ಕೆ.ಬಿ.ಸಿದ್ದಯ್ಯ


ಹುಳಿಯಾರ್ ಷಬ್ಬೀರ್
ದಲಿತ ಕೇರಿಯ ಹುಡುಗ ಅಲ್ಲಮನ ಮಹಾಮನೆ ಹೊಕ್ಕು ದಲಿತರ ಅಕ್ಷರ ಲೋಕವನ್ನು ಅರಮನೆಯಾಗಿಸಿದ..
ದಲಿತ ಕಾವ್ಯೋದ್ಭದಲ್ಲಿ ಚಿಂತನೆಯ ಫಲ ಬೆರೆಸಿ
ಮಸ , ಮಸೆದು ಹತಾರಗಳನ್ನು
ಖಂಡಕಾವ್ಯವಾಗಿಸಿದವರು
ಮೊನಚು ಮಾತು ಬಿಳಿಯ ಗಡ್ಡದೊಳ್ ಬೆರಳಾಟದ ಚೆಂದದೊಂದಿಗೆ ಅಂಬೇಡ್ಕರ್ ಕೂಗೇ ನಿಮ್ಮ ಕೂಗಾಗಿ ಗಾಂಧಿ ಬುದ್ಧನನ್ನು ನಿಮ್ಮೆರಡು ಕೈಗಳಲ್ಲಿ ತಬ್ಬಿ ಹಿಡಿದವರು ..
ಭೌತಿಕ ಜಗತ್ತು ಆಧ್ಯಾತ್ಮದ ಮುಂದೆ ಸೋಲುವಂತೆ ಬಕಾಲ ಮುನಿಯಾಗಿ ಶಬ್ದಕ್ಕೆ ಶಬ್ದವೇ ನಾಚುವಂತೆ ಅದರಾಚೆಗೂ …
ಗಲ್ಲೆಬಾನಿಯಲ್ಲೆ ಅದ್ದಿ ಅನಾತ್ಮ
ಅರಿವಾಗಿಸಿ, ದಕ್ಲದೇವಿ ಕಾವ್ಯ
ಕುಲುಮೆಯ ಒಲೆಯಲ್ಲಿ ಕುದ್ದು
ಖಂಡಕಾವ್ಯದ ಕಿಡಿಯಾಗಿ..
ಇಡಿಯಾಗಿ ಸುತ್ತಲಿನ ಬೆಳಕಿನ ಬೆಳಕಾಗಿದ್ದು ಬಸವಣ್ಣಮಾತು
ಮುತ್ತಿನಹಾರವಾದಂತೆ ಈ ದೇಹ, ನನ್ನ ದೇಹ, ಇಡೀ ದೇಹ ಭವದ ಸಾಲ ಎಂದಿದ್ದು ಸತ್ಯವಾಗಿದೆ..ಕೆ. ಬಿ. ಸತ್ಯವಾಗಿದೆ.
*****************************