ಕಾವ್ಯಯಾನ
ಮಾಡು ನೀ ಪ್ರಯತ್ನ ಪ್ಯಾರಿಸುತ ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ ಮಲಗಲಾವುದು ಬಿಡೋದಿಲ್ಲವಲ್ಲ ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು ಕುಂಟು […]
ಲಂಕೇಶರನ್ನು ಏಕೆ ಓದಬೇಕು?
ಲಂಕೇಶರನ್ನು ಏಕೆ ಓದಬೇಕು? ಸುಪ್ರಿಯಾ ನಟರಾಜ್ ನಾನೇಕೆ ಲಂಕೇಶರನ್ನು ಓದುತ್ತೇನೆ ಪಿಯುಸಿ ಯಿಂದಲೂ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ, ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಇತ್ತು. ಆದರೆ, ಪುಸ್ತಕಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸವಾಗಿತ್ತೇ ಹೊರತು, ಓದುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನನಗೆ ಪುಸ್ತಕಗಳ ಮೇಲೆ ಪ್ರೀತಿ ಇತ್ತು. ಆದರೆ ಅವುಗಳನ್ನು ಓದುವ ಚಟವಿರಲಿಲ್ಲ. ಆದರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವುದು ನನ್ನ ಆಸ್ಥೆಯಾಗಿದ್ದರಿಂದ ಕನ್ನಡ ರತ್ನ ಪರೀಕ್ಷೆ ಯಲ್ಲಿ ಉತ್ತೀರ್ಣಳಾಗಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ, ನನ್ನ ಸಂಗ್ರಹದಲ್ಲಿ ಹಲವಾರು […]
ಕಾವ್ಯಯಾನ
ವಿಭಿನ್ನ ರೇಶ್ಮಾ ಗುಳೇದಗುಡ್ಡಾಕರ್ ಕೋಟೆ ಕಟ್ಟುವೆ ಭಾವನೆಗಳ ನಡುವೆಎಂದವ ಹೆಣವಾಗಿ ಬಿದ್ದನುಒಡೆದ ಕನಸುಗಳ ಅವಶೇಗಳಮಧ್ಯೆ …. ಮಾನವತೆಯ ಹರಿಕಾರನೋಂದಮನಗಳ ಗುರಿಕಾರ ಎಂದುನಕಲಿ ಫೋಸು ಕೊಟ್ಟವನುಎಡಬಿಡದೆ ಭಾಷಣಗಳಸುರಿಮಳೆಗೈದವನು ಬಹಳ ದಿನಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ …. ಮಾತಿನಲ್ಲೆ ಬಂದೂಕು ಇಟ್ಟವನುಮುಗ್ದ ಮಂದಿಯ ಚಿತ್ತ ಕದಲಿದನುಅನಾಯಾಸವಾಗಿ ಗೆಲುವು ಪಡೆಯಲುನಿರಂತರವಾಗಿ ಹೆಣಗುತಿರುವನುಗುಂಪುಗಳ ನಡುವೆ …. ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರುಬದುಕಿನ ಸಾರವ ಹೊತಿಟ್ಟುಮುಖವಾಡಗಳಿಗೆ ಬಣ್ಣ ಹಚ್ಚುವರು ಸರಳತೆಯೇ ಉಸಿರು ಎಂದುಆದರ್ಶಗಳೇ ಬದುಕು ಎಂದುಅಹಿಂಸೆಯೇ ದೇವರೆಂದವರುಇಂದು ಎಂದೆಂದು “ಮಹಾತ್ಮ “ನೇ ಅಗಿರುವರು …… […]
ಲಂಕೇಶರನ್ನು ಏಕೆ ಓದಬೇಕು?
ಲಂಕೇಶರನ್ನು ಏಕೆ ಓದಬೇಕು? ನವೀನ್ ಮಂಡಗದ್ದೆ ಲಂಕೇಶ್ ಅವರನ್ನು ನಾನೇಕೆ ಓದುತ್ತೇನೆ.. ಲಂಕೇಶ್ ನನ್ನ ಹಾಗೆ ದಮನಿತ, ಅನಕ್ಷರಸ್ಥ, ಗ್ರಾಮೀಣ ಪ್ರದೇಶದಿಂದ ಬಂದವರು, …ಇಷ್ಟೆಲ್ಲ ಮಿತಿಗಳಿದ್ದಾಗಲೂ ಅವರು ಸಾಹಿತ್ಯ, ಸಿನಿಮಾ, ಪತ್ರಿಕೆ ಎಂದೆಲ್ಲ ಕೆಲಸ ಮಾಡಿದರು.. ಈ ಹಿನ್ನೆಲೆಯಲ್ಲಿ ನಮಗೀಗ ಕೆಲಸ ಮಾಡಲು ಸಾಕಷ್ಟು ‘ ಸ್ಪೇಸ್’ ಇದೆ ಹಾಗಾಗಿ ಲಂಕೇಶ್ ನನಗೆ ಸ್ಪೂರ್ತಿ.. ಗ್ರಾಮೀಣ ಪ್ರದೇಶಗಳಿಂದ ನಗರ ಕಡೆಗೆ ಮುಖ ಮಾಡುವ ಯುವಕರು ಅಲ್ಲಿನ ಹುಸಿವೈಭವಕ್ಕೆ ಮಾರು ಹೋಗಿ ನಗರಗಳಲ್ಲಿ ಉಳಿದು ಬಿಡುತ್ತಾರೆ.. ಲಂಕೇಶ್ ನಗರದ […]
ಕಾವ್ಯಯಾನ
ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ ಮೂಗಪ್ಪ ಗಾಳೇರ ಅನಾಥ ಶವವಾಗಿ ಮಲಗಿರುವ ನನ್ನ ಒಂದೊಂದು ಕನಸುಗಳು ಇನ್ನೂ ಉಸಿರಾಡುತ್ತಿವೆ ಎಂದರೆ ನೀ ಬಿಟ್ಟು ಹೋದ ನೆನಪುಗಳು ಚುಕ್ಕಿ ಚಂದ್ರಮರಂತೆ ಅಜರಾಮರ ಎಂದರ್ಥ| ಉಸಿರಾಟಕ್ಕೂ ಉಸಿರಿಗು ಕನಸುಗಳಿಗು ನೆನಪುಗಳಿಗು ವ್ಯತ್ಯಾಸ ತಿಳಿಯದೆ ಶವವಾದ ಈ ಹೃದಯಕ್ಕೆ ಈ ಕವಿತೆಗಳೇ ಔಷಧಿ ಎಂದರೆ ತಪ್ಪಿಲ್ಲ ಒಮ್ಮೆ ನೀ ಹಿಂದಿರುಗಿನೋಡಿದರೆ ಗೊತ್ತಾಗುತ್ತಿತ್ತು ನಾನೆಟ್ಟ ಹೂವಿನ ಗಿಡಗಳು ನೂರಾರು ಜಾತಿಯದ್ದಾಗಿದ್ದರೂ ಅವುಗಳಿಂದ ಸೂಸುವ ಕಂಪು ಒಂದೆಂದು ಒಂದೊಮ್ಮೆ ನೀ ಮುಂದಿಟ್ಟ ಹೆಜ್ಜೆ ತಿರುಗಿಸಿ ಹಿಂದಿಟ್ಟರೆ […]
ಕಾವ್ಯಯಾನ
ಸೀರೆ ಮತ್ತು ಬಟ್ಟೆ ಡಾ.ಗೋವಿಂದ ಹೆಗಡೆ ಸೀರೆ ಮತ್ತು ಬಟ್ಟೆ ಆದರೂ ಈ ಸೀರೆ ಎಂಥ ಯಕ್ಷಿಣಿ! ಮೈತುಂಬ ಹೊದ್ದ ಸೆರಗಾಗಿ ಗಜಗೌರಿ ಎನಿಸಲೂ ಸೈ ಮಾಟದ ಬೆನ್ನು ಸೊಂಟ ಆಕರ್ಷಕ ಹೊಕ್ಕುಳ ಸುಳಿ ತೋರಿಸಿ ಹಸಿವು ಕೆರಳಿಸಲೂ ಸೈ ‘ನಾವೇನು ಸೀರೆ ಉಟ್ಟಿಲ್ಲ’ ಎಂದೆಲ್ಲ ಪೌರುಷ ತೋರಿಸುವಂತಿಲ್ಲ ಈಗ ನೀರೆಗೂ ಸೀರೆ ಕಡ್ಡಾಯವಲ್ಲ! ಆಯ್ಕೆಗಳಿವೆ ಅವಳಿಗೆ ಆದರೂ ‘ಸೆರಗು ಸೊಂಟಕ್ಕೆ ಸುತ್ತಿ’ ‘ವೀರಗಚ್ಚೆ ಹಾಕಿ’ ಎಂದೆಲ್ಲ ನಾರೀಶಕ್ತಿಯನ್ನು ಬಣ್ಣಿಸುವುದುಂಟು ಗಂಡ ಅರ್ಧ ಸೀರೆಯನ್ನು ಹರಿದು ಸುತ್ತಿಕೊಂಡು […]
ಕಾವ್ಯಯಾನ
ಶಿವನ ನೆನೆಯಲೆಂದು ರೇಖಾ ವಿ. ಕಂಪ್ಲಿ ಸಾವಿರದ ಮೆಟ್ಟಿಲ ಮೇಲೊಂದು ಕನಸು ಕಾಣುವವನ ಭಾವನೆಯ ಮೇಲೊಂದು ನನಸು ಇಟ್ಟನು ದೇವಾ ಹೆಣ್ಣ ಮೇಲೊಂದು ಸೊಗಸು ಮಠ ಒಂದು ಕಟ್ಟಲಿಲ್ಲ ಗಂಡು ಮೇಲೊಂದು ಮನಸು ಆಸೆಗಳ ಅರಿಬಿಟ್ಟ ಅಂಚಿಕೆಯ ಮಾಡದೇ ಅನುದಿನವು ಅವನ(ದೇವರ) ನೆನೆಯಲೆಂದು ಪಾದುಕೆಗಳಿಗೊಂದು ಹೊದುಕೆ ಕೊಟ್ಟವನು ಮನಸೆಂಬ ಹೊದುಕೆಗೆ ಆಳು ನೆನಪುಗಳ ನಿಟ್ಟು ತನ್ನ ಮುಟ್ಟುವ ಗಟ್ಟಿ ಗುಟ್ಟಾಗು ಎಂದು ಮೆಟ್ಟು ಭಾವನೆಯ ನಿನ್ನ ಪಟ್ಟು ಮೀರೆಂದು ತಟ್ಟು ಶಿವನೆದೆಯ ಕರುಣಾಂತರಂಗವನು ಅವನೊಲುಮೆಯ ಸಾಗರದ ಶರಧಿಯನು […]
ಪ್ರಸ್ತುತ
‘ಜಾಲ’ತಾಣ ಸ್ಮಿತಾ ರಾಘವೇಂದ್ರ ಹೆಸರೇ ಹೇಳುವಂತೆ ಇದೊಂದು “ಜಾಲ” ಮತ್ತೆ ನಾವೆಲ್ಲ ಅಲ್ಲಿ “ತಾಣ” ಪಡೆದವರು ಜಾಲದೊಳಗೆ ಸಿಲುಕಿಕೊಂಡ ಕೀಟದಂತಾಗಿದ್ದೇವೆ.. ಆದರೂ ನಾವಿಲ್ಲಿ ತಂಗಿದ್ದೇವೇ ತಂಗುತ್ತೇವೆ ಇಂದೂ ಮುಂದೂ ಸದಾ ತಂಗಲೇ ಬೇಕಾದ ಜಾಲದಲ್ಲಿ ಒಂದಿಷ್ಟು ಜಾಗೃತೆಯೂ ಮುಖ್ಯ ಅಂಶವಾಗುತ್ತದೆ. ಹೌದು.. ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಎಂಬುದು ಜನ ಜನಿತವಾದ ಮಾತು ಮತ್ತು ಸತ್ಯದ ಮಾತುಕೂಡಾ.. ಯಾಕೆ!? ಎಂದು ಸ್ವಲ್ಪವೇ ಸ್ವಲ್ಪ ವಿಚಾರಮಾಡುವದಕ್ಕೂ ನಮಗಿಂದು ಸಮಯವಿಲ್ಲ.. ಯಾಕೆಂದರೆ ನಮ್ಮ ಅಳಿದುಳಿದ ಸಮಯವನ್ನು ಜಾಲತಾಣ […]
ಚಳಿ ಮತ್ತು ಅಗ್ಗಿಷ್ಠಿಕೆ
ಚಳಿ ಮತ್ತು ಅಗ್ಗಿಷ್ಠಿಕೆ ಮಳೆಗಾಲದ ಒಂದು ಸಂಜೆ ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳುಸ್ಪೋಟಗೊಂಡು ಸುರಿದ ಜಡಿ ಮಳೆಗೆಸಿಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲುನನ್ನ ಪುಟ್ಟ ಹಿತ್ತಲಿತ್ತು ಗಡಗಡ ನಡುಗಿಸುವ ಚಳಿಗೆಅಗ್ಗಿಷ್ಠಿಕೆಯಾಗಿ ನಾನಿದ್ದೆ. ಮಳೆ ಸುರಿದು ಸರಿದು ಹೋಯಿತುಹಿಂಬಾಲಿಸಿಕೊಂಡು ಬಂದ ಬಿಸಿಲುಬಂದ ಮಳೆಯ ಮರೆಸಿತು ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲಮಳೆಯಾಗಲಿಲ್ಲಬಿಸಿಲ ಝಳಕ್ಕೆ ಬರಬಿದ್ದ ಊರಿಗವಳೆಂದೂ ಬರಲೇ ಇಲ್ಲ ಮತ್ತೀಗ ಅಲ್ಲಿ ಮಳೆಯಾಗುತ್ತಿರ ಬಹುದುಅವಳಲ್ಲಿ ನೆನೆಯುತ್ತಲೂ ಇರಬಹುದು ಆ ಊರಲ್ಲೂ ಹಿತ್ತಲುಗಳಿವೆಜೊತೆಗೆ ಅಗ್ಗಿಷ್ಠಿಕೆಗಳೂ!******** ಕು.ಸ.ಮಧುಸೂದನ ಕು.ಸ.ಮಧುಸೂದನ
ಪುಸ್ತಕ ವಿಮರ್ಶೆ
ಸಿರ್ವಂತೆ ಕ್ರಾಸ್ ದಿನೇಶ ಹುಲಿಮನೆ ಮಲೆನಾಡಿನ ಬದುಕಿನ ಆಗುಹೋಗುಗಳ ಹಂದರವೇ ಆಗಿದೆ ದಿನೇಶ ಹುಲಿಮನೆಯವರ ‘ಸಿರ್ವಂತೆ ಕ್ರಾಸ್’ ಕಥೆಗಳ ಸಂಕಲನ..! ದಿನೇಶ ಹುಲಿಮನೆಯವರು ಮಲೆನಾಡು ಆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಿಮನೆಯವರು. ಹಾಗಾಗಿ ಇಲ್ಲಿ ಬರುವ ಎಲ್ಲಾ ಕಥೆಗಳೂ ದಿನೇಶ ಹಲಿಮನೆಯವರ ಮಲೆನಾಡಿನ ಕಲರವವಿದ್ದಂತೆ ಭಾಸವಾಗುತ್ತವೆ. ಭಾಸವಾಗುವುದೇನು ಬಂತು ಇದು ನಿಜವೂ ಆಗಿದೆ. ಏಕೆಂದರೆ ಈ ದಿನೇಶ ಹುಲಿಮನೆಯವರ ಈ ‘ಸಿರ್ವಂತೆ ಕ್ರಾಸ್’ ಈ ಕಥೆಗಳ ಸಂಕಲನವು ‘ಸಿರ್ವಂತೆ ಕ್ರಾಸ್’ ಕಥೆಯೂ ಸೇರಿದಂತೆ ಒಟ್ಟು […]