ಮಾತು ಅರಳುವ ಹೊತ್ತು ನಗುವಿನೊಂದಿಗೆ ಜನ್ಮತಳೆದ ಸಂಬಂಧಗಳ ಭವಿಷ್ಯವನ್ನು ಮಾತು ನಿರ್ಣಯಿಸುತ್ತದೆ. ಮಾತು ಸರಾಗವೆನ್ನಿಸದ ಹೊರತು ಸಂಬಂಧಗಳನ್ನು ಸರಳವಾಗಿಸಿ ಸುಂದರಗೊಳಿಸಲಾಗದು. ಬದುಕಿನ ಸೂಕ್ಷ್ಮಗಳೆಲ್ಲವನ್ನೂ ತನ್ನೆಲ್ಲ ಚಾಣಾಕ್ಷತೆಯನ್ನು ಉಪಯೋಗಿಸಿ ಕಾಪಾಡಿಕೊಳ್ಳುವ ಮಾತು, ಅಗತ್ಯ ಬಿದ್ದಾಗಲೆಲ್ಲ ಸಂಬಂಧಗಳಿಗೊಂದು ಜೀವಂತಿಕೆಯನ್ನೂ ಒದಗಿಸುತ್ತದೆ. ಮಾತುಗಳೇ ಇಲ್ಲದ ಸಂಬಂಧವೊಂದು ಎಲ್ಲಿಯವರೆಗೆ ಜೀವಂತವಾಗಿ ಉಳಿದೀತು; ಎಲ್ಲ ನಕಾರಾತ್ಮಕತೆಯ ಪರಿಹಾರವೆನ್ನುವಂತೆ ಹೃದಯಕ್ಕಿಳಿವ ಮಾತು ಮಾತ್ರವೇ ಸಂಬಂಧಗಳನ್ನೆಲ್ಲ ಸಹೃದಯತೆಯ ಸೆರಗಿನಲ್ಲಿ ಬಚ್ಚಿಟ್ಟು ಸಾಕಿ ಸಲಹೀತು!           ಕಾಲಕಾಲಕ್ಕೆ ತಕ್ಕಂತೆ ಸಂಬಂಧಗಳ ಮೌಲ್ಯದ ಪರಿಕಲ್ಪನೆ ಬದಲಾಗುತ್ತಾ ಹೋದರೂ ಮಾತು ಮಾತ್ರ […]

ನಾಡಿ ಮಿಡಿತದ ದಾರಿ

ಪುಸ್ತಕಪರಿಚಯ ಪುಸ್ತಕ : ನಾಡಿ ಮಿಡಿತದ ದಾರಿ 🩺(ವೈದ್ಯಲೋಕದ ಅನುಭವ ಕಥನಗಳು) ಲೇಖಕರು: ಡಾ|| ಶಿವಾನಂದ ಕುಬಸದಪ್ರಕಾಶನ: ನೀಲಿಮಾ ಪ್ರಕಾಶನಬೆಂಗಳೂರುಪುಟಗಳು: 160ಬೆಲೆ: ರೂ. 130/-ಪ್ರಕಟಿತ ವರ್ಷ: 2019ಲೇಖಕರ ದೂರವಾಣಿ: 9448012767 ವೃತ್ತಿಯಿಂದ ಪರಿಣತ ಶಸ್ತ್ರ ಚಿಕಿತ್ಸಕರಾಗಿ, ಜನಾನುರಾಗಿ ವೈದ್ಯರಾಗಿ, ವಿವಿಧ ವ್ಯಾಧಿಗಳ ಕುರಿತು ಜನತೆಗೆ ಮಾಹಿತಿ ನೀಡುವ ವಕ್ತಾರರಾಗಿ, ಗ್ರಾಮೀಣರ ಮೂಡನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವ ಆಪ್ತ ಬಂಧುವಾಗಿ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಕಾಯಕ ಯೋಗಿಯಾಗಿ, ಸೃಜನಶೀಲ ಕವಿ, ಲೇಖಕರಾಗಿ ಒಂದು ಪ್ರದೇಶದ ಒಂದು […]

ಮಾರುವವಳು

ಕವಿತೆ ಮಾಂತೇಶ ಬಂಜೇನಹಳ್ಳಿ ಮೂರನೇ ತಿರುವಿನ ಬಾನೆತ್ತರದ ದೀಪದ ಕಂಬದ ಅಡಿ ನಿಂತ ಆಗಸದಗಲ ಛತ್ರಿಯ ಕೆಳ ಮಲ್ಲಿಗೆ ತುರುಬಿನ ಎಳವೆ ಮಲ್ಲೆಗೆ, ರಾಶಿಯೋಪಾದಿ ಕೋರೈಸುವ ಹೂಗಳ ಸ್ಪರ್ಶ ಗೆಳೆತನ. ಉದುರಿದ ದಿನಗಳು ಈಗೀಗ ಒಗ್ಗುತ್ತಿವೆ, ಬಿರಿದ ಚೆಂಗುಲಾಬಿ ಮುಡಿದು, ಸೂರ್ಯನಿಳಿವ ಹೊತ್ತಿಗೆ ಮುದುಡಿದ ದೇಹ, ಕತ್ತಲೆಯಾಗುತ್ತಲೇ ಹೊರಡುವ ತರಾತುರಿ.. ಒಣಗಿ ಮಬ್ಬೇರಿದ ಕಂದು ಹೂಗಳ ನೆತ್ತಿಯಿಂದೆ ಸುತ್ತಿದಾಕೆ, ತಾನು ಒಪ್ಪದ ವರನ ವರಿಸದ್ದಕ್ಕೆ, ಹಿಂದೆ ಬಿದ್ದವರ ಸಲಹಲು, ಭವಿಷ್ಯ ಪಕ್ಕಕ್ಕೆ ಎತ್ತಿಟ್ಟವಳು. ಈಗೀಗ ಮುಂಜಾನೆ ಅರಳಿ, […]

ಪ್ರೀತಿ ಮತ್ತು ಪ್ರೀತಿ ಮಾತ್ರ

ಪ್ರೀತಿ ಮತ್ತು ಪ್ರೀತಿ ಮಾತ್ರಲೇಖಕರು – ಜ್ಯೋತಿ ಗುರು ಪ್ರಸಾದ್ ಆರಂಭದ ಲೇಖನದಲ್ಲಿ ಪರಿಸರ ಹೋರಾಟಗಾತಿಯಾದ ದಿವಂಗತ ಕುಸುಮಾ ಸೊರಬ ಅವರ ಬಗ್ಗೆ ತಿಳಿಸುತ್ತಾ ಲೇಖಕಿಯು ಅವರ ಈ ಮಾತುಗಳನ್ನುಉಲ್ಲೇಖಿಸುತ್ತಾರೆ ಗಮನಿಸಿ – ” ಗಿಡ ಬೆಳೆಸಿದೆವನಿಗೆ ನರಕವಿಲ್ಲ” ಎಂಬ ಅಂಶ ಗರುಡ ಪುರಾಣದಿಂದಲೇ ಆರಂಭವಾಗಿ ಅಂದಿನ ಜನಜೀವನದ ದಿನನಿತ್ಯ ಕಾರ್ಯಕ್ರಮವಾಗಿತ್ತು. ಪರಿಸರ ರಕ್ಷಣೆ ಹಾಗೆಂದು ತಿಳಿದುಕೊಳ್ಳದೆಯೇ ಜೀವನದ ಆಂಗ ಆಗಿತ್ತು. ಈಗ ಮಾತ್ರ ಇದು ಫ್ಯಾಶನ್. ಮಳೆ – ಇಳೆ ಎಂಬ ಪೃಥ್ವಿಯನ್ನು ರಕ್ಷಣೆ ಮಾಡುವುದೇ […]

ಸ್ವಾತ್ಮಗತ

ಸುಭಾಷ್ ಪಾಳೇಕರರ ‘ಸಹಜ ಕೃಷಿ ಪದ್ದತಿ’ಯೂ..! ಮೈಸೂರಿನ ಆರ್.ಸ್ವಾಮಿ.ಆನಂದರ ‘ಸುಭಾಷ್ ಪಾಳೇಕರರ ಸಹಜ ಕೃಷಿ’ ಪುಸ್ತಕವೂ.!! ಕಳೆದ ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ‘ಶೂನ್ಯ ಬಂಡವಾಳದ (ನೈಸರ್ಗಿಕ) ಕೃಷಿ’ಯನ್ನು ಉತ್ತೇಜಿಸುವುದಾಗಿ ಉಲ್ಲೇಖಿಸಿದ್ದರು. ಇದಕ್ಕೂ ಮುಂಚೆಯೇ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶ, ಛತ್ತೀಸ್ ಘಡ, ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲೂ ಈ ಕೃಷಿ ಪದ್ದತಿಯನ್ನು  ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯಾಯ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ. […]

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ ಪ್ರಜ್ಞಾ ಮತ್ತಿಹಳ್ಳಿ            ತನ್ನೆಲ್ಲ ಎಲೆಗಳನ್ನುದುರಿಸಿಕೊಂಡು ಒಣಗಿ ನಿಟಾರನೆ ನಿಂತುಕೊಂಡ ಬಿದಿರು ಗಳದಂತಹ ಎಲುಬುಗಳಿಗೆ   ಚರ್ಮ ಸುತ್ತಿ ಇಟ್ಟ ಹಾಗೆ ಭಾಸವಾಗುವ ಅವಳ ಕುತ್ತಿಗೆಯ ನರಗಳು ಹಸಿರು ಕಾಡು ಬಳ್ಳಿಗಳಂತೆ ಉಬ್ಬುಬ್ಬಿ ಗಂಟಲು ಹರಿದು ಹೊರಬಂದು ಬಿಡುತ್ತವೋ ಎಂಬಂತೆ ಕಾಣುತ್ತಿದ್ದವು. ಹಕ್ಕಿಯೊಂದು ಮೊಟ್ಟೆಯಿಡಲು ಮರದ ಕಾಂಡದಲ್ಲಿ ಹುಡುಕಿಕೊಂಡ ಡೊಗರಿನ ಹಾಗೆ ಎಲುಬುಗಳ ನಡುವೆ ಖಾಲಿ ಜಾಗ ಎದ್ದು ಕಾಣುತ್ತಿತ್ತು.  ಬದುಕಿನ ನಲವತ್ತು ವರ್ಷ ಜೊತೆಗಿದ್ದ ಅಸ್ತಮಾ ಅವಳ ಉಸಿರಾಟದ ರೀತಿಯನ್ನೇ […]

ಜುಮುರು ಮಳೆ

ಫಾಲ್ಗುಣ ಗೌಡ ಅಚವೆ. ನಿನ್ನ ಕೆನ್ನೆ ಹೊಳಪಿಗೆಮೋಡನಕ್ಕಿತು ಬೆಳ್ಳಕ್ಕಿಗಳುದಂಡೆಗೆ ಬಂದುಪಟ್ಟಾಂಗಹೊಡೆದಿವೆ.! ಮಗು ಎದ್ದುನಕ್ಕಾಗಬೆಳಕಾಯಿ ದಿನವಿಡೀ ನಕ್ಕಹೂ ಬಾಡಿಮೊಗ್ಗಾಯಿತು ಮಣ್ಣ ಗಂಧಕುಡಿದುಮಿಂಚಿದೆನೆಲ ಸಂಪಿಗೆ ಬಾಡುವಹಂಗಿಲ್ಲದಗುಲ್ ಮೋಹರ್ಮನಮೋಹಕ! ನಿನ್ನ ತುಟಿಯಲ್ಲಿನಕ್ಕ ಮಳೆನನ್ನ ಕಣ್ಣಲ್ಲಿಹೊಳೆ! ಇಡೀ ರಾತ್ರಿಮೋಡನಿನ್ನ ಮನೆಸುತ್ತುತ್ತಿದ ನಿನ್ನ ಹಾಡುಕೇಳಲುಬೆಳದಿಂಗಳುಕಾದಿದ ನಿನ್ನ ಹುಬ್ಬಿಗೆನಾಚಿದೆಮಳೆಬಿಲ್ಲು ಮುಳ್ಳುಮರೆಮಾಚಿಗುಲಾಬಿನಿನಗೆ ಕಳಿಸಿದೆ ಲಂಗರುತಗೆದ ಹಡಗುದಂಡೆಯಲ್ಲಿಹೊರಟಿದೆ!

ಜೈಲು ಶಿಕ್ಷೆ

ಅನುವಾದಿತ ಕವಿತೆ ವಿಯೆಟ್ನಾ೦ ಮೂಲ: ಹೋ ಚಿ ಮಿನ್ ಇ೦ಗ್ಲಿಶ್ ನಿ೦ದ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (೧೯೪೫ ರಿ೦ದ ೧೯೬೯ ರ ವರೆಗೆ ವಿಯೆಟ್ನಾ೦ ನ ಜನಪ್ರಿಯ ಅಧ್ಯಕ್ಷರಾಗಿದ್ದ ಹೊ ಚಿ ಮಿನ್ ವಿಯೆಟ್ನಾ೦ ನ ಸ್ವಾಯತ್ತತೆಗಾಗಿ ಹೋರಾಡಿದ ಧುರೀಣ. ಚೀನಾ ದೊ೦ದಿಗೆ ವಿಯೆಟ್ನಾ೦ ಬಗ್ಗೆ ಮಾತು ಕತೆ ಗಾಗಿ ಬ೦ದ ಹೊ ಚಿ ಮಿನ್ ರನ್ನು ಚೀನಾ ಸರ್ಕಾರ ೨೯ – ೦೮ – ೧೯೪೨ ರ೦ದು ಗೂಢ ಚರ್ಯೆಯ ಆರೋಪದ ಮೆಲೆ ಬ೦ಧಿಸಿ ೧೦-೦೯- […]

ಭಾವ ಚಿತ್ರ

ಶಾಂತಾ ಕುಂಟಿನಿ ಮೇಲಿನಿಂದ ನೋಡಿದರೇತಿಳಿದೀತೇ ಅವಗುಣವೂಕೆಳಗಿಳಿದು ನೋಡಿದಾಗಒಳಗೆಲ್ಲ ಅಪಸ್ವರವೂ//೧// ಹೊರಗೆಲ್ಲಾ ನಗುಮೊಗವುಒಳಗೆಲ್ಲಾ ಬೈಗುಳವೂಅರಿತಾಗಲೆ ಮನಸುಗಳಆಂತರ್ಯ ಕಾಣುವವೂ// ಕಣ್ಣಿದ್ದರು ಕುರುಡರಂತೆನಮ್ಮದೆಲ್ಲ ವರ್ತನೆಯೂಇದು ಎಲ್ಲವು ನಮಗೇಕೆಅನ್ನುಂತಹ ಶೈಲಿಯೂ ನಿರ್ಮಲದ ಮನಸುಗಳಹುಡುಕಾಟವು ದುರ್ಲಭವುಏನಿದ್ದರು ಇಲ್ಲಿ ಎಲ್ಲವುಹೊಳಹುಗಳೇ ತೇಲಿದವು// ************* ಅದೆ ಸತ್ಯ ಎಂದಂದೂನಂಬಿರುವಾ ಜನರಿರಹರೂಪರದೆಯನು ನೀ ಸರಿಸಲುಕಂಡಿಹುದೇ ಕೆಸರೂ// ನಾಟಕವನೆ ಮಾಡುತಲೀವೇಷವನ್ನೇ ತೊಡುವರೂನಂಬಿ ನೀನು ಹೋದರಲ್ಲಿಹಳ್ಳವನೇ ತೋಡುವರೂ//

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ […]

Back To Top