ಕಾವ್ಯ ಸಂಗಾತಿ
ಡೋ ನಾ ವೆಂಕಟೇಶ
“ಚೆಹರೆಯಿಲ್ಲದವರು”


pic:gemini
ಮುಖವಾಡ ಹೊತ್ತವರು ಆಟ ಕಟ್ಟುವವರು ನಿಯಮಿತರು
ಮುಖವಾಡ ಇಲ್ಲದೇ ಮುಖವಾಡ ಹಾಕುವವರು ಅನಿಯಮಿತರು
ಒಳಗೊಂದು ಬಣ್ಣವಿಲ್ಲದ ಬಣ್ಣ
ಹೊರಗೆ ಹನ್ನೊಂದು ಸುಣ್ಣಬಣ್ಣ
ಏನೆಂದು ಕುಣಿಯಲೀ
ಈ ತಾಳಕ್ಕೆ ಈ ಮೇಳಕ್ಕೆ
ಬಂದಾಗ ಇರಲಿಲ್ಲ ಬಣ್ಣ
ಹೋಗುವಾಗ ಬರೆ ನಿರ್ಬಣ್ಣ
ಬಂದು ಹೋಗುವ ಮಧ್ಯೆ
ಬರೆ ಮುಖವಾಡ ಗಳು
ಚೆಹರೆಯೇ ಇಲ್ಲದವರು!
ಡೋ ನಾ ವೆಂಕಟೇಶ



