ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ. ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ […]
ಬಂತು ಶ್ರಾವಣ
ವೀಣಾ ರಮೇಶ್ ನಿಸರ್ಗದ ಕುಂಚದಲಿಬರೆದಳು ಶುಕ್ಲ ಪ್ರತಿಪದೆಹಸಿರ ಬಸಿರು ಹೊತ್ತುಶ್ರಾವಣದ ಶುಭಪ್ರದೆ ನವ ಶೃಂಗಾರದ ವೈಯಾರಿಮೈತುಂಬಿ ಬಂದಳುಬಿಂಕವ ತೋರಿಅಪ್ಪಿದಳು ಇಳೆಯಲಿ ಭೂರಮೆನಸುನಗೆಯ ತೂರಿ ಸಂಭ್ರಮದ ಪರ್ವಗಳ ಮಾಸಮನ ಮಾನಸದಲಿಶ್ರಾವಣಿ ತಂದಳುಮಂದಹಾಸ,ಪ್ರಕೃತಿಯ ಋತುವಿಲಾಸ ವೇದ ಮಂತ್ರಗಳ ಪಠಣಮಂಗಳ ವಾದ್ಯಗಳಶಬ್ದ ಘೋಷಣಪರ್ವಗಳ ಸಾಲಿಗೆ , ಸಂಭ್ರಮದ ಒಡಲಿಗೆಸಿಹಿಹೂರಣ **************
ನಾನೇ ರಾಧೇ…
ವಸುಂದರಾ ಕದಲೂರು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ಇನಿಯನ ಇಂಪಿನ ಕೊರಳಿನ ಕರೆಯಒಲವಿನ ಚೆಲುವಿನ ಇನಿದನಿ ಸವಿಯಮರೆಯಲಿ ಹೇಗೆ ನಾ ಮಾಧವನಾತೊರೆಯಲಿ ಹೇಗೆ ನಾ ಗಿರಿಧರನಾ ಮಾಧವ ರಾಘವ ಗಿರಿಧರ ಗೋಪಾಲಹಲಬಗೆ ಹೆಸರಲಿ ಜಪಿಸಿದೆ ಸಂಕುಲಬಾರಾ ಮಾಧವ ಮುರಳಿ ಲೋಲಾತೋರಾ ಶ್ಯಾಮಲ ಅಪಾರ ಲೀಲಾ ಹುಡುಕಲಿ ಎಲ್ಲಿ ಆ ಚೆಲುವನನುಸಹಿಸಲಿ ಹೇಗೆ ನಾ ವಿರಹವನುಮೋಹಿಸದಿರಲೆಂತು ಮಾಧವನನುತೊರೆಯುವುದೆಂತು ಘನವಂತನನು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ […]
ಕಾವ್ಯಯಾನ
ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲುರಚ್ಚೆ ಹಿಡಿದ ಮಗುವಿನಂತೆಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆತಾಳಬಲ್ಲೆನೇಸವಾರಿ?ಕಣ್ಣಂಚಲಿಮುತ್ತಿಕ್ಕುತ್ತಿದೆ ಸೋನೆಸುಡುವ ಹರಳಿನಂತೆಒರೆಸಿಕೊಳ್ಳಲೇ ಸುಮ್ಮನೆ?ಎಷ್ಟೊಂದು ಸಂಕಟದ ಸಾಲಿದೆಸೋಲೆಂಬ ಮೂಟೆಯೊಳಗೆನಟ್ಟ ನಡು ಬಯಲಿನಲಿ ಒಂಟಿಮತ್ತು ಒಂಟಿ ಮಾತ್ರಹರಿಯಬಲ್ಲದೇ ಹರಿದಾರಿ?ನಡೆಯುತ್ತದೆಯೇ ದಿಕ್ಕು ಮರೆತ ನೌಕೆ?ಸುತ್ತ ಹತ್ತೂರಿಂದ ಬಂದ ಪುಂಡಗಾಳಿ ಹೊತ್ತೊಯ್ದು ಬಿಡುವುದೇನೆಟ್ಟ ಹಗಲಿನ ಕಂಪು?ಯಾವ ದಾರಿಯ ಕೈ ಮರವೂಕೈ ತೋರುತ್ತಿಲ್ಲಮರೆತು ಹೋಗಿದೆ ದಿಕ್ಸೂಚಿಗೂಗುರುತುಕಗ್ಗತ್ತಲ ಕಾರ್ತಿಕದಲಿಹಚ್ಚುವ ಹಣತೆಯೂ ನಂಟು ಕಳಚಿದೆಮುಖ ಮುಚ್ಚಿಕೊಂಡೀತೆಬೆಳಕು ಬಯಲ ಬೆತ್ತಲೆಗೆ?ಮುಗ್ಗರಿಸಿದ ಮಧ್ಯಹಾದಿಯಮಗ್ಗಲು ಬದಲಿಸಲೇ?ನೂರೆಂಟು ನವಿಲುಗರಿಗಳನಡುವೆ ಹಾರಿದ ಮುಳ್ಳುಎದೆ ಚುಚ್ಚಿದೆ, ಕಣ್ಣು […]
ಕಾವ್ಯಯಾನ
ಕೊರೊನ ಜಾಗೃತಿ ಶ್ವೇತಾ ಮಂಡ್ಯ ಕೊರಗ ಬೇಡಿಬಂತೆಂದು ಕರೋನಮರೆಯ ಬೇಡಿಎಚ್ಚರಿಕೆ ಕೈ ತೊಳೆಯೋದನ್ನ ಹೆದರದಿರಿ ವೈರಸ್ಸಿನ ಕಾಟಕೆಹೆದರಿಸಿ ವೈರಿಯನು ಎದೆಗುಂದದೆಸಾಮಾಜಿಕ ಅಂತರ ಎಂದೂ ನೆನಪಿನಲಿರಲಿನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ ಮನೆಯೇ ಮಂತ್ರಾಲಯವಾಗಿಹಈ ದಿನಗಳಲಿಒಡೆದ ಮನವ ಒಂದಾಗಿಸಿಬಾಳುವುದ ಕಲಿಯೋಣ ಒಗ್ಗಟ್ಟಿನಲಿ ಬಿಸಿನೀರು,ಬಿಸಿಯೂಟ,ಹಾಲು, ಹಣ್ಣು ,ತರಕಾರಿಕರೋನ ತಡೆದು ಆರೋಗ್ಯವರ್ಧಿಸುವ ರಹದಾರಿ ಹೊರಗಡೆ ಬರುವಾಗಮುಖಕ್ಕಿರಲಿ ಮಾಸ್ಕ್ಬೇಡವೇ ಬೇಡಅನಗತ್ಯ ಓಡಾಟದ ರಿಸ್ಕ್ ಜೀವ ಉಳಿಸುವ ಕಾರ್ಯತತ್ಪರತೆಹಸಿದವರೊಡಲ ತುಂಬಿಸುವ ವಿಶಾಲತೆಮೆರೆದ ಮಂದಿಗೆಲ್ಲಾ ಸಲ್ಲಿಸೋಣನಮ್ಮ ಪ್ರೀತಿಯ ಕೃತಜ್ಞತೆ ಬದುಕ ಬಂಡಿಯ ಹಳಿ ತಪ್ಪಿಸಿಹಲವು ಜೀವಗಳ ಮಣ್ಣೊಳಗೆ […]
ಹಾಸ್ಯ
ಮದಿರಾ ಪ್ರಿಯರ ಹಳವಂಡಗಳು ಗೌರಿ.ಚಂದ್ರಕೇಸರಿ ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು. ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ […]
ಪುಸ್ತಕ ಸಂಗಾತಿ
ಹುಲಿಕಡ್ಜಿಳ ಸರಳ ಜೀವನ ಸೂತ್ರ ಪಠಿಸುವ ಕಥೆಗಳು- ಹುಲಿಕಡ್ಜಿಳ ತೀರ್ಥಹಳ್ಳಿಯ ಒಡ್ಡಿನ ಬೈಲಿನ ಹರೀಶ ಟಿ. ಜೆ. ಎಂದೇ ಹೆಸರಾಗಿರುವ ಹರೀಶ ಮಿಹಿರ ಇವರು ಮೂಡಬಿದಿರೆ ಆಳ್ವಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನೀಲಿನದಿ ಕಥಾ ಸಂಕಲನದಿಂದ ಈಗಾಗಲೇ ಕಥಾ ಸಾಹಿತ್ಯ ಲೋಕದಲ್ಲಿ ಪರಿಚಿತರು ಕೂಡಾ.ಅವರ ಎರಡನೇ ಕಥಾ ಸಂಕಲನ ಹುಲಿಕಡ್ಜಿಳ. ಸಂಕಲನದ ಹೆಸರೇ ಭಯ ಬೀಳಿಸುವಂತದ್ದು. ಆದರೆ ಒಳಪುಟದಲ್ಲಿ ಸಾಮಾಜಿಕ ಬದುಕಿನ ಹಲವು ತಿಕ್ಕಾಟಗಳು ಸಂಘರ್ಷಗಳು ಸಮ ಕಾಲೀನ ಜಗತ್ತು ಆಧುನಿಕತೆಯ ಜೊತೆಗೆ ನಡೆಯಬಾರದ ನಡೆಯಲ್ಲಿ ಹಾದಿ […]
ಕಾವ್ಯಯಾನ
ಗಝಲ್ ಲಕ್ಷ್ಮಿ ದೊಡಮನಿ ರಾಜಕಾರಣದ ಈ ಜೀವನ ಥಳುಕೆನಿಸುತ್ತದೆ ಎಚ್ಚರದಿಂದಿರುಕುರ್ಚಿ ತಲ- ತಲಾಂತರವಾಗಿ ತಮಗೆ ದಕ್ಕ ಬೇಕೆನಿಸುತ್ತದೆ ಎಚ್ಚರದಿಂದಿರು ಬದಲಾವಣೆ ಇಲ್ಲಿನ ನಿಯಮ ಯಾವುದೂ ಶಾಶ್ವತವಲ್ಲಮೃಗಜಲಕ್ಕೆ ಬೆನ್ನಟ್ಟಿದ ಪಶುವಿನಂತಾಗುತ್ತದೆ ಎಚ್ಚರದಿಂದಿರು ಬಿತ್ತಲಿಕ್ಕೆ ಹೋದವರು ಹೆಗ್ಗಣ ಬಿಲವನ್ನು ತೋಡಿದರಂತೆದಾರಿ ತಪ್ಪಿಸುವ ಆಸೆ-ಆಮಿಷಗಳನ್ನು ಒಡ್ಡಲಾಗುತ್ತದೆ ಎಚ್ಚರದಿಂದಿರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದೆಂಬ ತರಬೇತಿಯುಂಟುಮನ ನಾಚಿಕೆ,ಮಾನ ತೊರೆದು ಕೊರಡಿನಂತಾಗುತ್ತದೆ ಎಚ್ಚರದಿಂದಿರು ನಿಜಕ್ಕೆ ಸಮಾಧಿ ಕಟ್ಟಿ ಸುಳ್ಳಿಗೆ ಕಲಶವೇರಿಸುತ್ತಾರೆ ‘ಚೆಲುವೆ’ನಿನ್ನನ್ನೇ ನೀನು ನಂಬದಂತೆ ಭ್ರಮೆ ಹುಟ್ಟಿಸಲಾಗುತ್ತದೆ ಎಚ್ಚರದಿಂದಿರು ********
ಪುಸ್ತಕ ಸಂಗಾತಿ
ಮಕ್ಕಳಿಗಾಗಿ ನೂರಾರು ಕವಿತೆಗಳು ಕವಿ: ಸೋಮಲಿಂಗ ಬೇಡರಪ್ರಕಾಶನ: ಪಲ್ಲವಿ ಪ್ರಕಾಶನ, ಬೀಳಗಿಪುಟಗಳು: 220ಬೆಲೆ: ರೂ. 175/-ಪ್ರಕಟಿತ ವರ್ಷ: 2019ಕವಿಯ ದೂರವಾಣಿ: 9741637606 ಕಥೆ-ಕಾದಂಬರಿಗಳ ವಿಷಯದ ಹರವು-ಹರಿವು ವ್ಯಾಪಕ ಹಾಗೂ ವಿಶಾಲ. ಆದರೆ ಕವಿತೆಗಳದು ಹಾಗಲ್ಲ. ಅದರ ಕ್ಯಾನ್ವಾಸ್ ಚಿಕ್ಕದು. ಕಡಿಮೆ ಶಬ್ಧಗಳಲ್ಲಿ ಸುಂದರ ಗೇಯತೆ, ಲಯ, ಮಾತ್ರೆಗಳಲ್ಲಿ, ಅಂದದ ಪದಪುಂಜಗಳಲ್ಲಿ ಕವಿತೆ ಕಟ್ಟುವುದು ನಿಜಕ್ಕೂ ಒಂದು ಅದ್ಬುತ ಕುಶಲಕಲೆ. ಅದರಲ್ಲಿಯೂ ಮಕ್ಕಳ ಕವಿತೆಗಳನ್ನು ಸರಳ-ಸುಂದರ ಪದಗಳಲ್ಲಿ ಎಳೆಯ ಮನಸ್ಸಿಗೆ ಸುಲಭವಾಗಿ ಮುಟ್ಟುವಂತೆ ಪದ್ಯ ಬರೆಯುವುದು ಸಹ ಒಂದು […]
ಅನುವಾದ ಸಂಗಾತಿ
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು ಮೂಲ: ನೋಷಿ ಗಿಲ್ಲಾನಿ(ಉರ್ದು) ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದುನಿನ್ನೊಡನೆ ಸ್ನೇಹ ಕುದುರಿಸುವಷ್ಟೇ! ಸ೦ಪೂರ್ಣ ಹೊಸ ಕಥೆಯೆ ಇರಬಹುದುದಯವಿಟ್ಟು ವಿಷಯಕ್ಕೆ ಬಾ. ಈ ನೆರಳುಗಳಲ್ಲಿ ನಾ ಮುಳುಗಬಹುದುದಯವಿಟ್ಟು ಬೆಳಗು ನಿನ್ನ ಕಣ್ಣ ದೀವಿಗೆಯ! ನಿನ್ನ ದುಃಖವನ್ನರಿಯದೇ ಇದ್ದರೂನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ ನನಗೆ. ಹೃದಯ ಹಿ೦ಡಿ ಕೊಡ ಬೇಕು ರಕ್ತ!ನೋಡು, ಬರೆಯ ಬೇಡ ಪದ್ಯ! ಈ ಎಲ್ಲ ಅರ್ಥಗಳನ್ನುನಿರಾಕರಿಸುವುದುಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ! *********** ಮೇಗರವಳ್ಳಿ ರಮೇಶ್