ನಿತ್ಯೋತ್ಸವ ಕವಿ

ನಿತ್ಯೋತ್ಸವ ಕವಿ

ಬದುಕು-ಬರಹ ನಿತ್ಯೋತ್ಸವ ಕವಿ ಹಾಗೂ ವಿಮರ್ಶಕ ಮತ್ತು ವೈಚಾರಿಕ ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಮಹಮದ್..! ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು… ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ […]

ಗುರುವಂದನೆ

ಗುರುವಂದನೆ ಪೂರ್ಣಿಮ ಸುರೇಶ್ ಗೃಹಬಂಧಿಯಾಗಿ ಕರೋನ ಪೊಸಿಟಿವ್,ನೆಗಟಿವ್,ಹಸಿರು,ಹಳದಿ,ಕೆಂಪು ಅನ್ನುವ ಸುದ್ದಿಮಾಯೆಯ ಸೆಳೆತಕ್ಕೆ ಹೊಂದಿಸಿಕೊಂಡು.ಮೌನ ಹೊದ್ದ ದಿನಗಳು ತೆವಳುತ್ತಿದೆ. ಇಂತಹ ಸಮಯದಲ್ಲೇ ಬೆಂಗಳೂರಿನ ಗೆಳೆಯರೊಬ್ಬರು ಕರೆ ಮಾಡಿ ‘ನಿಸಾರ್ ಹೋಗಿಬಿಟ್ರಲ್ವಾ’..ಮನಸ್ಸು ಒಪ್ಪಲಾರದ,ಬುದ್ದಿ ಗ್ರಹಿಸಲಾರದ ಏನನ್ನೋ ಆಡುತ್ತಿದ್ದಾರೆ. ಉತ್ತರಿಸಲಾಗದ ಮಂಕು ಕವಿಯಿತು. ವಾಟ್ಸಫ್ ತೆರೆದರೆ ಆಗಲೇ ಹಲವಾರು ಸ್ನೇಹಿತರು ಸಂದೇಶ ಕಳುಹಿಸಿದ್ರು. ಒಳಹೊರಗೆಲ್ಲ ಸೂತಕ. ಸಾರ್..ಹೋಗಿಬಿಟ್ರೇ..ಸಾಧ್ಯವೇ ಇದು..ಟಿ.ವಿಯಲ್ಲೂ ಅದೇ ಸುದ್ದಿ..ಬಂಧು,ಗುರು,ಮಾರ್ಗದರ್ಶಿ..ಇನ್ನಿಲ್ಲ. ಹೇಗೆ ನಂಬಲಿದನ್ನು..ಸುಳ್ಳಾಗಬಾರದೇ.. ಅಂತರಂಗದಲ್ಲಿ ಕಚ್ಚಿಕೊಂಡ ನೆನಪುಗಳು,ಬರಹಗಳು ಮಾತ್ರ ನಮ್ಮ ಜೊತೆ. ನಿಸಾರ್ ಸಾರ್ ಗೆ ನಮ್ಮ ಉಡುಪಿಯ ಜೊತೆ […]

ಕಾವ್ಯಯಾನ

ಯಾನ ಪ್ರೊ.ಕವಿತಾ ಸಾರಂಗಮಠ ಲೋಕದಿ ಆವರಿಸಿದೆ ಕೊರೊನಾ ಛಾಯೆ ನಿತ್ಯೋತ್ಸವದ ಬೆಳಕು ಆರಿತಾವ ಮಾಯೆ! ನವ್ಯ ಕಾವ್ಯದ ನೇತಾರ ಕನ್ನಡದ ಕುರಿತ ಪ್ರೀತಿ ಅಪಾರ! ಕುರಿಗಳು ಸಾರ್ ಕುರಿಗಳು ರಾಜಕೀಯ ವಿಡಂಬನೆ ಮನದಲಿಲ್ಲ ನಾ ಸಾಹಿತಿ ಎಂಬ ಅಹಂಭಾವನೆ! ಪಡೆದದ್ದು ಪದವಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಕನ್ನಡ ಸಾಹಿತ್ಯದಲ್ಲಿ ಏರಿದರು ಶಿಖರ! ನಗುವಿನ ದಿನವೇ ನಿಧನ ಇದುವೇ ವಿಧಿಯ ವಿಧಾನ! ಕನ್ನಡ ಸಾಹಿತ್ಯದಲ್ಲಿ ಮಾಡಿದರು ಕ್ರಾಂತಿ ವಿಧಿವಶರಾದ ಇವರ ಆತ್ಮಕ್ಕೆ ದೊರೆಯಲಿ ಶಾಂತಿ! ಒಮ್ಮೆ ನಗು ಒಮ್ಮೆ […]

ನಿತ್ಯೋತ್ಸವವಿನ್ನು ನೆನಪು

ನಿಂತು ಹೋದ ನಿತ್ಯೋತ್ಸವ ಕೆ.ಎಸ್.ನಿಸಾರ್ ಅಹಮದ್ ನಿತ್ಯೋತ್ಸವ ಕವನ’ ನಿಲ್ಲಿಸಿದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್..! ನಿತ್ಯೋತ್ಸವದ ಕವಿ ಎಂದೇ ಖ್ಯಾತರಾದ ಕನ್ನಡ ಹಿರಿಯ ಕವಿ ಪ್ರೊ. ಕೆ.ಎಸ್‌ ನಿಸಾರ್ ಅಹಮದ್ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು… ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದವರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ […]

ನುಡಿ ನಮನ

ನುಡಿ ನಮನ ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ… ** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”…. ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ […]

ನಿತ್ಯೋತ್ಸವದ ಕವಿಗೆ ನಮನ

ನಿತ್ಯೋತ್ಸವದ ಕವಿಗೆ ನಮನ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ…. ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ […]

ಕಾವ್ಯಯಾನ

ಜೀತ ಸ್ವಪ್ನ ಆರ್.ಎ. ಜೀತದಾಳು ಆಗಿ ಹುಟ್ಟಿ ಜೀತದ ಆಳಾಗಿ ದುಡಿ ಯೋ ಕಾಲ ನಮ್ಗೆ ಹೋಗಲಿಲ್ಲ ವ ಲ್ಲೋ ಕರ್ಮ ತಮ್ಮ ಹೋಗಲಿಲ್ಲ ವಲ್ಲೋ!!! ಜೀತ ಪದ್ದತಿ ಬೇಡ ಕಣೋ!! ನಮ್ಮ ರಕ್ತ ಸುರಿಸಿ ಅವ್ರು ಜಗ್ಗಿ ಕೂಳು ಕೊಡದೆ ಚಿತ್ರ ಹಿಂಸೆ ಕೊಡ್ತರಲ್ಲೋ ಶಿವನೇ ನಮ್ಮ ಕಷ್ಟ ದಿನಕ್ಕೆ ಕಷ್ಟ ಕೊಡ್ತಾರಲ್ಲೋ ಜೀತ ಪದ್ದತಿ ಬೇಡ ಕಣೋ!! ಬಟ್ಟೆ ಇಲ್ಲ ಬರೆ ಇಲ್ಲ ,ಸ್ನಾನ ಇಲ್ಲ ಮೈ ಮೈಲಿಗೆ ಎಲ್ಲ ನಮ್ಮ ಪಾಡು ನಾಯಿ […]

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ನೆಮ್ಮದಿಯ ಜೀವನಕ್ಕಾಗಿ ಮನಸ್ಸನ್ನು ಮರೆತುಬಿಡು ಶಾಂತಿಯುತ ಬದುಕಿಗಾಗಿ ಬುದ್ಧಿಯನ್ನು ಮರೆತುಬಿಡು ಬಾಳೊಂದು ಸುಂದರ ಸ್ವಪ್ನ ಎಂಬುದನ್ನು ಮರೆಯದಿರು ನಿರ್ಮಲ ಸಹಯೋಗದ ಸಾಂಗತ್ಯವನ್ನು ಮರೆತುಬಿಡು ಪರಪಂಚದಲ್ಲಿ ಶೂನ್ಯ ಸಂಪಾದನೆ ಮಾಡಬೇಕಾಗಿದೆ ಎಲ್ಲಾ ಬಲ್ಲೆನೆಂಬ ಸಿಹಿಯಾದ ಭ್ರಮೆಯನ್ನು ಮರೆತುಬಿಡು ಮನುಷ್ಯ ಸಮಾಜ ಜೀವಿ ಎಂದು ಸಾರಲು ಹೋಗಬೇಡ ಜಿಂದಗಿಯ ಸವಿಯನುಣಲು ಸಂಸಾರವನ್ನು ಮರೆತುಬಿಡು ‘ಮಲ್ಲಿ’ ಮರೆವು ಪ್ರಜ್ಞಾವಂತ ಜಗತ್ತಿನ ಬಹುದೊಡ್ಡ ಆಸ್ತಿ ಶಾಶ್ವತವೆಂಬ ಮಾಯಾ ಜಿಂಕೆಯನ್ನು ಮರೆತುಬಿಡು ******

ಅನುವಾದ ಸಂಗಾತಿ

 ಕೊನೆಯ ಮು೦ಜಾನೆ ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ : ಮೇಗರವಳ್ಳಿ ರಮೇಶ್ ಮೇಗರವಳ್ಳಿ ರಮೇಶ್ ಕಗ್ಗಾಡಿನೊಡಲ ಕತ್ತಲಲಿ ಕಳೆದಿದೆ ನಿನ್ನ ಕೂದಲು ನನ್ನ ಪಾದವನ್ನು ಸೋಕುತ್ತಿದೆ ನಿನ್ನ ಪಾದ ಮಲಗಿರುವೆ ನೀನು ರಾತ್ರಿಗಿ೦ತಲೂ ಹಿರಿದಾಗಿ. ಆದರೆ ನಿನ್ನ ಆ ಕನಸು ಈ ಕೋಣೆಗಷ್ಟೇ ಸೀಮಿತ. ಎಷ್ಟೊ೦ದು ಜನ ಇದ್ದೇವೆ ನಾವು ನೋಡು ಇಷ್ಟು ಚಿಕ್ಕದಾಗಿ! ಭೂತಗಳನ್ನು ತು೦ಬಿಕೊ೦ಡ ಟ್ಯಾಕ್ಸಿಯೊ೦ದು ಸರಿದು ಹೋಗುತ್ತಿದೆ ಹೊರಗೆ. ಹತ್ತಿರದಲ್ಲಿ ಹರಿವ ನದಿ ಯಾವಗಲೂ ಹಿಮ್ಮುಖ ಪ್ರವಾಹಿಯಾಗಿದೆ. ನಾಳೆ ಇನ್ನೊ೦ದು ದಿನವಾದೀತೆ? ****

Back To Top