ಅಮ್ಮನೂರಿನ ನೆನಪುಗಳು
@ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ
ಅಶ್ವಥ್
ತಮ್ಮಪ್ಪಣ್ಣನಸ್ವಾತಂತ್ರ‍್ಯಪ್ರವಚನ.
ಅಂದಿದ್ದೇ ತಡ… ತಮ್ಮಪ್ಪಣ್ಣ ಎದ್ದು ನಿಂತರು… ಅಂದರೆ ತಮ್ಮಪ್ಪಣ್ಣ ಎಂದಿನಂತೆ ಮುಖ್ಯ ಅತಿಥಿ. ನಾನು ಶಾಲೆಗೆ ಸೇರುವುದಕ್ಕಿಂತ ಮೊದಲು, ಶಿಶುವಿಹಾರದಲ್ಲಿದ್ದಾಗಲೂ ಸ್ವಾತಂತ್ರ‍್ಯ ದಿನಾಚರಣೆಗೆ ಶಾಲೆಯ ಮಕ್ಕಳ ಜೊತೆ ಸೇರಿಸುತ್ತಿದ್ದರಿಂದ ತಮ್ಮಪ್ಪಣ್ಣನ ಭಾಷಣದ ಇವೆಂಟ್ ಪರಿಚಯವಾಗಿತ್ತು. ಈಗ ನಾನು ಒಂದನೇ ತರಗತಿ. ಹಾಗಾಗಿ ಚಿಕ್ಕಮಕ್ಕಳ ಮುಂದಿನ ಸಾಲಿನಿಂದ ಬಡ್ತಿ ಪಡೆದು ಶಾಲೆಯ ಮಕ್ಕಳ ಸಾಲಿನಲ್ಲಿ ಕುಳಿತಿದ್ದೇ ಆ ದಿನಾಚರಣೆಯ ವಿಶೇಷ.
ಅವನ ಗೊಣಗಾಟ ಮೇಷ್ಟ್ರಿಗೆ ಕೇಳಲಿಲ್ಲ, ತಮ್ಮಪ್ಪಣ್ಣನ ಕಿವಿಗೂ ಬೀಳಲಿಲ್ಲ ಸದ್ಯ!
ಕೊಡು, ಲೆಕ್ಕ ಮಾಡಿ ತಂದಿದ್ದೀನಿ” ಅನ್ನುವ ಮೇಷ್ಟರ ಸೂಚನೆಯನ್ನು ಸ್ವೀಕರಿಸಿದ ಸೂರಿ, ಒಬ್ಬರಿಗೆ ಒಂದು ಚಾಕೋಲೇಟು ಒಂದು ಹಾಲ್ಕೋವಾ ಕೈಯಲ್ಲಿರಿಸಿ ಮುಂದುವರಿದ. ಎಲ್ಲರಂತೆ ನಾನೂ ಎರಡೂ ಕೈ ಚಾಚಿದೆ. ಸೂರಿಯ ಕೈಯಿಂದ ಎರಡು ಶ್ಯಾಮಾ ಚಾಕಲೇಟು ಜಾರಿದವು. ಏನೋ ಸಣ್ಣವನು ಅನ್ನುವ ಭಾವದಂತೆ ನಗುವ ಮುಖ ಮಾಡಿ ಸೂರಿ ಮುಂದುವರೆದ. ತಮ್ಮಪ್ಪಣ್ಣ ಕುಳಿತೇ ಇದ್ದರು.
ಹೀಗೆ ನಾನು ಏಳನೇ ತರಗತಿ ಮುಗಿಸುವ ತನಕವೂ ತಮ್ಮಪ್ಪಣ್ಣನ ಸ್ವಾತಂತ್ರ‍್ಯ ದಿನದ ಪ್ರವಚನ “ಗಾಂಧಿ ಕಷ್ಟಪಟ್ಟು…. ಅನ್ನ ನೀರು ಬಿಟ್ಟು….. ಉಪವಾಸ ಮಾಡಿ …. ದೇಶ ನಮ್ಮದು ಅನ್ನುವ ಹಾಗೆ ಮಾಡಿದರು” ಅನ್ನುವ ಇದೊಂದೇ ವಿಚಾರವನ್ನು ಏಳು ರ‍್ಷವೂ ಕೇಳಿದ್ದಾಯ್ತು! ತಮ್ಮಪ್ಪಣ್ಣನನ್ನು ಹೊರತುಪಡಿಸಿದರೆ ಬೇರೆ ಯಾರೂ ಅಧ್ಯಕ್ಷರ ಕರ‍್ಚಿ ಅಲಂಕರಿಸಲಾಗಲೇ ಇಲ್ಲ. ಹೈಸ್ಕೂಲು ಸೇರಿದ ನಂತರ ಮೇಷ್ಟರು ಬದಲಾದರು! ಬೇರೆ ಊರಾಗಿದ್ದರಿಂದ ತಮ್ಮಪ್ಪಣ್ಣನ ಪ್ರವಚನ ತರ‍್ಗಡೆಯಾಗದೇ ಊರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಉಳಿಯಿತು. ಸ್ವಾತಂತ್ರ‍್ಯ ಸಂಗ್ರಾಮದ ಹಲವು ವಿಚಾರಗಳು, ಕತೆಗಳು ಉಪಕತೆಗಳು, ಗಾಂಧೀಜಿಯ ಸತ್ಯಾಗ್ರಹಗಳು, ಸಬರಮತಿ ಆಶ್ರಮ, ಸಮಾಜ ಸುಧಾರಣೆಗಳು, ಪತ್ರಿಕೋದ್ಯಮ, ಹೀಗೆ ಗಾಂಧೀ ತತ್ವಗಳ ಒಂದೊಂದೇ ಎಳೆಗಳು ಮನದ ತೆರೆಕಾಣಲಾರಂಭಿಸಿದವು.
ಅನಾಹುತಗಳನ್ನು ಸುಮ್ಮನೆ ಜರ‍್ಣಿಸಿಕೊಂಡು ನಾವು ಸ್ವತಂತ್ರರೆಂದುಕೊಂಡುಬಿಡುವುದಾ? ಕುವೆಂಪು ಹೇಳಿದ ಈ ಸಾಲು ನೆನಪು ಮಾಡಿಕೊಳ್ಳಬೇಕು; “ಕತ್ತಿ ಪರಕೀಯವಾದರೆ ಮಾತ್ರ ನೋವೇ? ನಮ್ಮವರೇ ಹದಮಾಡಿ ತಿವಿದರದು ಹೂವೇ?” ಎನ್ನುವುದನ್ನು.
ಅಂದಹಾಗೆ ತಮ್ಮಪ್ಪಣ್ಣ ತೀರಿಕೊಂಡು ದಶಕವಾಯ್ತು. ಆದರೂ ಸ್ವಾತಂತ್ರ‍್ಯೋತ್ಸವವೆಂದರೆ ಮೊದಲು ನೆನಪಾಗುವುದು ನಮ್ಮ ತಮ್ಮಪ್ಪಣ್ಣನ ಪ್ರವಚನ, ಉಗಿಬಂಡಿಯ ಉರುವಲಿನಂತೆ ಕೆಂಪಗಿರುತ್ತಿದ್ದ ಅವರ ತಾಂಬೂಲದ ಬಾಯಿಂದ ಹೊರಬೀಳುತ್ತಿದ್ದ ಗಾಂಧೀಜಿಯ ಉಪ್ವಾಸ, ಹೊಟ್ಟೆ ಬಟ್ಟೆ ಕಟ್ಟಿ ದೇಶ ನಮ್ಮದು ಅಂತ ಮಾಡಿಕೊಟ್ಟ ಗಾಂಧೀ ಸಾಧನೆ!
“ತಟ್ಟು ಚಪ್ಪಾಳೆ ಪುಟ್ಟಮಗು ತಕೋ ಕೈ, ಇಕೋ ಕೈ, ಗಾಂಧಿಗಿಂದು ಜನುಮದಿನ” ಅಂತ ಮಗಳಿಗೆ ಹೇಳುತ್ತಾ ತಮ್ಮಪ್ಪಣ್ಣನ ಸಾಲು ಸಾಲು ಪ್ರವಚನಮಾಲೆಗಳು ನೆನಪಾದವು.