ಅನುವಾದ ಸಂಗಾತಿ
ನೂಕುನುಗ್ಗಲು
ತೆಲುಗು ಮೂಲ : ಡಾ. ಆಚಾರ್ಯ ಫಣೀಂದ್ರ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್

ಚಿತ್ರದ ಬಣ್ಣದ ಲೋಕಕೆ,
ದೇವರ ದರ್ಶನದ ಆಸೆಕೆ,
ಹಬ್ಬದ ಪಯಣದ ಕನಸುಕೆ,
ಕ್ರಿಕೆಟ್ ಆಟದ ಕುತೂಹಲಕೆ,
ಒಂದೇ ಕ್ಷಣದ ಕಾಲ್ತುಳಿತಕೆ,
ಬಲಿಯಾದವು ಜೀವಗಳು ನೂರಾರು!
ಯಾರು ತಿದ್ದುವರು ಈ ದುರಂತವ?
ಬದಲಾಗಬಾರದೇ ನಮ್ಮ ಮನವ?
ಇರುವೆಗಳೂ ಸಾಲಲಿ ಸಾಗುವಾಗ,
ಮಾನವರೇಕೆ ಹೀಗೆ ನುಗ್ಗುವರು?
ಶಿಸ್ತಿನ ಕೊರತೆ ನಾಚಿಕೆಗೇಡಲ್ಲವೇ?
ನನಗೇ ಮೊದಲು ಬೇಕೆಂಬ ಸ್ವಾರ್ಥವೇಕೆ?
ಕಾಯುವ ತಾಳ್ಮೆ ಮಾಯವಾಯಿತೇ?
ಸಾಲಲಿ ನಿಲ್ಲುವ ಗುಣವ ಮರೆತೆವೇ?
ತಾಳ್ಮೆಯ ಕಟ್ಟೆಯೊಡೆದು ಹರಿಯಿತೇ?
ಬದುಕಿದ್ದರೆ ಎಲ್ಲವೂ ಸಾಧ್ಯವೆಂದರಿಯೆವೇ?
ಸತ್ತ ಮೇಲೆ ಏನು ಸಾಧಿಸುವೆವು?
ವಿದೇಶದಲಿ ಸಾಲಲಿ ಸಾಗುವರು,
ಭಾರತದಲಿ ಏಕೆ ಹೀಗೆ ನುಗ್ಗುವರು?
ಸಾಲಲಿ ನಿಲ್ಲಲು ಕಲಿಯುವುದೆಂದಿಗೂ?
ಜೀವಕ್ಕಿಂತ ಮಿಗಿಲಾದುದೇನಿದೆ ಇಲ್ಲಿ?
ಪೋಷಕರು, ಗುರುಗಳು ಕಲಿಸಬೇಕು,
ಶಿಸ್ತಿನ ಪಾಠವ ಬೋಧಿಸಬೇಕು.
ತಾವೂ ಸಾಲನು ಮೀರದಿರಬೇಕು,
ಸಾಲಿನ ಶಿಸ್ತಿನಲಿ ನಡೆದು ತೋರಿಸಬೇಕು
ತೆಲುಗು ಮೂಲ : ಡಾ. ಆಚಾರ್ಯ ಫಣೀಂದ್ರ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್

ఒరిజినల్ తెలుగు ప్రతిని పంపగలరా.