ಕಾವ್ಯ ಸಂಗಾತಿ
ಡಾ.ಸರಸ್ವತಿ ಕಳಸದ
“ಮರುಜನ್ಮವೆತ್ತಿ ಬಾರಯ್ಯಾ”


ಮರುಜನ್ಮವೆತ್ತಿ ಬಾರಯ್ಯ ಬಸವ
ಬಿಳಿಬಣ್ಣ ಹೊರಗಿನ ಬದುಕೆಂಬುವರಯ್ಯಾ
ಕರಿಬಣ್ಣ ಒಳಗಿನ ಬದುಕೆಂಬುವರಯ್ಯಾ
ಭಿಕ್ಷೆಯೇ ನಮ್ಮೊಳಗಿನ ಬದುಕೆಂಬುವರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ ಸಂತೈಸಯ್ಯಾ
ಬಯಲಿನ ಬದುಕೆ ನಮ್ಮದೆಂದು ಸಾರಾಯ್ಯಾ //
ಹೆಣ್ಣು ಹೊನ್ನು ಮಣ್ಣು ನನ್ನ ದೆಂಬುವರಯ್ಯಾ
ಹೆಬ್ಬುಲಿಯ ಗರ್ಭದಲಿ ಧರ್ಮ ಅಧರ್ಮವಾಗಿಹುದಯ್ಯಾ
ದರ್ಪ ದೌರ್ಜನ್ಯ ಹೆಡೆಮುರಿ ಕಟ್ಟಿಹುದಯ್ಯಾ
ಹಾಳಾದ ಗಂಗೆ ಹಾಲಾಹಲವಾಗಿಹಾಳಯ್ಯಾ
ಪರಧನ -ಸತಿನೊಲ್ಲೆಯೆಂದು ಮತ್ತೆ ಸಾರಯ್ಯಾ //
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬೆತ್ತಲಾಗುವುದೇ ಬಯಲಿನ ಬದುಕೆಂಬುವರಯ್ಯಾ
ಕತ್ತಲಾಗುವುದೇ ನರಮೇಧವೆಂಬುವರಯ್ಯಾ
ಶೀಲ-ಸಾಲ-ಶೂಲ ನಿತ್ಯ ಸತ್ಯವೆಂಬುವರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ ಸಂತೈಸಯ್ಯಾ
ಅಳಬೇಡ ಕೊಲಬೇಡವೆಂದು ಮತ್ತೆ ಸಾರಯ್ಯ //
ಚಿನ್ನದ ಚೂರಿಗೆ ಹೂ ಮುಡಿಸಿಹರಯ್ಯಾ
ರಾಮನಲಿ ರಾವಣನ ಕೂಡಿಸಿಹರಯ್ಯಾ
ಹೆತ್ತವರಲ್ಲಿ ಹುತ್ತ ಹುಡುಕಿಹರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ ಸಂತೈಸಯ್ಯಾ
ಕಾಲೇ ಕಂಬ ದೇಹವೇ ದೇಗುಲವೆಂದು ಸಾರಯ್ಯ//
ಬೆತ್ತಲಾಗುವುದೇ ಬಯಲಿನ ಬದುಕೆಂಬುವರಯ್ಯಾ
ಕತ್ತಲಾಗುವುದೇ ನರಮೇಧವೆಂಬುವರಯ್ಯಾ
ಶೀಲ- ಶೂಲ -ಸಾಲ ನಿತ್ಯ ಸತ್ಯವೆಂಬುವರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ ಸಂತೈಸಯ್ಯಾ
ಕಳಬೇಡ ಕೊಲಬೇಡವೆಂದು ಮತ್ತೆ ಸಾರಯ್ಯ //
ಚಿನ್ನದ ಚೂರಿಗೆ ಹೂ ಮುಡಿಸಿಹರಯ್ಯಾ
ರಾಮನಲಿ ರಾವಣನ ಕೂಡಿಸಿಹರಯ್ಯಾ
ಹೆತ್ತವರಲ್ಲಿ ಹುತ್ತ ಹುಡುಕಿಹರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ ಸಂತೈಸಯ್ಯಾ
ಕಾಲೇ ಕಂಬ ದೇಹವೇ ದೇಗುಲವೆಂದು
ಡಾ.ಸರಸ್ವತಿ ಕಳಸದ



