ಅನುವಾದ ಸಂಗಾತಿ
“ಸಿಪ್ ಯುವರ್ ಟೀ”
ಜಪಾನಿ ಮೂಲ:
ಲೀ ಟ್ಸು ಫೆಂಗ್ . ಸಿಂಗಾಪುರ್ .
ಕನ್ನಡಾನುವಾದ :
ಆರ್.ಎಲ್. ಕನಕ .



ಚಹಾ ಆರುವ ಮುನ್ನ….’
ಚಹಾವನ್ನು ಕುಡಿದು ಬಿಡಿ.
ನಿಧಾನವಾಗಿ ಗುಟುಕು, ಗುಟುಕಾಗಿ,
ಪ್ರತಿ ಗುಟುಕಿನಲ್ಲಿಯೂ
ಸ್ವಾದವಿರಲಿ.
ಏಕೆಂದರೆ ;
ಯಾರಿಗೂ ತಿಳಿದಿಲ್ಲ …
ಬದುಕಿಗೆ ವಿದಾಯ ಹೇಳುವ ಸಮಯ.
ಹೇಗೆ? ಏಕೆ? ಎಲ್ಲಿಗೆ?
ಪ್ರಶ್ನೆಗಳಿಗಿಲ್ಲ ಉತ್ತರ,
ಖುಷಿಯಿಂದ ಅನುಭವಿಸಿ ಭವದ ಬದುಕನ್ನು,
ನಿಧಾನವಾಗಿ ಹೀರುವ ಬಿಸಿ ಚಹದಂತೆ !
ಬದುಕು ಕಿರಿದಾದರೂ ….
ಬಲು ದೀರ್ಘವೆನಿಸುವುದುಂಟು…..
ಕರೆಯದೆ ಬರುವ ಕಷ್ಟ-ನಷ್ಟಗಳಿಂದ !
ಹಲವು ಒಡನಾಡಿಗಳು ಬದುಕಿದ್ದರೂ, ಇನ್ನುಳಿದವರು ನೆನಪಾಗಿ ಉಳಿಯುತ್ತಾರೆ

ಮಕ್ಕಳು ಬೆಳೆದು ;
ಹಕ್ಕಿಗಳಂತೆ ಹಾರಿ ಹೋಗುತ್ತಾರೆ !
ಹೊತ್ತು ಮೀರುವ ಮುನ್ನ,
ತಪ್ಪು ಒಪ್ಪುಗಳೊಡನೆ ಸೆಣೆಸುತ್ತ,
ದುಡಿದು – ಮಡಿಯುವ ಮುನ್ನ,
ಬಾಳ ಬವಣೆಗಳನ್ನೆಲ್ಲ ಬದಿಗಿಟ್ಟು,
ಒಂದಿಷ್ಟು ನಕ್ಕು ಬಿಡಿ –
ಚಹ ಆರುವ ಮುನ್ನ –
ಬದುಕು ತೀರುವ ಮುನ್ನ !
ಮೂಲ ಕವಿ : ಕವಿಯತ್ರಿ ಲೀ ಟ್ಸು ಫೆಂಗ್ . ಸಿಂಗಾಪುರ್ .
ಸಿಪ್ ಯುವರ್ ಟೀ (ಕವಿತೆ).
ಕನ್ನಡಾನುವಾದ :
ಆರ್.ಎಲ್. ಕನಕ .