ಅನುವಾದ ಸಂಗಾತಿ
ಕವಯಿತ್ರಿ ಸುಜಾತಾ ರೌತ್ ಅವರ ಮರಾಠಿ ಕವಿತೆಯ ಕನ್ನಡಾನುವಾದ ನೂತನ್ ದೊಶೆಟ್ಟಿ
ನದಿಯಂತೆ ಹರಿಯಲು
ಮರಾಠಿಮೂಲ: ಸುಜಾತಾ ರೌತ್
ಕನ್ನಡಾನುವಾದ: ನೂತನ್ ದೊಶೆಟ್ಟಿ


ನದಿಯಂತೆ ಹರಿಯುವುದು ಅವಳಿಗೆ ಇಷ್ಟ
ಬದುಕ ಸವಿಯ ಹನಿಹನಿಯನ್ನು ಸೂರೆ ಮಾಡುವುದೂ..
ಅವಳ ಸುತ್ತಲಿನ ಜಿಗುಟು ಮಣ್ಣೀ ಪ್ರಮಾಣ
ಅವಳು ಒಣಗಲು ಅಥವಾ ಬಾಗಿಸಲು ಕೊಂಚವೂ ಸಿದ್ಧವಿಲ್ಲವೆಂದು
ಬೂಟಾಟಿಕೆಯಿಲ್ಲದ ರಾಧೆಯ ಪ್ರೇಮದಂತೆ
ನಿಸ್ಪೃಹ ಅವಳ ಪ್ರೇಮ
ಕಲ್ಲಿನಲ್ಲೂ ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು ಜನ್ಮದಾತೆ
ಹಾಗೆಂದೇ ;
ಬದುಕ ನೀಡುವುದು ಅವಳಿಗೆ ಕರ್ತವ್ಯದಂತೆ
ಒಂದೊಮ್ಮೆ ಒಣಗಿದರೂ
ಮಳೆಗಾಗಿ ಕಾಯಳು ಅವಳು
ಅಂತರಂಗದ ಚಿಲುಮೆಯ ಶಕ್ತಿಯ ಅರಿತವಳು
ಅದಕೆಂದೇ
ನದಿಯಂತೆ ಬದುಕ ಬಯಸುತ್ತಾಳೆ
ಹರಿಯಲು..
ನಿರಂತರ ಹರಿಯಲು
————————————————————————————
ಮೂಲ ಕವಯಿತ್ರಿ: ಸುಜಾತಾ ರೌತ್ .
ಕನ್ನಡಕ್ಕೆ : ನೂತನ್ ದೂಶೆಟ್ಟಿ.