ಪ್ರಬಂಧ

ಅಪ್ಪ ಅಂದರೆ ಆಕಾಶ = ಅಮ್ಮ ಅಂದರೆ ಭೂಮಿ.

ಬಸನಗೌಡ ಪಾಟೀಲ

ಹೆಗಲಿಗೆ ಕೊಡಲಿ ಹಾಕಿಕೊಂಡು ಸೂರ್ಯೋದಯವಾಗುತ್ತಿದ್ದಂತೆ ಹೊಲದ ಕಡೆ ಹೋದಾತ ಮರಳಿ ಮನೆಗೆ ಬರುವುದು ಸೂರ್ಯ ತಾಯಿಯ ಮಡಿಲು ಸೇರಿದ ಮೇಲೆಯೆ. ಮುಳ್ಳು ಕಂಟಿ ಕಡಿಯೋದು ನೀರು ಹಾಯೊಸೋದು, ಗೊಬ್ಬರ ಹರವುವುದು ಮಣ್ಣು ಹದ ಮಾಡುವುದು ಒಂದಾ ಎರಡಾ ಅವನ ಕೆಲಸ.

ಸುರಿಯುವ ಮಳೆಯಲ್ಲಿ ಇಕ್ಕೆಲದ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ನಡೆದುಕೊಂಡು ಮನೆ ಸೇರೋ ಕಷ್ಟ ಅವನಿಗೆ ಮಾತ್ರ ಗೊತ್ತು. ಅದಕ್ಕೆ ಅನ್ನೋದು ಅಪ್ಪ ಅಂದ್ರೆ ಆಕಾಶ ಅಂತ. ಸಾದಾ ಸೀದಾ ಚಪ್ಪಲಿ, ವರ್ಷಕ್ಕೆರಡು ಬನೀನು, ಕಡ್ಡಿ ಕಿತ್ತು ಅನೇಕ ಬಾರಿ ರಿಪೇರಿಗೊಳಗಾಗದ ಕೊಡೆ, ಟಾರ್ಚ, ಹೊಲ, ಎತ್ತು, ಕೆರೆ, ಕುಟುಂಬ ಅವನ ದಿನ ನಿತ್ಯದ ಸರ್ವಸ್ವಗಳು.

ನನ್ನ ಮಕ್ಕಳು ಹೆಂಡತಿಯನ್ನ ಪ್ರೀತಿಯಿಂದ ಸಾಕಿ ಸಲಹಬೇಕು ಎಂಬ ಉದ್ದೇಶದಿಂದ ಹಗಲಿರುಳೆನ್ನದೆ ಗಾಳಿ,ಮಳೆ ಲೆಕ್ಕಿಸದೇ ಉರಿಯುವ ಬಿಸಿಲಿನಲ್ಲಿಯೂ ಬೆವರು ಹರಿಸುತ್ತ ದುಡಿದು ಮನೆಗೆ ಬೆಳಕಾಗುವ ಮೇಣವೇ ಅಪ್ಪ.

ಪ್ರತಿ ಮನೆಯಲ್ಲಿ ಶಾಲೆಯ ವಾತಾವರಣ ಇರೋಕೆ ಕಾರಣ ತಾಯಿಯಾದರೇ ಶಿಸ್ತಿನ ಕಾರ್ಖಾನೆಯೆ ಅಪ್ಪ. ಹೆಂಡತಿಯೊಡನೆ ತನ್ನ ಕಷ್ಟ ಹೇಳಿಕೋಳ್ಳದ ಆತ ಅವಳನ್ನು ರಾಣಿಯಂತೆ ಮಕ್ಕಳನ್ನು ಯುವರಾಜ ಯುವರಾಣಿಯರಂತೆ ಸಾಕಲು ಪ್ರಯತ್ನಿಸುವ.

ತಾನು ಒದ್ದೆಯಾದರೆ ತನ್ನ ಎದೆಯಡಿ ಮಕ್ಕಳ ಅಪ್ಪಿ ರಕ್ಷಿಸುವ. ತಾನು ಬಿಸಿಲಲ್ಲಿ ಬೆಂದರು ಪರವಾಗಿಲ್ಲ ಮಕ್ಕಳು ಬಿಸಿಲಿಗೆ ಬರಬಾರದು ಎಂದು ಅಂದುಕೊಳ್ಳುವ. ಅದರಂತೆಯೆ ಅವರನ್ನು ಶಿಕ್ಷಣದ ಹಾದು ತುಳಿಸುವ. ಇಂತಹ ಮಹಾನ್ ತ್ಯಾಗಿಯನ್ನು ಬಿಟ್ಟು ಅದೇಷ್ಟೋ ಮಕ್ಕಳು ವಿದೇಶಕ್ಕೇ ಹೋಗುವರು..! ಇನ್ನು ಅನೇಕ ಮಾಹಾನು ಭಾವರು ವೃದ್ಧಾಶ್ರಮಕ್ಕೆ, ಅನಾಥಾಶ್ರಮಕ್ಕೆ ನೂಕುವರು..! ನಿಜವಾಗಿಯೂ ಇವರು ಇಂದಿನ ಸಮಾಜದ ಅಪರಾಧಿಗಳಲ್ಲದೆ ಮತ್ತಿನ್ನೇನು..?

ಜಾತ್ರೆಯಲ್ಲಿ ತೇರು ಕಾಣದೇ ಹೋದಾಗ ತನ್ನ ಹೆಗಲ ಮೇಲೆ ಹೊತ್ತು ಕೊಂಡು ದೇವರ ದರ್ಶನ ಮಾಡಿಸುವ. ಅದ್ಯಾಗು ನಮಗೂ ಅನೇಕ ಬಾರಿ ದೇವರೇ ಕಂಡಿರುವುದಿಲ್ಲ ಯಾಕೇ ಹೇಳಿ..? ನಾವು ಕುಳಿತಿರುವ ಹೆಗಲೆ ದೇವರದು ಅಂತಾ ನಮಗೆ ಆಗ ಗೊತ್ತಿರುವುದಿಲ್ಲ.

ಇನ್ನೂ ಅಪ್ಪನ ಕೋಪಕ್ಕೆ ಕೆಲಬಾರಿ ತುತ್ತಾಗಿ ಬೆತ್ತದ ಪೆಟ್ಟು ತಿನ್ನುವಾಗ ಕಾಪಾಡುವವಳೆ ಅವ್ವ. ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿ, ವ್ಯಾಪಾರದಲ್ಲಿ ಚೌಕಾಸಿ ಮಾಡಿ ಉಳಿಸಿದ ಹಣವನ್ನು ಹಂಡನಿಗೆ ಕಾಣದ ಹಾಗೆ ಮಕ್ಕಳಿಗೆ ನೀಡುವಳು. ಅವಳೆ ನಮ್ಮ ಭಾಲ್ಯದ ಮೊದಲ ಸ್ವಿಸ್ ಬ್ಯಾಂಕ್. ತಾನು ಮಾತ್ರ ಹರಿದ ಸೀರೆಗೆ ಹೊಲಿಗೆ ಹಾಕುತ್ತ ಅದರಲ್ಲೆ ದಿನಗಳ ಕಳೆಯುವಳು.

ಅಪ್ಪ ಒಂದು ದಿನವೂ ಶೋಕಿ ಮಾಡಿದವನಲ್ಲ. ಮಧ್ಯ ಸೇವಿಸಿದವನಲ್ಲ. ಎಷ್ಟೇ ಕಷ್ಟ ಬಂದರು ಕುಸಿದಿಲ್ಲ ಇನ್ನು ಅವ್ವ ತಾನು ಒಂದು ತುತ್ತು ಕಡಿಮೆ ಉಂಡು ಮಕ್ಕಳ ಗಂಡನ ಹಸಿವಿ ನೀಗಿಸುವಳು.

ಇವರ ಇಷ್ಟೇಲ್ಲ ಉಳಿತಾಯ ನಿಸ್ವಾರ್ಥ ಬದುಕು ನಮಗಾಗಿ ಅಲ್ಲದೇ ಮತ್ತಿನ್ಯಾರಿಗೇ ಸ್ವಲ್ಪ ಚಿಂತಿಸಿ..?

ಮಕ್ಕಳು ಬೆಳೆದು ಯುವಕ ಯುವತಿಯರಾದಾಗ ನೋಡಬೇಕು ಅವರ ಜಂಬ. ಮುಖದ ಮೇಲೆ ಮೇಸೆ ಮೂಡಿರುವುದಿಲ್ಲ ಅವನಿಗೆ ಆಗಲೆ ತಾಯಿಗೆ ಏಕವಚನದಲ್ಲಿ ನಿಂದಿಸಲೂ ಶುರು ಮಾಡುವ. ಇನ್ನು ಮಗಳೋ ರಾತ್ರಿಯೆನ್ನದೆ ಸಮಯದ ಮೀತಿ ಮೀರಿ ಮನೆಗೆ ಬರುವಳು ಪ್ರಶ್ನಿಸಿದ ಪಾಲಕರಿಗೆ ನನಗೆ ಸ್ವಾತಂತ್ರö್ಯವೇ ಇಲ್ಲ ಎಂದ ಅವರನ್ನು ದೂರುವಳು. ತಂದೆ ತಾಯಿ ಬಾವನೆಗಳಿಗೆ ಬೆಲೆ ಕೊಡದೆ ಕಲಿಯುವ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಮೋಹದ ಬಲೆಯೊಳಗೆ ಬೀಳುವರು. ತಮ್ಮನ್ನು ಇಲ್ಲಿಯ ತನಕ ಬೆಳೆಸಲು ತಂದೆ ತಾಯತಿ ಪಟ್ಟ ಕಷ್ಟ ಮರೆತು ಬೀಡುವರು.

ಇನ್ನು ಹೆಂಡತಿಯ ಮಾತು ಕೇಳಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವುದು ಮಗನ ಮಹಾನ್ ಕಾರ್ಯವಾದರೇ ಬೇರೆ ಮನೆಗೆ ಸೊಸೆಯಾಗಿ ಹೋದಾಕೆ ಮಾವ ಅತ್ತೆಯರ ಸೇವೆ ಮಾಡದಾಕೇ ಎಂದಿಗೂ ಉತ್ತಮ ಮಗಳಾಗಲಾರಳು.

ಎಲ್ಲ ತಂದೆ ತಾಯಿಗಳು ತಮ್ಮ ಕೊನೆಗಾಲದಲ್ಲಿ ತಮ್ಮ ಹತ್ತಿರ ಮಕ್ಕಳು ಇರಬೇಕು ಎಂದು ಬಯಸುವರು. ಏಕೇ ಹೇಲಿ ತಮ್ಮ ಶಕ್ತಿಯನ್ನು ಬಸಿದು ಅವರು ನಮ್ಮ ಸಾಕಿ ಸಲಹಿಹರು. ಅವರಿಗೂ ಆಸೆ ತಮ್ಮ ವದೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ಸಾಕುವರು ಎಂದು. ಒಂದು ಕ್ಷಣ ಯೋಚಿಸಿ ಆಡವಾಡಲು ಅಂಗಳಕ್ಕೆ ಹೋದಾಗ ಬಿದ್ದು ಮೋಣಕಾಲು ಕೆತ್ತಿಸಿಕೊಂಡಾಗ ಅವ್ವ ಓಡಿ ಬಂದು ತನ್ನ ಸೆರಗು ಹರಿದು ಕಟ್ಟಿಲ್ಲವೇ..? ಇನ್ನು ಅಪ್ಪ ನಮ್ಮ ಹೊತ್ತು ಕೂಸುಮರಿ ಮಾಡಿಲ್ಲವೇ..?

ಯೌವ್ವನ ಬಂದು ನೌಕರಿ ತಗೊಂಡು ಹಣ ಜೇಬಲ್ಲಿ ಬಂದಾಕ್ಷಣ ತಂದೆ ತಾಯಿಗಳನ್ನು ಕಡೆಗಣಿಸುವುದು ಸರಿಯಲ್ಲ.

ತಂದೆ ತಾಯಿಯನ್ನು ಆಶ್ರಮದಲ್ಲಿ ಬಿಟ್ಟು, ಹಳ್ಳಿಯಲ್ಲಿಯೇ ಇರಿಸಿ, ಇಲ್ಲಬೇರೆ ಮನೆ ಮಾಡಿ ಇರಿಸಿ ದಿನ ಕಳೆಯುವವರಿಗೆ ಒಂದು ಕಿವಿಮಾತು. ನೀವು ಗಳಿಸಿದ ಆಸ್ತಿ, ಕಾರು, ಮನೆ, ಅಂದು ಅವ್ವ ಅಪ್ಪನ ಒಂದು ದಿನದ ಕೂಲಿಗೆ ಸಮ. ನೆನಪಿರಲಿ ನಮಗೂ ವಯಸ್ಸಾಗುವುದು.


Leave a Reply

Back To Top