ಸಿನಿಮಾ ಸಾಹಿತ್ಯ

ಸಿನಿಮಾ ಸಾಹಿತ್ಯ

ಯೋಗರಾಜ್ ಭಟ್ಟರ ಗೀತೆಗಳ ಗಮ್ಮತ್ತು ರಾಘವೇಂದ್ರ ಈ ಹೊರಬೈಲು “ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ” ಹತ್ತು ವರ್ಷಗಳ ಹಿಂದೆ, ಹಿರಿಯರು ಕಿರಿಯರೆನ್ನದೆ ಕರುನಾಡಿನ, ಅಷ್ಟೇ ಏಕೆ ಅದರಾಚೆಯ ಎಲ್ಲರೆದೆಯೊಳಗೂ ತಣ್ಣನೆ ಹನಿಹನಿಯಾಗಿ ಸುರಿದು, ಆರ್ದ್ರಗೊಳಿಸಿ, ಮನಸಿನೊಳಗೆ ಚಿರಂತನವಾಗಿ ನಿಂತ “ಮುಂಗಾರು ಮಳೆ” ಎಂಬ ಚಿತ್ರದ ಅಮರ ಗೀತೆಯ ಸಾಲುಗಳಿವು. ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಪ್ರಾರಂಭವಾಗುವ ಈ […]

ಕಾವ್ಯಯಾನ

‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ  ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****

ಕಾವ್ಯಯಾನ

ಗಝಲ್ ಹೇಮಗಂಗಾ ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ? ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು […]

ಅನುವಾದ ಸಂಗಾತಿ

ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಎಲೆ ಇದರ ಹಂಗೇ ಬೇಡ ಎಂದು ಮರದಿಂದ ಕಳಚಿಕೊಂಡ ಎಲೆ ಈಗ ಸ್ವತಂತ್ರ- ಮೇಲಕ್ಕೆ ಎತ್ತುವ ,ಕೆಳಕ್ಕೆ ತಳ್ಳುವ ಗಾಳಿಯ ನಡುವೆ ಎಲೆಗೆ ಆಕಾಶದಲ್ಲಿ ಜೀಕುತ್ತ ಸ್ವಚ್ಛಂದ ವಿಹರಿಸುವ ಹಕ್ಕಿ ಕನಸು ಗುರಿಯಿರದ ಚಲನೆಯಲಿ ಕನಸೊಡೆದು ನಗು ಮಾಯವಾಗಿ ಆಕಾಶ ದಕ್ಕದೆ ನೆಲ ಕೈಗೆಟುಕದೆ ಎಲೆ ಎಲೆಲೆ ಹೊಯ್ದಾಡಿ, ಈಗ ತ್ರಿಶಂಕು. ಹಕ್ಕಿ ಮಾತ್ರ ಮೇಲೆ ನಸು ನಗುತ್ತಿದೆ ಮರದ ಜೊತೆ ಎಲೆಯ ಸ್ಥಿತಿ ನೋಡಿ. ಆಕಾಶ ಸುಮ್ಮನಿದೆ. […]

ಲಹರಿ

ಹೆತ್ತಮ್ಮನಲ್ಲದ ಅಮ್ಮ ಸಂಧ್ಯಾ ಶೆಣೈ [5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ. ಈಗ ಅವಳು ಹೇಳಬಹುದು […]

ನಿಮ್ಮೊಂದಿಗೆ

ಪ್ರಿಯ ಬರಹಗಾರರೆ- ಪ್ರಿಯ ಬರಹಗಾರರೆ,ಸಂಗಾತಿ ಬ್ಲಾಗಿಗೆ ನೀವು ಬರೆಯುತ್ತಿರುವುದು ನಮಗೆಸಂತಸದ ವಿಚಾರ. ಅಕ್ಷರದ ಮೇಲಿನ ನಿಮ್ಮ ಪ್ರೀತಿ ದೊಡ್ಡದು. ಇಷ್ಟು ದಿನಗಳ ನಿಮ್ಮ ಸಹಕಾರಕ್ಕೆ ಸಂಗಾತಿ ಋಣಿಯಾಗಿರುತ್ತದೆ ಓದುಗರಿಗೆ ಒಳ್ಳೆಯ ಸಾಹಿತ್ಯಕ ಬರಹಗಳನ್ನು ನೀಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ನಾವು ರೂಪಿಸಿದ್ದು ಅವನ್ನು ತಮಗೆ ತಿಳಿಸಲು ಇಚ್ಚಿಸುತ್ತೇವೆ. ಮೊದಲನೆಯದಾಗಿ ನಮ್ಮ  ಓದುಗರಿಗೆ ಹೊಸ ಬರಹಗಳನ್ನು ನೀಡಲಿಚ್ಚಿಸಿದ್ದು ಬೇರೆ ಕಡೆ ಪ್ರಕಟವಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಎರಡನನೆಯದಾಗಿ ಈಗಾಗಲೇ ಫೇಸ್ ಬುಕ್ಕಿನಲ್ಲಿ ಹಾಕಿ ಹಳತಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಮೂರನೆಯದಾಗಿ ಬ್ಲಾಗಿನ […]

ಕಥಾಯಾನ

ಅಂಜಲಿ ಜ್ಯೋತಿ ಬಾಳಿಗ  ಇಂಜಿನಿಯರಿಂಗ್ ಕೆಲಸದ ನಿಮಿತ್ತ  ಅಮೇರಿಕಾಕ್ಕೆ ಹೋದ ಅಂಜಲಿ ‘ವೀಸಾ’ ರಿನಿವಲ್ ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಳು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ ‘ಪಂಚತಾರಾ’ ಹೊಟೇಲ್ ಗೆ ಹೋಗಿ ಫ್ರೆಶ್ ಆಗಿ ತನ್ನ ಗೆಳತಿಯನ್ನು ಭೇಟಿ ಮಾಡಬೇಕೆಂದು ವೆರೆಂಡಾದ ಬಳಿ ಬಂದಾಗ ತನ್ನ ಗತ ಜೀವನದ ಭಾಗವಾಗಿರುವ ವ್ಯಕ್ತಿಯನ್ನು ಹೊಟೇಲ್ ‌ನ ಪಾರ್ಕಿಂಗ್ ನಲ್ಲಿ ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು. ತಾನು ಯಾರನ್ನು ಜೀವನದುದ್ದಕ್ಕೂ  ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು,ಅವಳ ಬದುಕನ್ನು ಮತ್ತೊಮ್ಮೆ […]

ಅನುವಾದ ಸಂಗಾತಿ

ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ಹಿಂದಿ: ರಾಮದರಶ್ ಮಿಶ್ರಾ ಕನ್ನಡ: ಕಮಲಾಕರ ಕಡವೆ ಕಮಲಾಕರ ಕಡವೆ ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ತೆರೆಯುತ್ತ ನನ್ನ ಕನಸುಗಳ ಪುಕ್ಕ ನಿಧನಿಧಾನ ಯಾರ ಬೀಳಿಸಲಿಲ್ಲ, ನನ್ನ ನಾ ಹೆಚ್ಚುಗಾಣಿಸಲಿಲ್ಲ ಸಾಗಿತು ಬಾಳ ಪಯಣ, ನಿಧನಿಧಾನ ನೀವೆಲ್ಲಿ ಎದ್ದು ಬಿದ್ದು ತಲುಪಿರುವಿರೋ ಅಲ್ಲಿ ನಾನೂ ಮುಟ್ಟಿಹೆನು, ನಿಧನಿಧಾನ ಬೆಟ್ಟಗಳಿಂದ ಅದಾವ ಪೈಪೋಟಿಯಿರಲಿಲ್ಲ ನಡೆಯುತ್ತಲುಳಿದೆ ತಲೆ ಎತ್ತಿ, ನಿಧನಿಧಾನ ಬಿದ್ದೆನಾದರೆ ನಾನು ಅತ್ತೆ ಒಂಟಿಯಾಗಿ ಮಾಸಿ ಗಾಯ ನೋವು ಮರೆಯಾಯ್ತು, […]

ಅನುವಾದ ಸಂಗಾತಿ

ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ Two faces —————- An absolute truth that a coin poses two faces. It is to be used in the game of King and Queen, to get solution for the choice confusion. Both sides of a coin stuck together with their backs like siamese to be Inseparable one survives only […]

ಕಾವ್ಯಯಾನ

ಮಳೆ ವಸುಂಧರಾ ಕದಲೂರು ಕಿಟಕಿ ಸರಳಾಚೆಸುರಿವ ಮಳೆ ಕಂಡುಮೂಗೇರಿಸುತ್ತೇನೆಮಣ್ಣ ಘಮಲಿಗೆ.. ಬಿದ್ದ ಹನಿಯೆಲ್ಲಾಸಿಮೆಂಟು ರೋಡಿನಲಿಉರುಳಾಡಿ ಕೊಚ್ಚೆಮೋರಿ ಸೇರುವಾಗಎಲ್ಲಿಂದ ಬರಬೇಕುಮಣ್ಣ ವಾಸನೆ.. ಊರ ಮನೆಯಲ್ಲಿಪುಟ್ಟ ತೊರೆಯಾಗಿಮಳೆ ನೀರು ತುಂಬಿಹರಿಯುತ್ತಿದ್ದ ಮೋರಿಗಳುಘಮ್ಮೆನುತ್ತಿದ್ದವು… ಪುಟ್ಟ ಫ್ರಾಕಿನ ಹುಡುಗಿಬಿಟ್ಟ ಕಾಗದದ ದೋಣಿಹೊತ್ತೋಯ್ದು ಮರೆಯಾದನೆನಪೂ ಘಮ್ಮೆಂದಿತು.. ಊರ ಮಳೆ ಕೇರಿ ಮಳೆನೆಲದ ಮಳೆಯಾಗಿತ್ತು.ಹರಿದು ಕಡಲ ಸೇರಿದಟ್ಟ ಮುಗಿಲಾಗಿ ಘಮ್ಮೆಂದಿತು… ಈ ನಗರ ಮಳೆ ಮಾತ್ರಒಂದು ನೆನಪೂ ತುಂಬುವುದಿಲ್ಲ.ಭೋರೆಂದು ಸುರಿದ ಮಳೆಗೆಮಣ್ಣಿಲ್ಲದ ನೆಲವೂ ಇಂಗುವುದಿಲ್ಲಮಣ್ಣಿಲ್ಲದೆ ಘಮಲು ಅಡರುವುದಿಲ್ಲ ********

Back To Top