು ನಡೆಸಿ,ಉಪವಾಸ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ…,, ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತೆ ಮಾಡಲು ಪ್ರಯತ್ನಿಸಿದರು.ಈ ಘಟನೆಯು ಜಯದೇವಿ ತಾಯಿಯವರ ಧೈರ್ಯ ಮತ್ತು ಕೆಚ್ಚೆದೆಯ  ಮನೋಭಾವಕ್ಕೆ ಸಾಕ್ಷಿಯಾಗಿದೆ. ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟವು  ಕನ್ನಡಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರು. ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ಹಳ್ಳಿಕೇರಿ ರುದ್ರಪ್ಪ, ಬಿ. ಡಿ. ಜತ್ತಿ ಮುಂತಾದ ಪ್ರಮುಖ ನಾಯಕರು ಜಯದೇವಿ ತಾಯಿಯವರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಪ್ರಮುಖ ಆಶಯವಾಗಿತ್ತು.ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋರಾಟವನ್ನು ಹೇಗೆ ಸಂಘಟಿಸಬೇಕು, ಜನರಲ್ಲಿ ಕನ್ನಡ ನಾಡಿನ ಏಕೀಕರಣದ ಬಗ್ಗೆ ಜಾಗೃತಿ ಹೇಗೆ ಮೂಡಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇಗೆ ತರಬೇಕು, ಕನ್ನಡ ಭಾಷಿಕ ಪ್ರದೇಶಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ಹೇಗೆ ತರಬೇಕು ಎಂಬುದರ ಕುರಿತು ತಾಯಿಯವರು ಮತ್ತು ನಾಯಕರು ಸುದೀರ್ಘವಾಗಿ ಚರ್ಚಿಸುತ್ತಿದ್ದರು.  ಜನಜಾಗೃತಿ ಹಾಗೂ ವಿವಿಧ ಹೋರಾಟಗಳ ಮೂಲಕ ಕನ್ನಡಿಗರ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.ಇದೇ ಅವಧಿಯಲ್ಲಿ ಭಾರತ ಸರ್ಕಾರವು ಫಜಲ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗವನ್ನು ರಚಿಸಿತು. ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಯಾವ ರೀತಿಯಲ್ಲಿ ಪುನರ್‌ವ್ಯವಸ್ಥೆಗೊಳಿಸಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿತ್ತು.ಈ ಸಂದರ್ಭದಲ್ಲಿ ಜಯದೇವಿ ತಾಯಿಯವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುವುದರ ಜೊತೆಗೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ರಾಜ್ಯ ಪುನರ ರಚನಾ ಆಯೋಗದ ಸದಸ್ಯರಾಗಿದ್ದ ಶ್ರೀ ಕೆ. ಎಂ. ಫಣಿಕ್ಕರ ಅವರೊಂದಿಗೆ ಜಯದೇವಿ ತಾಯಿಯವರು ಹಲವು ಬಾರಿ ಸುದೀರ್ಘವಾಗಿ ಚರ್ಚಿಸಿದರು. ಕನ್ನಡಿಗರು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳ ಭಾಷಾ-ಸಾಂಸ್ಕೃತಿಕ ಸಂಬಂಧಗಳು ಹೇಗಿವೆ, ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕಾದ ಅಗತ್ಯವೇನು, ಜನರ ಆಶಯವೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಕರ್ನಾಟಕದ ಏಕೀಕರಣವು  ಆಡಳಿತಾತ್ಮಕ ಬದಲಾವಣೆ‌ಯ ಜೊತೆ ಜೊತೆಯಾಗಿ  ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಭಾವನಾತ್ಮಕ ಏಕತೆಯ ಪ್ರಶ್ನೆ ಎಂಬುದನ್ನು ತಾಯಿಯವರು  ಹೇಳುತ್ತಿದ್ದರು.ಹೀಗೆ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆ, ಜನಜಾಗೃತಿ, ಹೋರಾಟ ಮತ್ತು ರಾಜ್ಯ ರಚನಾ ಆಯೋಗದೊಂದಿಗೆ ವಿಚಾರ ವಿನಿಮಯ ನಡೆಸುವ ಮೂಲಕ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ನಿರ್ಮಾಣದ ಮಹತ್ವದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಅವರ ಪ್ರಯತ್ನ  ಚದುರಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ನಾಡಿನ ಅಡಿಯಲ್ಲಿ ಒಂದಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ದೊರೆಯಬೇಕು ಎಂಬ ಗಾಢವಾದ ಕನ್ನಡಾಭಿಮಾನವಿತ್ತು.  ಇಂತಹ ಅನೇಕ ಹೋರಾಟಗಾರರ ನಿರಂತರ ಪ್ರಯತ್ನಗಳ ಫಲವಾಗಿಯೇ ಮುಂದೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಕನಸು ನನಸಾಗುವ ದಾರಿ ಸುಗಮವಾಯಿತು.(ಮುಂದುವರೆಯಲಿದೆ) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ಪಟ ರಾಷ್ಟ್ರ ಪ್ರೇಮಿ ಜೈ ಹಿಂದ್ ಘೋಷಣೆ ಜನಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ರಾಜ್ಯಗಳ ಧರ್ಮೀಯರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧಿ ನೆಹರು ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಹೀಗೆ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಸಂಗ್ರಾಮ ಹೋರಾಟ ನಡೆದಿವೆ. ಇಂತಹ ಒಂದು ಅಪರೂಪದ ಹೋರಾಟವೇ  ಭಾರತೀಯ ರಾಷ್ಟ್ರೀಯ ಸೇನೆಯ (INA) ಇದನ್ನು ಸ್ಥಾಪಿಸಿದವರು. ಸುಭಾಷ್ ಚಂದ್ರ ಬೋಸ್. ಇವರ ಕರೆಗೆ ಓಗೊಟ್ಟು  ಸಾವಿರಾರು ಯುವಕರು ಭಾರತೀಯ ಸೇನೆಯನ್ನು ಸೇರಿದರು. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಮುಂತಾದ ಬೇರೆ ಬೇರೆ ಧರ್ಮದವರ ನಂಬಿಕೆಯುಳ್ಳ ಯುವಕರ ಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು . ಅವರೆಲ್ಲರ ಆಚರಣೆ ವಿಚಾರ ಭಿನ್ನ ಭಿನ್ನವಾಗಿ ಕಂಡು ಬಂದವು. ಕೆಲವರು ಬೆಳಿಗ್ಗೆ ಎದ್ದು ಕೂಡಲೇ ರಾಮ್ ರಾಮ್ ಎನ್ನುತ್ತಿದ್ದರು ಇನ್ನೂ ಕೆಲವರು ವಾಲೀಕುಂ ಸಲಾಂ ಎನ್ನುತ್ತಿದ್ದರು. ಸಿಖ್ ಜನಾಂಗ ಅಕಾಲಿ ಎನ್ನುತ್ತಿದ್ದರು ಹೀಗೆ ಒಂದೇ ಭಾರತೀಯ ಸೇನಾ  ಸಂಸ್ಕೃತಿಯಲ್ಲಿ ಭಿನ್ನ ಭಿನ್ನವಾಗಿ ಸೈನಿಕರು ಘೋಷಣೆ ಅಥವಾ ತಮ್ಮ ತಮ್ಮ ಬೆಳಗಿನ ನಮಸ್ಕಾರಗಳನ್ನು ಹೇಳುತ್ತಿದ್ದರು. ಇದನ್ನು ಏಕ ರೂಪದಲ್ಲಿ ಅಳವಡಿಸಲು ಸುಭಾಷ್ ಚಂದ್ರ ಬೋಸರು ಚಿಂತಿಸ ಹತ್ತಿದರು ಆಗ ಇವರ ನೆರವಿಗೆ ಬಂದವರೇ ಅಬಿದ್ ಹಸನ್ ಸಫ್ರಾನೀ ಎಂಬ. ಮುಸ್ಲಿಂ ಯುವಕ. ಹಲವು ದಿನಗಳ ವರೆಗೆ. ಯೋಚನೆ ಮಾಡಿ ಜೈ ಹಿಂದುಸ್ತಾನಿ ಎಂದು ಆರಂಭದಲ್ಲಿ ಘೋಷಣೆ ಕೂಗಿದರೂ ಸಹಿತ ಮುಂದೆ ಅದನ್ನು ಜೈ ಹಿಂದ್ ಎಂಬ ಘೋಷಣೆಗೆ ಮಾರ್ಪಾಡಿಸಿದವರು  ಅಬಿದ ಹಸನ್ ಸಫ್ರಾನಿ . ಅಬಿದ್ ಹಸನ್ ಸಫ್ರಾನಿ (Zain-al-Abdin Hasan) ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಒಡನಾಡಿ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ಪ್ರಮುಖ ಅಧಿಕಾರಿಯಾಗಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದ ‘ಜೈ ಹಿಂದ್’ (Jai Hind) ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ ರೂವಾರಿ ಇವರೇ ಆಗಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಜನನ:  ಇವರು 11 ಏಪ್ರಿಲ್ 1911 ರಂದು ಹೈದರಾಬಾದ್‌ನ ಶ್ರೀಮಂತ ಮತ್ತು ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಮೂಲ ಹೆಸರು:  ಇವರ ನಿಜವಾದ ಹೆಸರು ‘ಝೈನ್-ಅಲ್-ಅಬ್ದಿನ್ ಹಸನ್’.ಶಿಕ್ಷಣ: ಇವರ ತಾಯಿ ಬ್ರಿಟಿಷರ ಮೇಲಿನ ವಿರೋಧದಿಂದಾಗಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸದೆ ಜರ್ಮನಿಗೆ ಕಳುಹಿಸಿದರು. ಅಲ್ಲಿ ಅಬಿದ್ ಅವರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನೇತಾಜಿ ಒಡನಾಟ ಮತ್ತು ಐಎನ್‌ಎ (INA) ಪಾತ್ರಪ್ರೇರಣೆ:  ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾಷಣದಿಂದ ಪ್ರೇರಿತರಾಗಿ, ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಸಬ್‌ಮರೀನ್ ಪ್ರಯಾಣ:  ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರೊಂದಿಗೆ ಜರ್ಮನಿಯಿಂದ ಜಪಾನ್‌ಗೆ ಅತ್ಯಂತ ಅಪಾಯಕಾರಿ 90 ದಿನಗಳ ಸಬ್‌ಮರೀನ್ (ಜಲಾವೃತ ನೌಕೆ) ಪ್ರಯಾಣ ಕೈಗೊಂಡ ಏಕೈಕ ಭಾರತೀಯ ಇವರಾಗಿದ್ದಾರೆ.’ಸಫ್ರಾನಿ’ ಹೆಸರಿನ ಹಿನ್ನೆಲೆ: ಐಎನ್‌ಎ ಧ್ವಜ ವಿನ್ಯಾಸದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೈನಿಕರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಕೋಮು ಸೌಹಾರ್ದತೆಯನ್ನು ಸಾರಲು, ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು (Saffron) ಸೂಚಿಸಿ, ತಮ್ಮ ಹೆಸರಿನೊಂದಿಗೆ ‘ಸಫ್ರಾನಿ’ ಎಂದು ಸೇರಿಸಿಕೊಂಡರು. ‘ಜೈ ಹಿಂದ್’ ಘೋಷಣೆಯ ಜನ್ಮ ಭಾರತೀಯ ಸೈನಿಕರನ್ನು ಧರ್ಮ ಮತ್ತು ಪ್ರಾಂತ್ಯಗಳ ಭೇದವಿಲ್ಲದೆ ಒಂದೇ ಗೌರವ ವಂದನೆಯಲ್ಲಿ ಸ್ವಾಗತಿಸಲು ನೇತಾಜಿ ಬಯಸಿದ್ದರು.ಆಗ ಅಬಿದ್ ಹಸನ್ ಅವರು “ಜೈ ಹಿಂದೂಸ್ತಾನ್ ಕಿ” ಎಂಬ ನುಡಿಗಟ್ಟನ್ನು ಸುಧಾರಿಸಿ “ಜೈ ಹಿಂದ್” (ಭಾರತಕ್ಕೆ ಜಯವಾಗಲಿ) ಎಂಬ ಸಂಕ್ಷಿಪ್ತ, ಶಕ್ತಿಯುತ ಘೋಷಣೆಯನ್ನು ಸೃಷ್ಟಿಸಿದರು. ನೇತಾಜಿ ಇದನ್ನು ತಕ್ಷಣವೇ ಒಪ್ಪಿಕೊಂಡು ಐಎನ್‌ಎಯ ಅಧಿಕೃತ ವಂದನೆಯನ್ನಾಗಿ ಮಾಡಿದರು. ರಾಜತಾಂತ್ರಿಕ ವೃತ್ತಿಜೀವನ  (Diplomat)ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಇವರು ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದರು.ಈಜಿಪ್ಟ್, ಡೆನ್ಮಾರ್ಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ (Ambassador) ಅತ್ಯುತ್ತಮ ಸೇವೆ ಸಲ್ಲಿಸಿ 1969 ರಲ್ಲಿ ನಿವೃತ್ತರಾದರು. Nidhana ಈ ಮಹಾನ್ ದೇಶಭಕ್ತರು 9 ಮೇ 1984 ರಂದು ತಮ್ಮ ಸ್ವಂತ ನಗರವಾದ ಹೈದರಾಬಾದ್‌ನಲ್ಲಿ ನಿಧನರಾದರು. ಇತ್ತೀಚೆಗೆ ಅವರ ಸಾಹಸಮಯ ಜೀವನದ ಕುರಿತು Abid Hasan Safrani Netaji’s Comrade-in-Arms ಎಂಬ ಪುಸ್ತಕವನ್ನು ಅವರ ಕುಟುಂಬದವರು ಪ್ರಕಟಿಸಿದ್ದಾರೆ. ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಭಾರತೀಯ ಸೇನಾ ಪಡೆ ಸೇನಾನಿ ಇತಿಹಾಸಗಳ ಪುಟದಲ್ಲೂ ಸೇರ್ಪಡೆಗೊಂಡಿಲ್ಲ. __________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-39 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಅರಮನೆಯ ತೊರೆದಳು, ಅರಣ್ಯವನು ಸೇರಿದಳು “ದುಃಖಿ ನೀನಾಗದೆ ಆ ಜಾನಕಿಯನ್ನು ಗಂಗಾನದಿಯ ದಡದಲ್ಲಿರುವ ಕಾಡಿನಲ್ಲಿ ಬಿಟ್ಟುಬರಬೇಕು. ಕಾಡಿನಲ್ಲಿ ಋಷಿಪತ್ನಿಯರ ಸಂಗದಲ್ಲಿ ಕಾಲವನ್ನು ಕಳೆಯುವ ಬಯಕೆಯನ್ನು ಹಿಂದೊಮ್ಮೆ ನನ್ನಲ್ಲಿ ತೋಡಿಕೊಂಡಿದ್ದಳು. ಈಗ ಅದನ್ನೇ ನೆಪವಾಗಿಸಿಕೊಂಡು ಅವಳನ್ನಿಲ್ಲಿಂದ ಕರೆದೊಯ್ದು ಕಾನನದಲ್ಲಿ ಬಿಟ್ಟು ಬಾ” ರಾಮನುಡಿಯದು ಕರ್ಣಕಠೋರವಾಯಿತು ಲಕ್ಷ್ಮಣನ ಪಾಲಿಗೆ.ಅಣ್ಣನ ಆಜ್ಞೆಯನ್ನು ಅವಗಣಿಸಲಾಗದ ಅನಿವಾರ್ಯತೆ ಒಂದೆಡೆಯಲ್ಲಿ. ಅಣ್ಣ ಹೇಳಿದಂತೆಯೇ ನಡೆದುಕೊಂಡರೆ ತಾಯಿಯನ್ನು ವಧಿಸಿದ ಮಹಾಪಾತಕಿಯಂತಾಗುತ್ತೇನೆ ತಾನು ಎಂಬ ಅಳುಕು ಇನ್ನೊಂದೆಡೆಯಲ್ಲಿ. ಅತ್ತಿಗೆಯನ್ನು ಕಾನನದಲ್ಲಿ ಬಿಟ್ಟು ಬರುವೆನೋ, ಬಾರೆನೋ ಎಂಬ ಇಬ್ಬಂದಿತನವದು ಸಂಕಟಕ್ಕೀಡುಮಾಡಿತು ಸುಮಿತ್ರೆಯ ಸುತನನ್ನು. ಶರೀರ ಅದುರಿತು. ಚದುರಿತು ಶೋಕಭಾವ ಮನದ ತುಂಬ. ಕೊರಳು ಬಿಗಿಯಿತು. ಸುರಿಯಿತು ದುಃಖಸೂಚಿತ ಅಶ್ರು ಕಣ್ಣಿನಿಂದ.ಈ ಸ್ಥಿತಿಯಲ್ಲಿ ಲಕ್ಷಣನಿರಬೇಕಾದರೆ ಶ್ರೀರಾಮನ ಕಠೋರ ಕಣ್ಣುಗಳು ಕಠಿಣಾತಿಕಠಿಣವಾಗಿ ದಿಟ್ಟಿಸಿದವು ತಮ್ಮನನ್ನು. “ನಾನೇ ಅವಳನ್ನು ತೊರೆಯುವ ನಿರ್ಧಾರ ಮಾಡಿರುವಾಗ ನಿನಗೇನು ಸಮಸ್ಯೆ! ಹೋಗು ಅವಳನ್ನು ಬಿಟ್ಟು ಬಾ ಅರಣ್ಯದಲ್ಲಿ” ಎಂದು ದಯೆಯಿಲ್ಲದೆ ನುಡಿದ ಶ್ರೀರಾಮ. ಪ್ರಜೆಗಳಿಗನುಗುಣವಾಗಿ ನಡೆದುಕೊಳ್ಳಬೇಕೆಂಬ ಒತ್ತಡವೇ ಅವನನ್ನು ಆ ಬಗೆಯಲ್ಲಿ ಕಾರುಣ್ಯಶೂನ್ಯನಾಗಿಸಿತೋ ಏನೋ!ನೋವಿನ ಭಾವದಿಂದಲೇ ರಥವನ್ನು ಸಿದ್ಧಪಡಿಸಿದ ಲಕ್ಷ್ಮಣ. ಸೀತೆಯಿದ್ದ ರಾಜಮಂದಿರಕ್ಕೆ ಬಂದ. ಅವಳ ಮೊಗವನ್ನು ನೋಡುವ ಧೈರ್ಯ ಬರಲಿಲ್ಲ ಅವನಿಗೆ. ತಲೆಬಾಗಿಸಿಯೇ ನಿಂತು ಅವಳಲ್ಲಿ “ಮಾತೆಯೇ, ಕಾನನಕ್ಕೆ ಹೋಗಬೇಕೆಂದು ಬಯಸಿದವಳು ನೀನು. ನಿನ್ನಿಚ್ಛೆಯನ್ನು ಪೂರೈಸಲೆಂದು ಈಗ ನನ್ನಣ್ಣ ಶ್ರೀರಾಮ ನಿನ್ನನ್ನು ಕಾಡಿಗೆ ಕಳುಹಿಸುವ ಮನಸ್ಸು ಮಾಡಿದ್ದಾನೆ. ರಥವನ್ನೇರು. ಈಗಲೇ ಪಯಣ ಆರಂಭವಾಗಲಿ” ಎಂದು ಶೋಕಛಾಯೆಯನ್ನು ಬೀರಿ ನುಡಿದ ಲಕ್ಷ್ಮಣಆ ಕ್ಷಣದಲ್ಲಿ ಅವಳ ಮನಸ್ಸಿಗಾದ ಸಂತಸವದು ಲಕ್ಷö್ಮಣನ ನಿಜಭಾವವನ್ನು ತೋರಗೊಡಲೇ ಇಲ್ಲ. ಅತಿಯಾಗಿ ಸಂಭ್ರಮಿಸಿದಳು ಧರಣಿಸುತೆ. ತನ್ನ ಮನದಿಚ್ಛೆಯನ್ನು ತನ್ನ ಮನದೊಡೆಯ ಇಷ್ಟು ಬೇಗ ಪೂರೈಸಿದ ಎಂಬ ಸಂತೃಪ್ತಿ ಅವಳದಾಯಿತು. ನಿಜವನ್ನು ತಿಳಿಯದೆಯೇ ಹರ್ಷದಲ್ಲಿ ನಲಿಯುತಿರುವ ಸೀತೆಯನ್ನು ಕಂಡು ಇನ್ನಷ್ಟು ಮರುಗಿದ ಲಕ್ಷö್ಮಣ.ಆಶ್ರಮದ ಋಷಿಪತ್ನಿಯರಿಗೆ ಕೊಡಲೆಂದು ಅನೇಕಾನೇಕ ವಸ್ತುಗಳನ್ನು ತೆಗೆದಿಟ್ಟುಕೊಂಡಳು. ಶ್ರೀರಾಮನ ಪಾದುಕೆಗಳನ್ನು ಜೊತೆಗಿರಿಸಿಕೊಂಡಳು. ಅರಮನೆಯ ಗುರು ಹಿರಿಯರಿಗೆ ವಂದಿಸಿದಳು. ಅನುನಯದಿಂದ ಎಲ್ಲರನ್ನೂ ಮಾತನಾಡಿಸಿದಳು. ಅಯೋಧ್ಯೆಗೆ ವಿದಾಯ ಹೇಳಿದಳು ಸೀತೆ. ಲಕ್ಷö್ಮಣ ನಡೆಸುತ್ತಿದ್ದ ರಥವದು ಸೀತೆಯನ್ನು ಅಯೋಧ್ಯೆಯಿಂದ, ಶ್ರೀರಾಮನಿಂದ ದೂರ ದೂರ ದೂರವಾಗಿಸಿತು.ರಥದಲ್ಲಿದ್ದ ಪತಾಕೆಯದು ನೋಡಲಾರೆ ಜಾನಕಿಯ ಈ ಹೀನಸ್ಥಿತಿಯನ್ನು ಎಂಬAತೆ ತಲೆಯನ್ನು ಕೊಡಹುತ್ತಿತ್ತು. ‘ಯುದ್ಧದಲ್ಲಿ ಶತ್ರುಗಳನ್ನು ಕೊಂದು ಮೆರೆಯಲೆಂದು ಏರುತ್ತಿದ್ದ ರಥವಿದು. ಇಂದು ಸೀತಾಮಾತೆಯನ್ನು ಕಾಡಿಗೆ ಕಳುಹಿಸಿಬರಲು ಇದನ್ನು ಏರುವಂತಾಯಿತಲ್ಲಾ!’ ಎಂಬ ಯೋಚನೆ ಲಕ್ಷö್ಮಣನಲ್ಲಿ ಮೂಡಿತು. ಮರುಕಪಟ್ಟ ಸೌಮಿತ್ರಿ. ‘ಹೇಗೆ ಇವಳನ್ನು ಕಾಡಿಗೆ ಬಿಟ್ಟುಬರುವೆನೋ! ಯಾಕೆ ಈ ಕಾರ್ಯವನ್ನು ನನಗೆ ವಹಿಸಿದನೋ ನನ್ನಣ್ಣ!’ ಎಂದು ಹಾಗೆಯೇ ಹಲುಬಿದ.ಆಗಲೇ ನರಿಯ ಕೂಗು ಕೇಳಿಬಂತು. ಕುಳಿತಿದ್ದ ಮೃಗಗಳು ಮೇಲೆದ್ದು ರಥದ ಮುಂದುಗಡೆ ದಾರಿಯನ್ನು ದಾಟಿದವು. ಸೀತೆಯ ಬಲದ ಕಣ್ಣು ಅದುರಿತು. ಏನಿದು ಈ ಬಗೆಯ ಅಪಶಕುನಗಳು ಎನಿಸಿತು ಅವಳಿಗೆ. ಹೇಳಿಕೊಂಡಳು ಲಕ್ಷö್ಮಣನಲ್ಲಿ. ಆ ಕ್ಷಣದಲ್ಲಿ ಅವಳಲ್ಲಿ ಮೂಡಿಬಂದದ್ದು ರಾಮಯೋಚನೆ. ತನ್ನೊಡೆಯ ಶ್ರೀರಾಮನಿಗೆ ಒಳ್ಳೆಯದೇ ಆಗಲಿ; ಕೆಡುಕು ಅವನನ್ನು ಬಾಧಿಸದಿರಲಿ ಎಂದು ಬಯಸಿದಳು ಭೂಮಿಸುತೆ.ರಥವೀಗ ಬಹುದೂರ ಸಾಗಿಬಂದಿತ್ತು. ಸೀತಾಮಾತೆಯ ಕಣ್ಣೆದುರಿಗೆ ಈಗ ಕಂಡವಳು ಗಂಗಾಮಾತೆ. ಪರಮ ನಿಷ್ಕಲ್ಮಶ ಪರಿಯಲ್ಲಿ ಪರಮ ಪಾವನೆಯಾಗಿ ಹರಿಯುತ್ತಿದ್ದಳು. ರಥದಿಂದಿಳಿದ ಲಕ್ಷö್ಮಣ ಸೀತೆ ಗಂಗಾನದಿಗೆ ನಮಸ್ಕರಿಸಿದರು. ದೋಣಿಯನ್ನೇರಿದ ಅವರನ್ನು ಗಂಗಾಮಾತೆ ತನ್ನ ಬೆನ್ನಮೇಲೆಯೇ ಹೊತ್ತು ಇನ್ನೊಂದು ತೀರಕ್ಕೆ ಸೇರಿಸಿದಳು.ಆ ತೀರದಲ್ಲಿದ್ದದ್ದು ದಟ್ಟವಾದ ಕಾಡು. ಭಯ ಮೂಡಿಸುವಂತಿತ್ತು ಆ ನಿಬಿಡ ಕಾನನದ ನಿಲುವು. ರಾಮಕಾಂತೆಯ ಕಾಂತಿವೆತ್ತ ಕಣ್ಣಿಗೆ ಆ ಕಾಂತಾರ ತೋರಿತು ಭೀಕರವಾಗಿ. ರಾಮನಾಮವನ್ನು ಜಪಿಸತೊಡಗಿದಳು ಭೀತಿಗೆ ಈಡಾಗಿ. ಅಂಜಿದಳು. ಅಳುಕಿದಳು.“ಇಲ್ಲಿ ಮುನಿಗಳ ಆಶ್ರಮಗಳು ಕಾಣಿಸುತ್ತಿಲ್ಲ. ಋಷಿಪತ್ನಿಯರು ಕಣ್ಣಿಗೆ ತೋರುತ್ತಿಲ್ಲ. ಹೋಮಧೂಮಗಳಿಲ್ಲ. ಋಷ್ಯಾಶ್ರಮಕ್ಕೆ ನನ್ನನ್ನು ಕರೆದೊಯ್ಯದೆ ಮನಕ್ಕೆ ಶ್ರಮವನ್ನು ನೀಡುವ ಈ ದಟ್ಟ ಕಾಡಿಗೇಕೆ ಕರೆತಂದೆ ನನ್ನನ್ನು?” ಎಂದು ಕೇಳಿದಳು ಲಕ್ಷö್ಮಣನಲ್ಲಿ.ಅವನು ಮೌನಿಯಾಗಿರುವಾಗಲೇ “ಪರಮ ಪಾವನರಾದ ನನ್ನ ಪತಿಯನ್ನು ತೊರೆದುಬಂದ ನನಗೆ ಪುಣ್ಯಾಶ್ರಮ ಕಣ್ಣಿಗೆ ಬೀಳುವುದಾದರೂ ಹೇಗೆ!” ಎಂದು ಹೇಳಿದಳು.ಧಿಕ್ಕರಿಸಿ ತೊರೆದ ಶ್ರೀರಾಮನನ್ನು ಹೊಗಳುವ ಅವಳ ಮುಗ್ಧತೆ ಇನ್ನಿಲ್ಲದ ದುಃಖ ಮೂಡಿಸಿತು ಲಕ್ಷö್ಮಣನಲ್ಲಿ. ಅವನ ಅಧರಗಳು ಅದುರಿದವು. ಕಣ್ಣೀರ ಹನಿಗಳು ಸುರಿದವು. ಉದರದೊಳಗೆ ಕತ್ತಿಯಾಡಿಸಿದಂತಹ ಅನುಭವ ಅವನದ್ದಾಯಿತು. ಹೃದಯ ಕರಗಿತು. ಮನವು ಮರುಗಿತು. ಎದೆಯೊಳಗಿನ ಮಾತು ಹೊರಬರದಾಯಿತು. ‘ಹೇಗೆ ಹೇಳದಿರಲಿ ನಿಜವಿಚಾರವನ್ನು ಈ ಮುಗುದೆಗೆ!’ ಎಂದು ಅತೀವ ವೇದನೆಗೊಳಗಾದ ರಾಮನ ಪ್ರಿಯ ಅನುಜ ಲಕ್ಷö್ಮಣ.ಸಂತಸದ ಸೀತೆಯನ್ನು ಸೋತ ಸೀತೆಯಾಗಿಸುವ ಮಾತುಗಳದೋ ಹೊರಬಂದವು ಲಕ್ಷö್ಮಣನಿಂದ. “ಮಾತೆಯೇ, ಇದುವರೆಗೂ ನಾನು ನಿನ್ನಿಂದ ಮುಚ್ಚಿಟ್ಟ ವಿಚಾರವಿದು. ಲೋಕಾಪವಾದಕ್ಕೆ ಹೆದರಿ ನಿನ್ನನ್ನು ತೊರೆದು ಕಳುಹಿಸಿದ್ದಾನೆ ಶ್ರೀರಾಮ. ನಿನ್ನನ್ನು ಕಾಡಿನಲ್ಲಿಯೇ ಬಿಟ್ಟುಹೋಗುವ ಹೊಣೆಯನ್ನವನು ವಹಿಸಿದ್ದು ನನಗೆ. ಅವನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ದಟ್ಟ ಕಾನನಕ್ಕೆ ಕರೆತಂದಿದ್ದೇನೆ. ಇನ್ನು ಎಲ್ಲಿಗಾದರೂ ಹೋಗು ನೀನು” ಎಂದ ಕಣ್ಣೀರು ಹರಿಸುತ್ತ, ಸುಮಿತ್ರಾಸುತ. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿಮುರಿದು ಮೌನವು  ಮಾತುಗಳ ಮೇಲೊಂದು ದೂರು ನೀಡಬೇಕಿದೆ ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು  ತನ್ನ ಲಯದಲಿಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಅಪರೂಪದ ಕನಸು” ಅಪರೂಪದ ಕನಸು ಕಂಡೆಇಪ್ಪತ್ತೈದರ ಮುಂಜಾವಲಿ;ಮಣ್ಣೆಣ್ಣೆ ದೀಪದ ಮಬ್ಬಿನಲಿಆಲವೂ ಅತ್ತಿಯೂ ಚಿಗುರಿದ್ದವು,ಒಂದೇ ಮಣ್ಣಿನ ಮಡಿಲಲಿ. ಆಲದ ಕೆಳಗೆ ಭೀಮ ನಿಂತ,ಬಾವಿಯ ಬಳಿ ಕೇರಿಯ ಮಗು;ಬೊಗಸೆ ತುಂಬ ನೀರು ಕೊಟ್ಟಾಗಮಗುವಿನ ಮುಖ ಅರಳಿತುನೀರೊಳಗೆ ಆಕಾಶವೂ ಅರಳಿತು. ಅತ್ತಿಯ ಕೆಳಗೆ ದುರ್ಯೋಧನ,ಮಡಿಲಲ್ಲಿ ಹಳೆಯ ಓಲೆ;ಕೋಲ ತುದಿಯಿಂದ ನೆಲವ ಗೀರಿಗೆರೆಯ ಮೇಲೆ ಗೆರೆ ಎಳೆದಮಣ್ಣಿನ ಎದೆಯಲಿ ಗಾಯವಾಯಿತು. ಆಲ ಮೆಲ್ಲಗೆ ಬೇರು ಚಾಚಿತುಕೇರಿಯಿಂದ ಬಾವಿಗೆ,ಬಾವಿಯಿಂದ ಶಾಲೆಯ ಹೊಸ್ತಿಲಿಗೆ;ಭೀಮ ಗದೆಯನ್ನು ನೆಲಕ್ಕಿಟ್ಟುಮಗುವಿನ ಕೈಗೆ ಸ್ಲೇಟು ಕೊಟ್ಟ. ಅತ್ತಿಯ ಕೊಂಬೆ ಹಣ್ಣಾಯಿತು,ಹಣ್ಣಿನೊಳಗೆ ಸಾವಿರ ಬೀಜ;ದುರ್ಯೋಧನ ಬೇಲಿ ಕಟ್ಟಿದರೂಹಕ್ಕಿಗಳು ಕೊಂಬೆಯಿಂದ ಹಾರಿದವುಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ. ಒಂದು ಸಂಜೆ ಬೆಂಕಿ ಎದ್ದಿತು,ಹಳೆಯ ಓಲೆ ಉರಿದು ಬೂದಿಯಾಯಿತು;ಬೂದಿ ಗಾಳಿಯ ಜೊತೆಗೆ ಹಾರಿದಾಗಆಲದ ಬರಿದ ಕೊಂಬೆಯ ತುದಿಯಲ್ಲಿಹೊಸ ಚಿಗುರೊಂದು ನಗುತ್ತಿತ್ತು. ಮಳೆ ಸುರಿಯಿತು, ಮಣ್ಣು ಘಮಿಸಿತು;ಆಲದ ನೆರಳಿಗೆ ಕೇರಿ ಬಂತು,ಕೇರಿಯ ಬೆನ್ನಿಗೆ ಊರೂ ಬಂತು;ಒಂದೇ ಚಾಪೆಯ ಮೇಲೆ ಕೂತುಅಕ್ಷರದ ದೀಪ ಹಚ್ಚಿದರು. ಅತ್ತಿಯ ಕೆಳಗೆ ದುರ್ಯೋಧನರಾತ್ರಿಯಿಡೀ ನಿದ್ದೆಗೆಟ್ಟ“ಎಲ್ಲರೂ ನೆಟ್ಟಗೆ ನಿಂತರೆನನ್ನ ಸಿಂಹಾಸನದ ಎತ್ತರಇನ್ನು ಯಾರಿಗೆ ಕಾಣುವುದು?” ಬೆಳಕು ಹರಿಯಿತುಭೀಮನ ಗದೆ ಮಣ್ಣಲ್ಲೇ ಉಳಿಯಿತು;ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತಹೊಸ ಪುಸ್ತಕ ತೆರೆದುಕೊಂಡಿತುಅತ್ತಿಯ ನೆರಳು ಕಿರಿದಾಗುತ್ತಿತ್ತು. ಎಚ್ಚರವಾದಾಗಕಿಟಕಿಯಾಚೆ ಎರಡೂ ಮರಗಳಿದ್ದವು;ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತುನಿನ್ನೆ ಎಳೆದ ಗೆರೆಇಂದು ಮಣ್ಣಾಗುತ್ತಿತ್ತು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು” Read Post »

ಕಾವ್ಯಯಾನ

ಶಿವರಾಜ ಅರಳಿ ಅವರ ಕವಿತೆ “ಸೆರಗು”

ಕಾವ್ಯ ಸಂಗಾತಿ ಶಿವರಾಜ ಅರಳಿ ಸೆರಗು ೧ಕಪ್ಪುಗಟ್ಟಿದ ಮೋಡದ ಎದೆಬಹುವಾಗಿ ಬಿಗಿದಿದೆ;ಕಳೆಯ ಕಳೆದು.ಸಹಜ ಸ್ಥಿತಿಗೆ ಮರಳದಸವಿತೃವಿನ ಗಂಟಲಲಿಉಸಿರು ಸಿಕ್ಕು ರೋಧಿಸುತಿದೆಹೆಜ್ಜೆ ಮೂಡದ ಕಾಡಲ್ಲಿಆಕ್ರಂದನ;ಆತ೯ನಾದಬೆಂದು ಬಾಡಿದ ಆತ್ಮನಿವಾ೯ತಕ್ಕೆ ನೇಣು ಬಿಗಿದುಕೊಂಡಿದೆಅಂತೆ-ಕಂತೆಗಳ ಕಟ್ಟಲ್ಲ ಇದುನುರಿತು ಪಾಕವಾದ ಎಸಳನ್ನು ಕೇಳಿಬಾಗಿ ದಾಟಿದ ಕಥೆಯನೂಲು ಬಿಡಿಸುತ್ತದೆ ಎಳೆಯಾಗಿ ೨ಆತ್ಮಕ್ಕೂ ಗೊತ್ತಿದೆ;ಅಂಚಿನ ಅಲೌಕಿಕತೆನಾಲಿಗೆಯ ತುಂಡು ದೇಹಕೆ ಕಣ್ಣಿಲ್ಲತುದಿಯಲಿ ಸಿಕ್ಕುಮಾಯವಾಗುವ ನೆರಳಿಗೆಬೆಳಕಿನ ಮೊರೆತ ಎಂದೂ ಕೇಳಿಸದುಬಹುಶಃ ಹುದುಗಿರಬಹುದುಅನುಭೂತಿ, ಅನುಭಾವದ ಕನ್ನಡಿ.ಅನುಗಾಲದ ತುಂತುರು ಹನಿಗಳಲಿಮೊಳೆತ ಚಿಗುರುಗಳುಮಾಯೆಯ ಸರಳಿನ ಉಸಿರುಗಳು.ನಿತ್ಯ ನೆಗೆವ ಜೀವತಂತುವಿನತೆವಲನು ಕಟ್ಟಿ ಹಾಕಲು ಸಾಧ್ಯವೇ.?ಆಳದ ಕೂಪದಲಿ  ಸಿಲುಕಿವಿಹಗನಂತೆ ಕಾಣುವುದು ವಿರಳ..!! ಶಿವರಾಜ ಅರಳಿ

ಶಿವರಾಜ ಅರಳಿ ಅವರ ಕವಿತೆ “ಸೆರಗು” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ -130 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮಗಳನ್ನು ಕಂಗೆಡಿಸಿದ ಅಮ್ಮನ ಡಯಾಲಿಸಿಸ್‌ ಖರ್ಚು ಮಾರನೇ ದಿನ ಸುಮತಿಯ ತಮ್ಮ ಕೆಲಸಕ್ಕೆ ಹೋಗುವ ಮುಂಚೆಯೇ ತನ್ನ ಅಕ್ಕ,ಅಳಿಯ ಮತ್ತು ಮಗಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ಬಳಿ ಬಿಟ್ಟನು. ಹೊರಡುವ ಮೊದಲು ಅಳಿಯನನ್ನು ಹತ್ತಿರ ಕರೆದು…. “ನೀನು ಅಕ್ಕನನ್ನು ವೈದ್ಯರಿಗೆ ತೋರಿಸಿ, ಅವರು ಏನು ಹೇಳುತ್ತಾರೆ ಎಂಬುದನ್ನು ನನಗೆ ತಿಳಿಸು…. ಕೆಲಸ ಮುಗಿಸಿಕೊಂಡು ಸಂಜೆ ನಾನು ಇಲ್ಲಿಗೆ ಬರುತ್ತೇನೆ”…. ಎಂದು ಹೇಳಿ, ಅಕ್ಕ ಮತ್ತು ಮಗಳಿಗೆ ಧೈರ್ಯ ಹೇಳಿ ಕೆಲಸಕ್ಕೆ ಹೊರಟನು.  ಮಾವ ಹೊರಟು ಹೋದ ನಂತರ ಸುಮತಿಯ ಮಗಳು ತಾಯಿಯನ್ನು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿ… “ಅಮ್ಮಾ… ನೀನು ಇಲ್ಲಿ ಕುಳಿತಿರು…. ನಾನು ಮತ್ತು ಬಾವ ಆಸ್ಪತ್ರೆಯ ರಿಸೆಪ್ಶನ್ ಗೆ ಹೋಗಿ ಇಲ್ಲಿಯ ಚಿಕಿತ್ಸೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ಬರುವೆವು”…. ಎಂದು ಹೇಳಿ ಬಾವನ ಜೊತೆ ನಾದಿನಿ ರಿಸೆಪ್ಷನಿಸ್ಟ್ ಬಳಿಗೆ ಹೋದಳು. ಅಲ್ಲಿ ರಿಸೆಪ್ಶನ್ ಬಳಿಗೆ ಹೋಗಿ ಸಕಲೇಶಪುರದ ವೈದ್ಯರು ಕೊಟ್ಟ ಶಿಫಾರಸ್ಸು ಪತ್ರವನ್ನು ಹಾಗೂ ಸುಮತಿಯ ಇತರೆ ಚಿಕಿತ್ಸೆಗಳ ವಿವರಗಳು ಇರುವ ಕಡತವನ್ನು ತೋರಿಸಿ ವಿಚಾರಿಸಿದಳು. ರಿಸೆಪ್ಶನ್ ನಲ್ಲಿ ಕುಳಿತಿದ್ದ ಸ್ವಾಗತಗಾರ್ತಿ…. “ಮೊದಲು ನಿಮ್ಮ ತಾಯಿಯನ್ನು ಒಳಗಡೆ ಇರುವ ತುರ್ತು ಚಿಕಿತ್ಸಾ ವಿಭಾಗದ ವಾರ್ಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿ ವರ್ಗಕ್ಕೆ ನಿಮ್ಮ ತಾಯಿಯನ್ನು ಇಲ್ಲಿ ಅಡ್ಮಿಟ್ ಮಾಡುವ ಬಗ್ಗೆ ತಿಳಿಸಿ ಮತ್ತು ಈ ಚೀಟಿಯನ್ನು ಅವರಿಗೆ ತೋರಿಸಿ…. ನಿಮ್ಮ ತಾಯಿಯನ್ನು ಅಲ್ಲಿ ಅಡ್ಮಿಟ್ ಮಾಡಿದ ಬಳಿಕ ಪುನಃ ಇಲ್ಲಿಗೆ ಬನ್ನಿ…. ನಂತರ ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇನೆ”…. ಎಂದರು.  ಸ್ವಾಗತಗಾರ್ತಿಗೆ ಧನ್ಯವಾದವನ್ನು ತಿಳಿಸಿ ನೂರು ರೂಪಾಯಿಯನ್ನು ಕೊಟ್ಟು ನೋಂದಣಿ ಮಾಡಿಸಿ, ತಾಯಿಯ ಬಳಿಗೆ ಬಂದಳು…. “ಅಮ್ಮಾ…. ನಿನ್ನನ್ನು ಇಲ್ಲಿನ ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲು ಮಾಡಲು ತಿಳಿಸಿದ್ದಾರೆ…. ಬಾ ಹೋಗೋಣ…. ನಿನ್ನನ್ನು ಅಲ್ಲಿ ದಾಖಲಿಸಿದ ನಂತರ ನಾನು ಮತ್ತು ಬಾವ ಹೋಗಿ ಇನ್ನಿತರೆ ಕಾರ್ಯವಿಧಾನಗಳ ಬಗ್ಗೆ ವಿಚಾರಿಸಿಕೊಂಡು ಮತ್ತೆ ಬರುತ್ತೇವೆ”…. ಎಂದಳು. ಸುಮತಿಗೆ ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗ ಹಾಗೂ ಅವರ ಶಿಸ್ತಿನ ನಡವಳಿಕೆಯನ್ನು ಕಂಡು ಬಹಳ ಮೆಚ್ಚುಗೆಯಾಯಿತು. ವಾರ್ಡಿನ ಹಾಸಿಗೆಯ ಮೇಲೆ ಮಲಗಿದಾಗ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಳು. ಇನ್ನು ಇಲ್ಲಿ ತನಗೆ ಉತ್ತಮ ಚಿಕಿತ್ಸೆ ಖಂಡಿತ ದೊರಕುತ್ತದೆ ಎಂಬುದು ಅವಳಿಗೆ ಖಾತ್ರಿಯಾಯಿತು. ನರ್ಸ್ ಒಬ್ಬರು ಬಳಿ ಬಂದು ಒಂದು ಚೀಟಿಯಲ್ಲಿ ಕೆಲವು ಔಷಧಿಗಳನ್ನು ಬರೆದು ನೀವು ವಾರ್ಡಿಗೆ ಬರುವಾಗ ಇದನ್ನು ಖರೀದಿಸಿಕೊಂಡು ಬನ್ನಿ ಎಂದು ಹೇಳಿದಳು…. “ಅಮ್ಮಾ …ನೀನು ಇಲ್ಲೇ ಮಲಗಿರು… ನಾವು ಈಗಲೇ ಬರುತ್ತೇವೆ”…. ಎಂದು ಸುಮತಿಗೆ ಹೇಳಿ ನರ್ಸ್ ಕೊಟ್ಟ ಚೀಟಿಯನ್ನು ಪಡೆದು ಬಾವನೊಂದಿಗೆ ಪುನಃ ರಿಸೆಪ್ಶನ್ ಬಳಿಗೆ ನಡೆದಳು. ಅಲ್ಲಿ ಹೋದಾಗ ಚಿಕಿತ್ಸೆಯ ಪೂರ್ಣ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರವನ್ನು ಬರೆದಿರುವ ಪ್ರತಿಯೊಂದು ಅವಳ ಕೈಗಿಟ್ಟರು. ನೀವು ಇದರಲ್ಲಿ ನಮೂದಿಸಿರುವ ಪ್ರಕಾರ ಈಗಲೇ ನಮ್ಮ ಕೌನ್ಸಿಲಿಂಗ್ ವಿಭಾಗಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತಾಡಿ ಹಣವನ್ನು ಕಟ್ಟಿ ಬನ್ನಿ. ಅದರ ರಸೀದಿಯನ್ನು ತಂದು ಇಲ್ಲಿ ನಮಗೆ ತೋರಿಸಿ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡಿಸುವ ಎಲ್ಲಾ ಏರ್ಪಾಡುಗಳನ್ನು ನಾವು ಮಾಡುತ್ತೇವೆ ಎಂದರು.  ಅವರು ಕೊಟ್ಟ ಪ್ರತಿಯನ್ನು ಪಡೆದು ಕೌನ್ಸಿಲಿಂಗ್ ವಿಭಾಗದೆಡೆಗೆ ಇಬ್ಬರೂ ಹೊರಟರು. ಅಲ್ಲಿ ಹೋದಾಗ ಸಿಬ್ಬಂದಿಯು ಇಬ್ಬರನ್ನೂ ಕುಳಿತುಕೊಳ್ಳಲು ಸೂಚಿಸಿ ಇಂತಿಂಥ ಚಿಕಿತ್ಸೆಗೆ ಇಂತಿಷ್ಟು ವೆಚ್ಚವಾಗುತ್ತದೆ ಎಂಬ ವಿವರವನ್ನು ನೀಡಿ, ಅಲ್ಲಿ ನಮೂದಿಸಿದ ಮೊತ್ತದ ಹಣವನ್ನು ಪಾವತಿಸುವಂತೆ ತಿಳಿಸಿದರು. ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕಾದರೆ ತಾವು ಭರಿಸಬೇಕಾದ ಹಣದ ಮೊತ್ತವನ್ನು ಕಂಡು ಇಬ್ಬರೂ ದಂಗಾದರು. ಏಕೆಂದರೆ ಅಲ್ಲಿ ನಮೂದಿಸಿದಂತೆ ವೈದ್ಯರ, ದಾದಿಯರ, ವಾರ್ಡಿನ ಮತ್ತು ಇತರೆ ಖರ್ಚುಗಳ ಮೊತ್ತವನ್ನು ಭರಿಸುವಷ್ಟು ಹಣ ಅವರ ಕೈಲಿರಲಿಲ್ಲ. ಗೆಳತಿ ಕೊಟ್ಟಿದ್ದ ಹಣ ಸಾಲುತ್ತಿರಲಿಲ್ಲ. ಬಾವನ ಬಳಿಯೂ ಹೆಚ್ಚು ಹಣವಿಲ್ಲ ಎಂಬುದನ್ನು ಆ ಹುಡುಗಿ ಅರಿತಿದ್ದಳು. ತನಗೆ ಹಾಗೂ ಹಾಗೂ ತಂಗಿಗೆ ಬರುತ್ತಿದ್ದ ಸಂಬಳ ಮನೆಯ ಖರ್ಚು ಮತ್ತು ಆಸ್ಪತ್ರೆಯ ಸಣ್ಣ ಪುಟ್ಟ ಖರ್ಚುಗಳಿಗೆ ಆಗುತ್ತಿತ್ತು. ಮಾವನ ಬಳಿ ಕೇಳೋಣವೆಂದರೆ, ಅವರಿಂದಲೂ ಇದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಏಕೆಂದರೆ ಮಾವನ ಹಣಕಾಸಿನ ಸ್ಥಿತಿಯನ್ನು ಸುಮತಿಯ ಮಗಳು ಬಲ್ಲವಳಾಗಿದ್ದಳು. ಅದೂ ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಯನ್ನು ತಿಂಗಳಿಗೆ ನಾಲ್ಕು ಬಾರಿಯಾದರೂ ತಾಯಿಗೆ ಕೊಡಿಸಬೇಕು ಎಂಬ ಸತ್ಯದ ಅರಿವೂ ಆಯಿತು. ಪ್ರತೀ ಬಾರಿಯೂ ಡಯಾಲಿಸಿಸ್ ಮಾಡಿಸುವಾಗಲೂ ಹೆಚ್ಚು ಹಣದ ಅಗತ್ಯ ಇರುತ್ತದೆ. ನಮಗೆ ಆಶ್ರಯ ನೀಡಿದ ಎಷ್ಟೇಟಿನ ಸಾಹುಕಾರರಲ್ಲೂ ಈ ರೀತಿಯ ದುಬಾರಿ ಚಿಕಿತ್ಸೆಗಾಗಿ ಹಣ ಪಡೆಯುವುದು ಕೂಡ ಸರಿಯಲ್ಲ. ಯಾರೂ ದಿಕ್ಕಿಲ್ಲದ ನಮಗೆ ಆಶ್ರಯ ನೀಡಿದ್ದಲ್ಲದೇ ತಾಯಿಯ ಹಲವು ಚಿಕಿತ್ಸೆಗಳಿಗಾಗಿ ಅವರು ಈವರೆಗೂ ಯಥೇಚ್ಛವಾಗಿ ಹಣವನ್ನು ಖರ್ಚು ಮಾಡಿದ್ದಾರೆ.  ಕೂಲಂಕುಶವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ತಾಯಿ ಜೀವಂತವಿರುವವರೆಗೂ ಈ ಚಿಕಿತ್ಸೆಯನ್ನು ಆಗಾಗ ಕೊಡಿಸುತ್ತದೆ ಇರಬೇಕು. ಡಯಾಲಿಸಿಸ್ ಮಾಡಿಸುತ್ತಿದ್ದರೆ ತಾಯಿಯು ಇನ್ನೂ ಹೆಚ್ಚು ಕಾಲ ನಮ್ಮ ಜೊತೆ ಬದುಕುಳಿಯುತ್ತಾಳೆ. ಆದರೆ ಅದಕ್ಕಾಗಿ ಹಣವನ್ನು ಎಲ್ಲಿಂದ ಹೊಂದಿಸುವುದು? ಈ ಎಲ್ಲ ಚಿಂತೆಗಳು ಒಮ್ಮೆಲೇ ಆ ಹುಡುಗಿಯ ಆಲೋಚನೆಯಲ್ಲಿ ಮೂಡಿ ಅವಳನ್ನು ಗೊಂದಲಕ್ಕೀಡು ಮಾಡಿತು. ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತು ದೀರ್ಘವಾಗಿ ಆಲೋಚನೆಯಲ್ಲಿ ಮಗ್ನಳಾದಳು….”ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲಾದಾಗ ತನ್ನ ತಾಯಿಯ ಮುಖದಲ್ಲಿ ಮೂಡಿದ್ದ ಭರವಸೆ ಮತ್ತು ನೆಮ್ಮದಿಯ ಭಾವ ಈಗಲೂ ನಮ್ಮ ಮನವನ್ನು ತಲ್ಲಣಗೊಳಿಸುತ್ತಿದೆ…. ಏನು ಮಾಡಲಿ ದೇವರೇ!? ತಾಯಿಯ ಚಿಕಿತ್ಸೆಗಾಗಿ ಹಣವನ್ನು ಎಲ್ಲಿಂದ ಹೊಂದಿಸಲಿ?… ಚಿಕಿತ್ಸೆಯ ದುಬಾರಿ ಖರ್ಚಿಲ್ಲದೇ ಇಲ್ಲಿ ಬೆಂಗಳೂರಿನಲ್ಲಿ ದಿನವೂ ಓಡಾಡಲು, ಊಟದ ಖರ್ಚು ಮತ್ತು ಇನ್ನಿತರೆ ವೆಚ್ಚಕ್ಕೆ ಹಣದ ಅಗತ್ಯ ಇರುತ್ತದೆ….ನಾನು ಏನೇ ಪ್ರಯತ್ನ ಮಾಡಿದರೂ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಿಲ್ಲ”…. ಎಂದು ಸ್ವಗತ ಹೇಳಿಕೊಂಡ ಹುಡುಗಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು. ಒಂದೊಂದೇ ಆಲೋಚನೆಗಳು ಮನದಲ್ಲಿ ಹಾದು ಹೋದಾಗ ಅವಳಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಂಡಿ ಮೇಲೆ ತಲೆಯೂರಿ ತಮ್ಮೆಲ್ಲರ ಹತಾಶ ಸ್ಥಿತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ಅಳುವುದಲ್ಲದೆ ಅನ್ಯಮಾರ್ಗ ಅವಳಿಗೆ ಆ ನಿಮಿಷ ತೋಚಲಿಲ್ಲ. ನಾದಿನಿ ಅಳುತ್ತಿರುವುದನ್ನು ಕಂಡು ಬಾವನಿಗೆ ಕಸಿವಿಸಿಯಾಯಿತು. ಏನು ಹೇಳಿ ಆಕೆಯನ್ನು ಸಮಾಧಾನ ಪಡಿಸುವುದು ಎಂದು ಆತನಿಗೆ ತಿಳಿಯಲಿಲ್ಲ. ಅತ್ತು ಸಾಕಾಗಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಂತೆ ಸೀರೆಯ ಸೆರಗಿನಿಂದ ಕಣ್ಣುಗಳು ಹಾಗೂ ಮುಖವನ್ನು ಒರೆಸಿ ಕುಳಿತಲ್ಲಿಂದ ಎದ್ದಳು.

Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಪ್ರಪಂಚ ಪ್ರಾಮಾಣಿಕರನ್ನೇ ಪರೀಕ್ಷಿಸುತ್ತದೆಯಂತೆ ನಿಜವೇಆ ದೇವರು ಒಳ್ಳೆಯವರನ್ನೇ ಒರೆಗೆ ಹಚ್ಚುತ್ತಾನಂತೆ ನಿಜವೇ ಕೆಡುಕಿನ ಕೋಣಕ್ಕೆ ಮೂಗುದಾನವೇ ಇಲ್ಲವೇನೊ ಅನಸ್ತದವಿಧಿ ದುಡಿವವರನ್ನೇ ದಾರಿದ್ರ್ಯಕ್ಕೆ ದೂಡುತ್ತದೆಯಂತೆ ನಿಜವೇ ಅರ್ಧಕ್ಕಿಂತ ಹೆಚ್ಚು ಜನರಿಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದಾರೆಸರಿ ದಾರೀಲಿ ನಡೆವವರೇ ದಿಕ್ಕುತಪ್ಪಿ ಬಂದವರಂತೆ ನಿಜವೇ ಆಗುಹೋಗುಗಳೆಲ್ಲವೂ ಸೋಗು ಧರಿಸಿಯೇ ಜರುಗುತ್ತಲಿವೆಮುಖವ ತೋರಿಸಿದವರ ಮೇಲೆ ಮೊಕದ್ದಮೆಯಂತೆ ನಿಜವೇ ಮನುಷ್ಯತ್ವ ಹುಡುಕುವುದರಲ್ಲೇ ಮಹಾಂತ ಕಾಲಕಳೆದನಂತೆವ್ಯರ್ಥ ಹುಡುಕಾಟ ಅರ್ಥ ಕಳೆದುಕೊಂಡಿದೆಯಂತೆ ನಿಜವೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” ಸತ್ಯ ಸಮತೆಶಾಂತಿ ಪ್ರೀತಿಬಸವ ಸಾರಿದರಾಷ್ಟ್ರ ಪ್ರೀತಿ ರಾಜ ಬೀದಿಶರಣ ನಿಧಿರಾಜತೇಜಬಸವ ಬೀಜ ದುಡಿದು ತಂದುಹಂಚಿ ತಿಂದರುನನ್ನ ಶರಣರುದಿಟ್ಟ ಯೋಧರು ನ್ಯಾಯ ನಿಷ್ಟುರಲೋಕ ರಕ್ಷಕಜನ ತಾಂತ್ರಿಕಮಹಾ ಮಾಂತ್ರಿಕ ಬಸವ ಭಕ್ತಿದೇಶ ಶಕ್ತಿಲಿಂಗ ಜಂಗಮಬಸವ ನೀತಿಯು ಬಸವ ಭಾನುಭಕ್ತ ನಾನುಭರತ ನೆಲದಲಿಆನು ತಾನು ಡಾ. ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” Read Post »

You cannot copy content of this page

Scroll to Top