Category: ಅನುವಾದ

ಅನುವಾದ

ಅನುವಾದ ಸಂಗಾತಿ

ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ಹಿಂದಿ: ರಾಮದರಶ್ ಮಿಶ್ರಾ ಕನ್ನಡ: ಕಮಲಾಕರ ಕಡವೆ ಕಮಲಾಕರ ಕಡವೆ ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ತೆರೆಯುತ್ತ ನನ್ನ ಕನಸುಗಳ ಪುಕ್ಕ ನಿಧನಿಧಾನ ಯಾರ ಬೀಳಿಸಲಿಲ್ಲ, ನನ್ನ ನಾ ಹೆಚ್ಚುಗಾಣಿಸಲಿಲ್ಲ ಸಾಗಿತು ಬಾಳ ಪಯಣ, ನಿಧನಿಧಾನ ನೀವೆಲ್ಲಿ ಎದ್ದು ಬಿದ್ದು ತಲುಪಿರುವಿರೋ ಅಲ್ಲಿ ನಾನೂ ಮುಟ್ಟಿಹೆನು, ನಿಧನಿಧಾನ ಬೆಟ್ಟಗಳಿಂದ ಅದಾವ ಪೈಪೋಟಿಯಿರಲಿಲ್ಲ ನಡೆಯುತ್ತಲುಳಿದೆ ತಲೆ ಎತ್ತಿ, ನಿಧನಿಧಾನ ಬಿದ್ದೆನಾದರೆ ನಾನು ಅತ್ತೆ ಒಂಟಿಯಾಗಿ ಮಾಸಿ ಗಾಯ ನೋವು ಮರೆಯಾಯ್ತು, […]

ಅನುವಾದ ಸಂಗಾತಿ

ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ Two faces —————- An absolute truth that a coin poses two faces. It is to be used in the game of King and Queen, to get solution for the choice confusion. Both sides of a coin stuck together with their backs like siamese to be Inseparable one survives only […]

ಅನುವಾದ ಸಂಗಾತಿ

 ಕೊನೆಯ ಮು೦ಜಾನೆ ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ : ಮೇಗರವಳ್ಳಿ ರಮೇಶ್ ಮೇಗರವಳ್ಳಿ ರಮೇಶ್ ಕಗ್ಗಾಡಿನೊಡಲ ಕತ್ತಲಲಿ ಕಳೆದಿದೆ ನಿನ್ನ ಕೂದಲು ನನ್ನ ಪಾದವನ್ನು ಸೋಕುತ್ತಿದೆ ನಿನ್ನ ಪಾದ ಮಲಗಿರುವೆ ನೀನು ರಾತ್ರಿಗಿ೦ತಲೂ ಹಿರಿದಾಗಿ. ಆದರೆ ನಿನ್ನ ಆ ಕನಸು ಈ ಕೋಣೆಗಷ್ಟೇ ಸೀಮಿತ. ಎಷ್ಟೊ೦ದು ಜನ ಇದ್ದೇವೆ ನಾವು ನೋಡು ಇಷ್ಟು ಚಿಕ್ಕದಾಗಿ! ಭೂತಗಳನ್ನು ತು೦ಬಿಕೊ೦ಡ ಟ್ಯಾಕ್ಸಿಯೊ೦ದು ಸರಿದು ಹೋಗುತ್ತಿದೆ ಹೊರಗೆ. ಹತ್ತಿರದಲ್ಲಿ ಹರಿವ ನದಿ ಯಾವಗಲೂ ಹಿಮ್ಮುಖ ಪ್ರವಾಹಿಯಾಗಿದೆ. ನಾಳೆ ಇನ್ನೊ೦ದು ದಿನವಾದೀತೆ? ****

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾಲ್ಕು ಶಬ್ದ ಮರಾಠಿ ಮೂಲ: ನಾರಾಯಣ ಸುರ್ವೆ ಕನ್ನಡಕ್ಕೆ: ಕಮಲಾಕರ ಕಡವೆ ನಾಲ್ಕು ಶಬ್ದ ಪ್ರತಿದಿನದ ರೊಟ್ಟಿಯ ಪ್ರಶ್ನೆ ಪ್ರತಿದಿನದ್ದೂ ಆಗಿದೆ ಒಮ್ಮೊಮ್ಮೆ ಗಿರಣಿ ಹೊರಗೆ, ಒಮ್ಮೊಮ್ಮೆ ಒಳಗೆ ಕಾರ್ಮಿಕನು ನಾನು, ಹರಿತ ಕತ್ತಿಯಂತವನು ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ ಸ್ವಲ್ಪ ಸಹಿಸಿದೆ, ನೋಡಿದೆ, ಯತ್ನಿಸಿದೆ ನಾನು ನನ್ನ ಜಗತ್ತಿನದೇ ಆದ ಪರಿಮಳವೂ ಅಲ್ಲಿದೆ ಆಗೀಗ ತಪ್ಪಿದೆ, ಸೋತೆ, ಹೊಸತನ್ನು ಕಲಿತೆ ಹೇಗೆ ಬಾಳುತಿರುವೇನೋ ಹಾಗೇ ನನ್ನ ಮಾತಿದೆ ರೊಟ್ಟಿ ಬೇಕು ಸರಿಯೇ, ಮತ್ತೂ ಏನೋ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಮೂಲ: ಬರ್ಟೋಲ್ಟ್ ಬ್ರೆಕ್ಟ್ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಥೀಬ್ಸ್ ನ ಏಳು ಗೇಟುಗಳನ್ನು ಕಟ್ಟಿದವರಾರು?ಪುಸ್ತಕಗಳ ತು೦ಬಾ ರಾಜರುಗಳ ಹೆಸರುಗಳು.ಬ೦ಡೆಗಲ್ಲುಗಳನ್ನು ತ೦ದು ಜೋಡಿಸಿದವರು ದೊರೆಗಳೆ?ಮತ್ತು ಬ್ಯಾಬಿಲೋನ್ ಅದೆಷ್ಟು ಸಲ ನಾಶವಾಯಿತು!ಮತ್ತೆ ಮತ್ತೆ ಯಾರು ಕಟ್ಟಿದರು ಈ ನಗರವನ್ನು?ಚಿನ್ನದ ಹೊಳಪಿನ ನಗರಿಯಲ್ಲಿ ಅದನ್ನು ಕಟ್ಟಿದವರು ವಾಸವಾಗಿದ್ದರೆ?ಚೀನಾದ ಮಹಾಗೊಡೆಯನ್ನು ಕಟ್ಟಿ ಮುಗಿಸಿದ ಸ೦ಜೆಗಾರೆ ಕೆಲಸದವರು ಎಲ್ಲಿಗೆ ಹೋದರು?ರೋಮ್ ಸಾಮ್ರಾಜ್ಯದ ತು೦ಬಾ ವಿಜಯದ ಸ೦ಕೇತದ ಕಮಾನುಗಳು.ಯಾರು ನಿಲ್ಲಿಸಿದರು ಅವುಗಳನು?ಯಾರ ಮೇಲೆ ಸೀಸರ್ ವಿಜಯ ಸಾಧಿಸಿದ?ಹಾಡಿನಲ್ಲಿ […]

ಅನುವಾದ ಸಂಗಾತಿ

ನಿನ್ನ ಹಾಡು ಮೂಲ: ರಬೀಂದ್ರ ನಾಥ ಟಾಗೋರ್ ಕನ್ನಡಕ್ಕೆ: ಡಾ.ಪ್ರಸನ್ನ ಹೆಗಡೆ ನೀ ಹಾಡುವಾ ಪರಿಯ ನಾನರಿಯೆ ನನ್ನೊಡೆಯಾ ಬೆರಗಿನಿಂ ನಾ ಕುಳಿತು ಪೇಳ್ವೆ ಜಿಯಾ,,,ಪೇಳ್ವೆ ಜಿಯಾ ನಿನ್ನ ಹಾಡಿನಾ ಕಿರಣ ಬೆಳಗುತಿದೆ ಜಗವನ್ನು ಬಾನಿನಿಂ ಬಾನಿಗೆ ಹರಿಸಿ ಉಸಿರು ಆ ಹಾಡಜೀವಸೆಲೆ ಅಡೆತಡೆಯ ಪುಡಿಮಾಡಿ ದೈರ್ಯದಿಂ ಮುಂದಕ್ಕೆ ನುಗ್ಗುತಿಹುದು….ನುಗ್ಗುತಿಹುದು ನಿನ್ನ ಹಾಡಕೂಡೆಂದು ಕೂಗುತಿದೆ ಎನ್ನೆದೆಯು ಆದರದು ಬರಿವ್ಯರ್ಥ ದ್ವನಿಗಾಗಿ ನಾನು ಒರಲುತಿಹೆನು ನಾ ನುಡಿವೆ ಬರಿನುಡಿಯ ಹಾಡಾಗ ಆ ನುಡಿಯು ಕೈಚೆಲ್ಲಿ ಕಣ್ಣೀರ ಸುರಿಸುತಿಹೆನು…ಸುರಿಸುತಿಹೆನು ಅಹ! […]

ಅನುವಾದ ಸಂಗಾತಿ

ಮೂಲ: ನಿಝಾರ್ ಖಬ್ಬಾನಿ ಕನ್ನಡಕ್ಕೆ: ಡಾ.ಗೋವಿಂದ ಹೆಗಡೆ ಆ ಮೀನಿನಂತೆ ನಾನು ಚುರುಕು ಮತ್ತು ಹೇಡಿ ಪ್ರೇಮದಲ್ಲಿ ನೀನು ನನ್ನಲ್ಲಿನ ಸಾವಿರ ಹೆಣ್ಣುಗಳ ಸಾಯಿಸಿದೆ ಮತ್ತು-ರಾಣಿಯಾದೆ ಚಿಂತಿಸಬೇಡ ನನ್ನ ಮಧು ಖನಿಯೇ ನೀನಿದ್ದೀ ನನ್ನ ಕವಿತೆಗಳಲ್ಲಿ ನನ್ನ ಪದಗಳಲ್ಲಿ ವರುಷಗಳು ಉರುಳಿ ಮುದಿಯಾಗಬಹುದು ಆದರೆ ನನ್ನ ಪುಟಗಳಲ್ಲಿ ನೀನು ಚಿರ ಯೌವನೆ ಈಗಲೂ ನೀನು ನಾನು ಹುಟ್ಟಿದ ದಿನವನ್ನು ಕೇಳುವೆ ಹಾಗಿದ್ದರೆ ಬರೆದುಕೋ-ನಿನಗೆ ಗೊತ್ತಿಲ್ಲದಿರುವುದನ್ನು ಎಂದು ನೀನು ಪ್ರೇಮವನ್ನು ಅರುಹಿದೆಯೋ ಅಂದೇ ನನ್ನ ಜನ್ಮದಿನ! ***********

ಅನುವಾದ ಸಂಗಾತಿ

ಮೂಲ: ಆಕ್ತೇವಿಯೋ ಪಾಜ಼್ (ಮೆಕ್ಸಿಕನ್ ಕವಿ) ಹೋಗಿ ಬರುವ ನಡುವೆ ಮೇಗರವಳ್ಳಿ ರಮೇಶ್ ಹೋಗುವ ಮತ್ತು ಉಳಿಯುವ ನಡುವೆಹೊಯ್ದಾಡುತ್ತದೆ ದಿನತನ್ನದೇ ಪಾರದರ್ಶಕತೆಯ ಮೇಲಿನ ಪ್ರೀತಿಯಲ್ಲಿಶೂನ್ಯ ಮಧ್ಯಾಹ್ನ ಈಗೊ೦ದು ಕೊಲ್ಲಿ.ಸ್ತಬ್ದ ಜಗತ್ತು ಅಪ್ಪಳಿಸುವುದಲ್ಲಿ. ಎಲ್ಲವೂ ಸ್ಪಷ್ಟ ಮತ್ತು ಎಲ್ಲವೂ ಗ್ರಹಿಕೆಗೆ ದೂರಎಲ್ಲವೂ ಹತ್ತಿರ ಮತ್ತು ನಿಲುಕಿಗೆ ದೂರ. ಕಾಗದ, ಪುಸ್ತಕ, ಪೆನ್ಸಿಲ್ಲು, ಗಾಜಿನ ಲೋಟತಮ್ಮ ತಮ್ಮ ಹೆಸರಿನ ನೆರಳಲ್ಲಿ ವಿಶ್ರಮಿಸಿವೆ. ನನ್ನಕಪೋಲಗಳಲ್ಲಿ ಮಿಡಿವಕಾಲ ಪುನರುಚ್ಛರಿಸುತ್ತದೆಬದಲಾಗದ ರಕ್ತದ ಅದೇ ಪದವನ್ನ. ಬೆಳಕು ನಿರ್ಲಕ್ಷ್ಯ ಗೋಡೆಯನ್ನು ಬದಲಿಸುವುದುಪ್ರತಿಫಲನಗಳ ಭಯ೦ಕರ ರ೦ಗವನ್ನಾಗಿ. ಕಣ್ಣೊ೦ದರ […]

ಕಾವ್ಯಯಾನ

ನಿಝಾ಼ರ್ ಖಬ್ಬಾನಿ ಅವರ ಪ್ರೇಮ ಕವಿತೆಗಳು ೧) ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಅವರು ನನ್ನ ಕಣ್ಣುಗಳಲ್ಲಿ ಮೀಯುವ ನಿನ್ನ ಕಂಡರು ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ನಾನು ಬರೆದ ಪದಗಳಲ್ಲಿ ನಿನ್ನನ್ನು ಕಂಡರು ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು ೨) ನಾನು ನನ್ನ ಪ್ರೇಮಿಯ ಹೆಸರನ್ನು ಗಾಳಿಯ ಮೇಲೆ ಬರೆದೆ ನಾನು ನನ್ನ ಪ್ರೇಮಿಯ ಹೆಸರನ್ನು ನೀರಿನ ಮೇಲೆ ಬರೆದೆ ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ ನೀರು ಹೆಸರನ್ನು ನೆನಪಿಡುವುದಿಲ್ಲ ೩) […]

ಅನುವಾದ ಸಂಗಾತಿ

ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ […]

Back To Top