ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಸಮಯಾಂತರ ‘ಮಾನವೀಯ ನೆಲೆ’ಯ ‘ಕಟ್ಟುತ್ತೇವ‌ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..! ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು. ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ. ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ […]

ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್  ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ  ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು.  ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು.  ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ  ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ  ವ್ಯವಸ್ಥೆಯನ್ನು ಒಡೆದು  ಬೇರೆ ದಾರಿ ಹಿಡಿಯುವುದು ಹೇಗೆ  ಮತ್ತು ಅದರ […]

ಕೊಂಕಣಿ ಕವಿಗಳ ಪರಿಚಯ

ಕೊಂಕಣಿ ಕವಿಗಳ ಪರಿಚಯ ಪರಿಚಯಿಸಿದವರು ಶ್ರೀಯುತ ಗುರುದತ್ ಬಂಟ್ವಾಳಕಾರ್.(ಗುರು ಬಾಳಿಗಾ) ಕರ್ನಾಟಕದ ಕೊಂಕಣಿ ಕವಿಗಳನ್ನು ಪರಿಚಯಿಸುವ ಒಂದು ಜವಾಬ್ದಾರಿಯನ್ನು ಸಂಗಾತಿ ಪತ್ರಿಕೆ ನನಗೆ ಕೊಟ್ಟಿದೆ. ಮೊದಲಿಗೆ ನಾನು ಪರಿಚಯಿಸಲು ಇಚ್ಛಿಸುವ ಕವಿ ಶ್ರೀಯುತ ಗುರುದತ್ ಬಂಟ್ವಾಳಕಾರ್. ಗುರು ಬಾಳಿಗಾ ಎಂಬ ಕಾವ್ಯನಾಮದಿಂದ ಬರೆಯುವ ಇವರ ಕವಿತೆಗಳು ಸರಳ ಶಬ್ದಗಳಲ್ಲಿ ಆಳವಾದ ವಿಚಾರಗಳನ್ನು ಮಂಡಿಸುವುದರಲ್ಲಿ ಯಶಸ್ವಿಯಾಗುತ್ತವೆ. ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿರುವ “ವಿಶ್ವ ಕೊಂಕಣಿ ಕೇಂದ್ರ” ದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುದತ್ ಬಂಟ್ವಾಳಕಾರ್ ಅವರು ಅಲ್ಲಿನ ಕೊಂಕಣಿ ಭಾಷಾ […]

ಕ್ಷಮಯಾ ಧರಿತ್ರೀ …

ಕ್ಷಮಯಾ ಧರಿತ್ರೀ … ಲಕ್ಷ್ಮಿ ನಾರಾಯಣ ಭಟ್ ಜೀವನ ಪ್ರವಾಹ ನಿಂತ ನೀರಲ್ಲ; ಅದು ಚಿರಂತನ. ನಿರಂತರವಾಗಿ ಹರಿಯುತ್ತಲೇ ಇರುವುದು ಅದರ ಸ್ವ-ಭಾವ. ಯಾವುದು ವ್ಯಕ್ತಿ/ವಸ್ತುವೊಂದಕ್ಕೆ ಸಹಜ ಭಾವವಾಗಿರುತ್ತದೋ ಅದೇ ಅದರ ಸ್ವಭಾವ. ಆದರೆ ಸ್ವಭಾವವನ್ನು ಪರಿಶ್ರಮ, ಚಿಂತನೆಗಳಿಂದ ಪರಿಷ್ಕರಿಸಿಕೊಳ್ಳಬಹುದು. ಇದು ಮನುಷ್ಯನಾದವನಿಗೆ ಮಾತ್ರ ಪ್ರಕೃತಿಯೇ ಕರುಣಿಸಿದ ವಿಶೇಷ ಕರ್ತೃತ್ವ. ಇದರಿಂದ ಆತ ಪ್ರಕೃತಿಯನ್ನೂ ಮಣಿಸಬಲ್ಲ! ಉದಾಹರಣೆಗೆ, ಎತ್ತರದಿಂದ ತಗ್ಗಿಗೆ ಹರಿಯುವುದು ನೀರಿನ ಸ್ವಭಾವವಲ್ಲವೇ? ಆ ಸ್ವಭಾವವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿರ್ತಿಸಿದಾಗ, ಜೋಗದಲ್ಲಿ ಜಲಪಾತವಾಗಿ ಧುಮುಕುವ […]

ಪುಸ್ತಕ ಪರಿಚಯಗಳು

ನಮ್ಮೂರ ಮಣ್ಣಿನಲಿ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಶಾಂತೇಶ ಪ್ರಕಾಶನ, ಧಾರವಾಡ ಪುಟ : ೧೦೨ ಬೆಲೆ : ₹ ೮೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB000400 “ಕೊರೊನಾ ಜೊತೆಗೆ ಶಾಲಾಬದುಕು” ಲೇಖಕರು: ಡಾ.ಪ್ರಸನ್ನ ಹೆಗಡೆ ಮೈಸೂರುಪುಟಗಳು 176ಬೆಲೆ 150/ಪ್ರಕಾಶಕರ ಹೆಸರು: […]

ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು ವಿ.ನಿಶಾ ಗೋಪಿನಾಥ್ ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ. ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ […]

ನೀ ಒಂದು ಸಾರಿ ನನ್ನ ಮನ್ನಿಸು

ನೀ ಒಂದು ಸಾರಿ ನನ್ನ ಮನ್ನಿಸು ಜಯಶ್ರೀ ಜೆ.ಅಬ್ಬಿಗೇರಿ ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದೀನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು […]

ಪುಸ್ತಕ ಪರಿಚಯ

ನಲಿವಿನ ನಾಲಗೆ (ಪ್ರಬಂಧ ಸಂಕಲನ) ನಲಿವಿನ ನಾಲಗೆ ಪುಸ್ತಕದ ಹೆಸರು:ನಲಿವಿನ ನಾಲಗೆ(ಪ್ರಬಂಧ ಸಂಕಲನ)ಲೇಖಕರ ಹೆಸರು:ಸುಮಾವೀಣಾಪುಟಗಳ ಸಂಖ್ಯೆ:128–ಬೆಲೆ-120ರೂಪ್ರಕಾಶಕರ ಹೆಸರು:ಪರಶಿವಪ್ಪ,ಸ್ನೇಹ ಬುಕ್ ಹೌಸ್, ಬೆಂಗಳೂರುಪುಸ್ತಕ ದೊರೆಯುವ ಸ್ಥಳ:www.mybookadda.netಅಂಚೆಯಲ್ಲಿಪುಸ್ತಕ ತರಿಸಿಕೊಳ್ಳಲು ಹಣ ಹಾಕಬೇಕಾದ ಬ್ಯಾಂಕ್ ಖಾತೆ ವಿವರ;Ac No3211142353,IFSC code SBIN0011259

ಪುಸ್ತಕ ಪರಿಚಯ

ಮೌನ ಮಂದಾರ ಮೌನ ಮಂದಾರ ಕರ್ತೃ_ ವಾಣಿಮಹೇಶ್ಪ್ರಕಾಶಕರು_ ಜ್ಞಾನಮುದ್ರ ಪ್ರಕಾಶನಲಿಂಗರಾಜು ಬಿ.ಎಲ್.ಹೊಳಲುಮಂಡ್ಯ_571402 ಪುಸ್ತಕದಬೆಲೆ-85ರೂಪಾಯಿ ಸ್ವ ವಿಳಾಸ_ವಾಣಿಮಹೇಶ್w/oಮಹೇಶ್ ಹೆಚ್. ಆರ್.ನಂ. ಎ.ಆರ್.613 ಮೊದಲನೇ ಮುಖ್ಯ ರಸ್ತೆ ನಾಲ್ಕನೇ ಅಡ್ಡ ರಸ್ತೆ ಸಾಲಗಾಮೆ ಗೇಟ್ ಸರಸ್ವತಿ ಪುರಂ ಹಾಸನ_573201 PH: 7975353693 ಬ್ಯಾಂಕ್ ಖಾತೆ ನಂ_37614898049IFSC_SBIN0040956 ಇದು ಸಾಧನೆಯ ಸಂಗಮದ ಅನವರತ. ಬೇಕಾದ್ದವು ಭಾವನೆಯಾಗಿ , ಸೋತು ನಿಂತ ನೆನಪುಗಳು ಮೌನ ಮಂದಾರವಾಗಿದೆ. ಕವಯತ್ರಿ ವಾಣಿಮಹೇಶ್ ಅವರ ಬರಹಗಳನ್ನು ಅಧ್ಯಯನ ಮಾಡಿದಾಗ ಸರಳ ಅಕ್ಷರಗಳಿಂದ ಜನನಾಡಿಗೆ ಸರಾಗವಾಗಿ ಹಂಚುವುದರ ಮೂಲಕ […]

ಕಾವ್ಯಯಾನ

ಮಾಲತಿ ಶಶಿದರ್ ಒಂದು ಪ್ರೇಮಕವಿತೆ ಒಲವೆಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟುಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು.. ಬೇಸಿಗೆ ಆಗಸ ವಸಂತವಾಗಿದೇದೂರದ ಕಾಡು ನಿನ್ನೆಸರ ಕೂಗಿದೆ.. ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆಬೆರಳುಗಳ ಹೊಸ ಭಾಷೆಯ […]

Back To Top