ನಾನು ಓದಿದ ಪುಸ್ತಕ

ನಾನು ಓದಿದ ಪುಸ್ತಕ

ಮಣ್ಣಿಗೆ ಬಿದ್ದ ಹೂಗಳು ಬಿದಲೋಟಿ ರಂಗನಾಥ್ ಅರುಣ್ ಕುಮಾರ್ ಬ್ಯಾತ ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ… ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ […]

ಶರೀಫರ ನೆನೆಯುತ್ತಾ…

ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ 200ನೇ ವರ್ಷಾಚರಣೆ ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ. ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. […]

ಕಾವ್ಯಯಾನ

ಗಜಲ್ ಡಾ.ಗೋವಿಂದ ಹೆಗಡೆ ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತುಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತುಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..

ವೈದೇಹಿ-75

ಇರುವಂತಿಗೆ ವೈದೇಹಿ ಗೌರವ ಗ್ರಂಥ ಸಮರ್ಪಣೆ ದಿನಾಂಕ:01-12-2019 ಭಾನುವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾಭವನ, ಶಿವಮೊಗ್ಗ ಸಾಹಿತ್ಯಾಸಕ್ತರಿಗೆ ಸ್ವಾಗತ

ಪುಸ್ತಕ ಸಂಭ್ರಮ

ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು  ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. […]

ವಿಶ್ಲೇಷಣೆ

ರಾಮ-ರಾಮಾಯಣ ಅಯೋಧ್ಯಾರಾಮ. ಗಣೇಶ ಭಟ್ ಶಿರಸಿ ..       ಅಯೋಧ್ಯೆಯಲ್ಲಿ  ರಾಮಮಂದಿರ  ನಿರ್ಮಾಣಕ್ಕೆ  ಹಸಿರು  ನಿಶಾನೆ ಸಿಕ್ಕಿರುವುದರಿಂದ    ಜನಸಾಮಾನ್ಯರು ನಿರಾಳವಾಗಿದ್ದರೆ, ರಾಜಕೀಯ  ಪಕ್ಷಗಳಿಗೆ   ಚಿಂತೆ  ಶುರುವಾಗಿದೆ.   ಬಹಳಷ್ಟು ವರ್ಷಗಳಿಂದ ಸಮಸ್ಯೆಯನ್ನು ಜೀವಂತವಾಗಿಟ್ಟು,  ಜನರನ್ನು  ಮರುಳು ಮಾಡಿ ಮತ ಗಳಿಸುತ್ತಿದ್ದವರಿಗೆ  ಇನ್ನೊಂದು ಹೊಸ ಸಮಸ್ಯೆ  ಹುಟ್ಟು ಹಾಕುವ  ಕುರಿತು   ಯೋಚಿಸುವ  ಪರಿಸ್ಥಿತಿ  ಎದುರಾಗಿದೆ.  ಇನ್ನು ರಾಮನನ್ನು  ಬಹುಬೇಗ  ನೇಪಥ್ಯಕ್ಕೆ ಸರಿಸಲಾಗುತ್ತದೆ.  ರಾಮಾಯಣದ  ಅಯೋಧ್ಯೆಯ  ರಾಮಚಂದ್ರನಿಗೂ, ಭಾರತೀಯ  ದರ್ಶನಶಾಸ್ತ್ರದ  ರಾಮನಿಗೂ ಏನಾದರೂ ಸಂಬಂಧವಿದೆಯೇ […]

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ (ಹಿಂದಿನ ವಾರದಿಂದ) ಕಳೆದ ಸಂಚಿಕೆಯಿAದ…  ಶಿವಮೊಗ್ಗ ಜಿಲ್ಲೆಯ ಚಳವಳಿಗಳು  ದೈವದ ಪ್ರೇರಣೆ ಎನ್ನುವಂತೆ ಅನಿಮಿಷ ಗುರುಗಳ ದರ್ಶನವನ್ನು ಪಡೆಯುತ್ತಾರೆ. ಅಲ್ಲಮ ಪ್ರಭುವಿನ ಬದುಕಿನಲ್ಲಿ ಕಾಮಲತೆಯ ಪ್ರವೇಶ ಮತ್ತು ಮರಣ, ಅನಿಮಿಷ ಗುರುವಿನ ಸಂದರ್ಶನ ಸಂದರ್ಭಗಳು ಹೊಸ ಸಾಧನೆಯ ದಿಕ್ಕನ್ನು ತೋರಿದವು. ಅವನ ಸಾಧನೆಯಿಂದ ಅದನು ಬಹುದೊಡ್ಡ ಅನುಭಾವಿಯಾಗಿ ಮಾರ್ಪಟ್ಟನು. ಬಸವಣ್ಣನವರ ಕ್ರಾಂತಿಗೆ ಕೈ ಜೋಡಿಸಿದ ಮಹಾ ಸಾಧಕನಾಗಿ ಗುರುತಿಸಿಕೊಂಡು ಕರ್ನಾಟಕದ ಶರಣ ಚಳುವಳಿಯ ಇತಿಹಾಸದಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡನು.  ಅಲ್ಲಮ ಪ್ರಭುವಿನ ಬದುಕು ಕೇವಲ ಚಿಂತನೆ, […]

ಪ್ರಬಂಧ

ಅಪ್ಪ ಅಂದರೆ ಆಕಾಶ = ಅಮ್ಮ ಅಂದರೆ ಭೂಮಿ. ಬಸನಗೌಡ ಪಾಟೀಲ ಹೆಗಲಿಗೆ ಕೊಡಲಿ ಹಾಕಿಕೊಂಡು ಸೂರ್ಯೋದಯವಾಗುತ್ತಿದ್ದಂತೆ ಹೊಲದ ಕಡೆ ಹೋದಾತ ಮರಳಿ ಮನೆಗೆ ಬರುವುದು ಸೂರ್ಯ ತಾಯಿಯ ಮಡಿಲು ಸೇರಿದ ಮೇಲೆಯೆ. ಮುಳ್ಳು ಕಂಟಿ ಕಡಿಯೋದು ನೀರು ಹಾಯೊಸೋದು, ಗೊಬ್ಬರ ಹರವುವುದು ಮಣ್ಣು ಹದ ಮಾಡುವುದು ಒಂದಾ ಎರಡಾ ಅವನ ಕೆಲಸ. ಸುರಿಯುವ ಮಳೆಯಲ್ಲಿ ಇಕ್ಕೆಲದ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ನಡೆದುಕೊಂಡು ಮನೆ ಸೇರೋ ಕಷ್ಟ ಅವನಿಗೆ ಮಾತ್ರ ಗೊತ್ತು. ಅದಕ್ಕೆ ಅನ್ನೋದು ಅಪ್ಪ […]

ಕಾವ್ಯಯಾನ

ಸಾವಿನ ಸಾಂಗತ್ಯದಲ್ಲಿ ಮಧುಸೂದನ ಮದ್ದೂರು ಸಾವೆಂಬ ಸೂತಕದ ಹಕ್ಕಿ ರಕ್ಕೆ ಬಿಚ್ಚಿ ಹಾರುತ್ತಿದೆ ಯಾವ ಜೀವಗಳೆಂಬೋ ಹಣ್ಣ ಕಚ್ಚಿ ತಿಂದು ರಕ್ಕೆ ಪಟಪಟಿಸಿ ಗಗನದ ಚಿಕ್ಕೆಯಾಗಲಿದೆಯೋ ಬಲ್ಲವರು ಯಾರು ? ಸಾವೆಂಬ ಮಾಂತ್ರಿಕನ ಮಂತ್ರಬೂದಿಯ ಸೆಳತೆಗೆ ಸಿಲುಕಿ ಮಾಯವಾಗುವ ಮಾಯಕಾರರೆಷ್ಟೋ ಬಲ್ಲವರು ಯಾರು? ಸಾವೆಂಬ ಬುಟ್ಟಿಯಲಿ ಕಣ್ಕಟ್ಟಿನ ಯಕ್ಷಿಣಿಕಾರನ ಯಕ್ಷಿಣಿ ಕೋಲಿನ ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ ಬಲ್ಲವರು ಯಾರು? ಬಡವ-ಬಲ್ಲಿದ ಅಧಿಕಾರಸ್ಥ-ವ್ಯವಹಾರಸ್ಥ ಕಲೆಕಾರ-ಓಲೆಗಾರ ಯಾಂತ್ರಿಕ-ಮಾಂತ್ರಿಕ ವಿಜ್ಞಾನಿ-ಅಜ್ಞಾನಿ ಎಂಬೋ ಬೇಧ ಭಾವ ಎಣಿಸದ ಸಾವೆಂಬೋ ಸಾಹುಕಾರನೆದರು […]

ಪುಸ್ತಕ ಪರಿಚಯ

ಕೃತಿ-ಗುಣ (ಕಾದಂಬರಿ) ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ ಛಂದ ಪುಸ್ತಕ ಡಾ.ಅಜಿತ್ ಹರೀಶಿ ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ. ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ […]

Back To Top