ಪ್ರಸ್ತುತ
ಆತಂಕಗಳ ಸರಮಾಲೆ ರೇಷ್ಮಾ ಕಂದಕೂರ ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ. ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ ಎಂಬ ಭಾವನೆ […]
ಕಾವ್ಯಯಾನ
ಕೆ.ಬಿ.ಸಿದ್ದಯ್ಯ ಹುಳಿಯಾರ್ ಷಬ್ಬೀರ್ ದಲಿತ ಕೇರಿಯ ಹುಡುಗ ಅಲ್ಲಮನ ಮಹಾಮನೆ ಹೊಕ್ಕು ದಲಿತರ ಅಕ್ಷರ ಲೋಕವನ್ನು ಅರಮನೆಯಾಗಿಸಿದ.. ದಲಿತ ಕಾವ್ಯೋದ್ಭದಲ್ಲಿ ಚಿಂತನೆಯ ಫಲ ಬೆರೆಸಿ ಮಸ , ಮಸೆದು ಹತಾರಗಳನ್ನು ಖಂಡಕಾವ್ಯವಾಗಿಸಿದವರು ಮೊನಚು ಮಾತು ಬಿಳಿಯ ಗಡ್ಡದೊಳ್ ಬೆರಳಾಟದ ಚೆಂದದೊಂದಿಗೆ ಅಂಬೇಡ್ಕರ್ ಕೂಗೇ ನಿಮ್ಮ ಕೂಗಾಗಿ ಗಾಂಧಿ ಬುದ್ಧನನ್ನು ನಿಮ್ಮೆರಡು ಕೈಗಳಲ್ಲಿ ತಬ್ಬಿ ಹಿಡಿದವರು .. ಭೌತಿಕ ಜಗತ್ತು ಆಧ್ಯಾತ್ಮದ ಮುಂದೆ ಸೋಲುವಂತೆ ಬಕಾಲ ಮುನಿಯಾಗಿ ಶಬ್ದಕ್ಕೆ ಶಬ್ದವೇ ನಾಚುವಂತೆ ಅದರಾಚೆಗೂ … ಗಲ್ಲೆಬಾನಿಯಲ್ಲೆ ಅದ್ದಿ ಅನಾತ್ಮ […]
ಚರ್ಚೆ
ಕನ್ನಡ ಸಂಸ್ಕೃತಿಯ ಕಡೆಗಣನೆ ಮಲ್ಲಿಕಾರ್ಜುನ ಕಡಕೋಳ ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ […]
ಪ್ರಸ್ತುತ
ಇದು ಲಾಕ್ಡೌನ್ ಸಮಯ ರೇಶ್ಮಾ ಗುಳೇದಗುಡ್ಡಾಕರ್ ಕರೋನಾದ ತಲ್ಲಣ ದಿನದಿನಕ್ಕೂ ಅಗಾಧವಾಗಿ ವ್ಯಾಪಿಸುತ್ತಿದೆ . ಲಾಕ್ ಡೌನ್ ನಿಂದ ಸೀಲ್ ಡೌನ್ಗೆ ನಾವು ಸಿದ್ದರಾಗುತ್ತಿದ್ದೇವೆ . ಪ್ರಾಣಿಗಳು ಸ್ವಚ್ಚಂದವಾಗಿ ಸಂಚರಿಸುತ್ತಾ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮತ್ತೊಂದೆಡೆ ಇಡೀ ದೇಶದಲ್ಲೇ ವಾಯುಮಾಲಿನ್ಯ ಗಣನೀಯವಾಗಿ ತಗ್ಗಿದೆ.!! ನಮ್ಮ ರಾಷ್ಟ್ರದ ರಾಜಧಾನಿ ದೆಹಲಿ ಒಂದು ಕಾಲದಲ್ಲಿ ಹವಾಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿತ್ತು .ಈಗ ಅದು ಹಳೆ ಮಾತು ಬಿಡಿ . ಮಹಾನಗರಿಗಳು ಮೌನವಾಗಿವೆ. ಸದಾ ಜನಜಂಗುಳಿಯಿಂದ ಕೂಡಿ ನಿಶ್ಯಬ್ದತೆಯನ್ನು ಮರೆತ ನಗರಿಗಳು […]
ಕಾವ್ಯಯಾನ
ನದಿ ದಡದಲಿ ನಡೆದಾಡಿದಂತೆ ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ ಕವಿತೆ ಬರಿ ಅಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ! ಕಿರುಬೆರಳ ನೀ ಹಿಡಿದು ಕಣ್ಮುಂದೇ.. ಬಂದಂತೆ ನದಿ ದಡದ ಮೇಲೆಲ್ಲ ನಡೆದಾಡಿ ಹೋದಂತೆ ಹೋದಲ್ಲಿ ಬಂದಲ್ಲಿ ಹೂ ಅರಳಿ ನಕ್ಕಂತೆ ನಕ್ಷತ್ರವನೇ ಕಿತ್ತು ಕಣ್ಮುಂದೆ ಇಟ್ಟಂತೆ ಅಂಗೈ ಗೆರೆಗಳ ಮೇಲೆ ಕವನಗಳ ಬರೆದಂತೆ ನಯನಗಳು ಒಂದಾಗಿ ಪ್ರೇಮವನೇ ಉಂಡಂತೆ ಅರಬ್ಬಿಯ ಅಲೆಗಳಲಿ ಹೊರಳಾಡಿ ಮಿಂದಂತೆ ದೂರ ತೀರವ ದಾಟಿ ಹೊಸ ಲೋಕ ಕಂಡಂತೆ ಹಾಯಿ ದೋಣಿಯ […]
ಕಾವ್ಯಯಾನ
ಬಿಡಿಸಲಾಗದ ಒಗಟು ಅನ್ನಪೂರ್ಣ.ಡೇರೇದ ಹಿರಿಹಿರಿ ಹಿಗ್ಗಿ ಕುಣಿದುˌ ಕುಪ್ಪಳಿಸಿ ಕನಸುಗಳೊಡಗೂಡಿ ನಲಿವಾಗ ನಸುಕ ಮುಸಕಲ್ಲಿ ಕಾಂತನೊಡನೆ ರೆಕ್ಕೆ ಬಡಿಯುತಲಿ ರೆಂಬೆ ರೆಂಬೆ ಜಿಗಿದು ನಲಿಯುತಲಿದೆ ಅದಾವುದೋ ಮಾರ್ಜಾಲ ಬಲಿಯ ಬೀಸಿತಲಿ ಒಂದೊಂದು ಕನಸು ಬಿಸಿಲಿಗೆ ಕರಗಿದ ಇಬ್ಬನಿಯಾಗಿದೆ. ಹೆಣ್ಣಬಾಳ ಕಣ್ಣೀರು ಮಣ್ಣ ಮಸಣದೊಳು ಸೇರಿ ˌಕಂಡ ಕನಸು ಒಡಲ ಕಳಚಿತು ಮೌಡ್ಯದ ನಡುವೆ ಮಡುಗಟ್ಟಿದ ಅವಳ ಬದುಕು ˌಜಾತಿ ಧರ್ಮದ ಭೂತಗನ್ನಡಿಗೆ ಹೆದರಿ ಮೂಲೆ ಗುಂಪಾಗಿದೆ. *********
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಸ್ವಾರ್ಥ ಲಾಲಸೆಗಳೇ ತುಂಬಿ ತುಳುಕಾಡುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ಅಸಮಾನತೆಯ ಗೋಡೆಗಳು ಮತ್ತೆ ಎದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ತೋರಿದ ಆದರ್ಶದ ಹಾದಿಯ ಪಾಲಿಸುವವರೆಷ್ಟು ನಮ್ಮ ನಡುವೆ ? ಭ್ರಷ್ಟಾಚಾರದ ಕಬಂಧಬಾಹುಗಳಲಿ ಜೀವ ನರಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ಸಾರಿದ ತತ್ವಗಳು ನಿಸ್ಸತ್ವಗೊಂಡು ಮೂಲೆಗುಂಪಾಗಿ ಕಳೆದುಹೋಗಿವೆ ಜಾತಿ ವೈಷಮ್ಯದಲಿ ನಿಷ್ಪಾಪಿಗಳು ನಲುಗಿದರೂ ಬಾಳು ಸಾಗುತ್ತಲೇ ಇದೆ ಬಾಪೂ ಕಾಮಪಿಪಾಸುಗಳೆದುರು ನಡುರಾತ್ರಿ ಒಂಟಿ ಹೆಣ್ಣು ನಿರ್ಭಯದಿ ನಡೆವುದೆಂತು ? […]
ಗೊಂಬೆಯೇ ಏನು ನಿನ್ನ ಮಹಿಮೆಯೇ?
ಗೊಂಬೆಯೇ ಏನು ನಿನ್ನ ಮಹಿಮೆಯೇ? ನಾಗರೇಖಾ ಗಾಂವಕರ್ ಗೊಂಬೆಯೇ ಏನು ನಿನ್ನ ಮಹಿಮೆಯೇ? ಆಕೆ ಮುದ್ದು ಮುದ್ದಾದ ಗೊಂಬೆ. ಎಂಥ ಚೆಂದ ಅಂದ. ಅದೆಂತಹ ನುಣುಪು.. ಒನಪು.. ನವಿರು ಹೊಂಬಣ್ಣದ ಮೈಗಂಪು. ಗೊಂಬೆ ಬಂಗಾರದ ಗೊಂಬೆ. ಹೀಗೆ ಹೇಳುವುದು ಸುಂದರವಾದ ಹುಡುಗಿಗೆ ಮಾತ್ರ ಎಂಬುದು ನನಗೆ ಸುಮಾರು ಏಳೆಂಟು ವರ್ಷಗಳಾದಾಗ ಅರಿವಾಗತೊಡಗಿತ್ತು. ಆದರೆ ನನ್ನ ಒಂದೇ ದುಃಖ ನನಗ್ಯಾರೂ ಹಾಗೇ ಕರೆಯುತ್ತಲೇ ಇಲ್ಲವಲ್ಲ ಎಂಬ ಕೊರಗು. ಹತ್ತು ಹಲವು ಬಾರಿ ನನ್ನ ಅಕ್ಕಂದಿರಿಗೆ ಆ ಪದವಿ ಸಿಕ್ಕಾಗಲೆಲ್ಲಾ […]
ಪ್ರಸ್ತುತ
ಮೊಬೈಲ್ ಡೆವಿಲ್ ಆದೀತು ಜೋಕೆ:– ವಿದ್ಯಾ ಶ್ರೀ ಬಿ. ಮೊಬೈಲ್ ಡೆವಿಲ್ ಆದೀತು ಜೋಕೆ. ಮಾನವ ಇಂದು ನಾಗರಿಕತೆಯ ಕಡೆ ಭರದಿಂದ ಸಾಗಿದ್ದಾನೆ. ಹಿಂದೆ ಅನಾಗರೀಕನಾಗಿದ್ದ ಅವನಲ್ಲಿ ಆದಿಮಾನವನಿದ್ದ. ಈಗ ನಾಗರಿಕನಾಗಿದ್ದಾನೆ, ಗ್ರಹದಿಂದ ಗ್ರಹಕ್ಕೆ ಹೋಗಿ ಬರುತ್ತಿದ್ದಾನೆ. ಸಮುದ್ರದ ಆಳವನ್ನು ಕೊರೆದಿದ್ದಾನೆ. ಭೂಮಿಯ ಒಡಲನ್ನು ಬರಿದು ಮಾಡಿದ್ದಾನೆ, ಕಾಂಕ್ರೀಟ್ ಜಂಗಲ್ ಸೃಷ್ಟಿಸಿದ್ದಾನೆ .ಕನಸಿನ ಕೂಸಾದ ಕಂಪ್ಯೂಟರ್ ನಿರ್ಮಿಸಿ ಬಿಡುತ್ತಿದ್ದಾನೆ. ಶಸ್ತ್ರಾಸ್ತ್ರ ಅಣ್ವಸ್ತ್ರದ ಜನಕನೂ ಆಗಿದ್ದಾನೆ. ರೋಬೋಟ್ ಮಾನವ ಕ್ಲೋನಿಂಗ್ ತಳಿಯ ಸೃಷ್ಟಿಕರ್ತನಾಗಿ ಹೀಗೇ ಅವನ ಮಹತ್ತರ ಸಾಧನೆಯನ್ನು […]
ಕಾವ್ಯಯಾನ
ದ್ವೇಷದ ರೋಗಾಣು ಲಕ್ಷ್ಮಿಕಾಂತಮಿರಜಕರಶಿಗ್ಗಾಂವ. ಕೊರೋನಾ ಕೂಡ ತಬ್ಬಿಬ್ಬು ದುರಿತ ಕಾಲದಲ್ಲೂ ಧರ್ಮದ ಅಮಲೇರಿಸುವ ಕಾರ್ಯ ಅವ್ಯಾಹತವಾಗಿ ಸಾಗಿರುವುದ ಕಂಡು ಮೆದುಳು ಮಾರಿಕೊಂಡವರ ತಲೆಯಲ್ಲಿ ಈ ದೇಶವೇಕೆ ಹೀಗಿದೆ? ಬೆಕ್ಕಿನ ನೆರಳು ತೋರಿಸಿ ಹೆಬ್ಬುಲಿ ನಿಂತಿದೆ ಮರೆಯಲ್ಲಿ ಅಂತ ಪರದೆಯಲ್ಲಿ ತೋರಿಸಿದರೆ ಕ್ಷಣಾರ್ಧದಲ್ಲಿ ಎಲ್ಲ ಕಡೆ ಹೆಬ್ಬುಲಿಯದೇ ಮಾತು! ಮಾತು!ಮಾತು ಅಯ್ಯಯ್ಯಪ್ಪ ಎಂದಿರಬಹುದು ಕೊರೋನಾ ಪ್ರಾಣ ಹಿಂಡಲೂ ಬಂದ ಅಗೋಚರ ವೈರಾಣು ಕೂಡ ಅಸಹ್ಯ ಪಡುವಷ್ಟು ನಮ್ಮ ತಲೆಯಲ್ಲಿ ಅಮೇಧ್ಯದ ಹೊಲಸು ವಾಸಿಯಾಗದ ದ್ವೇಷದ ವೈರಾಣೊಂದು ತಲತಲಾಂತರದಿಂದಲೇ ಇವರ […]