ವ್ಯಕ್ತಿ ಸಂಗಾತಿ
ದಯಾನಂದ ಎಂ ಪಾಟೀಲ
“ಗಡಿನಾಡಿನ ಕನ್ನಡ ಹೋರಾಟಗಾರ
ಅ.ಬಾ. ಚಿ.ಗುರೂಜಿ”


ಗಡಿನಾಡಿನ ಕನ್ನಡ ಹೋರಾಟಗಾರ ಅ.ಬಾ. ಚಿ.ಗುರೂಜಿ…
ಸೊಲ್ಲಾಪೂರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಹಿರಿಯ ಸಾಹಿತಿ ಕನ್ನಡ ಹೋರಾಟಗಾರನಿವೃತ ಶಿಕ್ಷಕ. ಅ.ಬಾ. ಚಿಕ್ಕ ಮಣೂರಯವರು ಅ.ಬಾ. ಗುರೂಜಿ ಹೆಸರಿನಿಂದ ಪ್ರಸಿದ್ಧಿ ಪಡೆದ ವರು.
78 ಹರೆಯದ ಅಭಾಚಿಯವರು ಪಾದರಸದಂತೆ ಸದಾ ಕ್ರಿಯಶೀಲರು ಸತತ 45 ವರುಷಗಳಿಂದ ಕನ್ನಡಕ್ಕಾಗಿ ದುಡಿಯುತ್ತಾ ಬಂದವರು ಕನ್ನಡ ನಾಡು ನುಡಿಗಾಗಿ ಛಲ ತೊಟ್ಟು ನಿ೦ತ ವರು ಕನ್ನಡಮ್ಮಳ ಅಭಿವೃದ್ಧಿಗಾಗಿ ನಿರ೦ತರ ಹೋರಾಟ ಮಾಡಿದವರು.
ಕನ್ನಡ ನಿಸ್ವಾರ್ಥ ಹೋರಾಟ…
ಅ.ಬಾ. ಚಿ.ಯವರು ತಮ್ಮ ಶಿಕ್ಷಕ ವೃತ್ತಿಯನ್ನು ಬಲು ನಿಸ್ವಾರ್ಥತೆಯಿಂದ ಮಾಡಿದವರು. ಕನ್ನಡ ಮಕ್ಕಳ ಸಲುವಾಗಿ ರಾತ್ರಿ 8ರಿಂದ 12 ಗಂಟೆಯವರೆಗೆ ಹೆಚ್ಚುವರಿ ತರಗತಿ ನಡೆಸುತ್ತಿದ್ದರು ಶಾಲೆಯಲ್ಲಿ ಕನ್ನಡ ಮಕ್ಕಳ ಸಂಖ್ಯೆ ಹೆಚ್ಚಾಗಲು ಪಾಲಕರ ಮಕ್ಕಳ ಮನಸು ಗೆದ್ದು ಗಡಿನಾಡ ಕನ್ನಡ ಜಾಗೃತಿಗಾಗಿ ಹತ್ತು ಹಲವಾರು ಕನ್ನಡ ಕಾರ್ಯಕ್ರಮ ಆಯೋಜನೆ ಹಾಗೂ ಭಾಗವಹಿಸುವುದು ಹೀಗೆ ಕನ್ನಡ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ಅಲ್ಲದೇ 1991 ರಿಂದ 2002 ವರೆಗೆ ಮಹಾರಾಷ್ಟ ರಾಜ್ಯ ಪಠ್ಯ ಪುಸ್ತಕ ಮಂಡಳ ಬಾಲ ಭಾರತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕನ್ನಡ ವಿಷಯದಮೇಲೆ ಹೊ೦ದಿರುವ ಪ್ರಭುತ್ವ ಗೊತ್ತಾಗುತ್ತದೆ.ಅಕ್ಕಲಕೋಟದಲ್ಲಿ ಕನ್ನಡ ನಿತ್ಯ ನಿರಂತರ ಹಸಿರಾಗಿರಲು ಇನ್ನೂ ಸಹ ಕೆಲಸ ಮಾಡುತ್ತಿದ್ದಾರೆ. ಕನ್ನಡಕ್ಕಾಗಿ ಕೈ ಚಾಚಿ ಬ೦ದವರಿಗೆ ಅತ್ಯುತ್ಸಾಹದಿಂದ ಸೇವೆ ನೀಡುತ್ತಾರೆ ತಮ್ಮ ಮನೆಯ ಗ್ರಂಥಾಲಯದಿಂದ ನೂರಾರು ಕನ್ನಡ ಪುಸ್ತಕಗಳನ್ನು ಜನ ಸಾಮಾನ್ಯರಿಗೆ ನೀಡಿ ಕನ್ನಡ ಓದಲು ಪ್ರೇರಣೆ ನೀಡುತ್ತಿದ್ದಾರೆ. ಈ ಮೂಲಕ ಕನ್ನಡ ಓದುಗರ ಸಂಖ್ಯೆ ಹೆಚ್ಚುಸುತ್ತಿದ್ದಾರೆ ಗಡಿ ಭಾಗದ ಜನತೆಯ ಮನೆ ಮನೆಗಳಿಗೆ ಹೋಗಿ ಅವರ ಮನ ಒಲಿಸಿ ಯಾವ ಹಣವನ್ನು ಆಶೆ ಪಡದೆ ಕನ್ನಡ ಕಲಿಸುವ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಅ.ಭಾ. ಚಿಯ ವರ ನಿರಂತರ ಪರಿಶ್ರಮ ಹಾಗೂ ಹೋರಾಟ ಗಡಿನಾಡಿನ ಕನ್ನಡಿಗರಿಗೆ ಆಶಾಕಿರಣ.ಹೋರಾಟದ ಕೆಚ್ಚು ಹೆಚ್ಚಿದ ಭಾನಾಡಿಗ ಅ.ಬಾ ಚಿಯವರು.
ಸಾಹಿತ್ಯ ಸೇವೆ..
ಕರುಳಿನ ಕರೆ
ಹೊನ್ನ ಹೂಗಳು
ಇನ್ನೂ ಪ್ರಕಟವಾಗದ ಕೆಲವು ಸಂಕಲನಗಳಿವೆ ನಾಡಿನ ಹಾಗೂ ಹೊರನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊ೦ಡಿವೆ ಇಂತಹ ಕನ್ನಡ ಹೋರಾಟಗಾರರಿಂದ ಕನ್ನಡ ಉಳಿದಿರುವುದು ಮರಾಠಿ ನೆಲದಲ್ಲಿ ಕನ್ನಡ ಜೀವಂತವಾಗಿ ತಮ್ಮ ಉಸಿರಾಗಿ ಇಟ್ಟಿರುವ ಅ – ಭಾ ಚಿಯವರಿಗೂ ಗಡಿನಾಡು ಕನ್ನಡಿಗರಿಗೆ ಮನದಾಳದಿಂದ ಅಭಿನಂದನೆಗಳು…
———————-
ದಯಾನಂದಎಂ ಪಾಟೀಲ
ಅಧ್ಯಕ್ಷರು
ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ…



