ಹಾಯ್ಕುಗಳು

ಹಾಯ್ಕುಗಳು

ಭಾರತಿ ರವೀಂದ್ರ

1) ರೂಪ

ಹೆಣ್ಣಲ್ಲವೇ ನೀ:
ಕಲ್ಲು ರೂಪದಿ ಕೂಡಾ
ಮಮತೆ ಸೆಲೆ.

2) ಸ್ವಾರ್ಥಿ

ಕಲ್ಲಾಗಿ ಹೋದೆ :
ಸ್ವಾರ್ಥಿ ಜಗವು ಕೊಟ್ಟ
ನೋವು ಕಾಣಿಕೆ.

3) ಬೊಟ್ಟು

ಹಣೆಯ ಬೊಟ್ಟು
ಅವನಿಟ್ಟ ನೆನಪು
ಹೃದಯೋಡೆಯ

4) ನಲ್ಲ

ಕಾದು ಕಲ್ಲಾದೆ :
ನಲ್ಲನ ಆಗಮನ
ಕಾಮನಬಿಲ್ಲು.

5) ಅಹಲ್ಯ

ಅಹಲ್ಯ ರೂಪ
ಶ್ರೀ ರಾಮ ಬರುವನೇ,
ಕಲಿಯುಗದಿ.

6) ಮೊಗ

ಗಂಭೀರ ಮೊಗ
ಕಂದನಂದದ ಮನ
ಬಾಳು ನಂದನ.

7) ಮೌನ

ಮೌನದ ತಾಣ
ಹೆಣ್ಣು ಜೀವದ ಕಣ್ಣು,
ತೀರದ ಋಣ.

8) ವರುಣ

ವರುಣ ಬಂದ :
ಇಳೆಗೆ ಕಳೆ ತಂದ,
ಜೀವದಾಯಿನಿ

9) ಕಣ್ಣೀರು

ಕಣ್ಣೀರು ಹನಿ :
ಕರಗಿ ಮಳೆಯಾಯ್ತು,
ಇಳೆ ಕಾಯಲು.

10) ಆಸೆ

ಬಾನಿಗೂ ಆಸೆ
ಮೋಡ ಕರಗಿ ಮಳೆ,
ಇಳೆ ಸೇರಲು.


2 thoughts on “ಹಾಯ್ಕುಗಳು

Leave a Reply

Back To Top