ಗೆಳತಿ

ಗೆಳತಿ

ಕವಿತೆ ಗೆಳತಿ ಪ್ರೊ.ರಾಜನಂದಾ ಘಾರ್ಗಿ ಹಾಗೇ ಒಬ್ಬಳು ಸುಮ್ಮನೇಚಿಕ್ಕ ಪುಟ್ಟ ಗೆಳತಿದಾರಿಯಲಿ ಸಿಕ್ಕವಳುನಾಲ್ಕು ಹೆಜ್ಜೆ ನಡೆದವಳುಸುಮ್ಮನೇ ಮಾತಿಗೆ ಎಳೆದುಮನ ಸೆಳೆದವಳುಮಾತಿಗೆ ವೀಷಯವೇನಿಲ್ಲಸಮಯದ ಪರಿವೆಯಿಲ್ಲದಾರಿ ಸರಿದು ಹೋಗಿಕವಲುಗಳೊಡೆದಾಗಕಣ್ಮರೆಯಾದವಳುಮನದ ಮೂಲೆಯಲ್ಲಿಮನೆಮಾಡಿದ ಚದುರೆಇರುವಿಕೆಗೆ ಗುರುತಿಲ್ಲಭೇಟಿಯಾಗುವ ಬಯಕೆಯಿಲ್ಲಆದರೂ ಮರಿಚಿಕೆಯಂತೆಕನಸಲಿ ಕಾಡುವಳುಕಣ್ಣಿನ ನೀರಾಗುವಳು ***********************

ಅಪ್ಸರೆಯ ಮೂರನೆ ಮದುವೆ!

ಕೆಲವರು ಅನೇಕ ಅಂತಸ್ತುಗಳನ್ನು ಭೂದೇವಿಯ ಒಡಲೊಳಗೂ ಕೊರೆದು ನಿರ್ಮಿಸುವ ನಕ್ಷೆಗಳನ್ನು ಸರ್ಕಾರದ ಒಪ್ಪಿಗೆಗೆ ಕೊಟ್ಟರೂ, ಅವು ಅನುಮೋದನೆ ಆಗಲಿಲ್ಲ. ಹಾಗಾಗಿದ್ದರೆ ಭೂಮಿಯ ಗತಿ! ಸ್ವಾರ್ಥ ಬುದ್ಧಿಯ, ದುರಂತ ಮನದ ಖದೀಮರು, ಮನುಷ್ಯನ ಅಸ್ತಿತ್ವ ಭೂಮಿಯಲ್ಲಿ ನಶಿಸುವವರೆಗೂ ಇದ್ದೇ ಇರುವರು, ನಿದರ್ಶನಕ್ಕಾದರು!

ಮಗು ಎದ್ದು ಅತ್ತರೆ…ʼ ಒಂದು ಕ್ಷಣ ಕಾಲು ತಡೆಯಿತು… ಮರುಕ್ಷಣವೇ ಓ ಅಲ್ಲಿ ಶ್ರೀಧರ ಆಗಲೇ ಕಾಯುತ್ತಾ ತುಂಬಾ ಹೊತ್ತಾಗಿರಬಹುದು ಎನ್ನಿಸಿ ಸರಸರ ಹೆಜ್ಜೆ ಹಾಕಿದಳು

ನೀನೆಂದೂ ಬಂಧಿಸಲಿಲ್ಲ

ಬಂಧನದಿಂದ ಬಿಡುಗಡೆಯೆಡೆಗೆ ನಡೆಸಿದೆ
ಮುಕ್ತಿ ಪಥವ ಪ್ರೀತಿಯಿಂದಲಿ ತೋರಿದೆ
ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ…..

ದೊಂದಿ….

ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ…. ಬೆಳದಿಂಗಳಿಗೆ ಬೇಡವಾದಕಾಡಿಗೆ ಕಪ್ಪಿನ ರಾತ್ರಿಯಲಿದೂರದಿ ಮಿನುಗುವಕೋಟಿ ನಕ್ಷತ್ರಗಳ ವದನದಲಿನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿನನ್ನ ಮನಸ್ಸು ಮುದಗೊಳ್ಳುತ್ತದೆ…. ಬಿಸಿಲ ಬೇಗೆಯಲಿಬಸವಳಿದವನಿಗೆ ಬಯಲಿನಲಿ ನಿಂತಒಂಟಿ ಮರದ ತಣ್ಣನೆಯ ನೆರಳಿನಂತೆಬಾಳ ಬೇಗೆಯಲಿ ಬಸವಳಿದವನಿಗೆನಿನ್ನ ಮಡಿಲು ನೆನಪಾಗಿನನ್ನ ಹೃದಯ ಪುಳಕಗೊಳ್ಳುತ್ತದೆ… ಹೀಗೇ….. ನೀ ಧಿಕ್ಕರಿಸಿಚೆಲ್ಲಿ ಹೋದ ಸುಡುಸುಡುವನೆನಪಿನ ಕಿಡಿಗಳನುಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆಬದುಕಿನ ಕತ್ತಲೆಗಿರಲೆಂದು…! ಮತ್ತೆ ಕನಸು ಕಾಣುತ್ತಿರುವೆನಾವು ಅಪರಿಚಿತರಾಗಿದ್ದತಿರುವಿನಿಂದ ಯಾನ ಶುರುವಾದರೆಸುಂದರವಾಗಬಹುದು […]

ಆಡುತ್ತಿದ್ದ ಮಗುವನ್ನೆತ್ತಿಕೊಂಡು ಎಂದಿನಂತೆ ಬಾಲ್ಕನಿಗೆ ನಡೆದು ತಿನ್ನಿಸತೊಡಗಿದಳು. ʻಇದೇ ನಾನು ಇವ್ನಿಗೆ ತಿನ್ನಿಸ್ತಿರೋ ಕಡೇ ಊಟವಾಗಿದ್ರೆ….ʼ ಅನ್ನಿಸಿ ಮೈಯೆಲ್ಲಾ ನಡುಗಿತು. ಯಾವುದರ ಅರಿವೂ ಇಲ್ಲದ ಪುಟ್ಟ ರಾಮ ಅಮ್ಮನ ಮುಖ ನೋಡಿ ನಕ್ಕಿತು. ಹಾಗೆಯೇ ಮಗುವನ್ನಪ್ಪಿಕೊಂಡವಳ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು.

ಇದ್ದ ಬದ್ದ ವಸ್ತ್ರ, ಪುಸ್ತಕಗಳಿಂದ ತುಂಬಿದ ನನ್ನ ಸೂಟ್‌ಕೇಸ್ ತುಂಬಾ ಭಾರವಾಗಿತ್ತು. ಪ್ರಯಾಸದಿಂದ ಅದನ್ನು ಹೇಗೂ ಬಳಸಿಕೊಂಡು ಸುಧಾರಿಸಿಕೊಳ್ಳುತ್ತ ಬಸ್‌ಸ್ಟಾಫಿನಲ್ಲಿ ನಿಂತು ನಾನು ಹೋಗಿ ಸೇರಿಕೊಳ್ಳಬೇಕಾದ ಮೊದಲ ವರ್ಷದ ವಿದ್ಯಾರ್ಥಿಗಳ ವಸತಿ ನಿಲಯ “ಶಾಲ್ಮಲಾ ಹಾಸ್ಟೆಲ್” ಯಾವ ದಿಕ್ಕಿನಲ್ಲಿದೆ? ಎಂಬುದನ್ನು ಅಲ್ಲಿಯೇ ನಿಂತಿರುವ ವಿದ್ಯಾರ್ಥಿಗಳ್ಲಿ ಕೇಳಿ ತಿಳಿದುಕೊಂಡೆ.

Back To Top