ಒಲವು-ಗೆಲುವು ದೀಪಾಜಿ ಒಂದು ಕಾಲು ಕೆಜಿಯಷ್ಟು ತೂಗುವ ಗ್ರೀಟಂಗೂ ಕವರಿನಿಂದಾಚೆ ತೆಗೆದೊಡನೆ ಎರಡು ಪುಟದ ಮೇಲೊಂದಂದು ಬಿಳಿ ಪಾರಿವಾಳಗಳು ಪುಟಿದು ಕುಳತದ್ದು ನೋಡುತ್ತಿದ್ದಂತೆ ಮದ್ಯದಲ್ಲಿನ ಅಂಗೈ ಅಗಲದ ಕಡುಗೆಂಪು ಹೃದಯ ಅದರಾಳದೊಳಗಿಂತ ವಾದ್ಯಸಂಗೀತ ಕಿವಿ ದಾಟಿ ಎದೆ ತಾಕುತ್ತದೆ. ಪುಟ ತಿರುಗಿಸಿದರೆ ಜೋಡಿ ಗುಲಾಬಿ ಹೂ ಗಳು ಅದರ ಕೆಳಗೆ ಮೂರು ಸಾಲಿನ ಹನಿಗವನ. ಮೂರು ಬಾರಿ ಉಸಿರೆ…. ಉಸಿರೆ.. ಉಸಿರೆ… ಉಸಿರಾಗಿ ಬಾ ಹೆಸರಾಗಿ ಬಾ ಈ ಬರಡು ಬದುಕಿಗೆ ಹಸಿರಾಗಿ ಬಾ.. […]
Read More
ಗಝಲ್ ಮಾಲತಿ ಹೆಗಡೆ ಗಜಲ್ ಅವನ ಕಣ್ಣಲ್ಲಿ ನನ್ನ ಬಿಂಬ ಕಂಡಾಗ ಮೂಡಿತ್ತು ಪ್ರೀತಿ ಮನಸೆಳೆವ ಮಾತಿಗೆ ಮರುಳಾದಾಗ ಮೂಡಿತ್ತು ಪ್ರೀತಿ ಪ್ರತಿದಿನವೂ ಕನಸಲ್ಲೂ ನನಸಲ್ಲೂ ಕಾಡಿದ್ದೇನೂ ಸುಳ್ಳಲ್ಲ ಕಾಯಾ ವಾಚಾ ಮನಸಾ ನಿನ್ನವನೆಂದಾಗ ಮೂಡಿತ್ತು ಪ್ರೀತಿ ನಮ್ಮಿಚ್ಛೆಯಂತೆ ಮದುವೆಯಾಗುವುದು ಏನು ಹುಡುಗಾಟವೇ? ನಾನೆಲ್ಲ ನೋಡಿಕೊಳುವೆ ಭಯಬೇಡವೆಂದಾಗ ಮೂಡಿತ್ತು ಪ್ರೀತಿ ದೇವರು ಗುರುಹಿರಿಯರು ಅಗ್ನಿ ಸಾಕ್ಷಿಯಾಗಿ ಕಟ್ಟಿದ ಮಾಂಗಲ್ಯ ಉರುಳಾಗದಂತೆ ಬಲು ಕಾಳಜಿ ಮಾಡಿದಾಗ ಮೂಡಿತ್ತು ಪ್ರೀತಿ ಈ ‘ಮಾಲಿ”ಗೆ ಒಲಿದವನೊಂದಿಗೆ ಬದುಕುವ ಸುಯೋಗ ಸುಖ ದುಃಖದಲಿ […]
Read More
ಪ್ರೀತಿಯೆಂದರೆ ಹೀಗೇ ಏನೋ!!?? ಸೌಜನ್ಯ ದತ್ತರಾಜ ಪ್ರೀತಿಯೆಂದರೆ ಹೀಗೇ ಏನೋ!!?? ಮೊದಮೊದಲು ನಿದ್ದೆ ಕೆಡಿಸಿ, ನೆಮ್ಮದಿ ಕಳೆದು ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿಸಿ ಅವಗಣನೆಯೋ, ಅವಮಾನವೋ ಎಂದೆಲ್ಲಾ ಅನುಮಾನಗಳ ಹುಟ್ಟಿಸಿ ಸ್ವಾಭಿಮಾನ, ಸ್ವಾರ್ಥಗಳೆಲ್ಲವ ಮಧ್ಯೆ ತೂರಿಸಿ ನಂಬದ ದೇವರನ್ನೂ ಮತ್ತೆ ಮತ್ತೆ ನೆನೆಸಿ ನಿರ್ಧಾರಗಳೆಲ್ಲವ ಏರುಪೇರಾಗಿಸಿ ಭೂಮಿ ಬಾನುಗಳ ತಲೆಕೆಳಗಾಗಿಸಿ ಅಬ್ಬಬ್ಬಬ್ಬಾ……. ಅವೆಷ್ಟೆಲ್ಲಾ ಚಿತ್ರ ವಿಚಿತ್ರ ಭಾವನೆಗಳು ಒಮ್ಮೆ ಪ್ರೀತಿ ನಮ್ಮೆಡೆ ತಿರುಗಿ ನಕ್ಕರೆ ಆಯ್ತು ಒಪ್ಪಿಕೊಂಡರಂತೂ ಸರ್ವಸ್ವವೂ ಸುಂದರ ಅರಳುವ ಮನ, ನೆಮ್ಮದಿಯ ನಿದ್ದೆ ಪ್ರಶ್ನೆಗಳಿಗೆಲ್ಲಾ […]
Read More
ಗಝಲ್ ಸುಜಾತಾ ಲಕ್ಮನೆ ಗಜಲ್ ಕದ್ದು ಕದ್ದು ನೋಡುತ್ತ ಎಗ್ಗಿಲ್ಲದೇ ಕಿರುನಗೆ ತೂರಿದ್ದು ಅವನೇನಾ ಕದಪು ಕೆಂಪಾಗಿಸಿ, ಊರ ತೇರಲ್ಲಿ ಹಿಂದ್ಹಿಂದೆ ಬಂದಿದ್ದು ಅವನೇನಾ ಚುಮು ಚುಮು ಚಳಿಯ ಮುಂಜಾನೆಗೂ ಬೆಚ್ಚನೆಯ ಕನಸು ಮೈಯೆಲ್ಲ ಚುಂಗೇರುವಂತೆ ಕಣ್ ಮಿಟುಕಿಸಿ ನಕ್ಕಿದ್ದು ಅವನೇನಾ ಒರತೆ ಕಾಣದ ಒಡಲಾಳವೆಲ್ಲ ನೀರು ನೀರಾದ ಅನುಭಾವವೆನಗೆ ಒಸರುವ ಜೀವ-ಭಾವಗಳಿಗೆ ಸುಖದಮಲು ತುಂಬಿದ್ದು ಅವನೇನಾ ಹಿಡಿತ ತಪ್ಪಿ, ತೇಲಾಡಿ ಎಲ್ಲೆಂದರಲ್ಲಿ ಮನ ಬೀಡುಬಿಟ್ಟ ಕ್ಷಣಗಳೆಷ್ಟೋ ಎನ್ನೆಲ್ಲ ತುಮುಲಗಳಿಗೆ ದಿಕ್ಕು ದಿಕ್ಕಾಗಿ ಒಡ್ಡು ಕಟ್ಟಿದ್ದು ಅವನೇನಾ ಬೆಳಗೇರಿದಂತೆ ಇಬ್ಬನಿಯ ಮೈಯೊಳಗೆ ಹನಿ-ಹನಿಯಾಗುವ ಭಯ ಬೆಡಗು […]
Read More
ನಾನು ಕಂಡ ಹಿರಿಯರು ಅರ್ಥವಿದ:ಎಚ್ಚೆಸ್ಕೆ ಡಾ.ಗೋವಿಂದ ಹೆಗಡೆ ಅರ್ಥವಿದ:ಎಚ್ಚೆಸ್ಕೆ (೧೯೨೦-೨೦೦೮) ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದೆ.೧೯೮೭ರಲ್ಲಿ ಇರಬಹುದು,’ಗ್ರಾಮಾಂತರ ಬುದ್ಧಿಜೀವಿಗಳ ಯುವ ಬಳಗ,ಭೇರ್ಯ’ ಎಂಬ ಸಂಘಟನೆ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.’ಕವನ ತನ್ನಿ,ಓದಿ!”ಎಂಬ ಕೋರಿಕೆಯೂ ಇತ್ತು.ಸರಿ,ನಾನೂ ಭಾಗವಹಿಸಿದೆ. ಹಿರಿಯ ಬರಹಗಾರರಾದ ಸಿ.ಭೈರವಮೂರ್ತಿ ಸಭೆಯಲ್ಲಿ ಇದ್ದ ನೆನಪು. ಮರು ತಿಂಗಳ ಕಾರ್ಯಕ್ರಮಕ್ಕೆ ಪತ್ರ ಮೂಲಕ ಆಹ್ವಾನ ಬಂತು. ಹಿರಿಯ ಲೇಖಕ ಎಚ್ಚೆಸ್ಕೆ ಇರುತ್ತಾರೆ ಎಂಬ ಮಾತಿತ್ತು. ಸರಿ, ನಾನು ಹೋದೆ. ಹಳೆಯ ಕಾಲದ ಮನೆ. ಈಗ ಶಿಶುವಿಹಾರವೋ ಏನೋ ಆಗಿತ್ತು. […]
Read More
ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್.. ಇಂಗ್ಲಿಷ್ ಮೂಲ : ವಿಲಿಯಂ ಶೇಕ್ಸ್‌ಪಿಯರ್ ಅನುವಾದ : ಚಂದ್ರಪ್ರಭಾ ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್… ಕೆಲವು ಸಂಗತಿಗಳೇ ಹಾಗೆ. ಭಾವಕ್ಕೆ ನಿಲುಕಿದಂತೆ ಭಾಷೆಗೆ ನಿಲುಕುವುದೇ ಇಲ್ಲ. ಅದನೆಲ್ಲ ನೀವು ಆಸ್ವಾದಿಸಬಲ್ಲಿರಿ ಆದರೆ ಬಣ್ಣಿಸಲಾರಿರಿ. ಅಂಥ ಒಂದು ಸಂಗತಿ ಪ್ರೀತಿ. ಈ ಸೃಷ್ಟಿಯ ಸಕಲವನ್ನೂ ಒಂದೆಳೆಯಲ್ಲಿ ಬಂಧಿಸಿಟ್ಟಿರುವುದು ಪ್ರೀತಿಯೊಂದೇ. ಬಳ್ಳಿಗೆ ಆಸರೆಯಾದ ಮರ.. ದುಂಬಿಗೆ ಮಕರಂದವನೀವ ಹೂವು.. ಎದೆಯಮೃತ ಉಣಿಸಿ ಜೀವನವನ್ನೇ ಧಾರೆಯೆರೆವ ತಾಯಿ.. ಬೆರಳು ಹಿಡಿದು ನಡೆಯಿಸಿ ನಡಿಗೆ ಕಲಿಸುವ ಅಪ್ಪ.. ದಣಿವಿಗೆ ಆಸರೆಯಾಗುವ ಇರುಳು.. ದುಡಿಮೆಗೆ […]
Read More
ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಪ್ರಮಿಳಾ ಎಸ್.ಪಿ. ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ […]
Read More
ವ್ಯಾಲಂಟೈನ್ಸ್ ಡೇ ಗಝಲ್ ಎ.ಹೇಮಗಂಗಾ ಗಝಲ್ ಬೆಳದಿಂಗಳ ರಾತ್ರಿಯೊಂದನು ನಿನ್ನ ಜೊತೆಯಲಿ ಕಳೆಯಬೇಕಿದೆ ತಿಂಗಳ ತಿಳಿಬೆಳಕ ತಂಪಲಿ ಹರವಾದ ನಿನ್ನೆದೆಗೆ ಒರಗಬೇಕಿದೆ ಕಣ್ಣ ಸನ್ನೆಯಲೇ ಪ್ರೀತಿ ನಿವೇದಿಸಿ ಒಲಿಸಿ ಒಲಿದು ನಲಿವ ತಂದೆ ಸಂವೇದಿಸುವ ನಿನ್ನೆದುರು ಹೂತ ಭಾವಗಳ ತೆರೆದು ಇಡಬೇಕಿದೆ ಒಡ್ಡನ್ನೊಂದನು ಕಟ್ಟಿದ್ದೇನೆ ಅಂತರಾಳದ ನೂರು ನೋವ ತೊರೆಗೆ ಜಗದ ಜಂಜಡವನ್ನೆಲ್ಲಾ ನಿನ್ನ ತೋಳ್ಸೆರೆಯಲಿ ಮರೆಯಬೇಕಿದೆ ಬಲವೆಲ್ಲಿದೆ ತನುವಲಿ ವಿರಹಾಗ್ನಿ ಅಣುಅಣುವನೂ ಸುಡುತಿರಲು ? ಅಧರ ಮಧುಪಾನದಿ ಪ್ರಾಣಕೆ ತ್ರಾಣವನು ತುಂಬಿಕೊಳ್ಳಬೇಕಿದೆ ಬದುಕ ಹಾದಿಯಲಿ ನಿನ್ನೊಲವ […]
Read More
ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ […]
Read More
ಅಂಚು ಮೂಲ: ಸಿಲ್ವಿಯಾ ಪ್ಲಾತ್(ಅಮೇರಿಕಾ) ಕನ್ನಡಕ್ಕೆ: ಕಮಲಾಕರ ಕಡವೆ “ಅಂಚು” ಪರಿಪೂರ್ಣಗೊಂಡಿರುವ ಹೆಣ್ಣು.ಅವಳ ಸತ್ತ ದೇಹ ಧರಿಸಿದೆ ಸಾಧನೆಯ ನಸುನಗುವ,ಗ್ರೀಕರ ಭ್ರಮೆಯೊಂದು ಹರಿದಿದೆ ಅವಳ ಮೇಲುಡಿಪಿನ ಪದರುಗಳಲ್ಲಿ.ಅವಳ ನಗ್ನ ಪಾದಗಳು ಹೇಳುವಂತಿದೆನಾವು ಇಷ್ಟು ದೂರ ಬಂದಿದ್ದೇವೆ, ಇನ್ನು ಮುಗಿಯಿತು. ಸತ್ತ ಪ್ರತಿ ಮಗುವನ್ನೂ ಸುತ್ತಿಟ್ಟುಕೊಂಡು, ಬಿಳಿ ಸರ್ಪದಂತೆ,ಒಂದೊಂದೂ ಈಗ ಖಾಲಿಯಾದ ಚಿಕ್ಕ ಹಾಲಿನ ಕೊಡಕ್ಕೆ ತಾಗಿ,ಅವಳು ಮಡಿಚಿ ಕೊಂಡಿದ್ದಾಳೆ ಅವರನ್ನು ತನ್ನ ದೇಹದೊಳಕ್ಕೆ, ಮುಚ್ಚಿಕೊಂಡ ಗುಲಾಬಿಯಪಕಳೆಗಳಂತೆ, ಸೆಟೆದುಕೊಂಡ ಹೂದೋಟದಲ್ಲಿ, ರಾತ್ರಿ ಹೂವಿನಆಳ ಗಂಟಲಿನಿಂದ ಸಿಹಿ ಕಂಪು ಸ್ರಾವಿಸಿದೆ. […]
Read More| Powered by WordPress | Theme by TheBootstrapThemes