ಇದು ಲಾಕ್ಡೌನ್ ಸಮಯ
ರೇಶ್ಮಾ ಗುಳೇದಗುಡ್ಡಾಕರ್
ಕರೋನಾದ ತಲ್ಲಣ ದಿನದಿನಕ್ಕೂ ಅಗಾಧವಾಗಿ ವ್ಯಾಪಿಸುತ್ತಿದೆ . ಲಾಕ್ ಡೌನ್ ನಿಂದ ಸೀಲ್ ಡೌನ್ಗೆ ನಾವು ಸಿದ್ದರಾಗುತ್ತಿದ್ದೇವೆ . ಪ್ರಾಣಿಗಳು ಸ್ವಚ್ಚಂದವಾಗಿ ಸಂಚರಿಸುತ್ತಾ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮತ್ತೊಂದೆಡೆ ಇಡೀ ದೇಶದಲ್ಲೇ ವಾಯುಮಾಲಿನ್ಯ ಗಣನೀಯವಾಗಿ ತಗ್ಗಿದೆ.!! ನಮ್ಮ ರಾಷ್ಟ್ರದ ರಾಜಧಾನಿ ದೆಹಲಿ ಒಂದು ಕಾಲದಲ್ಲಿ ಹವಾಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿತ್ತು .ಈಗ ಅದು ಹಳೆ ಮಾತು ಬಿಡಿ .
ಮಹಾನಗರಿಗಳು ಮೌನವಾಗಿವೆ. ಸದಾ ಜನಜಂಗುಳಿಯಿಂದ ಕೂಡಿ ನಿಶ್ಯಬ್ದತೆಯನ್ನು ಮರೆತ ನಗರಿಗಳು ಇಂದು ಸ್ತಬ್ದವಾಗಿವೆ .ನರನಿಗೆ ಸೂಕ್ಷ್ಮ ಜೀವಿಯೊಂದು ಸೆಡ್ಡು ಹೊಡೆದು ಅವನ ಬಂಧಿಯಾಗಿಸಿದೆ .!?
ನವಿಲುಗಳು ಹೊರ ಬಂದು ನರ್ತಿಸುತ್ತಿವೆ .! ಜಿಂಕೆಗಳು ,ಕಾಡು ಪ್ರಾಣಿಗಳು ವಾಹನಗಳ ಭಯವಿಲ್ಲದೆ ರಸ್ತೆ ಯಲ್ಲಿ ಸಂಚರಿಸುತ್ತಿವೆ . ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾನವ ಬಂಧಿಯಾದ ಆಗಾಧ ಬುದ್ಧಿಶಕ್ತಿ ಇದ್ದರೂ, ಪ್ರಾಣಿಗಳು ಸ್ವಂತ್ರವಾದವು .
ನೆರೆ , ಭೂಕಂಪ , ಸುನಾಮಿ ಯಂತಹ ಪ್ರಕೃತಿ ವಿಕೋಪ ಕಲಿಸದ ಪಾಠ ಸೂಕ್ಷ್ಮಾಣು ಜೀವಿ ಕಲಿಸಿತು . ವಿಶ್ವವನ್ನೆ ಒಂದು ಕುಟುಂಬ ಮಾಡಿ ಸಾವು ನೋವು ಎಲ್ಲರಿಗೂ ಒಂದೇ .ಎಂಬ ಮಂತ್ರ ಹೇಳಿತು .
ಸಾಂಕ್ರಾಮಿಕ ರೋಗಗಳು ಮನುಕುಲಕ್ಕೆ ಹೊಸದಲ್ಲ. ಇತಿಹಾಸದ ಪುಟ ತೆರೆದು ನೋಡಿದಾಗ ಕಾಲರ ,ಸಿಡುಬು ಮೂಂತಾದ ರೋಗಗಳು ಮನುಕುಲಕ್ಕೆ ಮಾರಿಯಾಗಿ ಹೊಸ ಅನ್ವೇಷಣೆಯ. ಉದಯಕ್ಕೆ ಕಾರಣವಾದವು, ಸಾಧನೆಯ ದಾರಿ ತೋರಿದವು ಎಂದರೆ ತಪ್ಪಾಗಲಾರದು .
ಎರಡು ಶತಮಾನಗಳ ಹಿಂದೆ ಸಿಡುಬು ರೋಗ ಜನರ ಬದುಕನ್ನು ಕಸಿದಿತ್ತು .ಅಗ ಎಡ್ವರ್ಡ್ ಜನ್ನರ್ ಸಿಡುಬಿಗೆ ಲಸಿಕೆ ಅನ್ವೇಷಣೆ ಮಾಡಿದರು ಇದು .ಹಲವಾರು ಜೀವಗಳನ್ನು ಉಳಿಸಲು ಕಾರಣವಾಯಿತು.
ಇಂದು ಕೊರೊನಾ ವಿಶ್ವದಾದ್ಯಂತ ತನ್ನ ಅರ್ಭಟ ಮುಂದುವರೆಸಿದೆ . ಜನರ ಆರ್ಥಿಕ ,ಸಾಮಾಜಿಕ, ಮಾನಸಿಕ ,ದೈಹಿಕ ವಲಯಗಳ ಮೇಲೆ ಗಂಭೀರ ಪ್ರಮಾಣದ ಬದಲಾವಣೆಗೆ ಕಾರಣವಾಗಿದೆ ..!
ಪರಿಣಾಮ ಲಾಕ್ ಡೌನ್ ಉಂಟಾಗಿದೆ .
ಮನೆಯಲ್ಲಿ ಇರುವದೇ ಹಲವರಿಗೆ ಒಂದು ಸವಾಲು .ಗೃಹಿಣಿ ಯರಿಗೆ ಲಾಕ್ಡೌನ್ ಸೀಲ್ ಡೌನ್ ಹೆಚ್ಚು ವ್ಯತ್ಯಾಸ ಇಲ್ಲ .ಏಕೆಂದರೆ ಅಡುಗೆ ಮನೆಗೆ ರಜೆ ಘೋಷಣೆ ಸಾದ್ಯವಿಲ್ಲ .ಬದಲಾಗಿ ಕೆಲಸ ಹೆಚ್ಚಿದೆ .ಮತ್ತೆ ಹಲವರಿಗೆ ಕಡಿಮೆಯಾಗಿದೆ. ಲೋಕೋ ಬಿನ್ನರುಚಿಃ ಅಲ್ಲವೆ ? ನಮಗಾಗಿ ನಮ್ಮವರಿಗಾಗಿ ನಾವು ಮನೆಯಲ್ಲಿ ಉಳಿಯುವದು ಒಂದು ಜವಾಬ್ದಾರಿ .ನಾವು ಉಳಿಯೊಣ ಇತರರನ್ನು ಉಳಿಸೋಣ .ಸಾಮೂಹಿಕವಾಗಿ ಸೇರುವ ಸ್ಥಳಗಳನ್ನು ನಿಷೇಧಿಸೋಣ ನಮ್ಮವರ ಹಿತಕ್ಕಾಗಿ ಪ್ರಾರ್ಥನೆ, ಪೂಜೆ ಎಲ್ಲವನ್ನು ಮನೆಯಲ್ಲೇ ಮಾಡೋಣ .
ಸಾದ್ಯ ವಾದರೆ ಓದು ,ಕಲಿಕೆ ,ಬರವಣಿಗೆ ಎಂಬ ಹತ್ತು ಹಲವು ಬಗೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳೋಣ .ನಮ್ಮ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ .ಆಸಕ್ತಿ ಬದ್ದತೆ ನಮ್ಮನ್ನು ಉತ್ತುಂಗಕ್ಕೆ ಒಯ್ಯುವುದರಲ್ಲಿ ಸಂಶಯವೇ ಇಲ್ಲ .
ಬದುಕಿನಲ್ಲಿ ಬದಲಾವಣೆ ನಿರಂತರ .ಈ ಬದಲಾವಣೆಯನ್ನು ಋಣಾತ್ಮಕ ಅಥವಾ ಧನಾತ್ಮಕವಾಗಿ ನೋಡುವದು ನಮ್ಮ ಮನದ ನೋಟದಲ್ಲಿದೆ . ಹೀಗಾಗಿ ಅನಿವಾರ್ಯತೆಯನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ . ದಿನದಿನಕ್ಕೆ ಕರೋನಾ ತನ್ನ ವ್ಯಾಪ್ತಿ ಯನ್ನು ಹೆಚ್ಚಿಸಿಕೊಳ್ಳುತ್ತಿದೆ .
ನಾವು ನಿಷೇಧವನ್ನು ಸಂಪೂರ್ಣವಾಗಿ ಬೆಂಬಲಿಸಿ ಪಾಲಿಸೋಣ ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಾಗುತ್ತದೆ . ಎಲ್ಲವೂ ನಮ್ಮ ಮನಸ್ಥಿಯನ್ನು ಅವಲಂಬಿಸಿದೆ
ಮತ್ತಷ್ಟು ಮಗದಷ್ಟು ಕಲಿಯೋಣ ಮನೆಯಲಿ ಇರೋಣ ಕರೋನ ಓಡಿಸೋಣ .
*******