ಕಾವ್ಯಯಾನ
ನದಿಯಾಗು. ಶಾಲಿನಿ ಆರ್. ಶಾಲಿನಿ ಆರ್. ಆಸೆಗಳಿವೆ ನೂರಾರು ನೂರಾರು ಬಯಕೆ, ಎತ್ತಲಿಂದೆತ್ತಣಕೂ ನಿನ್ನ ಸೇರುವ ಹರಕೆ, ಹಸಿರುಲ್ಲಿನ ನಡುವೆ ಇಬ್ಬನಿ ಬನಿಯೊಳಗೆ ನಾನಿದಿದ್ದರೆ, ನಿನ್ನ ಪಾದ ಪ್ರಾತಃ ಸ್ಪರ್ಶಕೆ ನಾ ಸದಾ ಕಚಗುಳಿಯಿಡುತಿದ್ದೆ, ನಿನ್ನ ನೋಡುವ ಕನ್ನಡಿ ನಾನಾಗಿರೆ, ನಿನ್ನಂತರಂಗನರಿವ ಬೆರಗು ನಾನಾಗಿ ಬಳಿಯಿರುತಿದ್ದೆ, ನೀ ನಡೆವ ಹಾದಿಗೆ ಮರವು ನಾನಾದೊಡೆ, ನಿನ್ನ ದಣಿವಿಗೆ ನಾ ನೆರಳಾಗ ಬಯಸಿದ್ದೆ, ನೀ ನೋಡುವ ನೋಟದ ಕಣ್ಣು ನಾನಗಿದ್ದರೆ, ಭರವಸೆಯ ಬೆಳದಿಂಗಳ ಕಣ್ಗಿರಿಸಿ ತಣಿಯುತಿದ್ದೆ, ನಿನ್ನ ನಿಜ ಪ್ರೀತಿ […]
ಅನುವಾದ ಸಂಗಾತಿ
“ನಿಮ್ಮ ಕೈಗಳು ಮೂಲ: ಬಾಬುರಾವ್ ಬಾಗುಲ್(ಮರಾಠಿಕವಿ) ಕನ್ನಡಕ್ಕೆ:ಕಮಲಾಕರ ಕಡವೆ ನಿಮ್ಮ ಕೈಗಳು ಇದ್ದಿರಬಹುದು ಬಂಧಿಆದರೆ ಅವು ಸೃಜನಶೀಲನಿಮ್ಮ ಕೈಗಳು ಇದ್ದಿರಬಹುದು ಶಾಂತ, ಅಮಾಯಕಆದರೆ ಅವು ಪರಿವರ್ತನೆಯ ರಥಗಳುಪ್ರಗತಿಯ ಹೆದ್ದಾರಿಗಳುನಿಮ್ಮ ಐದು ಬೆರಳುಗಳು ಪಂಚಮಹಾಭೂತಗಳುಇದೇನು ಬಾ. ಬಾ. ನ ಕಲ್ಪನೆಯಲ್ಲರಶಿಯಾ, ಅಮೇರಿಕ, ಯುರೋಪು ಆಗಿದ್ದಾರೆ ಸಾಕ್ಷಿನಿಮ್ಮ ಖಚಿತ ಸಾಮರ್ಥ್ಯಕ್ಕೆ ********
ಕವಿತೆ ಕಾರ್ನರ್
ಚಹರೆ ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ನಮ್ಮ ವಿದಾಯದ ಕ್ಷಣಗಳ ಕ್ಷಣಗಳ ಸಾಕ್ಷಿಗಳಿನ್ನೂಹಾಗೇ ಉಳಿದಿವೆ ರಪ್ಪನೆ ಬಾಗಿಲು ತೆಗೆದು ಸದ್ದು ಮಾಡುತ್ತಾ ಹೋದವಳುಎಸೆದು ಹೋದ ಮುಖ ಕನ್ನಡಿಯ ಚೂರುಗಳಲ್ಲಿನ್ನುಅವಳ ಚಹರೆಗಳು ಕಾಣುತ್ತಿವೆ! ಮತ್ತೆಂದೂ ನೋಡಲಾರೆ ನಿನ್ನ ಮುಖವ ಎಂದು ಕೂಗಿ ಹೇಳಿ ಹೋದವಳಮಾತುಗಳಿನ್ನೂ ಹಳೆಯ ಮಣ್ಣಿನ ಗೋಡೆಗಪ್ಪಳಿಸಿಮತ್ತೆ ಮತ್ತೆ ಕೇಳುತ್ತಲೇ ಇವೆ! ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ಕೇಳಿಸುತ್ತಲೇ ಇವೆ ಶಬ್ದಗಳುಕಾಣಿಸುತ್ತಲೇ ಇವೆ ಚಿತ್ರಗಳು ಒದ್ದೆಯಾಗುತ್ತಲೇ ಇವೆ ಕಣ್ಣುಗಳು!ಕಾರಣವಿರದೇ? ********* ಕು.ಸ.ಮದುಸೂದನ
ಕಾವ್ಯಯಾನ
ಗಝಲ್ ಬಸವರಾಜ ಕಾಸೆ ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/ ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು// ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/ […]
ಕಾವ್ಯಯಾನ
ನನಗಷ್ಟೆ ಗೊತ್ತು! ಲೋಕೇಶ್ ಅಷ್ಟು ಸುಲಭವಲ್ಲ ನಿನ್ನ ಉಳಿಸಿಕೊಳ್ಳುವುದು ಅಷ್ಟು ಸಲೀಸು ಅಲ್ಲ ನಿನ್ನ ಕಳೆದುಕೊಳ್ಳುವುದು ನೀನೆಂದು ಉನ್ಮಾದ ರುಚಿಗೆ ತಾಕೀದೊಡನೇ ನೀ ಕರೆದೊಯ್ಯುವ ಜಗತ್ತು ನನಗಷ್ಟೇ ಗೊತ್ತು! ನೀನೆಂದು ಭಾವನ್ಮೊದಾ ಮನಕ್ಕೆ ನೆನಪದೊಡನೇ ನೀ ಆವರಿಸಿಕೊಳ್ಳುವ ನಿಯತ್ತು ನನಗಷ್ಟೇ ಗೊತ್ತು! ನೀನೆಂದು ಸವಿ ವಿನೋದ ಮಾತಿಗೆ ಜೊತೆಯಾದೊಡನೇ ನೀ ಆಪ್ತವಾಗುವ ಅವಲತ್ತು ನನಗಷ್ಟೇ ಗೊತ್ತು! ನೀನೆಂದು ಉಸಿರ ನಾದ ಏರಿ ಇಳಿದೊಡನೇ ನನ್ನ ಎದೆಯಲ್ಲೆಳೆವ ಹೆಸರಂತು ನನಗಷ್ಟೇ ಗೊತ್ತು *************
ಕಾವ್ಯಯಾನ
ಯುಗಾದಿಯ ಆ ದಿನ ನೀ.ಶ್ರೀಶೈಲ ಹುಲ್ಲೂರು ಹೆದ್ದಾರಿಗಂಟೇ ಇರುವ ನನ್ನ ಮನೆ ಮಹಲಿನ ಮಹಡಿಯ ಬಾಲ್ಕನಿಯಲಿ ಬಂದು ನಿಂತೆ ಬಿಕೋ ಎನ್ನುವ ಸತ್ತುಬಿದ್ದ ರಸ್ತೆ! ಅಲ್ಲೊಂದು ಇಲ್ಲೊಂದು ಆಗೊಂದು ಈಗೊಂದು ಕಂಡು ಕಣ್ಮರೆಯಾಗುವ ಬೀದಿ ನಾಯಿ ಗಳು ತಮ್ಮ ವಿಸರ್ಜನಾ ವ್ಯೂಹ ದ ಕೊನೆಯ ಅಂಗದ ಅಂತಿಮ ಚಪಲವ ಲೈಟಿನ ಕಂಬಕೆ ಕಾಲೆತ್ತಿ ನೆಲಕೆ ತಳವೊತ್ತಿ ತೀರಿಸಿ ಕೊಂಡು ಕಂಬಿ ಕಿತ್ತವು! ಪ್ರಾಸಕ್ಕಂಟಿದ ‘ಕವಿತೆ ಸಾಲು’ ಇಂದು ನನ್ನನ್ನು ಪರದೇಶಿಯಾಗಿಸಿ ಕ್ರಾಸ್ ಕಂಟ್ರಿ ಓಟಕ್ಕಿಳಿದವು. ಸರಿ,ಬಂದಂತೆ ಬರೆದಿಡುವೆ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ ನಮ್ಮ ಗೋಳನು ಕಂಡು ಕರಗಿರುವನೇ ದಿನಕರ ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ ಕತ್ತಲು ಸರಿದು ಬೆಳಕು, […]
ಕಾವ್ಯಯಾನ
ನಾವೆಲ್ಲರೂ ಮನೆಯಲ್ಲೇ ಇದ್ದೇವೆ ರೇಖಾಭಟ್ ನಾವೆಲ್ಲರೂ ಮನೆಯಲ್ಲೇ ಇದ್ದೇವೆ ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ ಅಡುಗೆಮನೆ ಈಗ ಕೇಂದ್ರ ಸ್ಥಾನ ಟಿ.ವಿ ಹಾಲ್ ನಮ್ಮ ಆಸ್ಥಾನ ಬೀದಿಗಂತೂ ಹೋಗೋದಿಲ್ಲ ಅದಂತೂ ಈಗ – ಖಬರಸ್ಥಾನ! ಮಾವನ ವಾಕಿಂಗ್ ಸ್ಟಿಕ್ ಗೋಡೆ ಮೂಲೆಯಲ್ಲೆ ನಿದ್ರೆಗೆ ಜಾರಿದೆ! ಅತ್ತೆಯ ಹೂವಿನ ಚೊಬ್ಬೆ ದೇವಸ್ಥಾನ ಮರೆತು ಬೊರಲು ಬಿದ್ದಿದೆ! ಪುಟ್ಟ ಪಿಂಕ್ ಸೈಕಲ್ ಮರದ ಬುಡದಲಿ ಒರಗಿ ನಿಂತು ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ! ಕೊರೊನಾ ಬೂತದ ಚಿತ್ರ ಬಿಡಿಸಿ ಅದಕ್ಕೆ ಕ್ರಾಸ್ ಮಾರ್ಕ್ […]
ಕವಿತೆ ಕಾರ್ನರ್
ರಣಹಸಿವಿನಿಂದ ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮ ಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ ಕಲಸಿಹಾಕಿದ […]
ಕವಿತೆ ಕಾರ್ನರ್
ನಾವೇನು ವ್ಯಬಿಚಾರಿಗಳಾಗಿರಲಿಲ್ಲ! ಅವಳನ್ನು ಪ್ರೀತಿಸಿದ್ದು ನಿಜಹೆಸರಲ್ಲೇನಿದೆ ಹೇಳಿಸುಶೀಲಾ, ಶಕೀಲಾ, ಶೈನಿ!ಏನಾದರು ಒಂದಂತು ಆಗಿರಲೇ ಬೇಕೆಂಬ ಹಟ ನನಗಂತು ಇರಲಿಲ್ಲ! ಹಾಗೇನೆ ನನ್ನ ಹೆಸರುಮಹೇಶ, ಮುಬಾರಕ್, ಮ್ಯಾಕ್ಹೀಗೇನೆ ಯಾವುದಾದರೊಂದು ಆಗಿರಲೇ ಬೇಕೆಂಬ ಹಟಅವಳಿಗೂ ಇದ್ದಂತೆ ಕಾಣಲಿಲ್ಲ… ನಮ್ಮ ಮಿಲನದ ಉನ್ಮತ್ತ ಕ್ಷಣದೊಳಗೂಅವಳಾಗಲಿ ನಾನಾಗಲಿ ಅಪ್ಪಿ ತಪ್ಪಿಯೂನಮ್ಮಹೆಸರುಗಳ ಪಿಸುಗುಡಲಿಲ್ಲ!ಅಷ್ಟು ಅನಾಮಧೇಯರಾಗಿ ಪ್ರೇಮಿಸಿದೆವು. ಹೊರಗಿನವರಿಗೆ ನಾವು ಗೊತ್ತಿದ್ದುದು ನಮ್ಮ ಹೆಸರುಗಳಿಂದ ಮಾತ್ರಆದರೆ ಆ ಹೆಸರುಗಳಾಚೆಯಲ್ಲಿಯೂಇರುವ ನಮ್ಮ ಐಡೆಂಟಿಟಿಯನ್ನುಹುಡುಕಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಹಾಗಂತ ನಾನು ವಿಟನಾಗಿರಲಿಲ್ಲಅವಳೇನು ಜಾರಿಣಿಯಾಗಿರಲಿಲ್ಲ!************* ಕು.ಸ.ಮದುಸೂದನ