ಕಾವ್ಯಯಾನ

ಕೊರೊನ ಜಾಗೃತಿ

Two Jamaatis Found Corona Positive In Raibareilly ...

ಶ್ವೇತಾ ಮಂಡ್ಯ

ಕೊರಗ ಬೇಡಿ
ಬಂತೆಂದು ಕರೋನ
ಮರೆಯ ಬೇಡಿ
ಎಚ್ಚರಿಕೆ ಕೈ ತೊಳೆಯೋದನ್ನ

ಹೆದರದಿರಿ ವೈರಸ್ಸಿನ ಕಾಟಕೆ
ಹೆದರಿಸಿ ವೈರಿಯನು ಎದೆಗುಂದದೆ
ಸಾಮಾಜಿಕ ಅಂತರ ಎಂದೂ ನೆನಪಿನಲಿರಲಿ
ನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ

ಮನೆಯೇ ಮಂತ್ರಾಲಯವಾಗಿಹ
ಈ ದಿನಗಳಲಿ
ಒಡೆದ ಮನವ ಒಂದಾಗಿಸಿ
ಬಾಳುವುದ ಕಲಿಯೋಣ ಒಗ್ಗಟ್ಟಿನಲಿ

ಬಿಸಿನೀರು,ಬಿಸಿಯೂಟ,
ಹಾಲು, ಹಣ್ಣು ,ತರಕಾರಿ
ಕರೋನ ತಡೆದು ಆರೋಗ್ಯ
ವರ್ಧಿಸುವ ರಹದಾರಿ

ಹೊರಗಡೆ ಬರುವಾಗ
ಮುಖಕ್ಕಿರಲಿ ಮಾಸ್ಕ್
ಬೇಡವೇ ಬೇಡ
ಅನಗತ್ಯ ಓಡಾಟದ ರಿಸ್ಕ್

ಜೀವ ಉಳಿಸುವ ಕಾರ್ಯತತ್ಪರತೆ
ಹಸಿದವರೊಡಲ ತುಂಬಿಸುವ ವಿಶಾಲತೆ
ಮೆರೆದ ಮಂದಿಗೆಲ್ಲಾ ಸಲ್ಲಿಸೋಣ
ನಮ್ಮ ಪ್ರೀತಿಯ ಕೃತಜ್ಞತೆ

ಬದುಕ ಬಂಡಿಯ ಹಳಿ ತಪ್ಪಿಸಿ
ಹಲವು ಜೀವಗಳ ಮಣ್ಣೊಳಗೆ ಮಲಗಿಸಿ
ವಿಶ್ವ ಆರ್ಥಿಕತೆಯ ಬುಡಮೇಲಾಗಿಸಿ
ಒಕ್ಕರಿಸಿದೆ ಈ ಕರೋನ ರಾಕ್ಷಸಿ

ಏನಾದರೂ ಆಗಲಿ ಆತ್ಮಬಲವೊಂದಿದ್ದರೆ
ಮೀರಬಹುದು ಎಲ್ಲವನು
ಸ್ವಯಂ ಜಾಗೃತರಾಗಿ ,ಗೆಲ್ಲೋಣ ಬನ್ನಿ
ಈ ಮನುಕುಲದ ದುಸ್ವಪ್ನವಾದ ಕೊರೊನವನು.

ಜೀವಕಿಂದು ಬೇಕು ಸಾಂತ್ವನ
ಆತ್ಮ ಶಕ್ತಿಯೊಂದೇ ಬದುಕಿನ ಮಂಥನ
ತಾಳ್ಮೆ ಸಹನೆ ಕರುಣೆಯ ಪ್ರದರ್ಶಿಸೋಣ
ನಾವು ನಮ್ಮವರನೆಲ್ಲ ರಕ್ಷಿಸೋಣ

ಮಹಾ ಮಾರಿ ಬಂತೆಂದು
ದೃತಿಗೆಡದೆ ಮುಂದೆ
ಸಾಗಬೇಕು ಅಡೆತಡೆಗಳ
ಮೀರುತ ನಡೆ ಮುಂದೆ

************

9 thoughts on “ಕಾವ್ಯಯಾನ

  1. ಕರೋನ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅನುಸರಿಸಬೇಕಾದ ಪ್ರಮುಖ ಅಂಶಗಳು ಮತ್ತು ಆತ್ಮಬಲ ಆತ್ಮ ಸ್ಥೈರ್ಯದ ಬಗ್ಗೆ ಬೆಳಕು ಚೆಲ್ಲುವ ಪ್ರಾಮಾಣಿಕ ಕಳಕಳಿ ವ್ಯಕ್ತವಾಗಿದೆ.

  2. ತುಂಬಾ ಚೆನ್ನಾಗಿದೆ ಶ್ವೇತಾ…. ನಿನ್ನ ಕರೋನ ಕಾವ್ಯಯಾನ…

  3. ಸ್ವಲ್ಪ ವಾಚ್ಯವೆನಿಸಿದರೂ ಕವಿತೆ ಚೆನ್ನಾಗಿದೆ ಶ್ವೇತ. ಕಾಲಕ್ಕೆ ತಕ್ಕ ಕವಿತೆ..

Leave a Reply

Back To Top