ಕಥಾಗುಚ್ಛ
ವಿಧಿ! ಆರ್.ಸುನೀಲ್ ತರೀಕೆರೆ ರಂಗಪ್ಪನ ಮನೆ ಮುಂದೆ ಬೆಂಕಿ ಬಿದ್ದ ಸುದ್ದಿ ಊರಲ್ಲೆಲ್ಲಾ ಐದೇ ನಿಮಿಷಕ್ಕೆ ಹರಡಿಹೋಯಿತು.ಆ ಸುದ್ದಿ ನನ್ನ ಕಿವಿಗೂ ಬಿದ್ದ ಕ್ಷಣದಿಂದ ಮನಸ್ಸು ವ್ಯಾಕುಲಗೊಳ್ಳತೊಡಗಿತು.ಛೇ..ಅಂತೂ ಇಂತೂ ರಂಗಪ್ಪ ಹೋಗ್ನಿಟ್ಟ.! ಬದುಕಿದ್ದಾಗ ಅವನು ಪಟ್ಟ ಪಾಡು ನೆನೆಸಿಕೊಂಡು ಸಅಯ್ಯೋ ಅಂತ ಒಂದು ಕಡೆ ಅನ್ನಿಸತೊಡಗಿದರೆ ಮತ್ತೊಂದು ಕಡೆ ಬಿಡು ಅವನು ಹೋದದ್ದು ಒಳ್ಳೆಯದೇ ಆಯಿತು ಇಲ್ಲದಿದ್ದರೆ ಪಾಪ ಇನ್ನೂ ನೋವು ಅನುಭವಿಸುತ್ತಿದ್ದ.ಏನ್ ಈಗಾಗ್ಲೇ ಕಮ್ಮೀ ನೋವು ಅನುಭವಿಸಿದ್ದಾನಾ ಅವ್ನು..?!ಇಷ್ಟು ದಿನ ಅವ್ನು ಬದುಕಿದ್ದೂ ಸತ್ತಂಗೆ ತಾನೇ […]
ಹೊತ್ತಾರೆ
ಅಮ್ಮನೂರಿನ ನೆನಪುಗಳು @ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ ಅಶ್ವಥ್ ತಮ್ಮಪ್ಪಣ್ಣನಸ್ವಾತಂತ್ರ್ಯಪ್ರವಚನ. ಅಂದಿದ್ದೇ ತಡ… ತಮ್ಮಪ್ಪಣ್ಣ ಎದ್ದು ನಿಂತರು… ಅಂದರೆ ತಮ್ಮಪ್ಪಣ್ಣ ಎಂದಿನಂತೆ ಮುಖ್ಯ ಅತಿಥಿ. ನಾನು ಶಾಲೆಗೆ ಸೇರುವುದಕ್ಕಿಂತ ಮೊದಲು, ಶಿಶುವಿಹಾರದಲ್ಲಿದ್ದಾಗಲೂ ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯ ಮಕ್ಕಳ ಜೊತೆ ಸೇರಿಸುತ್ತಿದ್ದರಿಂದ ತಮ್ಮಪ್ಪಣ್ಣನ ಭಾಷಣದ ಇವೆಂಟ್ ಪರಿಚಯವಾಗಿತ್ತು. ಈಗ ನಾನು ಒಂದನೇ ತರಗತಿ. ಹಾಗಾಗಿ ಚಿಕ್ಕಮಕ್ಕಳ ಮುಂದಿನ ಸಾಲಿನಿಂದ ಬಡ್ತಿ ಪಡೆದು ಶಾಲೆಯ ಮಕ್ಕಳ ಸಾಲಿನಲ್ಲಿ ಕುಳಿತಿದ್ದೇ ಆ ದಿನಾಚರಣೆಯ ವಿಶೇಷ. ಅವನ ಗೊಣಗಾಟ ಮೇಷ್ಟ್ರಿಗೆ ಕೇಳಲಿಲ್ಲ, ತಮ್ಮಪ್ಪಣ್ಣನ […]
ಕಾವ್ಯಯಾನ
ಗಜಲ್ ದೀಪಾಜಿ ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡಹಚ್ಚಿ ಉಜ್ಜಿಕೊಂಡವನಲ್ಲವೇ ನೀನು ಎದೆ ಒಳಗಿನ ಇವಳನ್ನ ತೆಗೆದು ಹಾಕಲೆತ್ನಿಸಿ ಸೋತವನಲ್ಲವೇ ನೀನು ಹಿಡಿದು ತಂದ ಕೆಂಗುಲಾಬಿ ಕೆಳಗಿನ ಮುಳ್ಳ ಎಣಸ ತೊಡಗಿದ್ದ ಕುಸುಮಪ್ರೇಮಿ ಅಂತದೆ ಸುಮದ ಪರಿಮಳಕ್ಕೆ ಸೋತು ಬಿಗಿದಪ್ಪಿದ ದಿನಗಳ ಮರೆತವನಲ್ಲವೆ ನೀನು.. ಅಂಗೈಲಿ ಹಿಡಿದ ಮಧು ಪಾತ್ರೆಯೊಳಗಿನ ಬಿಂಬ ಕಲಕಿತೆಂದು ರೋಧಿಸಿದೆ ಏನು ಮಧುಹೀರಿ ಮಲಗಿದ ನಲ್ಲೆಯ ತುಟಿಗಳನೆ ಕಚ್ಚಿ ಕಡೆಗಣಿಸಿದವನಲ್ಲವೇ ನೀನು ಬಲವಂತಕ್ಕೆ ಪ್ರೀತಿಸಕೂಡದೆಂದು ಪಾಠಮಾಡುತ್ತಿದ್ದೆ ನೋಡು ಮರೆತು ಬಿಡು ಇನ್ನೂ ಜತೆಯಾಗಿ […]
ಅನುಭವ
ಕಾಯುವವರು ಹಲವರಾದರೆ ಕೊಲುವವ ಒಬ್ಬನೇ ! ಗೌರಿ.ಚಂದ್ರಕೇಸರಿ ಕೆಲ ದಿನಗಳ ಹಿಂದೆ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪೇಟೆಗೆಂದು ಹೊರಟಿದ್ದೆ. ಸ್ವಲ್ಪ ದೂರ ಕ್ರಮಿಸುವುದರಲ್ಲಿ ರಸ್ತೆಯ ಮಧ್ಯದಲ್ಲಿ ಹಾವೊಂದು ಕಂಡಿತು. ಆ ಬದಿಯಿಂದ ಈ ಬದಿಯ ರಸ್ತೆಯನ್ನು ಅದು ದಾಟುತ್ತಿತ್ತು. ತಕ್ಷಣವೇ ಸ್ಕೂಟಿಯನ್ನು ಬದಿಗೆ ನಿಲ್ಲಿಸಿದ್ದೆವು. ಎದುರು ಬದುರಿನಿಂದ ಬರುತ್ತಿದ್ದ ವಾಹನ ಸವಾರರು ಹಾವಿನ ಮೇಲೆ ವಾಹನಗಳನ್ನು ಹತ್ತಿಸದಂತೆ ಮಗಳು ಎಲ್ಲರ ಗಮನವನ್ನು ಹಾವಿನತ್ತ ಸೆಳೆಯುತ್ತಿದ್ದಳು. ಅದನ್ನು ಕಂಡ ವಾಹವ ಸವಾರರೆಲ್ಲ ತಮ್ಮ […]
ಕಾವ್ಯಯಾನ
ಅಪ್ಪನೊಡನೆ ಒಂದಿಷ್ಟು ಮೋಹನ ಗೌಡ ಹೆಗ್ರೆ ಒರಿಗೆಯವರೆಲ್ಲ ಬಾಲ್ಯಕ್ಕೆ ಬಣ್ಣ ತುಂಬುವಾಗ ನನ್ನ ಪಂಜರದ ಗಿಳಿಯಾಗಿ ಮಾಡಿದ ಸದಾ ನಾ ಶಪಿಸುವವ ನೀನಾಗಿದ್ದೆ ಊರ ಜಾತ್ರೆಯಲಿ ಅಮ್ಮ ಕೈ ಹಿಡಿದು ನಿಂತರೂ ದೂರದ ಕಣ್ಣುಗಳ ಕಾವಲುಗಾರನಾದ ನಿನ್ನ ಶಪಿಸುವವಳು ನಾನಾಗಿದ್ದೆ. ಎಲ್ಲೋ ಯಾರೋ ಓಡಿಹೋದ ಸುದ್ದಿಗೆಲ್ಲಾ ಸುಮ್ಮನೆ ಮುಂದಾಲೋಚನೆಯಿಂದ ಅಮ್ಮನ ಬೈಯುವಾಗ ನಾ ಕಂಡ ನಕ್ಸಲೈಟ್ ನೀನಾಗಿದ್ದೆ…. ನಿನ್ನಿಷ್ಟದಂತೆ ಓದಿದೆ ಕೆಲಸಕ್ಕೂ ಸೇರಿದೆ ಇಷ್ಟು ವರ್ಷ ಬೆವರಿಳಿಸಿದ ನೀನು ನಾ ಮೆಚ್ಚಿದ ಗಂಡಿಗೆ ನನ್ನ ಒಪ್ಪಿಸಿದೆ….. ಅಂದು […]
ನಾನು ಓದಿದ ಪುಸ್ತಕ
ಮಣ್ಣಿಗೆ ಬಿದ್ದ ಹೂಗಳು ಬಿದಲೋಟಿ ರಂಗನಾಥ್ ಅರುಣ್ ಕುಮಾರ್ ಬ್ಯಾತ ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ… ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ […]
ಶರೀಫರ ನೆನೆಯುತ್ತಾ…
ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ 200ನೇ ವರ್ಷಾಚರಣೆ ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ. ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. […]
ಕಾವ್ಯಯಾನ
ಗಜಲ್ ಡಾ.ಗೋವಿಂದ ಹೆಗಡೆ ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತುಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತುಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..
ವೈದೇಹಿ-75
ಇರುವಂತಿಗೆ ವೈದೇಹಿ ಗೌರವ ಗ್ರಂಥ ಸಮರ್ಪಣೆ ದಿನಾಂಕ:01-12-2019 ಭಾನುವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾಭವನ, ಶಿವಮೊಗ್ಗ ಸಾಹಿತ್ಯಾಸಕ್ತರಿಗೆ ಸ್ವಾಗತ
ಪುಸ್ತಕ ಸಂಭ್ರಮ
ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. […]