ವಿರಹ ತಾಪ

ವಿರಹ ತಾಪ

ಕವಿತೆ ವಿರಹ ತಾಪ ನಿ.ಶ್ರೀಶೈಲ ಹುಲ್ಲೂರು ತಿರುತಿರುಗಿ ಒರಗುತಿದೆಭಾವಲಹರಿಯ ಬುಗುರಿನಲಿವಿನಲು ಹಸಿಗಾಯಹೀಗೇಕೆ ಎದೆ ನಗರಿ ? ಎನಿತೆನಿತೊ ಆಸೆಗಳಹೊತ್ತ ಒಡಲಿನ ತುಡಿತನಿನ್ನೊಲವಿನಮಲಿನಲೆತೊಪ್ಪೆಯಾಗಿದೆ ಮಿಡಿತ ಬಾನು ರಂಗೇರಿದರುಬಿಡದು ಕಡಲಿನ ಮೊರೆತಕತ್ತಲೆಯನಪ್ಪಿದ ಕಣ್ಬೆಳಕಲು ನೆನಪಿನದೆ ಇರಿತ ಹಿಡಿದಷ್ಟು ಉಕ್ಕುವುದುಹಾಲ ನೊರೆಯಂತೆನೀನಿರದ ಈ ಬದುಕುನೀರಿರದ ಕೆರೆಯಂತೆ ಬಳಲಿದರು ತೆವಳುತಿದೆನಿನ್ನೆಡೆಗೆ ಈ ದೇಹಅದಾವ ಪರಿ ಸೆಳೆದೆ ನೀನರಳುತಿದೆ ಮೋಹ ಸುಖದ ಸುಗ್ಗಿಯನೆಲ್ಲಮಾಡುತಿಹೆ ಕನಸಿನಲಿಹುರಿದು ಮುಕ್ಕುವೆ ಏಕೆಸೊಗಸಿರದ ಮನಸಿನಲಿ ಕಂಕಣಬಲವಿಲ್ಲೆನಗೆ ನೀನೋಡಿ ಬಂದು ಬಿಡುಬರದಿದ್ದರೆ ಬೇಗ ಕೈಯಾರೆ ಕೊಂದು ಬಿಡು **********************************

ಭಾವಪೂರ್ಣ ಅಂತಿಮ ನಮನ.

ಭಾವಪೂರ್ಣ ಅಂತಿಮ ನಮನ. ಹುಬ್ಬಳ್ಳಿ ಯ ಕರ್ಮವೀರ ಕಾಲದಿಂದಲೂ ನಿನ್ನೆ ಮೊನ್ನೆಯವರಿಗೂ ಸುಮಾರು ಇಪ್ಪತ್ತು ವರ್ಷಗಳ ಆತ್ಮೀಯ ಒಡನಾಟ ಹೊಂದಿದ್ದ ನಾಡಿನ ದೈತ್ಯ ಬರಹಗಾರ ಆತ್ಮೀಯ ರವಿ ಬೆಳಗೆರೆ ಅವರ ಸಾವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.ನನ್ನ ನೂರಾರು ಹನಿಗವನ ,ಕವನ, ಗಜಲ್, ಕಥೆ,ಬರಹ ಪ್ರಕಟಿಸಿ ನನಗೆ ಒಂದು ಶಕ್ತಿಯಾಗಿದ್ದ ಈ ಓದುಗರ ದೊರೆ ನನಗೆ ಸ್ನೇಹಿತನಾಗಿದ್ದ ಎಂಬ ಹೆಮ್ಮೆ.ಈ ಕೊಂಡಿ ಇಷ್ಟು ಬೇಗ ಕಳಚಬಾರದಿತ್ತು. ಹುಬ್ಬಳ್ಳಿ ಯ ಕಸ್ತೂರಿ, ಸಂಯುಕ್ತ ಕರ್ನಾಟಕ […]

ದೇಗುಲದಲ್ಲಿ ದೆವ್ವ
ಮೂಲ : ಗೂಗಿ ವಾ ಥಿಯಾಂಗೋ ಕನ್ನಡಕ್ಕೆ : ಬಂಜಗೆರೆ ಜಯಪ್ರಕಾಶ್

ಅನುಬಂಧ

ಕವಿತೆ ಅನುಬಂಧ ಅಕ್ಷತಾ ಜಗದೀಶ ಆ ನೀಲಿ ‌ಆಗಸದಿ ಚಿತ್ತಾರ ಮೂಡಿಸಲೇನು…..ಮೌನದಲಿ ಅಡಗಿದ ಭಾವನೆಗಳಮಾತಿನಲ್ಲಿ ಬಹಿರಂಗ‌ ಪಡಿಸಲೇನು…. ಎಲ್ಲಾ ಆಸೆಗಳ , ಎಲ್ಲಾ ಕನಸುಗಳಎಲ್ಲೆಲ್ಲೂ ಓಡುವ ಮನದೊಳಗೆಬಂಧಿಸಿರುವೇ ಈಗ…… ಬರೆವ ಕವಿತೆಯೋಳಗೆಮನದ ಮಾತು ಕುಣಿದಾಡಿ…ಪದಗಳೊಡನೆ‌ ಪುಟಿದೆದ್ದುರಾಗದಲಿ‌ ಬೆರೆತು ಅರಳಿದಾಗ..ಆಹಾ ಸಂತೋಷವೇ…!ಎಂಥಹ ಆಹ್ಲಾದವು.. ಚೂರು ಪ್ರೀತಿ ಭಾವದೊಳು ಬೆರೆತಾಗಸುಂದರ ಬಾಳಿನ ಪ್ರಾರಂಭ ಆಗ..ಇರಲೀ ಹೀಗೆ ಈ ಬಂಧ..ಮರೆಯಲಾರದ ಅನುಬಂಧ. *************************

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಶಸ್ತಿ ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನವು ಕೊಡುವ ೨೦೧೯ನೇ ಸಾಲಿನ ಸರಳಾ ರಂಗನಾಥರಾವ್ ಪ್ರಶಸ್ತಿಗೆ ಶಿರಸಿಯ ಕವಯಿತ್ರಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಲೇಖಕಿಯರ ಚೊಚ್ಚಲ ಕೃತಿಗೆ ಕೊಡಲಾಗುತ್ತಿದ್ದು, ಶೋಭಾ ಅವರ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ  ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಶೋಭಾ ಹಿರೇಕೈ ಕೊಂಡ್ರಾಜಿ ಅವರು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಡ್ರಾಜಿಯವರು. ಪ್ರಸ್ತುತ ಸಿದ್ದಾಪುರ […]

ಬೊಗಸೆ ತುಂಬ ಕನಸು”

ಪುಸ್ತಕ ಪರಿಚಯ ಬೊಗಸೆ ತುಂಬ ಕನಸು ಪ್ರಪಂಚದಲ್ಲಿ ಎರಡು ರೀತಿಯ ಸಾಧಕರಿರುತ್ತಾರೆ. ಒಬ್ಬರು ಇದ್ದ ಹಾದಿಯಲ್ಲಿ ಶ್ರದ್ಧೆಯಿಂದ ಸಾಗಿ ಗುರಿ ತಲುಪುವವರು. ಮತ್ತೊಬ್ಬರು ತಾವೇ ಹಾದಿ ನಿರ್ಮಿಸಿಕೊಂಡು ಗುರಿ ಕಂಡುಕೊಳ್ಳುವವರು. ಹೀಗೆ ಎರಡನೇ ಸಾಲಿನ ಮುಂದಾಳುವಿನ ಹಾಗೆ ನಿಂತು ಯಶ ಬದುಕಿನ ಗಾಥೆ ಬರೆದವರು ಡಾ.ಪ್ರಭಾಕರ ಶಿಶಿಲರು. ಅವರ ಆತ್ಮಕತೆ “ಬೊಗಸೆ ತುಂಬ ಕನಸು” ಓದಿದ ತಕ್ಷಣಕ್ಕೆ ನನಗೆ ಅನ್ನಿಸಿದ್ದು ಹೀಗೆ. ಬಹುಶ: ಈ ಕೃತಿಯನ್ನು ಓದುವ ಎಲ್ಲರಿಗೂ ಹೀಗೊಂದು ಭಾವ ಮೂಡಿಯೇ ಮೂಡುತ್ತದೆ. ಅರ್ಥಶಾಸ್ತ್ರದ ಅಧ್ಯಾಪಕರಾಗಿ. […]

ಅಂಕಣ ಬರಹ ಹವ್ಯಾಸವೆಂಬ ಮಂದಹಾಸ… ಹವ್ಯಾಸಗಳಿಲ್ಲದ ಮನುಷ್ಯನೆಂದರೆ ಎಲೆ ಹೂವು ಹಣ್ಣು ಏನೊಂದೂ ಇಲ್ಲದ ಬೋಳು ಮರವೇ ಸರಿ. ಬದುಕು ದುರ್ಬರವೆನಿಸಿದ ಹೊತ್ತಲ್ಲೂ ಸಹನೀಯತೆ ತರುವ ಶಕ್ತಿ ಇದ್ದರೆ ಅದು ಹವ್ಯಾಸಗಳಿಗೆ ಮಾತ್ರ. ಹೊತ್ತು ಕಳೆಯಲು ವ್ಯರ್ಥ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಸಮಯವನ್ನು ಗೌರವಿಸುವಂತ ಅರ್ಥಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಬರಿದೆ ಮೂರ್ತಿಗೆ ಮಾಡಿದ ಅಲಂಕಾರದಂತೆ ನಮ್ಮನ್ನು ಚೆಂದಗಾಣಿಸುತ್ತದೆ. ಹವ್ಯಾಸವೆನ್ನುವ ಟಾರ್ಚು ನಮ್ಮ ಕೈಯಲ್ಲಿದ್ದರೆ ಅದು ದಟ್ಟ ಕಾಡಿನ ನಡುವೆಯೂ ಕೈಹಿಡಿದು ನಡೆಸಿ ಗುರಿ ಮುಟ್ಟಿಸಬಲ್ಲದು, ಮನಸ್ಸನ್ನು […]

ಅಂಕಣ ಬರಹ ಹೊದಬನಿ-ಹೊಸದನಿ-14 ಅಗತ್ಯಕ್ಕಿಂತ ಲಂಬಿಸಿಯೂ ಹ್ರಸ್ವವಾಗೇ ಉಳಿಯುವ ಆಸ್ಪರಿಯವರ ಕವಿತೆಗಳು ಚನ್ನಬಸವ ಆಸ್ಪರಿ . ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಎಂದು ತನ್ನೊಳಗಿನ ಸಂಕಟಗಳನ್ನು ಕವಿತೆಯಾಗಿಸುವ ಚನ್ನಬಸವ ಆಸ್ಪರಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುವ ಹಲವು ಹೆಸರುಗಳ ನಡುವೆ ಅನುಭವದ ಆಧಾರ ಪಡೆದ ಸಶಕ್ತ ಕವಿತೆಗಳನ್ನು  ಅಪರೂಪಕ್ಕೆ ಪ್ರಕಟಿಸುತ್ತಿರುತ್ತಾರೆ. ನಾವೆಲ್ಲ ಅವ್ವ ಎನ್ನುವ ಕವಿತೆಯ ಸರ್ವ ಸ್ವಾಮ್ಯವನ್ನೂ ಲಂಕೇಶರಿಗೆ ಅರ್ಪಿಸಿಬಿಟ್ಟಿರುವಾಗಲೂ ಒಬ್ಬೊಬ್ಬರಿಗೆ […]

ಸ್ವೀಕರಿಸುವೆಯಾ?

ಕವಿತೆ ಸ್ವೀಕರಿಸುವೆಯಾ? ಚಂದ್ರು ಪಿ ಹಾಸನ್ ಇಂದ್ರನ ಬನದಲ್ಲಿ ಅರಳಿದಓ ಅಂದದ ಚೆಂದದ ಹೂವೆಚಂದ್ರನ ಬರುವಿಕೆಗೆ ಕಾದಿರುವೆಯಾ? ಚಿಟ್ಟೆಗಳು ಒಟ್ಟೊಟ್ಟಾಗಿ ಒಮ್ಮೆಲೆಹಿಗ್ಗುತಲಿ ನುಗ್ಗುತಿರಲಿ ಬಗ್ಗದೆಮುಖ ಮರೆಮಾಚಿ ನಿಂತೆಯಾ? ಮುಂಜಾವ ಭಾಸ್ಕರನು ಬೆಳ್ಳಿರಥವೇರಿಚೆಲ್ಲಿಹನು ಅವನ ಹೊನ್ನ ಬೆಳಕನ್ನುಚೆಲುವ ತೋರದೆ ಹೋಗುವೆಯಾ? ರವಿ ರಶ್ಮಿಯನ್ನು ಸ್ವೀಕರಿಸದೆತಮವನ್ನೇ ತನ್ನಲ್ಲಿ ಆವರಿಸಿಕೊಂಡುಯಾರಿಗಾಗಿ ಅರಳುತ್ತಿರುವೆಯಾ? ನನಗಾಗಿ ನೀ ಕಾದಿದ್ದರೆ ಸಾಕುಬೇರೇನು ನಿನ್ನಿಂದ ಬೇಡೆನಗೆಪ್ರೀತಿಗಾಗಿ ಹುಡುಕಿದೆ ನೀಡುವೆಯಾ? ನೆಲೆಸುವೆ ಹೃದಯದಲ್ಲಿ ಸ್ವೀಕರಿಸುವೆಯಾ? ********************************

ಆಕಾಶದೀಪದ ಪ್ರಾಧಾನ್ಯತೆ

ಲೇಖನ ಆಕಾಶದೀಪದ ಪ್ರಾಧಾನ್ಯತೆ ವೀಣಾ. ಎನ್. ರಾವ್. ದೀಪಾವಳಿ ಬಂತೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ವಿನೂತನವಾದ ಸಂತಸ. ಹಾಗೆಯೇ ದೀಪಾವಳಿಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ “ಆಕಾಶದೀಪ”ವನ್ನು ಮನೆಯ ಮುಂದೆ ತೂಗು ಹಾಕುತ್ತಾರೆ.  ಈ ‘ಆಕಾಶದೀಪ’ವು, “ಗೂಡುದೀಪ”,”ನಕ್ಷತ್ರದೀಪ”,ಎಂದು ಪರಿಚಿತವಾದರೆ, ಹಳ್ಳಿಗಳಲ್ಲಿ “ಯಮದೀಪ”,”ವ್ಯೋಮದೀಪ”  ಎಂದು ಕೂಡಾ ಕರೆಯುತ್ತಾರೆ.            ಬಿದಿರಿನ ಕಡ್ಡಿಗಳಿಂದ ಎಂಟು ಮೂಲೆಗಳಿರುವಂತೆ ಯಾವ ಆಕಾರಕ್ಕೆ ಬೇಕೊ ಆ ರೀತಿಯಾಗಿ ಕಟ್ಟಿ ಅದರ ಸುತ್ತಲೂ ಬಣ್ಣದ ಪೇಪರನ್ನು ಅಂಟಿಸಿ ಬಾಲಂಗೋಚಿಯನ್ನು ಇಳಿಬಿಟ್ಟು ಮನೆಯಲ್ಲೆ ತಯಾರಿಸುವ ಈ […]

Back To Top